ಜೀವನ‌ ಪ್ರೀತಿಯನ್ನು‌ ಅಕ್ಷರಗಳಲ್ಲಿ ಹೆಣೆದಿಡುವ ಲೇಖಕ ಜಯಂತ್ ಕಾಯ್ಕಿಣಿ


'ಭಾರತದ ನಗರಜೀವನದ ಮಾನವೀಯ ಅಸಂಗತತೆ, ಜೀವನ ಸತ್ಯ ಹಾಗು ದಿನನಿತ್ಯದ ಜೀವನವನ್ನು ನೋಡುವ ದೃಷ್ಟಿಕೋನವನ್ನು ವಿಸ್ತಾರಗೊಳಿಸುವಂತಹ ಹದಿನಾರು ಕಥೆಗಳೂ ವಿಶಿಷ್ಟವೇ' ಎನ್ನುತ್ತಾರೆ ಕುಮುದ ಕೆ.ಬಿ. ಅವರು ಜಯಂತ್ ಕಾಯ್ಕಿಣಿ ಅವರ ನೋ ಪ್ರೆಸೆಂಟ್ಸ್ ಪ್ಲೀಸ್..ಕೃತಿಗೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ.

ಭಾರತದ ನಗರಜೀವನದ ಮಾನವೀಯ ಅಸಂಗತತೆ, ಜೀವನ ಸತ್ಯ ಹಾಗು ದಿನನಿತ್ಯದ ಜೀವನವನ್ನು ನೋಡುವ ದೃಷ್ಟಿಕೋನವನ್ನು ವಿಸ್ತಾರಗೊಳಿಸುವಂತಹ ಹದಿನಾರು ಕಥೆಗಳೂ ವಿಶಿಷ್ಟವೇ.

2018 ನೇ ಸಾಲಿನ ದಕ್ಷಿಣ ಏಷ್ಯಾದ ಸಾಹಿತ್ಯ ಪ್ರಶಸ್ತಿ DSC ಪ್ರಶಸ್ತಿಗೆ ಪಾತ್ರವಾದ ಕೃತಿ. ಜೀವನ‌ ಪ್ರೀತಿಯನ್ನು‌ ಅಕ್ಷರಗಳಲ್ಲಿ ಹೆಣೆದಿಡುವ ಲೇಖಕರು, ಸಾಮಾನ್ಯನೊಬ್ಬನ ಎದೆಗಿಳಿಯುವಂತೆ ಬರೆಯುವ ವೈಶಿಷ್ಟ್ಯ ಹೊಂದಿರುವ ವ್ಯಕ್ತಿ.

ಮುಂಬೈ ನಗರದ ನಡುವಿನ ಹದಿನಾರು ವಿಭಿನ್ನ ಕಥೆಗಳ ಗುಚ್ಛ, ಪ್ರತಿಯೊಂದು ಹೊಸತನ‌ತುಂಬಿಕೊಂಡಿರುವ ಕಥೆಗಳು. ಕಥೆಗಳನ್ನು ಹೇಳುವ ರೀತಿಯಂತೂ ಕಳೆಕಟ್ಟಿಕೊಡುವುದರಲ್ಲಿ ಸಂಶಯವಿಲ್ಲ. ಮುಂಬೈ ಹೆಸರಿನ ಊರನ‌್ನು ನೋಡದ ನನ್ನಂತವರ ಕಲ್ಪನೆಯೇ ಹಾಗೆ, ಧಾರಾವಿಯಂತಹ ಕೊಳಗೇರಿಗಳು, ಸಿನಿಮಾದ ಮಂದಿಯ ಡೌಲು ತೋರುವ ಹೈಪೈ ನಗರದ ಒಂದುಭಾಗ, ಜನರ ಹೊಟ್ಟೆಹೊರೆಯುವ ಕಿರಿದಾದ ಗಲ್ಲಿಗಳು, ಕಿಕ್ಕಿರಿದ ಜನ, ಹಾದಿಬದಿಯ ಇರಾನಿ‌ ಚಹಾ, ಕೆಂಪುದೀಪದಡಿಯ ನೀಲಿಕಂಗಳ ಕರೆಗಳು..

ಇದೆಲ್ಲವ ಬದಿಗಿಟ್ಟು ನೋಡಬೇಕಾದ ಮುಂಬೈ ಇಲ್ಲಿದೆ.. ಮಹಾನಗರವೊಂದರ ಭಾಗವೇ ಆಗಿಹೋದ, ಮುಂಬೈಯನ್ನು‌ ರೂಪಿಸುತ್ತಿರುವ ಜನಸಾಮಾನ್ಯರ ಕಥೆಗಳಿವು. ಕಥೆಯ ಪಾತ್ರಗಳು‌, ಕಥೆ ಹೇಳುವಾಗಿನ ರೂಪಕಗಳು, ಹಾಡೊಂದರ ನಡುವಿನ ಸಾಲು ನೆನಪಾಗಿ ಕಾಡುವಂತೆ ಪ್ರಭಾವಶಾಲಿಯಾಗಿ‌ ನಮ್ಮನ್ನು‌ ಹಿಡಿದಿಡುತ್ತವೆ..

ಇಳಿವಯಸ್ಸಿನ ವೃದ್ಧ ತಂದೆಯೊಬ್ಬ ಮಗಳ ಕೌಮಾರ್ಯದ ಸರ್ಟಿಫಿಕೇಟ್ ಹಿಡಿದು ವರನನ್ನು ಹುಡುಕುವ, ಕಾಣದ ಕಾಡುಗಳಲ್ಲಿ ಪರಿವಿರದೆ ಹರಿದ ನದಿಗಳಂತೆ ಆ ಹುಡುಗನ ಕಲ್ಪನೆಯಲಿ‌ ಬಂದು ಹೋದ ಹುಡುಗಿಯ ಕಥೆ, ಕನ್ನಡಿ ಇಲ್ಲದ ಊರಲ್ಲಿ..

