ಕವಿತೆ ಓದುಬಾಕನ ಹೊಟ್ಟೆ ತುಂಬಿಸಬೇಕು..


"ಓದುಗನೆದೆಯ ಕಿಟಕಿಯ ತೆರೆಯಬೇಕು, ನಿಟ್ಟುಸಿರಿನಂತ ಸರಾಗ ಗಾಳಿಯ ಉಸುರಬೇಕು ರೋಮಗಳು ಗರಿಗೆದುರುವಂತೆ ಗುನುಗುವ ಹಾಡಾಗಬೇಕು. ನನ್ನದೇ ಭಾವವೆಂದು ಹಿಗ್ಗಬೇಕು, ಕುಗ್ಗಬೇಕು, ವಿರಹಾದಿ ವೇದನೆಗಳ ಕಕ್ಕಬೇಕು. ಸಂತಸದ ಕಣ್ಣೀರು ಜಿನುಗಬೇಕು. ರೋಷ ಉಕ್ಕಿ ಹಲ್ಲು ಕಡಿಯಬೇಕು. ವಾಸ್ತವವನ್ನಪ್ಪಿ ಹೊಸತನಕ್ಕೆ ತೆರೆದುಕೊಂಡು ಹಾಳೆಗಳ ಮಡಚಬೇಕು," ಎನ್ನುತ್ತಾರೆ ನೇಹಾ ಎಂ.ಎನ್. ಅವರು ಅನಂತ್ ಕುಣಿಗಲ್ ಅವರ ‘ಖೈದಿಯ ಗೋಡೆ ಕವಿತೆಗಳು’ ಕೃತಿ ಕುರಿತು ಬರೆದ ವಿಮರ್ಶೆ.

ಕವಿತೆ ಓದುಬಾಕನ ಹೊಟ್ಟೆ ತುಂಬಿಸಬೇಕು. ಆಸೆಬುರುಕ ಕವಿಯ ಕಿವಿ ಹಿಂಡಬೇಕು. ಓದುವ ಹುಚ್ಚಿನಲ್ಲಿ ಕೇವಲ ಅಕ್ಷರಗಳಾಗಿ ಕಳೆದು ಹೋಗದೆ ತಂತಾನೇ ಓದಿಸಿಕೊಂಡು ಅಂತರಂಗಕ್ಕಿಳಿಯಬೇಕು.

ಓದುಗನೆದೆಯ ಕಿಟಕಿಯ ತೆರೆಯಬೇಕು, ನಿಟ್ಟುಸಿರಿನಂತ ಸರಾಗ ಗಾಳಿಯ ಉಸುರಬೇಕು ರೋಮಗಳು ಗರಿಗೆದುರುವಂತೆ ಗುನುಗುವ ಹಾಡಾಗಬೇಕು. ನನ್ನದೇ ಭಾವವೆಂದು ಹಿಗ್ಗಬೇಕು, ಕುಗ್ಗಬೇಕು, ವಿರಹಾದಿ ವೇದನೆಗಳ ಕಕ್ಕಬೇಕು. ಸಂತಸದ ಕಣ್ಣೀರು ಜಿನುಗಬೇಕು. ರೋಷ ಉಕ್ಕಿ ಹಲ್ಲು ಕಡಿಯಬೇಕು. ವಾಸ್ತವವನ್ನಪ್ಪಿ ಹೊಸತನಕ್ಕೆ ತೆರೆದುಕೊಂಡು ಹಾಳೆಗಳ ಮಡಚಬೇಕು.

ಹೀಗೆ ಕವಿತೆ ಓದುಗನ ಭಾವನೆಗಳಿಗೆ ಸ್ಪಂದಿಸಬೇಕು. ಇದೆಲ್ಲವನ್ನೂ ಅನುಭವಕ್ಕೆ ತಂದ ನಾನು ಓದಿದ ಖೈದಿಯ ಗೋಡೆಯ ಕವಿತೆ ಹೀಗಿದೆ.......

