'ಪ್ರೇಮಾಯತನ' ಒಲವ ಕವಿತೆಗಳ ಹೂಗುಚ್ಛವಾಗಿದೆ


"ಇತ್ತೀಚಿನ ದಿನಗಳಲ್ಲಿ ನಮ್ಮ ಯುವಜನತೆ 'ಪ್ರೀತಿ' ಯನ್ನು ಅರ್ಥೈಸಿಕೊಳ್ಳುವಲ್ಲಿ ವಿಫಲರಾಗುತಿದ್ದಾರೆ. ಪ್ರೀತಿಯ ಹೆಸರಲ್ಲಿ ದ್ವೇಷ, ಅಸೂಯೆ, ಹೊಡೆದಾಟ, ಬಡಿದಾಟ ಇನ್ನೂ ಮುಂದುವರೆದು ಕೊಲೆ ಮಾಡುತ್ತಾರೆಂದರೆ! ಇದಕ್ಕಿಂತ ಆಘಾತಕಾರಿ ವಿಚಾರ ಮತ್ತೊಂದಿದೆಯೇ! ಮಾನವನ ಜನ್ಮಕೆ ಪ್ರೀತಿಯೇ ಆಧಾರ‌," ಎನ್ನುತ್ತಾರೆ ಡಿ.ಶಬ್ರಿನಾ ಮಹಮದ್ ಅಲಿ. ಅವರು ಜಬೀವುಲ್ಲಾ ಎಂ.ಅಸದ್ ಅವರ ‘ಪ್ರೇಮಾಯತನ’ ಕೃತಿ ಕುರಿತು ಬರೆದ ಮಾತುಗಳು.

ಕೃತಿ: ಪ್ರೇಮಾಯತನ
ಲೇಖಕರು: ಜಬೀವುಲ್ಲಾ ಎಂ.ಅಸದ್

ಇತ್ತೀಚಿಗೆ ನಾನು ಓದಿದ ಪುಸ್ತಕ ಬಹುಮುಖ ಪ್ರತಿಭೆಯ ಕವಿ ಜಬೀವುಲ್ಲಾ ಎಂ.ಅಸದ್ ಅವರ 'ಪ್ರೇಮಾಯತನ'. ಇವರ ಈ ಕೃತಿ ಒಲವ ಕವಿತೆಗಳ ಹೂಗುಚ್ಛವಾಗಿದೆ. ಈ ಗುಚ್ಚದ ಪ್ರತಿ ಹೂವು(ಕವಿತೆ) ಕೂಡ ಸುಗಂಧದ ಪರಿಮಳವನ್ನು ಸೂಸುವ ಮೂಲಕ 'ಪ್ರೀತಿ'ಯ ಆಳವನ್ನ ಓದುಗನಿಗೆ ಅರ್ಥೈಸಿದೆ ಎಂದೇ ಹೇಳಬಹುದು.

ಇತ್ತೀಚಿನ ದಿನಗಳಲ್ಲಿ ನಮ್ಮ ಯುವಜನತೆ 'ಪ್ರೀತಿ' ಯನ್ನು ಅರ್ಥೈಸಿಕೊಳ್ಳುವಲ್ಲಿ ವಿಫಲರಾಗುತಿದ್ದಾರೆ. ಪ್ರೀತಿಯ ಹೆಸರಲ್ಲಿ ದ್ವೇಷ, ಅಸೂಯೆ, ಹೊಡೆದಾಟ, ಬಡಿದಾಟ ಇನ್ನೂ ಮುಂದುವರೆದು ಕೊಲೆ ಮಾಡುತ್ತಾರೆಂದರೆ! ಇದಕ್ಕಿಂತ ಆಘಾತಕಾರಿ ವಿಚಾರ ಮತ್ತೊಂದಿದೆಯೇ! ಮಾನವನ ಜನ್ಮಕೆ ಪ್ರೀತಿಯೇ ಆಧಾರ‌. ಹಾಗಾಗಿ ಪ್ರತಿಯೊಬ್ಬರು ಪ್ರೀತಿ ಅಂದರೆ ಏನು, ನಾವು ಪ್ರೀತಿಸುವವರೊಂದಿಗೆ ಹೇಗೆ ವರ್ತಿಸಬೇಕು? ಪರಸ್ಪರ ಪ್ರೀತಿ ಹಂಚುವ ಮೂಲಕ ಜೀವನ ಸುಂದರವಾಗಿಸುವುದು ಹೇಗೆ? ಎಂಬುದನ್ನ ಸರಿಯಾಗಿ ಅರ್ಥೈಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಅಸದ್ ಅವರು ಈ 'ಪ್ರೇಮಾಯತನ'ದ ಕವಿತೆಗಳ ಮೂಲಕ ಪ್ರೀತಿ ಎಂದರೇನು, ಆ ಪ್ರೀತಿ ನಮಗೆ ಸಿಗದಿದ್ದರೂ ನಾವು ಹೇಗೆ ಇರಬೇಕು ಎಂಬುದನ್ನ ತುಂಬಾ ಸೊಗಸಾಗಿ ತಿಳಿಸಿಕೊಟ್ಟಿದ್ದಾರೆ.

ಪ್ರೀತಿಯ ವಿಸ್ತಾರ ತಿಳಿಸುವ ಈ ಕೃತಿಯ ಕೆಲ ಸಾಲುಗಳು ಹೀಗಿವೆ.

