ರೌದ್ರಾವರಣಂ ಕಾದಂಬರಿಯ ಮುಂದುವರೆದ ಭಾಗ ಈ ಕಾಡ್ಗಿಚ್ಚು!


"ಇಲ್ಲಿ ರೌದ್ರಾವರಣಂ ಕಾದಂಬರಿಯಲ್ಲಿ ಮುಗಿದ ಕಥೆ ಮುಂದುವರೆಯುತ್ತದೆ. ಬಾಬಣ್ಣ, ಅಗಸ್ತ್ಯ, ಮೇಷ್ಟ್ರು, ಗೌಡ್ರು, ಐನೌರು, ನಾರಾಯಣ, ಪುಷ್ಪ, ರಮೆ, ನಕ್ಸಲಿಸ್ಟಗಳು, ಸೋಮಕ್ಕ, ಹೋದ ಚಂದ್ರನ ಜಾಗದಲ್ಲಿ ರೂಬಿ, ಸಾಬಿ, ಪೊಲೀಸ್ರು, ಷಣ್ಮುಖಯ್ಯ ಹೀಗೆ ಅನೇಕ ಪಾತ್ರಗಳು ಕಥೆಯ ತುಂಬಾ ಬಂದು ಓದುತ್ತಾ ಹೋದಂತೆ ಮನಸ್ಸಿನಲ್ಲಿ ಕೊರೆಯಲು ಶುರುಮಾಡುತ್ತವೆ," ಎನ್ನುತ್ತಾರೆ ರಾಮ್ ಸನ್. ಅವರು ಯುವ ಲೇಖಕ ಅನಂತ್ ಕುಣಿಗಲ್ ಅವರ ‘ಕಾಡ್ಗಿಚ್ಚು’ ಕೃತಿ ಕುರಿತು ಬರೆದ ವಿಮರ್ಶೆ.

ಅನಂತಣ್ಣ ಬರೆದ ರೌದ್ರಾವರಣಂ ಕಾದಂಬರಿಯ ಮುಂದುವರೆದ ಭಾಗ ಈ ಕಾಡ್ಗಿಚ್ಚು!

ಇಲ್ಲಿ ರೌದ್ರಾವರಣಂ ಕಾದಂಬರಿಯಲ್ಲಿ ಮುಗಿದ ಕಥೆ ಮುಂದುವರೆಯುತ್ತದೆ. ಬಾಬಣ್ಣ, ಅಗಸ್ತ್ಯ, ಮೇಷ್ಟ್ರು, ಗೌಡ್ರು, ಐನೌರು, ನಾರಾಯಣ, ಪುಷ್ಪ, ರಮೆ, ನಕ್ಸಲಿಸ್ಟ್ ಗಳು, ಸೋಮಕ್ಕ, ಹೋದ ಚಂದ್ರನ ಜಾಗದಲ್ಲಿ ರೂಬಿ, ಸಾಬಿ, ಪೊಲೀಸ್ರು, ಷಣ್ಮುಖಯ್ಯ ಹೀಗೆ ಅನೇಕ ಪಾತ್ರಗಳು ಕಥೆಯ ತುಂಬಾ ಬಂದು ಓದುತ್ತಾ ಹೋದಂತೆ ಮನಸ್ಸಿನಲ್ಲಿ ಕೊರೆಯಲು ಶುರುಮಾಡುತ್ತವೆ. ಒಬ್ಬರಿಗೆ ಅಸ್ತಿತ್ವದ ಪ್ರಶ್ನೆ, ಇನ್ನೊಬ್ಬರಿಗೆ ಬದುಕಿನ ಹೋರಾಟ, ಮತ್ತೊಬ್ಬರಿಗೆ ಅಧಿಕಾರದ ಆಸೆ, ಮಗದೊಬ್ಬರಿಗೆ ಬದಲಾವಣೆಯ ಬಯಕೆ, ಹೀಗೆ ಅನೇಕ ಬದುಕಿನ ಆಯಾಮಗಳು ಎದ್ದು ಕಾಣುತ್ತವೆ.

