ಹಾಲಹರವಿ

Author : ಶ್ರೀರಾಮ ಇಟ್ಟಣ್ಣವರ

Pages 200

₹ 140.00




Year of Publication: 2015
Published by: ಹಾಲುಮತ ಸಂಸ್ಕೃತಿ
Address: ಸಂಶೋಧನ ಪ್ರತಿಷ್ಠಾನ ಹೊಸಪೇಟೆ

Synopsys

ಜಾನಪದ ತಜ್ಞ ಶ್ರೀ ರಾಮ ಇಟ್ಟಣ್ಣವರು ಹಾಲುಮತಕ್ಕೆ ಸಂಬಂಧಿಸಿದ ಕೃತಿ- ’ಹಾಲಹರವಿ’. ಹಾಲುಮತ ಸಂಸ್ಕೃತಿಯ ಅಧ್ಯಯನಗಳು ಇಲ್ಲಿವೆ. ಕರ್ನಾಟಕದ ಪ್ರಾಚೀನ ಜನಾಂಗಗಳ ಪೈಕಿ ಹಾಲುಮತವೂ ಒಂದು. ದೈವ, ಸಂಪ್ರದಾಯ, ಕಲೆಗಳನ್ನು ಕುರಿತಾಗಿ ಹತ್ತು ಲೇಖನಗಳಿವೆ. ಕುರುಬರ ಅಧಿಧೈವ ಬೀರಪ್ಪನ ಕುರಿತಾಗಿ ಮೂರು ಲೇಖನಗಳಿವೆ. ’ಕುಡವೊಕ್ಕಲಿಗರು’ ತೌಲನಿಕ ಅಧ್ಯಯನವಾಗಿದೆ. ’ಕುರುಬರ ಹುಡುಗಿಗೆ ಮುಂಜಿವೆ’ ಎಂಬ ಲೇಖನ ತೀರ ಅಪರೂಪವಾದ ಕುರುಬರ ಆಚರಣೆಯೊಂದನ್ನು ಹಿಡಿದಿಟ್ಟಿವೆ. ಹಂಪಿ ಕನ್ನಡ ವಿಶ್ವವಿದ್ಯಾಲಯವು ಡಾ. ಇಟ್ಟಣ್ಣವರ ಸರ್ವಾಧ್ಯಕ್ಷತೆಯಲ್ಲಿ ಏರ್ಪಡಿಸಿದ ಹಾಲುಮತ ಸಂಸ್ಕೃತಿ ಸಮ್ಮೇಳನದ ಸರ್ವಾಧ್ಯಕ್ಷ ಭಾಷಣವೂ ಈ ಗ್ರಂಥದಲ್ಲಿದೆ.

About the Author

ಶ್ರೀರಾಮ ಇಟ್ಟಣ್ಣವರ
(01 June 1948)

ಶ್ರೀಕೃಷ್ಣ ಪಾರಿಜಾತ- ಒಂದು ಅಧ್ಯಯನ ಎಂಬ ವಿಷಯದ ಮೇಲೆ ಪಿಎಚ್‌.ಡಿ . ಪದವಿ ಪಡೆದಿರುವ ಶ್ರೀರಾಮ ಇಟ್ಟಣ್ಣವರ ಅವರು ಬೀಳಗಿಯ ಶ್ರೀಸಿದ್ಧೇಶ್ವರ ಕಾಲೇಜಿನಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕರ್ನಾಟಕ ಬಯಲಾಟ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷರಾಗಿರುವ ಇಟ್ಟಣ್ಣವರ ಅವರು ಬಯಲಾಟ-ಕೃಷ್ಣ ಪಾರಿಜಾತ ಹಾಗೂ ಜಾನಪದ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಹೊಳಿಸಾಲ ಬಳ್ಳಿ; ಗಾಲಿ ಉಳ್ಳತೈತಿ; ನೂರು ಶಿಶುಗೀತೆಗಳು; ಹಾಡುಣು ಬಾಪ್ರೇಮದ ಪಾಡಾ; ಹೊತ್ತು ಮೂಡುವ ಸಮಯ (ಕಾವ್ಯ), ಪಾರಿಜಾತದವರು (ನಾಟಕ),  ಜನಪದ ಪಶುವೈದ್ಯ ಬೀಳಗಿ ಸಿದ್ಧಪ್ಪ; ಕೊಣ್ಣೂರ ಕರಿಸಿದ್ದೇಶ್ವರ ದೇವಸ್ಥಾನ (ಜಾನಪದೀಯ) ಹಲಗಲಿ-ಗ್ರಾಮ ಚಾನಪದ (ಅಧ್ಯಯನ), ಲಾವಣಿ: ಸಣ್ಣಾಟ (ಸಂಶೋಧನೆ)  ತಟ್ಟಿ ಚಿನ್ನ-ಸಣ್ಣಾಟ; ...

READ MORE

Related Books