ಓದಿದಷ್ಟೂ ವಾಚಕರ ಅಭಿರುಚಿಯನ್ನು ಕೆರಳಿಸುತ್ತ ಹೋಗುವ ಕೃತಿ ಪ್ರಕೃತಿಯ ನಿಗೂಢಗಳು


‘ಇನ್ನೂ ಹೆಚ್ಚಿನ ಪ್ರಕೃತಿಯ ನಿಗೂಢಗಳನ್ನು ಮಲಗಿರುವ ಬುದ್ಧನ ಆಕೃತಿಯ ಬೆಟ್ಟಗಳು, ಗಂಡು ಹೆಣ್ಣಾಗುವ ಹೆಣ್ಣು ಗಂಡಾಗುವ ಜೀವಿಗಳು, ನಾಲ್ಕು ವರ್ಷ ಸತ್ತಂತೆ ಬಿದ್ದೇಳುವ ಜೀವಿ, ಸಮುದ್ರದಲ್ಲೊಂದು ಸಿಹಿ ನೀರಿನ ಬಾವಿ - ಈ ಕೃತಿಯ ಮೂಲಕ ವಾಚಕರ ಮುಂದಿಡಲಾಗಿದೆ ಎನ್ನುತ್ತಾರೆ’ ಸೂರ್ಯಕಾಂತ. ಅವರು ತಮ್ಮ "ವಿಶ್ವವಿಖ್ಯಾತ ಪ್ರಕೃತಿಯ ನಿಗೂಢಗಳು" ಕೃತಿ ಕುರಿತು ಬರೆದ ಲೇಖಕರ ಮಾತು ನಿಮ್ಮ ಓದಿಗಾಗಿ.

ಓದಿದಷ್ಟೂ ವಾಚಕರ ಅಭಿರುಚಿಯನ್ನು ಕೆರಳಿಸುತ್ತ ಹೋಗುವ ನವಕರ್ನಾಟಕ ಪ್ರಕಾಶನ ಸಂಸ್ಥೆಯ ಉತ್ತಮ ಕೃತಿ ಶ್ರೇಣಿಗಳಲ್ಲಿ ಲೋಕಜ್ಞಾನ ಮಾಲೆಯ ಕೃತಿ ಶ್ರೇಣಿಯೂ ಒಂದು. ಓದುಗರ ಮೆಚ್ಚುಗೆಯನ್ನು ಪಡೆದು ಹಲವಾರು ಮುದ್ರಣಗಳನ್ನು ಕಂಡ ಈ ಮಾಲೆಯ ಕೃತಿಗಳಲ್ಲಿ ಒಂದಾದ "ವಿಶ್ವವಿಖ್ಯಾತ ಪ್ರಕೃತಿಯ ನಿಗೂಢಗಳು" ಕೃತಿಯ ಪರಿಷ್ಕೃತ ಆವೃತ್ತಿ ಇದೀಗ ಪ್ರಕಟವಾಗಿದೆ.

ಇನ್ನೂ ಹೆಚ್ಚಿನ ಪ್ರಕೃತಿಯ ನಿಗೂಢಗಳನ್ನು ಮಲಗಿರುವ ಬುದ್ಧನ ಆಕೃತಿಯ ಬೆಟ್ಟಗಳು, ಗಂಡು ಹೆಣ್ಣಾಗುವ ಹೆಣ್ಣು ಗಂಡಾಗುವ ಜೀವಿಗಳು, ನಾಲ್ಕು ವರ್ಷ ಸತ್ತಂತೆ ಬಿದ್ದೇಳುವ ಜೀವಿ, ಸಮುದ್ರದಲ್ಲೊಂದು ಸಿಹಿ ನೀರಿನ ಬಾವಿ - ಈ ಕೃತಿಯ ಮೂಲಕ ವಾಚಕರ ಮುಂದಿಡಲಾಗಿದೆ. ಆಬಾಲವೃದ್ಧರಾದಿಯಾಗಿ ಎಲ್ಲರಿಗೂ ಈ ಕೃತಿ ಪ್ರಯೋಜನವಾಗುವುದೆಂದು ನಂಬುತ್ತೇನೆ.

