ಟಾಲ್ಸ್ಟಾಯ್: ಬದುಕಿದಂತೆ ಬರೆದದ್ದು ಎಂಬುದೇ ಅವರ ಬರಹಗಳ ಸೆಳೆತ


'ಟಾಲ್ಸ್ಟಾಯ್ ಕನ್ನಡದಲ್ಲಿ ಬರೆದಂತೆ ಓದುಗರಿಗೆ ಭಾಸವಾಗುತ್ತದೆ. ಬುದ್ಧಿವಂತ, ಪ್ರಾಮಾಣಿಕ, ಅಹಂಕಾರಿಯುವಕ ತನ್ನ ಬದುಕನ್ನು ಸಮಾಜದದಲ್ಲಿ ಅತ್ಯಂತ ಉನ್ನತವಾಗಿ ರೂಪಿಸಿಕೊಳ್ಳಬೇಕು ಎಂದು ಬಯಸಿ ಪ್ರೀತಿ ಇಂದ ಭ್ರಮಾನಿರಸನಗೊಂಡು ಸಂನ್ಯಾಸಿಯಾಗಿ ಎಲ್ಲರನ್ನು ಅಚ್ಚರಿಯಾಗುವಂತೆ ಮಾಡುತ್ತಾನೆ' ಎನ್ನುತ್ತಾರೆ ರೇಶ್ಮಾ ಗುಳೇದಗುಡ್ಡಾಕರ್. ಅವರು ಓ.ಎಲ್. ನಾಗಭೂಷಣ ಸ್ವಾಮಿ ಅವರು ಅನುವಾದಿಸಿರುವ ಫಾದರ್ ಸೆರ್ಗಿಯಸ್ ಕೃತಿಗೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ.

ಫಾದರ್ ಸೆರ್ಗಿಯಸ್
ಮೂಲ : ಲಿಯೊ ಟಾಲ್ಸ್ಟಾಯ್
ಕನ್ನಡಕ್ಕೆ : ಓ. ಎಲ್. ನಾಗಭೂಷಣ ಸ್ವಾಮಿ.

ಬದುಕು, ಕನಸು, ಅಹಂಕಾರ, ವಿರಕ್ತಿ ಇವುಗಳ ನಡುವಿನ ಹೋರಾಟ ಫಾದರ್ ಸೆರ್ಗಿಯಸ್ ಕಥೆಯಾಗಿ ರೂಪಿತ ಗೊಂಡಿದೆ. ಟಾಲ್ಸ್ಟಾಯ್ ಅವರ ಬರಹಗಳು ಬಹು ಆಕರ್ಷಕ ಇವರು ಬದುಕು ಬರೆದಂತೆ ಬದುಕು ಅಲ್ಲ, ಬದುಕಿದಂತೆ ಬರೆದದ್ದು ಎಂಬುದೇ ಅವರ ಬರಹಗಳ ಸೆಳೆತ. ಬದುಕನ್ನು ನೋಡುವ ವಿನೂತನ ಬಗೆಯನ್ನು ಅವರ ಹಲವು ಬರಹಗಳು ಅನಾವರಣಗೊಳಿಸಿವೆ. ಕಥೆಯನ್ನು ಓದುವ ಮೊದಲು ಪ್ರಸ್ತಾವನೆಯಲ್ಲಿ ನೀಡಿರುವ ಲೇಖಕರ ಮಾಹಿತಿ ಕುತೂಹಲಕಾರಿಯಾಗಿದೆ.

ಟಾಲ್ಸ್ಟಾಯ್ ಕನ್ನಡದಲ್ಲಿ ಬರೆದಂತೆ ಓದುಗರಿಗೆ ಭಾಸವಾಗುತ್ತದೆ. ಬುದ್ಧಿವಂತ, ಪ್ರಾಮಾಣಿಕ, ಅಹಂಕಾರಿಯುವಕ ತನ್ನ ಬದುಕನ್ನು ಸಮಾಜದದಲ್ಲಿ ಅತ್ಯಂತ ಉನ್ನತವಾಗಿ ರೂಪಿಸಿಕೊಳ್ಳಬೇಕು ಎಂದು ಬಯಸಿ ಪ್ರೀತಿ ಇಂದ ಭ್ರಮಾನಿರಸನಗೊಂಡು ಸಂನ್ಯಾಸಿಯಾಗಿ ಎಲ್ಲರನ್ನು ಅಚ್ಚರಿಯಾಗುವಂತೆ ಮಾಡುತ್ತಾನೆ.

ತದನಂತರ ಓದು ದುಮ್ಮಿಕ್ಕುವದು ತನ್ನನ್ನು ತಾನು ಗೆಲ್ಲಲು ಮನೋವಾಚ್ಚೇಯ ವಿರುದ್ಧ ಹೋರಾಟ ಮಾಡುವ ನಾಯಕನ ಪಯಣ ಬಹು ರೋಚಕವಾಗಿ ನಿರೂಪಣೆಯಾಗಿದೆ.

