ಭೂವಿಜ್ಞಾನ

Author : ಟಿ. ಆರ್. ಅನಂತರಾಮು

Pages 191

₹ 120.00




Year of Publication: 2010
Published by: ಸಪ್ನ ಬುಕ್ ಹೌಸ್
Address: 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು – 560 009
Phone: 0804011 4455

Synopsys

ಲೇಖಕ ಟಿ.ಆರ್. ಅನಂತರಾಮು ಅವರ ಕೃತಿ ‘ಭೂವಿಜ್ಞಾನ’. ಕೈಗಾರಿಕೆಗೆ ಬೆನ್ನುಲುಬಾದ ಖನಿಜ ಸಂಪನ್ಮೂಲವನ್ನು ಭೂಮಿ ತನ್ನ ಗರ್ಭದಲ್ಲಿ ಅಡಗಿಸಿಕೊಂಡಿದೆ. ನದಿ, ಬಿಸಿಲು, ಮಳೆ, ಗಾಳಿ, ಸಾಗರ ಎಲ್ಲವೂ ಭೂಮಿಯನ್ನು ಕಾಲಕಾಲಕ್ಕೆ ಬದಲಾಯಿಸುತ್ತಲೇ ಬಂದಿದೆ. ಭೂಖಂಡಗಳೂ ಸರಿಯುತ್ತಿವೆ ಎಂದರೆ ಅದು ನಮ್ಮ ಕಲ್ಪನೆಯನ್ನೂ ಮೀರಿಸಿದ ಸತ್ಯ. ಜೀವಿ ವಿಕಾಸದ ಹಲವು ಹಂತಗಳನ್ನು ಭೂಮಿ ತನ್ನ ಶಿಲಾಪುಟಗಳಲ್ಲಿ ಅಡಗಿಸಿಕೊಂಡಿದೆ. ಇದನ್ನು ಭೂವಿಜ್ಞಾನಿಗಳು ಅಧ್ಯಯನ ಮಾಡುತ್ತಾರೆ.

ಭೂಮಿ ಹುಟ್ಟಿ 460 ಕೋಟಿ ವರ್ಷಗಳಾಗಿವೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಭೂಮಿಯ ಉಗಮದಿಂದ ತೊಡಗಿ ಈವರೆಗೆ ಆಗಿರುವ ಬದಲಾವಣೆ ಜೊತೆಗೆ ಲೋಹ, ಖನಿಜಗಳ ಬಳಕೆ ಮುಂತಾದವನ್ನು ಈ `ಭೂವಿಜ್ಞಾನ’ ಕೃತಿಯಲ್ಲಿ ಆಕರ್ಷಕವಾಗಿ ಹೇಳಲಾಗಿದೆ. ಭೂವಿಜ್ಞಾನದ ಪರಿಚಯ ಇಲ್ಲದವರಿಗೆ ಈ ಕೃತಿ ಅತ್ಯಂತ ಉತ್ತಮ ಪ್ರವೇಶ ಕೊಡುತ್ತದೆ. ಕೃತಿಯ ಮತ್ತೊಂದು ವಿಶೇಷವೆಂದರೆ ಭೂಮಿಯ ಅಧ್ಯಯನಕ್ಕೆ ಅರ್ಪಿಸಿಕೊಂಡಿರುವ ಪ್ರಸಿದ್ಧ ವಿಜ್ಞಾನಿಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ಇದೆ. ಭಾರತೀಯ ವಿಜ್ಞಾನಿಗಳ ಹೆಸರೂ ಸೇರಿದೆ.

About the Author

ಟಿ. ಆರ್. ಅನಂತರಾಮು
(03 August 1949)

ಭೂ ವಿಜ್ಞಾನಿ, ಸಂಶೋಧಕ, ಅಂಕಣಕಾರ, ವಿಜ್ಞಾನ ಲೇಖಕ ಟಿ.ಆರ್. ಅನಂತರಾಮು ಅವರು ಜನಿಸಿದ್ದು 1949 ಆಗಸ್ಟ್ 3ರಂದು ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ತಾಳಗುಂದದಲ್ಲಿ.ತಾಳಗುಂದ ರಾಮಣ್ಣ ಅನಂತರಾಮು ಅವರ ಪೂರ್ಣ ಹೆಸರು. ಸಿರಾದ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಪೂರ್ಣಗೊಳಿಸಿದ ಅವರು ಸಿರಾದ ಮುನಿಸಿಪಲ್ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಪೂರ್ಣಗೊಳಿಸಿದ್ದಾರೆ. ಆನಂತರ ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ ಪದವಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎನ್ಸಿ(ಜಿಯಾಲಜಿ) ಪದವಿ ಪಡೆದಿದ್ದಾರೆ.  ಭೂ ವಿಜ್ಞಾನ ವಿಷಯದಲ್ಲಿ ಪದವಿ ಪಡೆದ ನಂತನ ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ರಾಜ್ಯದ ನಾನಾ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದ್ದಾರೆ.  ...

READ MORE

Related Books