ನವಕರ್ನಾಟಕ ಪ್ರಕಾಶನ ಸಂಸ್ಥೆಯಿಂದ ವಾಚಕರಿಗೆ ಉತ್ತಮ ಕೃತಿಗಳನ್ನು ಒದಗಿಸುವ ಧ್ಯೇಯವನ್ನಿಟ್ಟುಕೊಂಡು 1990ರಲ್ಲಿ ಲೋಕಜ್ಞಾನ ಮಾಲೆಯಲ್ಲಿ ಯೋಜನೆಯನ್ನು ಹಾಕಿಕೊಟ್ಟವರು ಶ್ರೀ ಆರ್. ಎಸ್. ರಾಜಾರಾಮ್ ಅವರು. 1991ರಿಂದ ಈ ಮಾಲೆಯ ಕೃತಿಗಳ ಪ್ರಕಟಣೆ ಆರಂಭವಾಯಿತು. ಅಂದಿನಿಂದ ಇಂದಿನವರೆಗೂ ಎಲ್ಲ ಶ್ರೇಣಿಯ ಕೃತಿಗಳಂತೆ ಈ ಶ್ರೇಣಿಯಲ್ಲಿ ಪ್ರಕಟವಾದ ಕೃತಿಗಳೂ ಹಲವಾರು ಮುದ್ರಣ ಕಂಡಿವೆ. ಈ ಪರಿಷ್ಕೃತ ಆವೃತ್ತಿಯನ್ನು ಪ್ರಕಟಿಸಿರುವ ಶ್ರೀ ರಮೇಶ ಉಡುಪ ಅವರಿಗೂ ಅಂದವಾದ ರಕ್ಷಾಚಿತ್ರವನ್ನು ಬರೆದುಕೊಟ್ಟ ಶ್ರೀ ರವಿಕುಮಾ‌ರ್ ಅಜ್ಜೀಪುರ ಅವರಿಗೂ ನನ್ನ ಕೃತಜ್ಞತೆಗಳು. ಈ ಕೃತಿ ಆದಷ್ಟು ನಿಖರವಾಗಿ ಬರುವಂತೆ ಮಾಡುವ ಉದ್ದೇಶದಿಂದ ಹಲವಾರು ಗ್ರಂಥಗಳು, ಲೇಖನಗಳು ಮತ್ತು ವಿಶ್ವಕೋಶಗಳನ್ನು ಆಧಾರವಾಗಿ ಬಳಸಿಕೊಂಡಿದ್ದೇನೆ.

-ಸೂರ್ಯಕಾಂತ

MORE FEATURES

ಲಲಿತ ಪ್ರಬಂಧಗಳ ಸ್ವರೂಪ ಕಟ್ಟಿಹಾಕದ ದನದ ಹಾಗೆ

04-05-2024 ಬೆಂಗಳೂರು

'ಲಲಿತ ಪ್ರಬಂಧಗಳಲ್ಲಿ ನಾವು ಹೀಗೆ ಬಾಲ್ಯಕ್ಕೆ ಮರಳುವುದು ಹೆಚ್ಚು. ಯಾಕೆಂದರೆ ಲಲಿತ ಪ್ರಬಂಧಗಳ ಸ್ವರೂಪ ಕಟ್ಟಿಹಾಕದ ...

ಮಹಾಭಾರತ ಎಲ್ಲೆಲ್ಲೋ ಹರಿಯುತ್ತ, ಎಲ್ಲವನ್ನೂ ಒಳಗೊಳ್ಳುತ್ತ ಸಾಗಿ ನಿಂತ ಸಾಗರದಂತಹ ಕಾವ್ಯ

04-05-2024 ಬೆಂಗಳೂರು

‘ಮಹಾಭಾರತವನ್ನು ಸಮೀಕ್ಷಿಸಲು ಹೊರಟರೆ ಅದರ ವಿಶಾಲ ಹರವು ಮೊದಲನೆಯದಾಗಿ ನಮ್ಮನ್ನು ದಂಗುಬಡಿಸುತ್ತದೆ. ಅಲ್ಲದೇ ಅದರ...

ಕಾವ್ಯ ರಚನೆಯೆಂಬುದೊಂದು ಗುಣವಾಗದ ಜಾಡ್ಯ!

04-05-2024 ಬೆಂಗಳೂರು

"ಹದಿನೇಳು ಅಕ್ಷರಗಳಲ್ಲಿ ಇಪ್ಪತ್ತೆಂಟು ವಿಚಾರಗಳನ್ನು ಕುರಿತು ಬರೆಯುವುದೇ ಒಂದು ಸೋಜಿಗ. ಅಕ್ಷರಗಳ ಲೆಕ್ಕಾಚಾರದಲ್ಲ...