ಇದು ಸಾರ್ವಜನಿಕ ಸಮಸ್ಯೆಗಳ ಕುರಿತೂ ಬೆಳಕು ಚೆಲ್ಲುವ ಕೃತಿ


ಈ ಕೃತಿಯಲ್ಲಿ ಯುವಕರಿಗೆ ಮಾರ್ಗದರ್ಶನ ಸಾರ್ವಜನಿಕ ಸೇವೆಯ ಮಹತ್ವ, ಶಿಸ್ತು ಮತ್ತು ಕರ್ತವ್ಯ ಪ್ರಜ್ಞೆ ಕಡಿಮೆಯಾಗುತ್ತಿದೆಯೆ? ಸಿಂಪ್ಲಿಸಿಟಿ- ಸರಕಾರಕ್ಕೆ 24 ಸೂತ್ರಗಳು ಇಂತಹ ತುಂಬ ಉಪಯುಕ್ತವಾದ ಲೇಖನಗಳಿವೆ‌ ಎನ್ನುತ್ತಾರೆ ಲೇಖಕ ಉದಯಕುಮಾರ ಹಬ್ಬು ಅವರು ಜಯಪ್ರಕಾಶ್ ಪುತ್ತೂರು ಅವರ "ದಶಕಗಳ ಸಾಹಿತ್ಯದ ಮೊಗಸಾಲೆಯಲ್ಲಿ' ಕೃತಿಗೆ ಬರೆದ ವಿಮರ್ಶೆ.

ಮಾನ್ಯ ಜಯಪ್ರಕಾಶ ಪುತ್ತೂರು ಇವರು ಈ ವಿಶಿಷ್ಟ ಪುಸ್ತಕವನ್ನು ಕಳಿಸಿ ಕೆಲವು ದಿನಗಳಾದವು. ಅವರು ಈಗಾಗಲೇ ಆರು ಕೃತಿಗಳನ್ನು ಬರೆದು ಕರ್ನಾಟಕದ ಮನೆಮಾತಾಗಿದ್ದಾರೆ‌. ಅವರ ಕಲಾಂ ಅವರ ಆತ್ಮಚರಿತ್ರೆಯ ಅನುವಾದಿಸಿದ "ಅಗ್ನಿಯ ರೆಕ್ಕೆಗಳು " 15 ಆವೃತ್ತಿಯನ್ನು ಕಂಡಿದೆ‌. ಶಿಶು ಸಾಹಿತ್ಯ 8 ಆವೃತ್ತಿಗಳನ್ನು ಕಂಡಿದೆ‌. ಪ್ರಸ್ತುತ ಪುಸ್ತಕ "ದಶಕಗಳ ಸಾಹಿತ್ಯದ ಮೊಗಸಾಲೆಯಲ್ಲಿ' ಇದನ್ನು ಆರು ವರ್ಷದ ವಿಭಾಗಗಳನ್ನು ಮಾಡಿದ್ದಾರೆ‌.

1. ವ್ಯಕ್ತಿ ಸಂದರ್ಶನಗಳು

2. ಸಂಸ್ಕೃತಿ ಕಲೆಗಳು

3.ಸಾಧಕರ ಸಾಧನೆಗಳು

4.ವಿಚಾರ ವಿಶೇಷಗಳು

5 ಜೆ.ಪಿ. ಅವರ ಕೃತಿಗಳು- ವಿಮರ್ಶೆಗಳು

6. ಜೆ.ಪಿ. ಅವರನ್ನು ಕಂಡಂತೆ

ಜೆ.ಪಿ ಅವರು ಜನರ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಪಿ.ಆರ್.ಓ ಆಗಿ ಅತಿ ಹತ್ತಿರದಿಂದ ನೋಡಿದವರು. ಅವರೊಡನೆ ಆತ್ಮೀಯವಾಗಿ ಬೆರೆತವರು. ಅಬ್ದುಲ್ ಕಲಾಂ ಅವರ ನೇತೃತ್ವದಲ್ಲಿ ಡಿ. ಆರ್. ಡಿ. ಓ. ಭಾರತೀಯ ವಿಜ್ಞಾನ ಸಂಸ್ಥೆ ಉತ್ತುಂಗಕ್ಕೇರಿದಾಗ ಜೆ.ಪಿ ಅವರು ರಾಷ್ಟ್ರಪತಿ ಅಬ್ದುಲ್ ಕಲಾಮರೊಟ್ಟಿಗೆ ಇದ್ದವರು. ಆಗ ಅವರಿಗೆ ಡಿ.ಆರ್.ಡಿ.ಓ ದ ಅನೇಕ ಖ್ಯಾತ ವಿಜ್ಞಾನಿಗಳ ಸಂಪರ್ಕಕ್ಕೆ ಜೆ.ಪಿ ಅವರು ಬಂದರು‌.

