ಸುನಾಮಿ ಸುತ್ತ

Author : ಎಂ. ವೆಂಕಟಸ್ವಾಮಿ

Pages 110

₹ 40.00




Year of Publication: 2006
Published by: ಕನ್ನಡ ಸಾಹಿತ್ಯ ಪರಿಷತ್ತು
Address: ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು - 560 018

Synopsys

ಸುನಾಮಿ ಸುತ್ತ (2004ರ ಸುನಾಮಿ)-ಡಾ. ಎಂ. ವೆಂಕಟಸ್ವಾಮಿ ಅವರ ಕೃತಿ. ಭೂಮಿ ಸೃಷ್ಟಿಯಾಗಿದ್ದು 454 ಕೋಟಿ ವರ್ಷಗಳ ಆಸುಪಾಸು. ಅಂದಿನಿಂದ ಇಂದಿನವರೆಗೆ ಭೂಮಿಯ ಮೇಲೆ ಅನೇಕ ರೀತಿಯ ನೈಸರ್ಗಿಕ ವಿಪತ್ತುಗಳು ಘಟಿಸುತ್ತಾ ಬಂದಿವೆ. ಮುಖ್ಯವಾಗಿ ಭೂಕಂಪ-ಸುನಾಮಿ, ಜ್ವಾಲಾಮುಖಿ, ಚಂಡಮಾರುತ, ಬಿರುಗಾಳಿ, ಅತಿವೃಷ್ಠಿ ಅನಾವೃಷ್ಠಿ ಕಾಡ್ಗಿಚ್ಚು ಇತ್ಯಾದಿ. ಸಮುದ್ರ ತಳದಲ್ಲಿ ಭಾರಿ ಭೂಕಂಪನಗಳು ಘಟಿಸಿದರೆ ಸಮುದ್ರದಲ್ಲಿ ದೈತ್ಯ ಅಲೆಗಳು ಎದ್ದು ಸುನಾಮಿ ಸೃಷ್ಟಿಯಾಗುತ್ತದೆ. ಪೆಸಿಫಿಕ್ ಮಹಾಸಾಗರಕ್ಕೆ ಹೊಂದಿಕೊಂಡಿರುವ ದೇಶಗಳು ಮತ್ತು ದ್ವೀಪಗಳಿಗೆ ಸುನಾಮಿ ಹೊಸದಲ್ಲದಿದ್ದರೂ ಭಾರತಕ್ಕೆ ಹೊಸದು. ಭಾರತದ ಕಡಲಿಗೆ ಹಿಂದೆ ಒಂದೆರಡು ಸಲ ಸುನಾಮಿ ಅಪ್ಪಳಿಸಿದ್ದರೂ 2004ರಲ್ಲಿ ಹಿಂದೂ ಮಹಾಸಾಗರದಲ್ಲಿ ಸುಮಾತ್ರ ದ್ವೀಪದ ಹತ್ತಿರ ಸಂಭವಿಸಿದ ಸುನಾಮಿಯಷ್ಟು ಭೀಕರವಲ್ಲ. ಹಿಂದಿನ ದಿನಗಳಲ್ಲಿ ಕಡಲ ಪಕ್ಕದಲ್ಲಿ ಬದುಕುವ ಜನಸಂಖ್ಯೆ ತೀರಾ ಕಡಿಮೆ ಇತ್ತು. ಪ್ರಪಂಚದಾದ್ಯಂತ ಭಾರತವೂ ಸೇರಿ ತೃತೀಯ ಜಗತ್ತಿನ ದೇಶಗಳಲ್ಲಿ ಜನಸಂಖ್ಯೆ ಹೆಚ್ಚಾಗಿ ಸಾಗರಗಳ ಅಂಚಿನಿಂದ ಗಿರಿಶಿಖರಗಳವರೆಗೂ ಜನರು ನೆಲೆಸಿದ್ದಾರೆ.