ನಾನು ಸುಮ್ಮನೆ ಪುಟಗಳ ತಿರುವಿ ಕಣ್ಣು ಹಾಯಿಸಿದೆ. ಇದೇನು ಕವಿತೆಗಳು ಪ್ರಾಸವಿಲ್ಲ, ಪದ ಪ್ರಯೋಗವಿಲ್ಲ, ಹೆಸರುವಾಸಿ ಕವಿಯಾಗುವ ಲಕ್ಷ್ಮಣದ ಮುಖವಿದು ಸುಖಾಸುಮ್ಮನೆ ಗೀಚಿರಲಿಕ್ಕಿಲ್ಲ ಎಂದು ಓದಲು ಶುರು ಮಾಡಿದೆ ಇದೇನು ಕವಿತೆಗಳು ಬಹಳ ಪ್ರಭುದ್ದ. ಇವನಾರೋ ಬಾರಿ ಕವಿಯೇ ಎಂದು ಓದುವುದರಲ್ಲಿ ಮಗ್ನಳಾದೆ. ಕವಿತೆ ಓದಿಸಿಕೊಂಡಿತು. ಓದಿಸಿಕೊಳ್ಳುತ್ತ ಕವಿಯೊಡನೆ ಮಾತಿಗಿಳಿಸಿತು. ನನ್ನದೇ ಭಾವಗಳು ನನ್ನ ಕಾಡಿ ನನ್ನಿಂದಲೂ ಬರೆದುಕೊಂಡಿತು .ಚೊಚ್ಚಲ ಕವಿತೆಯಲ್ಲಿ ಕವಿಯಾಗುವ ಕನಸು ಕಂಡು ಬರೆದ ಸಾಲುಗಳು ಅನುಭವಿಸುವ ನೋವು ಅವಮಾನ ಪ್ರತಿಯೊಬ್ಬ ಕವಿಯನ್ನು ಹೌದೌದು ಎನಿಸದೆ ಇರಲಾರವು. ಒಂದೊಂದು ಕವಿತೆಯಲ್ಲಿಯೂ ಒಂದೊಂದು ಕತೆಗಳು.

ಓದುಗನ ಜೊತೆಯಲ್ಲಿ ಮಾತನಾಡುತ್ತಾ ಕವಿತೆಯ ಪ್ರಪಾತಕ್ಕೆ ಕೊಂಡೊಯ್ಯುವ ಪರಿ ತುಂಬಾ ಚೆಂದ. 'ಆ ನಾಲ್ಕು ಕೈಗಳು, ಅದು ಮೊದಲ ರಾತ್ರಿಯಲ್ಲ.' ಈ ಕವಿತೆಗಳ ಹಿಂದಿನ ಕತೆಯು ನನ್ನನ್ನು ತುಂಬಾ ಕಾಡಿತು. ಹೊಸ ಬೂಟು ಮತ್ತು ಕೊಳೆತ ಪಾದಗಳು. ಎಂತಹ ಕಲ್ಪನೆ ಕವಿಯದ್ದು. ಮಾತು ಬಾರದು ನಿರ್ಜೀವ ವಸ್ತುಗಳ ಭಾವಗಳನ್ನೂ ಕಣ್ಣೀರು ತರಿಸುವಂತೆ ಕಟ್ಟಿಕೊಟ್ಟುದ್ದು ಬಹಳ ವಿಶೇಷ. ತನ್ನ ಕವಿತೆಯನ್ನು ತಾನೆ ತೆಗಳಿದಂತೆ ಹೊಗಳಿಕೊಳ್ಳುತ್ತಾ, ನಿರಾಶೆಗೊಂಡ ಕವಿತೆ ಪ್ರೇಮಿಗಳಲ್ಲಿ ಮತ್ತೆ ಬರೆಯುವ ಆಸೆ ಹುಟ್ಟಿಸಿದ್ದಂತು ನಿಜವೆ.