ಬಾಬಣ್ಣ ಮತ್ತು ಅಗಸ್ತ್ಯ ಬೇರೆಯಾದವರು ಮತ್ತೆ ಒಂದಾಗುತ್ತಾರಾ? ಸತ್ತ ಚಂದ್ರನ ಬಗ್ಗೆ ಅಗಸ್ತ್ಯನಿಗೆ ತಿಳಿಯುತ್ತದೋ ಇಲ್ಲವೋ? ಮೇಷ್ಟ್ರು ಬಯಸಿದ ಊರಿನ ಬದಲಾವಣೆ ಯಾವ ಹಂತಕ್ಕೆ ಬಂದು ನಿಲ್ಲುತ್ತದೆ? ಮೇಷ್ಟ್ರಿಗೆ ಸದಾ ಬೆಂಬಲಿಸುವ ಗೌಡ್ರ ಒಳಮನದ ಸ್ವಾರ್ಥವೇನು? ಐನೌರು ಜನರ ನಂಬಿಕೆಯನ್ನು ಹೇಗೆ ದುರುಪಯೋಗಪಡಿಸಿಕೊಂಡರು? ಅಗಸ್ತ್ಯ ಮತ್ತು ರೂಬಿ ಯಾವ ರೀತಿ ಕಾಡನ್ನು ಬಿಟ್ಟು ನಾಡಿಗೆ ಬಂದರು? ಕೊನೆಯಲ್ಲಿ ರೂಬಿ(ನಾಯಿ)ಯಿಂದ ಅಗಸ್ತ್ಯ ದೂರವಾಗಿದ್ದೇಕೆ? ನಾರಾಯಣ ಐನೌರ ಮಗನಾಗಿದ್ದರೂ ಮೇಷ್ಟ್ರ ಮನೆಯಲ್ಲೇ ಇದ್ದಿದ್ದು ಯಾಕೆ? ಗೌಡ್ರು ಎಂದೂ ಬಿಟ್ಟಿರದ ತನ್ನ ಮಗಳು ಪುಷ್ಪಳನ್ನು ಬೇರೆ ಊರಲ್ಲಿ ಬಿಟ್ಟು ಬಂದಿದ್ದೇಕೆ? ಕಾದಂಬರಿಗೆ ಕಾಡ್ಗಿಚ್ಚೇ ಎಂದು ಹೆಸರು ಬಂದಿದ್ದು ಹೇಗೆ?

ಕಾದಂಬರಿಯ ಕೊನೆಯಲ್ಲಿ ಏನಾಯಿತು? ಹೀಗೆ ಅನೇಕ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ನೀವು ಕಾಡ್ಗಿಚ್ಚು ಕಾದಂಬರಿಯನ್ನು ಓದಲೇಬೇಕು. ನಾನು ತುಂಬಾ ಇಷ್ಟಪಟ್ಟೆ. ಕಾದಂಬರಿಯ ಕೊನೆಯಲ್ಲಿ ಆವರಿಸಿದ್ದು ಮಹಾಮೌನ. ಹಾಗೆಯೇ ನಾನು ಬರವಣಿಗೆ ಮೂಲಕ ಹೇಳಬೇಕೆಂದ ಎಷ್ಟೋ ವಿಷಯವನ್ನು (ರಾಜಕೀಯದ) ಅನಂತಣ್ಣ ಈ ಕಾದಂಬರಿ ಮೂಲಕ ಹೇಳಿದ್ದು ಖುಷಿಯಾಯಿತು.

MORE FEATURES

ಲಲಿತ ಪ್ರಬಂಧಗಳ ಸ್ವರೂಪ ಕಟ್ಟಿಹಾಕದ ದನದ ಹಾಗೆ

04-05-2024 ಬೆಂಗಳೂರು

'ಲಲಿತ ಪ್ರಬಂಧಗಳಲ್ಲಿ ನಾವು ಹೀಗೆ ಬಾಲ್ಯಕ್ಕೆ ಮರಳುವುದು ಹೆಚ್ಚು. ಯಾಕೆಂದರೆ ಲಲಿತ ಪ್ರಬಂಧಗಳ ಸ್ವರೂಪ ಕಟ್ಟಿಹಾಕದ ...

ಕನ್ನಡದ ಮುನ್ನೋಟ ಎಂಬುದು ನುಡಿ ಬೆಳವಣಿಗೆಯನ್ನು ಕುರಿತ ಸಂಕಥನವಾಗಿದೆ

04-05-2024 ಬೆಂಗಳೂರು

‘ಕನ್ನಡ ನುಡಿ ಬೆಳವಣಿಗೆಯನ್ನು ಕುರಿತು ಮಾತನಾಡುವುದೆಂದರೆ ಅದು ನುಡಿ ನೀತಿ ಮತ್ತು ಯೋಜನೆಯ ನಿಲುವುಗಳನ್ನು ಹೊರತು...

ಮಹಾಭಾರತ ಎಲ್ಲೆಲ್ಲೋ ಹರಿಯುತ್ತ, ಎಲ್ಲವನ್ನೂ ಒಳಗೊಳ್ಳುತ್ತ ಸಾಗಿ ನಿಂತ ಸಾಗರದಂತಹ ಕಾವ್ಯ

04-05-2024 ಬೆಂಗಳೂರು

‘ಮಹಾಭಾರತವನ್ನು ಸಮೀಕ್ಷಿಸಲು ಹೊರಟರೆ ಅದರ ವಿಶಾಲ ಹರವು ಮೊದಲನೆಯದಾಗಿ ನಮ್ಮನ್ನು ದಂಗುಬಡಿಸುತ್ತದೆ. ಅಲ್ಲದೇ ಅದರ...