ಭವಿಷ್ಯದ ಭೂಮಿಗಳು

Author : ಪಾಲಹಳ್ಳಿ ವಿಶ್ವನಾಥ್ (ಪಿ.ಆರ್. ವಿಶ್ವನಾಥ್)

Pages 170

₹ 170.00

Buy Now


Year of Publication: 2023
Published by: ಟೆಕ್‌ ಫಿಜ್‌ ಇಂಕ್‌
Address: 10 ನೇ ಮುಖ್ಯ ರಸ್ತೆ, ಜಯನಗರ, ಬೆಂಗಳೂರು
Phone: 91 99020 26518

Synopsys

ತಾನು ಈ ಪ್ರಪಂಚದ ಕೇಂದ್ರದಲ್ಲಿ ಇದ್ದೇನೆ ಎಂಬ ಜಂಭ ಮಾನವನಿಗೆ ಹಿಂದಿನಿಂದಲೂ ಇದ್ದಿತು. ಆದರೆ 16ನೆಯ ಶತಮಾನದಲ್ಲಿ ಕೋಪರ್ನಿಕಸ್ ತನ್ನ ಸೂರ್ಯಕೇಂದ್ರಿಯವಾದವನ್ನು ಪ್ರತಿಪಾದಿಸಿದ ನಂತರ ಭೂಮಿಗೆ ಹಿಂದಿನವರು ಹಾಕಿಕೊಟ್ಟಿದ್ದ ಸಿಂಹಾಸನ ಅಲ್ಲಾಡತೊಡಗಿತು. 20ನೆಯ ಶತಮಾನದ ಮೊದಲ ದಶಕಗಳಲ್ಲಿ ಶ್ಯಾಪ್ಲೀ ಮತ್ತು ಹಬಲ್‌ರ ಸಂಶೋಧನೆಗಳಿಂದ ಭೂಮಿ ಒಂದು ಸಾಧಾರಣ ಗೆಲಕ್ಷಿಯ ಅಂಚಿನ ಸಾಧಾರಣ ನಕ್ಷತ್ರದ ಸಾಧಾರಣ ಗ್ರಹವೆಂಬ ಅರಿವು ಹುಟ್ಟಿತು. ಆದರೂ ಈ ಸಾಧಾರಣ ಗ್ರಹದಲ್ಲಿಯೇ ಬಾಳಿ ಬದುಕಿರುವ ಮನುಷ್ಯನಿಗೆ ಈ ಪ್ರಪಂಚದಲ್ಲಿ ನಾನು ಒಬ್ಬನೇ ಏನೆ ಎನ್ನುವ ಅನುಮಾನ ಇದ್ದೇ ಇದೆ. ಹಿಂದಿನ ಶತಮಾನದ ಅನೇಕ ಆವಿಷ್ಕಾರಗಳ ನಂತರ ಎಲ್ಲೋ ಆಚೆ ನಮ್ಮ ಭೂಮಿಯ ತರಹವೇ ಗ್ರಹಗಳು ಇರಬಹುದು ಮತ್ತು ನಮ್ಮಂತೆಯೋ ಅಥವಾ ಇನ್ನು ಯಾವ ರೂಪದಲ್ಲೋ ಜನರು ಇರಬಹುದು ಎನ್ನುವ ಸಾಧ್ಯತೆಗಳು ಹೆಚ್ಚಾಗುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ಅನ್ಯಗ್ರಹ ಜೀವಿಗಳು, ಹಾರಾಡುವ ತಟ್ಟೆಗಳು ಇತ್ಯಾದಿ ವರದಿಗಳು ಪತ್ರಿಕೆಗಳಲ್ಲಿ ಬರುತ್ತಲೇ ಇರುತ್ತವೆ; ಅವುಗಳ ಬಗ್ಗೆ ಅನೇಕ ವೈಜ್ಞಾನಿಕ ಕಥಾ ಕಾದಂಬರಿಗಳು ರಚಿಸಲ್ಪಟ್ಟಿರುವುದಲ್ಲದೆ ಚಲನಚಿತ್ರಗಳೂ ಮನುಷ್ಯನ ಕುತೂಹಲವನ್ನು ಹೆಚ್ಚಿಸಿವೆ. ಆದ್ದರಿಂದ ಈ ವಿಷಯಗಳು ವಿಜ್ಞಾನಿಗಳನ್ನಲ್ಲದೆ ಸಾಮಾನ್ಯ ಜನತೆಯನ್ನೂ ಆಸಕ್ತಿಗೊಳಿಸುತ್ತದೆ. ಈ ಪುಸ್ತಕದಲ್ಲಿ ಭೂಮಿಯ ಅತಿಶಯಗಳು, ಅದರ ಹತ್ತಿರದ ನಕ್ಷತ್ರದ ವೈಶಿಷ್ಟ್ಯ, ಸೌರಮಂಡಲದಲ್ಲೇ ವಾಸಯೋಗ್ಯವಾಗಬಹುದಾದ ಇತರ ಗ್ರಹ ಉಪಗ್ರಹಗಳು, ಅನ್ಯ ಗ್ರಹಗಳ ಜೊತೆ ಸಂಪರ್ಕದ ಸಾಧ್ಯತೆ, ಭವಿಷ್ಯದ ಭೂಮಿಗಳಿಗೆ ಹುಡುಕಾಟ, ಬಾಹ್ಯಾಕಾಶ ಪ್ರಯಾಣ ಇತ್ಯಾದಿ ವಿಷಯಗಳನ್ನು ಸರಳ ಭಾಷೆಯಲ್ಲಿ ಚರ್ಚಿಸಲಾಗಿದೆ.

About the Author

ಪಾಲಹಳ್ಳಿ ವಿಶ್ವನಾಥ್ (ಪಿ.ಆರ್. ವಿಶ್ವನಾಥ್)

ವಿಜ್ಞಾನ ಲೇಖಕ, ಅಂಕಣಕಾರ ಪಿ.ಆರ್. ವಿಶ್ವನಾಥ್ ಅವರು ಮೂಲತಃ ಬೆಂಗಳೂರಿನವರು. 1942ರಲ್ಲಿ ಜನಿಸಿದ ಪಿ.ಆರ್. ವಿಶ್ವನಾಥ್ ಅವರು ಪಾಲಹಳ್ಳಿ ವಿಶ್ವನಾಥ್ ಎಂದೇ ಪ್ರಸಿದ್ಧರಾದವರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎಸ್.ಸಿ ಪೂರೈಸಿದ ಅವರು ಆ್ಯನ್ ಆರ್ಬರ್ ಮಿಶಿಗನ್ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಪಡೆದರು. ಆನಂತರ ಮುಂಬಯಿಯ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆ (ಟಿ.ಐ.ಎಫ್.ಆರ್)ಯಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದರು. ಬೆಂಗಳೂರಿನ ಭಾರತೀಯ ಖಭೌತ ಸಂಸ್ಥೆ (ಐ.ಐ.ಎ) ಸಂದರ್ಶಕ ಪ್ರಾಧ್ಯಾಪಕರು; ಕ್ಯಾಲಿಫೋರ್ನಿಯ ಮತ್ತು ಮೇರಿಲ್ಯಾಂಡ್ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರು, ಭಾರತ ಮತ್ತು ಅಮೆರಿಕದಲ್ಲಿ ಹಲವಾರು ಭೌತವಿಜ್ಞಾನ ಮತ್ತು ಖಗೋಳ ವಿಜ್ಞಾನದ ಪ್ರಯೋಗಗಳಲ್ಲಿ ಭಾಗಿಯಾಗಿದ್ದರು. ...

READ MORE

Related Books