ಕಟ್ಟಡ ಕಟ್ಟುವುದರಲ್ಲಿ ಯಶಸ್ವಿಯಾಗಿದ್ದ ಕಠಾರಿ ಕಥೆ ಕಟ್ಟುವುದರಲ್ಲೂ ಯಶಸ್ವಿಯಾಗಿದ್ದಾರೆ


'ಕಠಾರಿಯವರು ಹುಟ್ಟಿ ಬೆಳದದ್ದು ಹಳೆ ಬೆಂಗಳೂರಿನ ಗಾಂಧಿನಗರದಲ್ಲಿ. ಹಾಗಾಗಿ ಅವರ ಕಥೆಗಳು ಸಹಜವಾಗಿಯೇ ನಗರ ಕೇಂದ್ರಿತವಾಗಿದ್ದು ಸಮಕಾಲೀನ ಘಟನೆಗಳಿಗೆ ಕನ್ನಡಿ ಹಿಡಿಯುವ ಕೆಲಸ ಮಾಡಿದೆ' ಎನ್ನುತ್ತಾರೆ ಕೃಷ್ಣ ಪ್ರಸಾದ್. ಅವರು ಚಂದ್ರಪ್ರಭ ಕಠಾರಿ ಅವರ ನಾಲಿಗೆ, ನೆತ್ತರು ಮತ್ತು ಬುದ್ಧ ಕೃತಿಗೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ. 

ನಾಲಿಗೆ, ನೆತ್ತರು ಮತ್ತು ಬುದ್ಧ ಚಂದ್ರಪ್ರಭ ಕಠಾರಿಯವರ ಮೂರನೇ ಕಥಾಸಂಕಲನ. ಕಠಾರಿ ಕಥೆಗಳು ಮತ್ತು ಕಾಗೆ ಮೋಕ್ಷ ಮೊದಲೆರೆಡು ಕಥಾಸಂಕಲನಗಳು.

ಈ ಕಥಾಸಂಕಲನದಲ್ಲಿ ಒಟ್ಟು ಹತ್ತು ಕಥೆಗಳಿವೆ. ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿ ಕಟ್ಟಡ ಕಟ್ಟುವುದರಲ್ಲಿ ಯಶಸ್ವಿಯಾಗಿದ್ದ ಕಠಾರಿ ಕಥೆ ಕಟ್ಟುವುದರಲ್ಲೂ ಯಶಸ್ವಿಯಾಗಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಅಕಾಡೆಮಿಕ್ ವಲಯದಿಂದ ಹೊರಗಿರುವವರು ಸಾಹಿತ್ಯ ರಚನೆಯಲ್ಲಿಯೂ ತೊಡಗಿಕೊಂಡಿರುವುದು ಆಶಾದಾಯಕ ಬೆಳವಣಿಗೆ. ಐಟಿ ವಲಯದವರು ಸಾಕಷ್ಟು ಸಂಖ್ಯೆಯಲ್ಲಿ ಕಥೆಗಳನ್ನು ಬರೆಯುತ್ತಿದ್ದಾರೆ. ಆದ್ರೆ ಸಿವಿಲ್ ಇಂಜಿನಿಯರಿಂಗ್ ಓದಿಕೊಂಡು ಕಟ್ಟಡ ನಿರ್ಮಾಣದಲ್ಲಿ ತೊಡಗಿಕೊಂಡ ಕಥೆಗಾರರು ನನ್ನ ಕಣ್ಣಿಗೆ ಬಿದ್ದಿಲ್ಲ.

ಕಠಾರಿಯವರು ಹುಟ್ಟಿ ಬೆಳದದ್ದು ಹಳೆ ಬೆಂಗಳೂರಿನ ಗಾಂಧಿನಗರದಲ್ಲಿ. ಹಾಗಾಗಿ ಅವರ ಕಥೆಗಳು ಸಹಜವಾಗಿಯೇ ನಗರ ಕೇಂದ್ರಿತವಾಗಿದ್ದು ಸಮಕಾಲೀನ ಘಟನೆಗಳಿಗೆ ಕನ್ನಡಿ ಹಿಡಿಯುವ ಕೆಲಸ ಮಾಡಿದೆ. ಪ್ರಸ್ತುತ ಜರುಗುತ್ತಿರುವ ಘಟನೆಗಳಿಗೆ ತೀವ್ರವಾಗಿ ಸ್ಪಂದಿಸುವ ಕಠಾರಿಯವರ ಪರಿಚಯ ಅವರೇ ಕಠಾರಿ ಅಂಚಿನ ನಡಿಗೆ ಹೆಸರಿನಲ್ಲಿ ಬರೆಯುತ್ತಿದ್ದ ಲೇಖನಗಳನ್ನು ಓದುತ್ತಿದ್ದವರಿಗೆ ಪರಿಚಯ ಇದೆ.

