ಕುವೆಂಪು ಮತ್ತು ಟಾಗೂರ್

Author : ಸಿ.ಪಿ.ಕೆ. (ಸಿ.ಪಿ. ಕೃಷ್ಣಕುಮಾರ್)

Pages 160

₹ 100.00




Published by: ಶ್ರೀಲಲಿತಾ ಬುಕ್ ಬ್ಯುರೋ

Synopsys

ಭಾರತೀಯ ಸಾಹಿತ್ಯ ಪರಂಪರೆಯಲ್ಲಿ ನೋಬೆಲ್‌ ಪುರಸ್ಕೃತ ಕವಿ ರವೀಂದ್ರನಾಥ ಟಾಗೋರ್‌ ದೊಡ್ಡ ಹೆಸರು. ಬೆಂಗಾಲಿಯಲ್ಲಿ  ಕವಿತೆ-ನಾಟಕ- ಕಾದಂಬರಿ- ಕತೆ ಸೇರಿದಂತೆ ವೈವಿಧ್ಯಮಯ ಸಾಹಿತ್ಯ ಸೃಷ್ಟಿಸಿದ ಟಾಗೋರ್‌ ಮೇರು ಪುರುಷ. ಟಾಗೋರ್‌ ಕೇವಲ ಕವಿ-ಲೇಖಕನಾಗಿ ಮಾತ್ರವಲ್ಲದೆ ಸಂಗೀತ-ಲಲಿತಕಲಾ ಕ್ಷೇತ್ರದಲ್ಲಿಯೂ ಅಸಾಧಾರಣ ಸಾಧನೆ ಮಾಡಿದವರು. ಬಂಗಾಲಿಯಲ್ಲಿ ಬರೆಯುತ್ತಿದ್ದ ಟಾಗೋರ್‌ ಅವರ ಬರೆಹಗಳು ಇಂಗ್ಲಿಷಿಗೆ ಅನುವಾದವಾಗಿ ಜಾಗತಿಕ ಮನ್ನಣೆ ಪಡೆದದ್ದು ಇತಿಹಾಸ.

ಭಾರತೀಯ ಸಾಹಿತ್ಯ ಸಂಸ್ಕೃತಿಯ ಮೇರೆಗಳನ್ನು ವಿಸ್ತರಿಸಿ ಮತ್ತೊಂದು ಮಹಾನ್ ಚೇತನ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ. ಕುವೆಂಪು ಅವರು ಕಾಲದ ದೃಷ್ಟಿಯಿಂದ ಟಾಗೋರ್‌ ನಂತರದವರಾದರೂ ಮಹತ್ವದ ದೃಷ್ಟಿಯಿಂದ ಕಡಿಮೆಯೇನಲ್ಲ. ಕುವೆಂಪು ಅವರು ಕಾವ್ಯ, ಕಾದಂಬರಿ, ವಿಮರ್ಶೆ, ನಾಟಕ ಹೀಗೆ ವೈವಿಧ್ಯಮಯ ಸಾಹಿತ್ಯ ಸೃಷ್ಟಿಯ ಜೊತೆಗೆ ಕನ್ನಡ ಸಂಸ್ಕೃತಿಗೆ ತಾತ್ವಿಕತೆಯ ಚೌಕಟ್ಟು ಕಲ್ಪಿಸಲು ಹೆಣಗಿದವರು. 

ಟಾಗೋರ್‌ ಮತ್ತು ಕುವೆಂಪು ಇಬ್ಬರೂ ಮಹಾನ್ ಲೇಖಕರು. ಅವರಿಬ್ಬರ ಬಗ್ಗೆ ತೌಲನಿಕವಾಗಿ ವಿವರಿಸಿ ವಿಶ್ಲೇಷಿಸಿದ ಕೃತಿಯಿದು. ಹಿರಿಯ ಲೇಖಕ ಸಿ.ಪಿ.ಕೆ. ಅವರ ಪರಿಶ್ರಮ ಎದ್ದು ಕಾಣಿಸುತ್ತದೆ.

About the Author

ಸಿ.ಪಿ.ಕೆ. (ಸಿ.ಪಿ. ಕೃಷ್ಣಕುಮಾರ್)
(08 April 1939)

ಲೇಖಕರು, ಸಂಶೋಧಕರು ಆದ ಸಿ.ಪಿ.ಕೃಷ್ಣಕುಮಾರ್ ಅವರು 08-04-1939ರಂದು ಮೈಸೂರು ಜಿಲ್ಲೆಯ ಕೃಷ್ಣರಾಜ ನಗರ ತಾಲೂಕಿನ ಚಿಕ್ಕನಾಯಕನ ಹಳ್ಳಿಯಲ್ಲಿ ಜನಿಸಿದರು. ತಂದೆ ಪುಟ್ಟೇಗೌಡರು ಮೋಜಿಣಿದಾರರಾಗಿ ಸರಕಾರಿ ಕೆಲಸದಲ್ಲಿದ್ದರು. ಕೃಷ್ಣಕುಮಾರ್ ಅವರು 9 ತಿಂಗಳ ಮಗುವಾಗಿದ್ದಾಗಲೇ ತಾಯಿ ತೀರಿಕೊಂಡರು.  ಸಿಪಿಕೆ ಎಂದೇ ಪ್ರಸಿದ್ಧರಾದ ಅವರು ಜೆ.ಎಸ್.ಎಸ್. ಮಹಾರಾಜಾ ಕಾಲೇಜಿನಿಂದ ಬಿ.ಎ. (ಆನರ್ಸ್) ಪದವಿಯನ್ನು ಪಡೆದರು. 1961 ರಲ್ಲಿ ಮಾನಸಗಂಗೋತ್ರಿಯಲ್ಲಿ ಎಂ.ಎ. ಪದವಿ ಪಡೆದರು.  1962ರಲ್ಲಿ ಸಿ.ಪಿ.ಕೆ. ಅವರ ಮದುವೆ ಶಾರದಾ ಅವರ ಜೊತೆಗೆ ಜರುಗಿತು. 1964ರಲ್ಲಿ ಮಹಾರಾಜಾ ಕಾಲೇಜಿನಲ್ಲಿ ಅಧ್ಯಾಪಕರಾದರು.1967ರಲ್ಲಿ ಮಾನಸ ಗಂಗೋತ್ರಿಯಲ್ಲಿ ಅಧ್ಯಾಪಕರಾದರು. 1969ರಲ್ಲಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ...

READ MORE

Related Books