ಮೊದಲ ಭಾಗದಲ್ಲಿ ಇಂತಹ ಹಲವು ವಿಜ್ಞಾನಿಗಳ ಪರಿಚಯ ಮತ್ತು ಸಾಧನೆಗಳನ್ನು ಜೆ.ಪಿ ಕಟ್ಟಿಕೊಟ್ಟಿದ್ದಾರೆ. ಅಂಗವಿಕಲ ಸಾಧಕರ ಕುರಿತಾಗಿಯೂ ಬರೆದಿದ್ದಾರೆ. ಈ ಮೊದಲ ಭಾಗದ ಬರಹಗಳು ಸಾಧಕರಿಗೆ ಪ್ರೇರಣೆಯಾದೀತು.

ಎರಡನೆಯ ಭಾಗದಲ್ಲಿ ಕಲೆ ಸಂಸ್ಕೃತಿ ಕುರಿತು ಅನೇಕ ಲೇಖನಗಳಿವೆ‌ ಚಿತ್ರಕಲೆ, ಸಂಗೀತ ಉಡುಪಿಯ ವಿಟ್ಲಪಿಂಡಿ ಮುಂತಾದವುಗಳ ಬಗ್ಗೆ ಸವಿವರವಾದ ಮಾಹಿತುಗಳುಳ್ಳ ಲೇಖನಗಳಿವೆ. ಈ ಭಾಗ ಜೆ.ಪಿ ಅವರ ವೈವಿಧ್ಯಮಯ ಸಾಂಸ್ಕೃತಿಕ ಆಸಕ್ತಿಯನ್ನು ತೋರಿಸುತ್ತದೆ, ಮೂರನೆಯ ಭಾಗದಲ್ಲಿ ಭಾರತೀಯ ವೈಮಾನಿಕ ಪಡೆಯಲ್ಲಿ ನಡೆದ ಸಂಶೋಧನೆಗಳು, ತಪಸ್ ಪತನ ಇಂತಹ ಲೇಖನಗಳ ಜೊತೆಯಲ್ಲಿ ಕೊರೊನಾ ಸಂದರ್ಭದಲ್ಲಿ ಸಿಂಗಾಪುರ ತೋರಿಸಿದ ಮುತ್ಸದ್ದಿತನದ ಬಗ್ಗೆ ಕುತೂಹಲಕಾರಿ ಮಾಹಿತಿಯನ್ನು ಸಂಗ್ರಹಿಸಿ ಕೊಡಲಾಗಿದೆ.

ನಾಲ್ಕನೆಯ ಭಾಗ ವಿಚಾರ ವಿಶೇಷಗಳು ಈ ಪುಸ್ತಕದ ಅತ್ಯಂತ ಮಹತ್ವದ ಬರಹಗಳನ್ನು ಒಳಗೊಂಡಿವೆ‌. ಇಂದಿನ ನಮ್ಮ ಸಮಾಜ ಜಾಗತೀಕರಣ ಖಾಸಗೀಕರಣ ಮೊದಲಾದವುಗಳಿಂದ ಸಾಮಾಜಿಕ ವ್ಯವಸ್ಥೆಯು ದಾರಿ ತಪ್ಪುತ್ತಿದೆ‌ ನೈತಿಕತೆ ಕುಸಿಯುತ್ತಿದೆ‌ ಸಮಾಜ ಕೆಟ್ಟು ಹೋಗುತ್ತಿದೆ. ಮನುಷ್ಯ ಸಂಬಂಧಗಳು ಕೆಡುತ್ತಿವೆ.‌ ಮೊಬೈನಂತಹ ಜಾಲತಾಣಗಳು ಮನುಷ್ಯರನ್ನು ಭಾವನೆಗಳು ಇಲ್ಲದ ಯಂತ್ರ ಮಾನವರನ್ನಾಗಿ ಮಾಡಿದೆ‌.

ಜನರಿಗೆ ನಾಗರಿಕ ಪ್ರಜ್ಞೆಯ ಕೊರತೆ ಇದೆ‌ ಎಲ್ಲಂದರಲ್ಲಿ ಉಗುಳುವುದು, ಕಸ ಕಡ್ಡಿಗಳನ್ನು ಚೆಲ್ಲುವುದು, ಸಾರ್ವಜನಿಕ ಶೌಚಾಲಯನ್ನು ಗಲೀಜು ಮಾಡುವುದು ಇಂತಹ ಅನಾಗರಿಕ ವರ್ತನೆ ನಾಚಿಗೆಯಾಗುವಷ್ಟರ ಮಟ್ಟಕ್ಕೆ ಕುಸಿದಿದೆ‌ ಇದಕ್ಕೆ ಪರಿಹಾರವೆಲ್ಲಿ ಎನ್ನುತ್ತಾರೆ‌ ಜೆ ಪಿ. ಹಿರಿಯರಿಗೆ ಕಿವಿ ಮಾತುಗಳು, ಯುವಕರಿಗೆ ಮಾರ್ಗದರ್ಶನ ಸಾರ್ವಜನಿಕ ಸೇವೆಯ ಮಹತ್ವ, ಶಿಸ್ತು ಮತ್ತು ಕರ್ತವ್ಯ ಪ್ರಜ್ಞೆ ಕಡಿಮೆಯಾಗುತ್ತಿದೆಯೆ? ಸಿಂಪ್ಲಿಸಿಟಿ- ಸರಕಾರಕ್ಕೆ 24 ಸೂತ್ರಗಳು ಇಂತಹ ತುಂಬ ಉಪಯುಕ್ತವಾದ ಲೇಖನಗಳಿವೆ‌.