2004ರಲ್ಲಿ ಸಂಭವಿಸಿದ ಸುನಾಮಿಯಲ್ಲಿ ಸಾವಿರಾರು ಜನರು ಪ್ರಾಣ ಕಳೆದುಕೊಂಡರು. ಈ ದುರಂತದಲ್ಲಿ ನಮ್ಮ ದೇಶದ ತಮಿಳುನಾಡು, ಕೇರಳ, ಪಾಂಡಿಚೇರಿ, ಆಂಧ್ರಪ್ರದೇಶ, ಅಂಡಮಾನ್-ನಿಕೋಬಾರ್ ಮಾಲ್ಡೀವ್ ದ್ವೀಪಗಳು ಹೆಚ್ಚು ಹಾನಿಗೆ ಒಳಗಾದವು. ಇಂಡೋನೇಷ್ಯಾ, ಮಲೇಷ್ಯಾ, ಸಿಂಗಾಪೂರ, ಥೈಲ್ಯಾಂಡ್ ಮತ್ತು ಶ್ರೀಲಂಕಾ ದೇಶಗಳು ಹೆಚ್ಚು ಹಾನಿಗೆ ಒಳಗಾದವು. ಈ ಸುನಾಮಿಯಿಂದ ಸತ್ತವರ ಒಟ್ಟು ಸಂಖ್ಯೆ 2,27,898. ಭಾರತದಲ್ಲಿ 14,000 ಜನ ಎನ್ನಲಾಗಿದೆ. ಸುಮಾತ್ರ ದ್ವೀಪದ ಹತ್ತಿರ ಉದ್ಭವಿಸಿದ ಸುನಾಮಿ 8,000 ಕಿ.ಮೀ.ಗಳ ದೂರದ ದಕ್ಷಿಣ ಆಫ್ರಿಕಾದ ಪೂರ್ವ ಕಡಲವರೆಗೂ ಧಾವಿಸಿತ್ತು.

ಈ ಕೃತಿಯಲ್ಲಿ ಸುನಾಮಿಯ ಸೃಷ್ಟಿ, ಸುನಾಮಿ ಎಂದರೇನು, ಭೂಮಿ, ಸುನಾಮಿ ಭೀಕರ ಚಿತ್ರಣ, ಸುನಾಮಿಯ ನಂತರ, ಕೆಲವು ವಿಶೇಷ ಅನುಭವಗಳು ಮತ್ತು ಹೇಳಿಕೆಗಳು, ಸುನಾಮಿ ಚರಿತ್ರೆ ಮತ್ತು ಕೆಲವು ಆಶ್ಚರ್ಯಸಂಗತಿಗಳು, ಪರಿಹಾರ ಮತ್ತು ಪುನರ್ವಸತಿ, ಸುನಾಮಿ ಮುನ್ನೆಚ್ಚರಿಕೆ ಈ ಅಧ್ಯಾಯಗಳು ಒಳಗೊಂಡಿವೆ. 

 

About the Author

ಎಂ. ವೆಂಕಟಸ್ವಾಮಿ

ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಗೆ ಸೇರಿದ ಡಾ.ಎಂ.ವೆಂಕಟಸ್ವಾಮಿ ಅವರು 06.11.1955 ರಂದು ಜನಿಸಿದರು,  ಪ್ರಾಥಮಿಕ ಶಿಕ್ಷಣ ತನ್ನ ಊರಿನಲ್ಲಿ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಘಟ್ಟುಮಾದಮಂಗಳದಲ್ಲಿ ಪೂರೈಸಿದರು. ಕೆ.ಜಿ.ಎಫ್‍ನ ಮುನಿಸಿಪಲ್ ಬಾಯ್ಸ್ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಮತ್ತು ಕೆಜಿಎಫ್ ಪ್ರ.ದ.ಕಾಲೇಜಿನಲ್ಲಿ ಬಿ.ಎಸ್ಸಿ. ಮುಗಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ (ಭೂವಿಜ್ಞಾನ) ಎಂ.ಎಸ್ಸಿ., ಮುಗಿಸಿದರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾದರು. ಅದಕ್ಕೆ ಮುಂಚೆ ಸ್ವಲ್ಪ ಕಾಲ ಕೆಜಿಎಫ್‍ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್‍ನಲ್ಲಿ (SAIL) ಕೆಲಸ ಮಾಡಿದ್ದರು.  ‘ಕೋಲಾರ ಚಿನ್ನದ ಗಣಿಗಳು'' ಮಹಾಪ್ರಬಂಧಕ್ಕೆ ...

READ MORE

Related Books