ಮಕ್ಕಳು ದೊಡ್ಡವರಾಗುತ್ತಿದ್ದಂತೆ ಹೆತ್ತವರು ಅಪ್ರಸ್ತುತರಾಗುತ್ತಾರೆ


"ಪ್ರತಿನಿತ್ಯದ ಕಿರಿಕಿರಿಯಿಂದ ದೂರವಾಗಲು ಮಕ್ಕಳು ಉದ್ಯೋಗದ ನೆಪ ಹೇಳಿ ದೂರ ಉಳಿಯುವುದು ಸಾಮಾನ್ಯವಾದರೆ, ಜೋಗಿಯವರ 'ನಿರ್ಗಮನ' ಕಾದಂಬರಿಯಲ್ಲಿ ಏಕಾಂತವನ್ನು ಬಯಸಿ, ಒಂಟಿಯಾಗಿ ಬದುಕುವ ಅಪ್ಪ ಶಾರದಾಪ್ರಸಾದ್ ಇದ್ದಕ್ಕಿದ್ದಂತೆ ಕಣ್ಮರೆಯಾದಾಗ ಮಗ ಅನಿರುದ್ಧನಿಗೆ ಅಪ್ಪನ ಬಗ್ಗೆ ತಿಳಿದುಕೊಳ್ಳುವ ಸಂದರ್ಭ ಒದಗಿ ಬರುತ್ತದೆ," ಎನ್ನುತ್ತಾರೆ ಹಿರಿಯ ಲೇಖಕಿ ಅಶ್ವಿನಿ ಸುನಿಲ್. ಅವರು ಹಿರಿಯ ಲೇಖಕ ಜೋಗಿ ಅವರ ‘ನಿರ್ಗಮನ’ ಕೃತಿ ಕುರಿತು ಬರೆದ ವಿಮರ್ಶೆ.

ಪುಸ್ತಕದ ಹೆಸರು: ನಿರ್ಗಮನ
ಲೇಖಕರು: ಜೋಗಿ
ಪ್ರಕಾಶಕರು: ಅಂಕಿತ ಪುಸ್ತಕ
ಪ್ರಥಮ ಮುದ್ರಣ: 2024
ಪುಟಗಳ ಸಂಖ್ಯೆ: 160
ಬೆಲೆ:170/

ಮಕ್ಕಳು ದೊಡ್ಡವರಾಗುತ್ತಿದ್ದಂತೆ ಹೆತ್ತವರು ಅಪ್ರಸ್ತುತರಾಗುತ್ತಾರೆ. ಇದ್ದಕ್ಕಿದ್ದಂತೆ ಒಂದು ಅಂತರ ಕಾಣಿಸಿತೊಡಗುತ್ತದೆ. ಮಕ್ಕಳಿಗೆ ಅಪ್ಪ, ಅಮ್ಮನ ಬದುಕಿನ ಶೈಲಿ ಹಳೆಯದು ಎನ್ನಿಸತೊಡಗುತ್ತದೆ. ಅವರ ಉಪದೇಶ ಕಿರಿಕಿರಿಯಾಗುತ್ತದೆ .

ಇನ್ನು ಮೊಮ್ಮಕ್ಕಳು - ತಾತ, ಅಜ್ಜಿಯಮಧ್ಯೆ ಪ್ರಾರಂಭದಿಂದಲೂ ಇರುವ ಗೋಡೆ ಬೆಳೆಯುತ್ತಾ ಬೆಳೆಯುತ್ತಾ ದೊಡ್ಡದಾಗುತ್ತದೆ. ಹೆತ್ತವರಿಗೆ ಮಕ್ಕಳ ಜೀವನ ಶೈಲಿ ಸರಿ ಇಲ್ಲ ಎನ್ನುವ ಭಾವ ಮೂಡತೊಡಗುತ್ತದೆ. ಅಭಿಪ್ರಾಯ ಭೇದ ಸಾಮಾನ್ಯವಾಗತೊಡಗುತ್ತದೆ.

ಪ್ರತಿನಿತ್ಯದ ಕಿರಿಕಿರಿಯಿಂದ ದೂರವಾಗಲು ಮಕ್ಕಳು ಉದ್ಯೋಗದ ನೆಪ ಹೇಳಿ ದೂರ ಉಳಿಯುವುದು ಸಾಮಾನ್ಯವಾದರೆ, ಜೋಗಿಯವರ 'ನಿರ್ಗಮನ' ಕಾದಂಬರಿಯಲ್ಲಿ ಏಕಾಂತವನ್ನು ಬಯಸಿ, ಒಂಟಿಯಾಗಿ ಬದುಕುವ ಅಪ್ಪ ಶಾರದಾಪ್ರಸಾದ್ ಇದ್ದಕ್ಕಿದ್ದಂತೆ ಕಣ್ಮರೆಯಾದಾಗ ಮಗ ಅನಿರುದ್ಧನಿಗೆ ಅಪ್ಪನ ಬಗ್ಗೆ ತಿಳಿದುಕೊಳ್ಳುವ ಸಂದರ್ಭ ಒದಗಿ ಬರುತ್ತದೆ.