ಕೆಟ್ಟು ಹೋಗಿರುವ ಸಾರ್ವಜನಿಕ ಸೇವಾ ಸ್ಥಳಗಳಾದ ಹೋಟೆಲ್ ವಿಮಾನ‌ ನಿಲ್ದಾಣಗಳಲ್ಲಿ ಸಾರ್ವಜನಿಕರಿಗೆ ಆದ ತೊಂದರೆಗಳು ಕಷ್ಟಗಳು, ಅವುಗಳಲ್ಲಿ ಕೆಲವು ಸಂದರ್ಭದಲ್ಲಿ ಜೆ.ಪಿ ಪ್ರತಿಭಟಿಸಿ ನ್ಯಾಯ ಕೊಡಿಸಿದ್ದು ಇವೆಲ್ಲ ಸ್ವಾರಸ್ಯಕರ ನಿರೂಪಣೆಯಿಂದ ಓದುಗರ ಮನಸ್ಸನ್ನು ಸೆಳೆಯುತ್ತದೆ‌. ಐದನೆಯ ಭಾಗ ಅವರ ಕೃತಿಗಳ ಕುರಿತಾದ ವಿಮರ್ಶೆಗಳು ಆರನೆಯ ಭಾಗದಲ್ಲಿ ಜೆ ಪಿ ಅವರನ್ನು ಹತ್ತಿರದಿಂದ ಕಂಡ ಆತ್ಮೀಯರ ಬರಹಗಳಿವೆ‌. ಈ ಪುಸ್ತಕ ಸಾರ್ವಜನಿಕ ಸಮಸ್ಯೆಗಳ ಕುರಿತು ಬೆಳಕು ಚೆಲ್ಲುವ ಕೃತಿಯೂ ಆಗಿದೆ‌.

ಉದಯಕುಮಾರ ಹಬ್ಬು

 

MORE FEATURES

'ಅಕ್ಕ'ನನ್ನು ಕುರಿತ ವಿಭಿನ್ನ ದೃಷ್ಟಿಕೋನದ ಕೃತಿ ‘ರೂಹಿಲ್ಲದ ಚೆಲುವ’

02-05-2024 ಬೆಂಗಳೂರು

ಈ ಕಾದಂಬರಿ ಅಕ್ಕಮಹಾದೇವಿಯ ಕಥನಕ್ಕೆ ಮಾತ್ರ ಸೀಮಿತಗೊಂಡಿಲ್ಲ. ಶರಣ ಧರ್ಮದ ಸಾಮಾಜಿಕ, ತಾತ್ವಿಕ, ವೈಚಾರಿಕ ಚಿಂತನೆಗಳನ್ನು...

ನಾವೇನನ್ನೊ ಕಳೆದುಕೊಂಡರೆ ಅದಕ್ಕಿಂತ ಮಹತ್ವದ್ದನ್ನು ಪಡೆದುಕೊಳುತ್ತೇವೆ

02-05-2024 ಬೆಂಗಳೂರು

‘ನನಗೀ ಪುಸ್ತಕದಲ್ಲಿ ಅರ್ಥವಾದ್ದದಾದರು ಏನು. ಪುನಃ ಪುಸ್ತಕದ ಹೆಸರು ಓದಿದೆ. " ನಿರ್ಗಮನ ". ಹೂ...! ...

ನಮ್ಮೊಳಗನ್ನು ಎಚ್ಚರಿಸುವ ಕೃತಿ ‘ದೇವನೂರ ಮಹಾದೇವ ಜೊತೆ ಮಾತುಕತೆ’

02-05-2024 ಬೆಂಗಳೂರು

'ಒಬ್ಬ ಜವಾಬ್ದಾರಿಯುತ ನಾಗರಿಕ, ಪ್ರಜ್ಞಾವಂತ ಬರಹಗಾರ- ತನ್ನ ಸಮಾಜದ ದುರಿತಗಳ ತುರ್ತಿಗೆ ಅನುಗಾಲವೂ ಹೇಗೆ ಸಂವೇದಿಸು...