ಭೂಮಿಯ ಅಂತರಾಳ

Author : ಟಿ. ಆರ್. ಅನಂತರಾಮು

Pages 38

₹ 20.00




Year of Publication: 1999
Published by: ಸಿ.ವಿ.ಜಿ. ಪಬ್ಲಿಕೇಷನ್ಸ್
Address: 70, 2ನೇ ಮುಖ್ಯರಸ್ತೆ, ವೈಯಾಲಿ ಕಾವಲ್, ಬೆಂಗಳೂರು-560003
Phone: 080-23313400

Synopsys

‘ಭೂಮಿಯ ಅಂತರಾಳ’ ಭೂವಿಜ್ಞಾನಿ, ಲೇಖಕ ಟಿ.ಆರ್. ಅನಂತರಾಮು ಅವರ ವಿಜ್ಞಾನ ಬರಹಗಳ ಸಂಕಲನ. ತಲೆ ಎತ್ತಿ ಆಕಾಶವನ್ನು ನೋಡಿದರೆ ಗ್ರಹ, ನಕ್ಷತ್ರಗಳು ಸ್ಪಷ್ಟವಾಗಿ ಕಾಣುತ್ತವೆ. ಭೂಮಿಗೆ ಅತಿ ಸಮೀಪತಮ ಕಾಯ ಎಂದರೆ ಚಂದ್ರ (3,84,400 ಕಿ.ಮೀ.). ಆಧುನಿಕ ದೂರದರ್ಶಕಗಳ ಸಹಾಯದಿಂದ ಇಡೀ ವಿಶ್ವದ ಒಂದು ಭಾಗವನ್ನೇ ವೀಕ್ಷಿಸುವುದು ಕಷ್ಟವೇನಿಲ್ಲ.

ಆದರೆ ನಮ್ಮ ಕಾಲಡಿಯ ನೆಲದಾಳದಲ್ಲಿ ಏನಿದೆ ಎಂಬುದನ್ನು ಪರೋಕ್ಷವಾಗಿ ತಿಳಿದುಕೊಳ್ಳಬೇಕು. ಮನುಷ್ಯನಿಗೆ ಭೂಮಿಯ ಕೆಳಗೆ 20 ಕಿ.ಮೀ. ಕೂಡ ಹೋಗಲು ಸಾಧ್ಯವಾಗಿಲ್ಲ. ಅದು ಮಾನವಮಿತಿ ಕೂಡ. ಆಧುನಿಕ ತಂತ್ರಜ್ಞಾನ, ವಿಶೇಷವಾಗಿ ಭೂಕಂಪನಗಳ ಅಧ್ಯಯನವನ್ನು ಮಾಡಿದಾಗ ಭೂಮಿಯ ಒಳರಚನೆ ಪತ್ತೆಯಾಗಿದೆ. ನಾವು ನಿಂತ ನೆಲದಿಂದ 6,370 ಕಿ.ಮೀ. ಆಳದಲ್ಲಿ ಭೂಮಿಯ ಕೇಂದ್ರವಿದೆ. ಅದರ ತಿರುಳು ಭೂಕಾಂತ ಕ್ಷೇತ್ರಕ್ಕೆ ಕಾರಣ. ನಮ್ಮ ಭೂಮಿಯ ಮೇಲಿನ ಹೊರಚಿಪ್ಪು 20 ರಿಂದ 70 ಕಿ.ಮೀ, ಆಳವಿದೆ. ಅದರ ಕೆಳಗೆ 2,900 ಕಿ.ಮೀ.ವರೆಗೆ ಕವಚವಿದೆ. ಇದು ಎಲ್ಲ ಲೋಹಗಳ ಭಂಡಾರ. ಜ್ವಾಲಾಮುಖಿಗಳು ಈ ಭಾಗದಿಂದ ಮೇಲೆದ್ದು ಬರುತ್ತವೆ. ಸಾಗರದಾಳದಲ್ಲಿ 600ಕ್ಕೂ ಮಿಕ್ಕಿ ಜೀವಂತ ಜ್ವಾಲಾಮುಖಿಗಳಿವೆ. ಭೂಮಿ ಇಷ್ಟೊಂದು ದೊಡ್ಡ ಪರ್ವತಗಳನ್ನು ಹೇಗೆ ಹೊತ್ತು ನಿಂತಿದೆ? ಹಿಮಾಲಯ ಹುಟ್ಟಿದ್ದು ಹೇಗೆ ಮುಂತಾದ ಕುತೂಹಲಕಾರಿ ಸಂಗತಿಗಳನ್ನು `ಭೂಮಿಯ ಅಂತರಾಳ’ ಕೃತಿಯಲ್ಲಿ ಆಕರ್ಷಕವಾಗಿ ವಿವರಿಸಲಾಗಿದೆ.

About the Author

ಟಿ. ಆರ್. ಅನಂತರಾಮು
(03 August 1949)

ಭೂ ವಿಜ್ಞಾನಿ, ಸಂಶೋಧಕ, ಅಂಕಣಕಾರ, ವಿಜ್ಞಾನ ಲೇಖಕ ಟಿ.ಆರ್. ಅನಂತರಾಮು ಅವರು ಜನಿಸಿದ್ದು 1949 ಆಗಸ್ಟ್ 3ರಂದು ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ತಾಳಗುಂದದಲ್ಲಿ.ತಾಳಗುಂದ ರಾಮಣ್ಣ ಅನಂತರಾಮು ಅವರ ಪೂರ್ಣ ಹೆಸರು. ಸಿರಾದ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಪೂರ್ಣಗೊಳಿಸಿದ ಅವರು ಸಿರಾದ ಮುನಿಸಿಪಲ್ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಪೂರ್ಣಗೊಳಿಸಿದ್ದಾರೆ. ಆನಂತರ ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ ಪದವಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎನ್ಸಿ(ಜಿಯಾಲಜಿ) ಪದವಿ ಪಡೆದಿದ್ದಾರೆ.  ಭೂ ವಿಜ್ಞಾನ ವಿಷಯದಲ್ಲಿ ಪದವಿ ಪಡೆದ ನಂತನ ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ರಾಜ್ಯದ ನಾನಾ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದ್ದಾರೆ.  ...

READ MORE

Related Books