ಸ್ತ್ರೀಕಥನ

Author : ಶೈಲಜ ಹಿರೇಮಠ

Pages 144

₹ 75.00




Year of Publication: 2002
Published by: ಭುವನ ಪ್ರಕಾಶನ
Address: ಎಂ. ಪಿ. ಪ್ರಕಾಶ್‌ನಗರ, ಹೊಸಪೇಟೆ - 583201

Synopsys

‘ಸ್ತ್ರೀಕಥನ’ ಶೈಲಜಾ ಹೀರೆಮಠ ಅವರ ಕೃತಿಯಾಗಿದೆ. ಸ್ತ್ರೀ ಸಂಬಂಧಿ ವ್ಯಾಖ್ಯಾನಗಳು ಆದಿಮ ಸಂಸ್ಕೃತಿಯಿಂದಲೂ ಕೇಳಿಬರುತ್ತಿದ್ದು ಒಂದೊಂದು ಯುಗದಲ್ಲೂ ಆಕೆಯನ್ನು ಒಂದೊಂದು ಬಿಂದುವಿನಲ್ಲಿ ಗುರುತಿಸಲಾಗಿದೆ. ಕೆಲವೊಮ್ಮೆ ಅತೀ ಎತ್ತರಕ್ಕೇರಿಸಿ ಇನ್ನೊಮ್ಮೆ ಪ್ರಪಾತಕ್ಕೆ ತಳ್ಳಲಾಗಿದೆ.

About the Author

ಶೈಲಜ ಹಿರೇಮಠ
(05 January 1969)

ಶೈಲಜ ಹಿರೇಮಠ, 1969 ರ ಜನೆವರಿ 5 ರಂದು ಜನನ. ಎಂ.ಎ, ಎಂ ಫಿಲ್, ಪಿ ಎಚ್ ಡಿ ಪದವೀಧರರು. ಹಂಪಿಯ ಕನ್ನಡ ವಿ.ವಿ. ಮಹಿಳಾ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರು. ಮಹಿಳಾ ಜಾನಪದ ಬಗ್ಗೆ ವಿಶೇಷ ಪರಿಣಿತಿ. ಮಹಿಳಾ ಅಧ್ಯಯನ, ಮಹಿಳಾ ಜಾನಪದ, ಬುಡಕಟ್ಟು ಮಹಿಳಾ ಅಧ್ಯಯನ , ದಲಿತ ಮಹಿಳಾ ಅಧ್ಯಯನ ಇತ್ಯಾದಿ ವಿಷಯಗಳಲ್ಲಿ ವಿಶೇಷ ಪರಿಣತಿ.  ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥರು. ದಲಿತ ಅಧ್ಯಯನ ಸ್ನಾತಕೋತ್ತರ  ಡಿಪ್ಲೊಮಾ ಮತ್ತು ಡಿಪ್ಲೊಮಾ ಕಾರ್ಯಕ್ರಮ ಅಧ್ಯಯನ ಮಂಡಳಿ ಸದಸ್ಯೆ. ಮಹಿಳಾ  ಅಧ್ಯಯನ ಸ್ನಾತಕೋತ್ತರ ಡಿಪ್ಲೊಮಾ ಕಾರ್ಯಕ್ರಮ ಅಧ್ಯಯನ ...

READ MORE

Reviews

ಹೊಸತು- ನವೆಂಬರ್‌ -2003

ಸ್ತ್ರೀ ಸಂಬಂಧಿ ವ್ಯಾಖ್ಯಾನಗಳು ಆದಿಮ ಸಂಸ್ಕೃತಿಯಿಂದಲೂ ಕೇಳಿಬರುತ್ತಿದ್ದು ಒಂದೊಂದು ಯುಗದಲ್ಲೂ ಆಕೆಯನ್ನು ಒಂದೊಂದು ಬಿಂದುವಿನಲ್ಲಿ ಗುರುತಿಸಲಾಗಿದೆ. ಕೆಲವೊಮ್ಮೆ ಅತೀ ಎತ್ತರಕ್ಕೇರಿಸಿ ಇನ್ನೊಮ್ಮೆ ಪ್ರಪಾತಕ್ಕೆ ತಳ್ಳಲಾಗಿದೆ. ಇಂದು ಆಕೆಯನ್ನು ಈ ಎರಡು ಅತಿಗಳ ನಡುವೆ ಗುರುತಿಸ ಬೇಕಾದ ಸ್ತ್ರೀವಾದಿ ನೆಲೆಯಿಂದ ಅರ್ಥೈಸಿ ಗೌರವಿಸಬೇಕಾದ ಹೊಸ ಪರಂಪರೆಯೊಂದು ಉದಿಸಬೇಕಾಗಿದೆ. ತಮ್ಮ ಆಳವಾದ ಅಧ್ಯಯನದ ಮೂಲಕ ಗ್ರಹಿಸಿದ ಸ್ತ್ರೀವಾದಿ ಚಿಂತನೆಗಳನ್ನು, ಆಕೆಯ ನೋವು ನಲಿವುಗಳನ್ನು, ಲೇಖಕಿ ಇಲ್ಲಿ ದಾಖಲಿಸಿದ್ದಾರೆ.

Related Books