ಸಿನೆಮಾದ ಇಂಟರ್ವಲ್ ನಲ್ಲಿ ಅಂಕುರಗೊಂಡ ಪ್ರೇಮವೊಂದರ ನಾಯಕ‌ ನಾಯಕಿಯು ಓಡಿಹೋಗುವ ಕಥೆ, ಮಧ್ಯಂತರ. ತೀರಾ ಇಷ್ಟವಾಗಿದ್ದು, ಗೋಲ್ಡನ್ ಪ್ರೇಂವರ್ಕ್ಸ್ ನ‌ ಗಂಗಾಧರನ‌ ತಾಯಿಯ, ಅಮೃತಬಳ್ಳಿ ಕಷಾಯ.

ಒಪೆರಾ ಹೌಸ್, ಚಿತ್ರಮಂದಿರದ ಕೆಲಸಗಾರ ಇಂದ್ರನೀಲನ ಕಣ್ಣಿಗೆ ಮಕ್ಕಳೆಲ್ಲರನ್ನು ತೊಡೆಯ ಮೇಲೆ ಮಲಗಿಸಿಕೊಂಡಂತೆ ಕಾಣುವ ಮುಂಬೈ ತಾಯಂತೆ ಕಾಣುವ ಮುಗ್ಧತೆ. ಲವರ್ ನ ಮೊದಲ ಹೆಂಡತಿಯ ಚಿಕಿತ್ಸೆಗೆ ಅಲ್ಲದೇ ಅವನ‌ ಎರಡನೇ ಪತ್ನಿಯ ಮಕ್ಕಳಿಗಾಗಿ ಹಣಕಳುಹಿಸುವ ಪ್ರೇಯಸಿಯೊಬ್ಬಳ ಕಥೆ..

ಮುಂಬೈ ನಗರವನ್ನೇ ಪೋಷಕನಾಗಿ ನೋಡುವ, ಜಾತಿ ಧರ್ಮಗಳಾಚೆಗೆ ಬೆಳೆದು ನಿಂತ ಅಸಾವರಿ ಲೋಖಂಡೆ ಹಾಗು ಪೊಪಟ್ ರ ಪ್ರೀತಿಯ ಮದುವೆಯ ಕರೆಯೋಲೆಯಲ್ಲಿನ, ನೋ ಪ್ರೆಸೆಂಟ್ಸ್ ಪ್ಲೀಸ್...

ಭಾರತದ ನಗರಜೀವನದ ಮಾನವೀಯ ಅಸಂಗತತೆ, ಜೀವನ ಸತ್ಯ ಹಾಗು ದಿನನಿತ್ಯದ ಜೀವನವನ್ನು ನೋಡುವ ದೃಷ್ಟಿಕೋನವನ್ನು ವಿಸ್ತಾರಗೊಳಿಸುವಂತಹ ಹದಿನಾರು ಕಥೆಗಳೂ ವಿಶಿಷ್ಟವೇ.

ಬದುಕಿನ ಬಣ್ಣವೆ ಬದಲಾದರೇ ಅದು ಪ್ರೇಮವೇ.!

-ಕುಮುದ ಕೆ.ಬಿ
Research Associate
(EMPRI)

 

MORE FEATURES

ಲಲಿತ ಪ್ರಬಂಧಗಳ ಸ್ವರೂಪ ಕಟ್ಟಿಹಾಕದ ದನದ ಹಾಗೆ

04-05-2024 ಬೆಂಗಳೂರು

'ಲಲಿತ ಪ್ರಬಂಧಗಳಲ್ಲಿ ನಾವು ಹೀಗೆ ಬಾಲ್ಯಕ್ಕೆ ಮರಳುವುದು ಹೆಚ್ಚು. ಯಾಕೆಂದರೆ ಲಲಿತ ಪ್ರಬಂಧಗಳ ಸ್ವರೂಪ ಕಟ್ಟಿಹಾಕದ ...

ಕನ್ನಡದ ಮುನ್ನೋಟ ಎಂಬುದು ನುಡಿ ಬೆಳವಣಿಗೆಯನ್ನು ಕುರಿತ ಸಂಕಥನವಾಗಿದೆ

04-05-2024 ಬೆಂಗಳೂರು

‘ಕನ್ನಡ ನುಡಿ ಬೆಳವಣಿಗೆಯನ್ನು ಕುರಿತು ಮಾತನಾಡುವುದೆಂದರೆ ಅದು ನುಡಿ ನೀತಿ ಮತ್ತು ಯೋಜನೆಯ ನಿಲುವುಗಳನ್ನು ಹೊರತು...

ಮಹಾಭಾರತ ಎಲ್ಲೆಲ್ಲೋ ಹರಿಯುತ್ತ, ಎಲ್ಲವನ್ನೂ ಒಳಗೊಳ್ಳುತ್ತ ಸಾಗಿ ನಿಂತ ಸಾಗರದಂತಹ ಕಾವ್ಯ

04-05-2024 ಬೆಂಗಳೂರು

‘ಮಹಾಭಾರತವನ್ನು ಸಮೀಕ್ಷಿಸಲು ಹೊರಟರೆ ಅದರ ವಿಶಾಲ ಹರವು ಮೊದಲನೆಯದಾಗಿ ನಮ್ಮನ್ನು ದಂಗುಬಡಿಸುತ್ತದೆ. ಅಲ್ಲದೇ ಅದರ...