ಕರ್ನಾಟಕದಲ್ಲಿ ಬಹುರೂಪಿ ಸ್ತ್ರೀವಾದ ಕಥನಗಳು ಮತ್ತು ಚಳವಳಿ

Author : ಮುಜಾಫರ್ ಅಸ್ಸಾದಿ

Pages 128

₹ 120.00




Year of Publication: 2021
Published by: ಋತ ಪುಸ್ತಕ ಪ್ರಕಾಶನ
Address: # 891, 3-A ಮುಖ್ಯರಸ್ತೆ, ಡಿ-ಬ್ಲಾಕ್, 2ನೇ ಹಂತ, ರಾಜಾಜಿನಗರ, ಬೆಂಗಳೂರು-560010
Phone: 9448076207

Synopsys

ಡಾ. ಮುಜಾಫರ್ ಅಸ್ಸಾದಿ ಅವರು ಸ್ತ್ರೀವಾದಿತನ ಕುರಿತು ಬರೆದ ವೈವಿಧ್ಯಮಯ ಲೇಖನಗಳ ಸಂಗ್ರಹ ಕೃತಿ-ಕರ್ನಾಟಕದಲ್ಲಿ ಬಹುರೂಪಿ ಸ್ತ್ರೀವಾದ ಕಥನಗಳು ಮತ್ತು ಚಳವಳಿ. ಕೃತಿಯ ಸಂಪಾದಕರು ಮಾಧವ್ ಐತಾಳ್. ಕೃತಿಯ ಸಹ ಸಂಪಾದಕರೂ ಆದ ಡಾ. ಆರ್. ಸಂತೋಷನಾಯಕ ಬೆನ್ನುಡಿ ಬರೆದು ‘ಕರ್ನಾಟಕದಲ್ಲಿ ಬಹುರೂಪಿ ಸ್ತ್ರೀವಾದ ಕಥನಗಳು ಮತ್ತು ಚಳವಳಿ’ ಕುರಿತು ಸಾಕಷ್ಟು ಸಂಶೋಧನೆ ನಡೆದಿದ್ದು ಪುಸ್ತಕಗಳೂ ಬಂದಿವೆ. ಆದರೆ, ಈ ಕೃತಿಯು ಅಪರೂಪದ್ದು. ಲೇಖಕರ ಕನ್ನಡ ಜ್ಞಾನ ಪರಂಪರೆಗೆ ಈ ಕೃತಿಯು ಪ್ರಮುಖ ಕೊಡುಗೆಯಾಗಿದ್ದು, ಅನೇಕ ಒಳನೋಟಗಳನ್ನು ನೀಡುತ್ತದೆ. ಕರ್ನಾಟಕದಲ್ಲಿ ಸ್ತ್ರೀವಾದ ಬೆಳೆದು ಬಂದ ದಾರಿಯನ್ನು ಗುರುತಿಸುತ್ತಾ ಇನ್ನಷ್ಟು ಚರ್ಚೆಗಳಿಗೆ ದಾರಿ ಮಾಡಿಕೊಡುತ್ತಾರೆ’ ಎಂದು ಪ್ರಶಂಸಿಸಿದ್ದಾರೆ.

ಭಾರತೀಯ ಸ್ತ್ರೀವಾದದ ಸವಾಲುಗಳು, ಸ್ತ್ರೀವಾದದ ನೆಲೆಗಳು, ಕರ್ನಾಟಕದಲ್ಲಿ ಸ್ತ್ರೀವಾದದ ಬೆಳವಣಿಗೆ : ಕಥನಗಳ ಇತಿಹಾಸ, ಉದಾರವಾದಿ ಸ್ತ್ರೀವಾದ, ಪರಿಸರ ಸ್ತ್ರೀವಾದ, ಗಾಂಧಿಯನ್ ಸ್ತ್ರೀವಾದ, ರೈತಾಪಿ ಮತ್ತು ಜನಪ್ರಿಯ ರೈತಾಪಿ ಸ್ತ್ರೀವಾದ, ಮುಸ್ಲಿಂ /ಇಸ್ಲಾಮಿಕ್ ಸ್ತ್ರೀವಾದ, ದಲಿತ ಸ್ತ್ರೀವಾದ, ಆದಿವಾಸಿ/ಮೂಲನಿವಾಸಿ ಸ್ತ್ರೀವಾದ, ರೈತ ಚಳವಳಿಯಲ್ಲಿ ಮಹಿಳೆ, ಪರಿಸರ ಚಳವಳಿ ಮತ್ತು ಮಹಿಳೆ, ದಲಿತ ಚಳವಳಿ ಮತ್ತು ಮಹಿಳಾ ವಿಷಯ, ಆದಿವಾಸಿ ಹೋರಾಟ ಮತ್ತ ಮಹಿಳೆ ಹಾಗೂ ನಾಗರಿಕ ಸಮಾಜ, ಮಹಿಳಾ ಸಂಘಟನೆಗಳು ಮತ್ತು ಸ್ತ್ರೀವಾದ ಹೀಗೆ ವಿವಿಧ ಅಧ್ಯಾಯಗಳಡಿ ಸ್ತ್ರೀವಾದವನ್ನು ಚರ್ಚಿಸಲಾಗಿದೆ.

About the Author

ಮುಜಾಫರ್ ಅಸ್ಸಾದಿ

ಡಾ. ಮುಜಾಫರ್ ಅಸ್ಸಾದಿ ಅವರು ಮಂಗಳೂರು ವಿ.ವಿ.ಯಿಂದ ಸ್ನಾತಕೋತ್ತರ ಪದವಿ, ನವದೆಹಲಿಯ ಜೆಎನ್ ಯು ನಿಂದ ಎಂ.ಫಿಲ್ ಹಾಗೂ ಪಿಎಚ್ ಡಿ ನಂತರ ಶಿಕಾಗೋ ವಿ.ವಿ.ಯಿಂದ ರಾಕ್ ಫೆಲ್ಲರ್ ಫೆಲೋ, ಪೋಸ್ಟ್ ಡಾಕ್ಟೊರಲ್ ಪದವೀಧರರು. ಈವರೆಗೆ 11 ಕೃತಿಗಳನ್ನು ರಚಿಸಿದ್ದಾರೆ. ಬುಡಕಟ್ಟು ಸಮುದಾಯಗಳ ಸ್ಥಳಾಂತರ ಕುರಿತ ಹೈಕೋರ್ಟ್ ಸಮಿತಿ ಅಧ್ಯಕ್ಷರಾಗಿ, ವರದಿ ನೀಡಿದ್ದಾರೆ. ಸದ್ಯ, ಮೈಸೂರು ವಿ.ವಿ.ಯ ರಾಜ್ಯಶಾಸ್ತ್ರದ ಹಿರಿಯ ಪ್ರಾಧ್ಯಾಪಕರು. ಕೃತಿಗಳು: ಕರ್ನಾಟಕದಲ್ಲಿ ಬಹುರೂಪಿ ಸ್ತ್ರೀವಾದ ಕಥನಗಳು ಮತ್ತು ಚಳವಳಿ, ಅಸ್ಮಿತೆ, ರಾಜಕಾರಣ ಮತ್ತು ಮೂಲಭೂತವಾದ. ...

READ MORE

Related Books