ಕನ್ನಡ ಭರ್ತೃಹರಿ ಸುಭಾಷಿತವು

Author : ಬಸವಪ್ಪ ಶಾಸ್ತ್ರಿ

Pages 73
Year of Publication: 1894
Published by: ಬಸವಪ್ಪ ಶಾಸ್ತ್ರಿ
Address: ಶ್ರೀಮನ್ ಮಹಾರಾಜರ ಆಸ್ಥಾನ ಕವಿ, ಮೈಸೂರು

Synopsys

ಭರ್ತೃಹರಿಯ ಶೃಂಗಾರ ಶತಕ, ವೈರಾಗ್ಯ ಶತಕ ಹೀಗೆ ವಿವಿಧ ಶತಕಗಳ ಬಗ್ಗೆ ಬರೆದಿರುವ ಪಠ್ಯವನ್ನು ಬಸವಪ್ಪ ಶಾಸ್ತ್ರೀಗಳು ಇಲ್ಲಿ ಒಂದೆಡೆ ಪ್ರಕಾಶಿಸಿದ್ದೇ-‘ಕನ್ಭಡ ಭರ್ತೃಹರಿ ಸುಭಾಷಿತವು’ . ಭರ್ತೃ ಹರಿಯು ಈ ಶತಕಗಳನ್ನು ಸಂಸ್ಕೃತದಲ್ಲಿ ಬರೆದಿದ್ದು, ಇದನ್ನು ಕನ್ನಡೀಕರಿಸಲಾಗಿದೆ. ಕೃತಿ ಹಳೆಗನ್ನಡದಲ್ಲಿದೆ. ಕಠಿಣ ಶಬ್ದಗಳಿಗೆ ಹಾಗೂ ಪರಿಕಲ್ಪನೆಗಳಿಗೆ ಅರ್ಥ ವಿವರಣೆಯನ್ನೂ ಕೊಡಲಾಗಿದ್ದು, ಹಳೆಗನ್ನಡವೂ ಕಷ್ಟವಾಗುತ್ತಿದ್ದರೆ ಸರಳ ಕನ್ನಡದಲ್ಲಿ ಓದಬಹುದಾಗಿದೆ. ಅರ್ಥ ಪದ್ಧತಿ, ಪರೋಪಕಾರ ಪದ್ಧತಿ, ಧೈರ್ಯ ಪದ್ಧತಿ, ದೈವ ಪದ್ಧತಿ, ಕರ್ಮ ಪದ್ಧತಿ, ಋತು ವರ್ಣನೆ, ವೈರಾಗ್ಯ ಪ್ರಕರಣದಲ್ಲಿ ಭೋಗಾಸ್ಥಿರತ್ವ ವರ್ಣನೆ ಪ್ರಕರಣ ಹೀಗೆ ಭರ್ತೃಹರಿಯ ಶತಕಗಳ ಸಮಗ್ರ ಪಠ್ಯ ಸಂಗ್ರಹದ ಅನುವಾದವು ಅರ್ಥಸಹಿತ ಸರಳ ಕನ್ನಡದಲ್ಲಿದೆ. 

About the Author

ಬಸವಪ್ಪ ಶಾಸ್ತ್ರಿ
(02 May 1843)

ಪಂಡಿತರು, ಭಾಷಾಂತರಕಾರರು, ಅಭಿನವ ಕಾಳಿದಾಸ ಎಂದೇ ಖ್ಯಾತಿಯ ಬಸವಪ್ಪ ಶಾಸ್ತ್ರಿ 1843 ಮೇ 02 ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕು ನಾರಸಂದ್ರ ಗ್ರಾಮದಲ್ಲಿ ಜನಿಸಿದರು. ತಮ್ಮ 18ನೇ ವಯಸ್ಸಿನಲ್ಲಿ ' ಕೃಷ್ಣರಾಜಾಭ್ಯುದಯ' ಎಂಬ ಕಾವ್ಯವನ್ನು ರಚಿಸಿ ಪ್ರಖ್ಯಾತರಾದರು. ಸಂಗೀತದಲ್ಲೂ ಉತ್ತಮ ಜ್ಞಾನ ಗಳಿಸಿಕೊಂಡ ಅವರು ಕಾಳಿದಾಸನ ಪ್ರತಿಭೆಗೆ ಕುಂದಿಲ್ಲದಂತೆ ಸಂಸ್ಕೃತ ಮೂಲದ ಕಾಳಿದಾಸನ ನಾಟಕ 'ಶಾಕುಂತಲ'ವನ್ನು 1883ರಲ್ಲಿ ಮೂಲದ ಸೌಂದರ್ಯ, ಲಾಲಿತ್ಯ , ಓಜಸ್ಸುಗಳಿಗೆ ಚ್ಯುತಿ ಬಾರದಂತೆ ಕನ್ನಡಕ್ಕೆ ಭಾಷಾಂತರಿಸಿದರು. 'ಚಾಮರಾಜೇಂದ್ರ ಕರ್ನಾಟಕ ನಾಟಕ ಸಭಾ' ಅವರ ಅನೇಕ ನಾಟಕಗಳನ್ನು ರಂಗಭೂಮಿಯ ಮೇಲೆ ಪ್ರದರ್ಶಿಸಿತು. ಈ ಕೃತಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಶ್ರೀ ಬಸವಪ್ಪ ...

READ MORE

Related Books