ಸಂತೆಯ ನಡುವೆ ನಿಂತು ಲೋಕದ ಚಿಂತೆ ಮರೆತು
ಕೇಳುವ ಕೊಳಲಿನ ನಾದ ಪ್ರೇಮವೆಂದರೆ...

ಪ್ರೇಮಕ್ಕೆ ಬದಲಾಗಿ
ಪ್ರೇಮವನ್ನು ಕೊಡದೆ ಇದ್ದರೂ ಸರಿಯೇ
ಪ್ರೇಮವೆಂಬುದು
ಕೊಟ್ಟು ಪಡೆಯುವ
ವ್ಯಾಪಾರ ಅಲ್ಲವಲ್ಲ.

ಅವಳು ಗಲ್ಲಕೆ ಕೊಟ್ಟು ಹೋದ
ಮುತ್ತಿನ ಮತ್ತು
ಹೃದಯಕೆ ಹತ್ತಿದೆ
ಅಂದಿನಿಂದ ಇಂದಿಗೂ
ನಶೆ ಇಳಿಯದಾಗಿದೆ

ಪ್ರೇಮದ ರುಚಿ,ಅದರ ಘಮ
ಅದರ ನಶೆ
ಅನುಭವಿಸಿದವರಿಗಷ್ಟೇ ಗೊತ್ತು
ವಿವರಿಸಲಾಗದು ಎಂದಿಗೂ
ಬರಿಯ ಬಯಕೆಯಲ್ಲ ಅದುವೆ
ಭಾವಗಳ ಪರಿಷೆ

ನನ್ನ ಹೃದಯದಿ
ನೀ ಆಡಿ ಬಿಟ್ಟು ಹೋದ ಜೋಕಾಲಿ
ಇಂದಿಗೂ ತೂಗುತ್ತಿದೆ ಖಾಲಿಯಾಗಿ ನೋಡು
ಅದೇ ಹೃದಯದ ನಿನಾದದೊಂದಿಗೆ ಕೂಡಿ‌

ಚೆಂದದ ನೋವಿಗೆ
ಒಲವೆಂದು ಹೆಸರಿಟ್ಟು ಹರಸಿ
ಬದುಕುವ ವರ ಎಲ್ಲರಿಗೂ
ದಕ್ಕುವಂತಾಗಲಿ.

ಒಲವ ಗೀತೆ
ನಾನು ಕೇಳಿದೆ
ಪ್ರೇಮವೆಂದರೆ ಏನೆಂದು
ಮೊಲ್ಲೆ ಹೂವಾಗಿ ಅರಳುವುದನು
ತೋರಿ ನಕ್ಕು ನಡೆದಳು

ನಾನು ಕೇಳಿದೆ
ಭರವಸೆ ಹಾಗೆಂದರೇನೆಂದು
ಕತ್ತಲ ಕೋಣೆಯಲ್ಲಿ
ದೀಪವೊಂದನು ಬೆಳಗಿ ಹೋದಳು.

ಪ್ರೀತಿಯ ಕುರಿತು ಎಂತಹ ಚೆಂದದ ಸಾಲುಗಳಿವು! ಈ ಕೃತಿಯ ಕವಿತೆಗಳು ಪ್ರತಿ ಪ್ರೇಮಿಯ ಮನದ ತುಡಿತವಾಗಿ ಪ್ರೇಮದ ರಸದೌತಣವನ್ನ ಉಣಬಡಿಸುತ್ತವೆ.

- ಡಿ.ಶಬ್ರಿನಾ ಮಹಮದ್ ಅಲಿ
ಚಳ್ಳಕೆರೆ

MORE FEATURES

ಕೌಟುಂಬಿಕ, ಸಾಮಾಜಿಕ ಪರಿಸರವೇ ದುಷ್ಕೃತ್ಯಕ್ಕೆ ಕಾರಣ

05-05-2024 ಬೆಂಗಳೂರು

'ಎಲ್ಲಾ ಕಾಲಘಟ್ಟದಲ್ಲೂ ಅತ್ಯಾಚಾರ, ಕೊಲೆ ಪ್ರಕರಣಗಳು ನಡೆದಿದೆ. ಆದರೆ ಅದರ ಪ್ರಮಾಣ ದಿನೇ, ದಿನೆ ಹೆಚ್ಚಾಗುತ್ತಿದೆ....

ಮನ ತಟ್ಟಿದ ಕೃತಿ ‘ಹಿಮಾಲಯನ್ ಬ್ಲಂಡರ್’ 

05-05-2024 ಬೆಂಗಳೂರು

"ಪುಸ್ತಕ ಓದುವುದು ನನ್ನ ನೆಚ್ಚಿನ ಹವ್ಯಾಸಗಳಲ್ಲೊಂದು. ಇದುವರೆಗೂ ಕುವೆಂಪು, ತೇಜಸ್ವಿ, ಭೈರಪ್ಪ ಸೇರಿದಂತೆ ಹಲವರ ಕ...

ಲಲಿತ ಪ್ರಬಂಧಗಳ ಸ್ವರೂಪ ಕಟ್ಟಿಹಾಕದ ದನದ ಹಾಗೆ

04-05-2024 ಬೆಂಗಳೂರು

'ಲಲಿತ ಪ್ರಬಂಧಗಳಲ್ಲಿ ನಾವು ಹೀಗೆ ಬಾಲ್ಯಕ್ಕೆ ಮರಳುವುದು ಹೆಚ್ಚು. ಯಾಕೆಂದರೆ ಲಲಿತ ಪ್ರಬಂಧಗಳ ಸ್ವರೂಪ ಕಟ್ಟಿಹಾಕದ ...