ಸಮಾಜ, ಪರಿವಾರ, ಪ್ರೇಮ, ಎಲ್ಲವನ್ನೂ ಕವಿ ನೋಡಿದ ದೃಷ್ಟಿ, ಅವನೊಳಗಿನ ನೋವು, ಹತಾಶೆ, ಅಸಹಾಯಕತೆ, ನನ್ನಿಂದಲೂ ಏನಾದರೊಂದು ಆಗಬಹುದೆಂಬ ಆಶಯ, ವಿವರಿಸಲಾಗದ ಪ್ರೇಮ ಎಲ್ಲವನ್ನೂ ಹೊರಹಾಕಿದೆ. ಕವಿಯೊಬ್ಬ ಸಂಪೂರ್ಣ ಅಕ್ಷರಗಳಲ್ಲಿ ಬೆತ್ತಲಾಗಿದ್ದಾನೆ. ತನ್ನೊಳಗೇನು ಉಳಿಸಿಕೊಳ್ಳದೆ ಭಾವಮುಕ್ತನಾಗಿ ಓದುಗನ ಕೈ ಸೇರಿದ್ದಾನೆ. ಅಲ್ಲಲ್ಲಿ ಹಳಿ ತಪ್ಪಿ ಓಡುವ ಮನಸನ್ನು ಹಿಡಿದು ದಂಡಿಸಿದ್ದಾನೆ. ಅರ್ಧ ಕವಿತೆಯಲ್ಲಿ ಅದನ್ನು ನೋಯಿಸಿದ್ದಾನೆ. ಒಟ್ಟಾರೆ ಅನಂತನ ಕವಿತೆಗಳು ಅನಂತವಾಗುಳಿಯುವುದರಲ್ಲಿ ಅನುಮಾನವಿಲ್ಲದಂತೆ ಮನ ಹೊಕ್ಕಿದೆ. ಶುಭವಾಗಲಿ ಕವಿಗಳೆ ನಿಮ್ಮ ಖಾಲಿ ಗೋಡೆಯ ಕವಿತೆಗಳು ಖಾಲಿ ಮನಸನ್ನು ಆವರಿಸಿದೆ.

MORE FEATURES

'ಅಕ್ಕ'ನನ್ನು ಕುರಿತ ವಿಭಿನ್ನ ದೃಷ್ಟಿಕೋನದ ಕೃತಿ ‘ರೂಹಿಲ್ಲದ ಚೆಲುವ’

02-05-2024 ಬೆಂಗಳೂರು

ಈ ಕಾದಂಬರಿ ಅಕ್ಕಮಹಾದೇವಿಯ ಕಥನಕ್ಕೆ ಮಾತ್ರ ಸೀಮಿತಗೊಂಡಿಲ್ಲ. ಶರಣ ಧರ್ಮದ ಸಾಮಾಜಿಕ, ತಾತ್ವಿಕ, ವೈಚಾರಿಕ ಚಿಂತನೆಗಳನ್ನು...

ನಾವೇನನ್ನೊ ಕಳೆದುಕೊಂಡರೆ ಅದಕ್ಕಿಂತ ಮಹತ್ವದ್ದನ್ನು ಪಡೆದುಕೊಳುತ್ತೇವೆ

02-05-2024 ಬೆಂಗಳೂರು

‘ನನಗೀ ಪುಸ್ತಕದಲ್ಲಿ ಅರ್ಥವಾದ್ದದಾದರು ಏನು. ಪುನಃ ಪುಸ್ತಕದ ಹೆಸರು ಓದಿದೆ. " ನಿರ್ಗಮನ ". ಹೂ...! ...

ನಮ್ಮೊಳಗನ್ನು ಎಚ್ಚರಿಸುವ ಕೃತಿ ‘ದೇವನೂರ ಮಹಾದೇವ ಜೊತೆ ಮಾತುಕತೆ’

02-05-2024 ಬೆಂಗಳೂರು

'ಒಬ್ಬ ಜವಾಬ್ದಾರಿಯುತ ನಾಗರಿಕ, ಪ್ರಜ್ಞಾವಂತ ಬರಹಗಾರ- ತನ್ನ ಸಮಾಜದ ದುರಿತಗಳ ತುರ್ತಿಗೆ ಅನುಗಾಲವೂ ಹೇಗೆ ಸಂವೇದಿಸು...