ಅಪ್ಪನ ದಿನಚರಿಯ ಅರಿವೇ ಇಲ್ಲವೆನ್ನುವ ಬೇಸರವೂ, ಅಪ್ಪನನ್ನು ಹುಡುಕುವ ಮೂಲಕ ಅಪ್ಪನಿಗಾಗಿ ಸಮಯ ಮೀಸಲಿಡುತ್ತಿರುವ ಖುಷಿಯೂ, ಅಪ್ಪನಿಗೆ ನನ್ನ ಮೇಲೆ ನಂಬಿಕೆ ಇಲ್ಲ ಎನ್ನುವ ದುಃಖವೂ... ಹೀಗೆ ಅಪ್ಪನನ್ನು ಹುಡುಕುತ್ತಾ ಹೊರಟ ಮಗ ಕಂಡುಕೊಳ್ಳುವ ಸತ್ಯವೇನು? ಮಗನಲ್ಲಿ ತನ್ನ ಭಾವನೆಗಳನ್ನು ಹೇಳಿಕೊಳ್ಳಲಾಗದೆ ಪರಿತಪಿಸುವ ವೃದ್ಧ ತಂದೆಯಂದಿರು ಅದೆಷ್ಟೋ ನಮ್ಮ ಸುತ್ತಲಿದ್ದಾರೆ. ಪತ್ರಿಕೋದ್ಯಮದ ಒಳತಿರುಳುಗಳು, ರಾಜಕಾರಣದ ತಂತ್ರಗಳು, ಹಳೆ - ಹೊಸ ತಲೆಮಾರಿನ ಬವಣೆಗಳು ಹೀಗೆ ಎಲ್ಲವನ್ನೂ ಕಟ್ಟಿಕೊಡುವ 'ನಿರ್ಗಮನ' ವನ್ನು ಒಂದೇ ಗುಕ್ಕಿನಲ್ಲಿ ಓದಿ ಮುಗಿಸಿದೆ.

MORE FEATURES

ವಿಮರ್ಶೆ ಎನ್ನುವುದು ಕೇವಲ ಪರಿಶ್ರಮದಿಂದ ಸಿದ್ಧಿಸುವ ಕಲೆಯಲ್ಲ

05-05-2024 ಬೆಂಗಳೂರು

'ಕನ್ನಡ ಸಾಹಿತ್ಯದಲ್ಲಿ ವಿರಳಾತಿ ವಿರಳರಾಗಿರುವ ವಸ್ತು ನಿಷ್ಠ ವಿಮರ್ಶಕರ ನಡುವೆ ಪ್ರಮುಖರಾದ ನರೇಂದ್ರ ಪೈ ಅವರ ಹೊಸ ...

ಕೌಟುಂಬಿಕ, ಸಾಮಾಜಿಕ ಪರಿಸರವೇ ದುಷ್ಕೃತ್ಯಕ್ಕೆ ಕಾರಣ

05-05-2024 ಬೆಂಗಳೂರು

'ಎಲ್ಲಾ ಕಾಲಘಟ್ಟದಲ್ಲೂ ಅತ್ಯಾಚಾರ, ಕೊಲೆ ಪ್ರಕರಣಗಳು ನಡೆದಿದೆ. ಆದರೆ ಅದರ ಪ್ರಮಾಣ ದಿನೇ, ದಿನೆ ಹೆಚ್ಚಾಗುತ್ತಿದೆ....

ಮನ ತಟ್ಟಿದ ಕೃತಿ ‘ಹಿಮಾಲಯನ್ ಬ್ಲಂಡರ್’ 

05-05-2024 ಬೆಂಗಳೂರು

"ಪುಸ್ತಕ ಓದುವುದು ನನ್ನ ನೆಚ್ಚಿನ ಹವ್ಯಾಸಗಳಲ್ಲೊಂದು. ಇದುವರೆಗೂ ಕುವೆಂಪು, ತೇಜಸ್ವಿ, ಭೈರಪ್ಪ ಸೇರಿದಂತೆ ಹಲವರ ಕ...