ಎಲ್ಲವನ್ನು ಬಿಟ್ಟು ವಿರಕ್ತಿಯಾದರು ಅಲ್ಲಿಯೂ ಗಳಿಸುವ...ತಾನು, ತನ್ನದು ಎಂಬ ಕೋಟೆಯ ಕೆಡವಿ ಮತ್ತೇ ಹೊರಡುವ ಅವನ ಪಯಣ ವಿರಕ್ತ ಪಥದಲ್ಲಿಯು ಮೋಸ, ಅವಮಾನ, ಅಸಹಿಷ್ಣತೆ ಎಲ್ಲವನ್ನು ವಿನಯದಿಂದಲೇ ಎದುರಿಸುವ ಕಥೆ ಕಡಿದಾಗಿ ಸಾಗಿ ಎಲ್ಲಿಯೂ ನಿಲ್ಲದಂತೆ ಓದಿಸಿಕೊಳ್ಳುತ್ತದೆ.

ಸವಾಲುಗಳನ್ನು ಎದುರಿಸುವ ಸಲುವಾಗಿ ಮತ್ತಷ್ಟು ಕಠಿಣ ಪರೀಕ್ಷೆಗೆ ಒಳಗಾಗುವ ತನ್ನೊಳಗೆ ಉದ್ಭವವಾಗುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನದಲ್ಲಿ ಜನ ಸಮೂಹದ ಇವನನ್ನು ದೈವತ್ವಕ್ಕೆರಿಸುವ ಈ ಎಲ್ಲದರ ನಡುವೆ ತಾನು ನಿಜವಾಗಿ ಈ ನಂಬಿಕೆಗೆ ಅರ್ಹನೇ ಎಂಬ ಪ್ರಶೆಗಳು. ಎಡವಿ ಗೆಲ್ಲುವ ಅವನ ಛಲ.

ಬಾಲ್ಯದ ಗೆಳತಿ ಇಂದ ಪಡೆದ ಮಾರ್ಗದರ್ಶನ ಮತ್ತೇ ಅವನನ್ನು ವಿರಕ್ತಿ ಪಥದಲ್ಲಿ ಸಾಗುವಂತೆ ಮಾಡಿ ಅನಾಮಧೇಯನಾಗಿ ಬದುಕುವಲ್ಲಿ ಯಶಸಿಯಾಗುವ ಅವನ ಗುರಿ ಕಥೆ ಮುಗಿಸುತ್ತದೆ.

ಈ ಕಥೆಗೂ ಟಾಲ್ಸ್ಟಾಯ್ ಅವರ ಬದುಕಿಗೂ ಸಮ್ಯತೆ ಇದೆ ಎಂದು ಹೇಳಲಾಗಿದೆ (ಪ್ರಸ್ತಾವನೆ ). ಈ ನೀಲ್ಗತೆ ಬಯಸಿದ್ದು ಪಡೆಯುವ ನಿರ್ಧಾರ, ನಿರ್ಧಾರದ ನಂತರದ ಸವಾಲುಗಳು ಅವುಗಳನ್ನು ವಿಶ್ಲೇಷಿಸುವ ಚರ್ಚೆಯನ್ನು ಓದುಗರ ಮನದಲ್ಲಿ ಉಂಟು ಮಾಡುತ್ತದೆ. ಹೆಚ್ಚು ಕಾಡುವ ಕೃತಿಯಾಗಿದೆ.

-ರೇಶ್ಮಾಗುಳೇಡಗುಡ್ಡಕರ್.

 

MORE FEATURES

ಲಲಿತ ಪ್ರಬಂಧಗಳ ಸ್ವರೂಪ ಕಟ್ಟಿಹಾಕದ ದನದ ಹಾಗೆ

04-05-2024 ಬೆಂಗಳೂರು

'ಲಲಿತ ಪ್ರಬಂಧಗಳಲ್ಲಿ ನಾವು ಹೀಗೆ ಬಾಲ್ಯಕ್ಕೆ ಮರಳುವುದು ಹೆಚ್ಚು. ಯಾಕೆಂದರೆ ಲಲಿತ ಪ್ರಬಂಧಗಳ ಸ್ವರೂಪ ಕಟ್ಟಿಹಾಕದ ...

ಮಹಾಭಾರತ ಎಲ್ಲೆಲ್ಲೋ ಹರಿಯುತ್ತ, ಎಲ್ಲವನ್ನೂ ಒಳಗೊಳ್ಳುತ್ತ ಸಾಗಿ ನಿಂತ ಸಾಗರದಂತಹ ಕಾವ್ಯ

04-05-2024 ಬೆಂಗಳೂರು

‘ಮಹಾಭಾರತವನ್ನು ಸಮೀಕ್ಷಿಸಲು ಹೊರಟರೆ ಅದರ ವಿಶಾಲ ಹರವು ಮೊದಲನೆಯದಾಗಿ ನಮ್ಮನ್ನು ದಂಗುಬಡಿಸುತ್ತದೆ. ಅಲ್ಲದೇ ಅದರ...

ಕಾವ್ಯ ರಚನೆಯೆಂಬುದೊಂದು ಗುಣವಾಗದ ಜಾಡ್ಯ!

04-05-2024 ಬೆಂಗಳೂರು

"ಹದಿನೇಳು ಅಕ್ಷರಗಳಲ್ಲಿ ಇಪ್ಪತ್ತೆಂಟು ವಿಚಾರಗಳನ್ನು ಕುರಿತು ಬರೆಯುವುದೇ ಒಂದು ಸೋಜಿಗ. ಅಕ್ಷರಗಳ ಲೆಕ್ಕಾಚಾರದಲ್ಲ...