ಕುವೆಂಪು ಅವರ ಶ್ರೀರಾಮಾಯಣದರ್ಶನಂ-ಗದ್ಯಾನುವಾದ

Author : ನಿ. ರಾಜಶೇಖರ

Pages 530

₹ 250.00




Year of Publication: 2017
Published by: ಐಬಿಎಚ್ ಪ್ರಕಾಶನ

Synopsys

ಕುವೆಂಪು ಅವರ ಮಹಾಕಾವ್ಯ ’ಶ್ರೀರಾಮಾಯಣ ದರ್ಶನಂ’ ಸರಳ ರಗಳೆ ಛಂದಸ್ಸಿನಲ್ಲಿದೆ. ಕುವೆಂಪು ಅವರಿಗೆ ಖ್ಯಾತಿ-ಮನ್ನಣೆ ದೊರಕಿಸಿದ ಈ ಮಹಾಗ್ರಂಥದ ಸರಳ ಕನ್ನಡ ಗದ್ಯಾನುವಾದವನ್ನು ನಿ. ರಾಜಶೇಖರ ಅವರು ಮಾಡಿದ್ದಾರೆ. ಕಾವ್ಯರೂಪದಲ್ಲಿದ್ದ ಕಥನವನ್ನು ಗದ್ಯಕ್ಕೆ ವರ್ಗಾಯಿಸುವಲ್ಲಿ ಲೇಖಕರ ಶ್ರಮ ಎದ್ದು ಕಾಣಿಸುತ್ತದೆ. ಸರಳ ಗದ್ಯದಲ್ಲಿ ಕುವೆಂಪು ರಾಮಾಯಣ ಅರಿಯ ಬಯಸುವವರಿಗೆ ಉಪಯುಕ್ತ ಗ್ರಂಥ.

About the Author

ನಿ. ರಾಜಶೇಖರ
(09 September 1932 - 09 October 2008)

ನಿ. ರಾಜಶೇಖರ (ನಿಜಲಿಂಗಪ್ಪ ರಾಜಶೇಖರ) ಚಿತ್ರದುರ್ಗದವರು. 9.9.1932 ರಲ್ಲಿ ಜನನ. ಕರ್ನಾಟಕ ರಾಜ್ಯ ಮುಖ್ಯಮಂತ್ರಿಯಾಗಿದ್ದ ನಿಜಲಿಂಗಪ್ಪನವರ ಮೂರನೆಯ ಪುತ್ರ. ಅವರು, ಶಿಕ್ಷಣ ಪಡೆದಿದ್ದು ಕೇವಲ ಇಂಟರ್ ಮೀಡಿಯೇಟ್ ವರೆಗೆ ಮಾತ್ರ. ತಾಯಿ ಮುರಿಗೆಮ್ಮ. ಚಿತ್ರದುರ್ಗ ಬಳಿ ತೋಟಗಾರಿಕೆ ಕೃಷಿಯಲ್ಲಿ ತೊಡಗಿದ್ದರು. ಮದುವೆ ಮಾಡಿಕೊಳ್ಳಲಿಲ್ಲ.  ಸಿದ್ಧಲಿಂಗಶಾಸ್ತ್ರಿಗಳಿಂದ ಸಂಸ್ಕೃತ ಕಲಿತರು.  ಕೃಷಿ ಮಾಡುತ್ತಲೇ ಸಾಹಿತ್ಯದ ಓದು ನಿರಂತರವಾಗಿತ್ತು. ಕಾಳಿದಾಸನ ಮೇಘದೂತ ಹಾಗೂ ಶಬರ ಶಂಕರವಿಳಾಸ ಕೃತಿಗಳನ್ನು ಹಾಗೂ ಸಹೋದರ ಉಮಾಕಾಂತ ಅವರೊಂದಿಗೆ ‘Blue Bird’ ಅನ್ನುವ ಇಂಗ್ಲಿಷ್ ನಾಟಕವನ್ನು(ಫ್ರೆಂಚ್ ಸಾಹಿತಿ ಮಾರಿಸ್ ಮೇಯರ್) ಕನ್ನಡಕ್ಕೆ ‘ನೀಲಿಹಕ್ಕಿ’ ಎಂದು ಅನುವಾದಿಸಿದರು. 1911ರಲ್ಲಿ ನೊಬೆಲ್ ಬಹುಮಾನ ಪಡೆಯಿತು. ಅಣ್ಣ ಉಮಾಕಾಂತ, ಅಕ್ಕ ಸಾಹಿತಿ ಪಾರ್ವತಮ್ಮ ಜೊತೆಗೂಡಿ ಕನ್ನಡ ...

READ MORE

Related Books