ಈ ಕಥಾಸಂಕಲನದ ಬಹಳಷ್ಟು ಕಥೆಗಳು ಅವಧಿಯಲ್ಲಿ ಪ್ರಕಟ ಆಗಿದೆ. ಇದೇ ಕಥಾಸಂಕಲನದ ಅಂಬೇಡ್ಕರ್ ಕಾಲೋನಿ ಕಥೆ 2023ರ ಸಮಾಜಮುಖಿ ಕಥಾಸ್ಪರ್ಧೆಗೆ ಆಯ್ಕೆ ಆಗಿತ್ತು.ಕೋವಿಡ್ ಕಾಲದ ವಲಸೆ ಕಾರ್ಮಿಕರ ಸಂಕಷ್ಟವನ್ನು ಹೇಳುವ ಗುಳೆ ಎದ್ದ ಹನುಮ ವಿಶಿಷ್ಟ ಕಥೆ.ಒಬ್ಬ ಒಳ್ಳೆಯ ನಿರ್ದೇಶಕ ಸಿಕ್ಕರೆ ಕಾಂಡೊಮ್ ಕಥೆ ಕಿರುಚಿತ್ರ ಮಾಡಬಹುದು.

ನಾಲಿಗೆ, ನೆತ್ತರು ಮತ್ತು ಬುದ್ಧ ಕಥೆಯಲ್ಲಿರುವ ಸತ್ಯೇನ್ದ್ರ ಚಕ್ರವರ್ತಿಯ ವರ್ತನೆ ಓದ್ತಾ ಇದ್ದಾಗ ಸಮಕಾಲೀನ ವ್ಯಕ್ತಿಯೊಬ್ಬರು ನಿಮ್ಮ ಕಣ್ಣ ಮುಂದೆ ಹಾದು ಹೋದರೆ ಕಥೆಗಾರರು ಹೊಣೆಯಲ್ಲ. ವೃತ್ತಿಯಲ್ಲಿ ಆರ್ಕಿಟೆಕ್ಟ್ ಆಗಿರುವ ಕಠಾರಿಯವರ ಮಗಳು ಮಯೂಖ ಎಲ್ಲಾ ಕಥೆಗಳಿಗೂ ಸೂಕ್ತವಾದ ಚಿತ್ರಗಳನ್ನು ರಚಿಸಿ ಕೊಟ್ಟಿದ್ದಾರೆ.

ಈ ಕಥಾಸಂಕಲನಕ್ಕೆ ಮೊದಲು ತರಕಾರಿ ಚಾಕು ಅಂತ ಹೆಸರಿಡಲು ತೀರ್ಮಾನ ಮಾಡಲಾಗಿತ್ತು. ಆದರೆ ಗೌತಮ ಬುದ್ಧನ ಕೆಳಗಿನ ಸಾಲು ಕಣ್ಣಿಗೆ ಬಿದ್ದ ಮೇಲೆ ನಾಲಿಗೆ, ನೆತ್ತರು ಮತ್ತು ಬುದ್ಧ ಅಂತ ಇಡಲಾಯಿತು.

" ನಾಲಿಗೆಯು ಹರಿತವಾದ ಚಾಕು ಇದ್ದಂತೆ.....

ರಕ್ತವನ್ನು ಹರಿಸದೇ ಕೊಲ್ಲಬಲ್ಲದು. "

ಪ್ರತಿಗಳಿಗಾಗಿ ಸಂಪರ್ಕಿಸಿ : ಚಂದ್ರಪ್ರಭ ಕಠಾರಿ

Cell: 9343890610.

MORE FEATURES

'ಅಕ್ಕ'ನನ್ನು ಕುರಿತ ವಿಭಿನ್ನ ದೃಷ್ಟಿಕೋನದ ಕೃತಿ ‘ರೂಹಿಲ್ಲದ ಚೆಲುವ’

02-05-2024 ಬೆಂಗಳೂರು

ಈ ಕಾದಂಬರಿ ಅಕ್ಕಮಹಾದೇವಿಯ ಕಥನಕ್ಕೆ ಮಾತ್ರ ಸೀಮಿತಗೊಂಡಿಲ್ಲ. ಶರಣ ಧರ್ಮದ ಸಾಮಾಜಿಕ, ತಾತ್ವಿಕ, ವೈಚಾರಿಕ ಚಿಂತನೆಗಳನ್ನು...

ನಾವೇನನ್ನೊ ಕಳೆದುಕೊಂಡರೆ ಅದಕ್ಕಿಂತ ಮಹತ್ವದ್ದನ್ನು ಪಡೆದುಕೊಳುತ್ತೇವೆ

02-05-2024 ಬೆಂಗಳೂರು

‘ನನಗೀ ಪುಸ್ತಕದಲ್ಲಿ ಅರ್ಥವಾದ್ದದಾದರು ಏನು. ಪುನಃ ಪುಸ್ತಕದ ಹೆಸರು ಓದಿದೆ. " ನಿರ್ಗಮನ ". ಹೂ...! ...

ನಮ್ಮೊಳಗನ್ನು ಎಚ್ಚರಿಸುವ ಕೃತಿ ‘ದೇವನೂರ ಮಹಾದೇವ ಜೊತೆ ಮಾತುಕತೆ’

02-05-2024 ಬೆಂಗಳೂರು

'ಒಬ್ಬ ಜವಾಬ್ದಾರಿಯುತ ನಾಗರಿಕ, ಪ್ರಜ್ಞಾವಂತ ಬರಹಗಾರ- ತನ್ನ ಸಮಾಜದ ದುರಿತಗಳ ತುರ್ತಿಗೆ ಅನುಗಾಲವೂ ಹೇಗೆ ಸಂವೇದಿಸು...