ತುಳುನಾಡಿನ ದೈವಾರಾಧನೆಯ ಒಳ, ಹೊರಗಿನ ವಿಚಾರಗಳನ್ನು ಈ ಕೃತಿ ದಾಖಲಿಸಿದೆ


"ಇದನ್ನು ಪುಸ್ತಕ ಅನ್ನುದಕ್ಕಿಂತಲೂ ದೈವಗಳ ಬಗ್ಗೆ ಭಕ್ತಿ , ಪ್ರೀತಿ ಇರುವವರ ಮನೆಯಲ್ಲಿರಲೆಬೇಕಾದ ಅಧ್ಬುತವಾದ ಗ್ರಂಥ ಎಂದು ನಾನು ಭಾವಿಸುತ್ತೇನೆ. ತುಳುನಾಡಿನ ದೈವಾರಾಧನೆಯ ಒಳ, ಹೊರಗಿನ ಎಲ್ಲ ಮೇಲ್ಮೈ ಗಳನ್ನು ಓದುಗರ ಮನ ಮುಟ್ಟುವಂತೆ ಇದರಲ್ಲಿ ಡಾ.ನವೀನ್ ಮರಿಕೆಯವರು ಚಿತ್ರಿಸಿದ್ದಾರೆ," ಎನ್ನುತ್ತಾರೆ ಹರೀಶ್ ಮಂಜೊಟ್ಟಿ. ಅವರು ಡಾ. ನವೀನ್ ಕುಮಾರ್ ಮರಿಕೆ ಅವರ ‘ದೈವಾರಾಧನೆ’ ಕುರಿತು ಬರೆದಿರುವ ಮಾತುಗಳು.

ಪುಸ್ತಕ ದ ಹೆಸರು- ದೈವಾರಾಧನೆ
ಲೇಖಕರು- ಡಾ.ನವೀನ್ ಕುಮಾರ್ ಮರಿಕೆ

ಇದನ್ನು ಪುಸ್ತಕ ಅನ್ನುದಕ್ಕಿಂತಲೂ ದೈವಗಳ ಬಗ್ಗೆ ಭಕ್ತಿ, ಪ್ರೀತಿ ಇರುವವರ ಮನೆಯಲ್ಲಿರಲೆಬೇಕಾದ ಅದ್ಭುತವಾದ ಗ್ರಂಥ ಎಂದು ನಾನು ಭಾವಿಸುತ್ತೇನೆ. ತುಳುನಾಡಿನ ದೈವಾರಾಧನೆಯ ಒಳ, ಹೊರಗಿನ ಎಲ್ಲ ಮೇಲ್ಮೈ ಗಳನ್ನು ಒದುಗರ ಮನ ಮುಟ್ಟುವಂತೆ ಇದರಲ್ಲಿ ಡಾ.ನವೀನ್ ಮರಿಕೆಯವರು ಚಿತ್ರಿಸಿದ್ದಾರೆ. ತುಳುನಾಡಿನ ಅಂದರೆ ಕಾಸರಗೋಡು, ಮಡಿಕೇರಿ, ಉಡುಪಿ, ಮೂಡಿಗೆರೆ ವರೆಗೆ ದೈವಗಳ ನಂಬಿಕೆ, ಆರಾಧನೆಯ ಜನ ಸಿಗುತ್ತಾರೆ. ಈ ವಿಶೇಷ ಆರಾಧನೆಯ ಮಾಹಿತಿಯೊಂದಿಗೆ ಅರ್ಥಪೂರ್ಣವಾದ ಸುಂದರ ಚಿತ್ರಗಳು ಜೊತೆಗಿವೆ. ಇದರಲ್ಲಿ ದೈವಾರಾಧನೆಯ ಬಗೆಗಿನ ಎಲ್ಲಾ ಕಟ್ಟು ಕಟ್ಟಳೆಗಳ ಸಂಪೂರ್ಣ ಮಾಹಿತಿ ಒದಗಿಸಲಾಗಿದೆ. ಮುಖ್ಯವಾಗಿ ಭೂತಾರಾಧನೆ ಮತ್ತು ದೈವಾರಾಧನೆಯ ನಡುವಿನ ಭಿನ್ನತೆ, ವ್ಯತ್ಯಾಸವನ್ನು ಸೂಕ್ಷ್ಮವಾಗಿ ಅವಲೋಕಿಸಲಾಗಿದೆ. ದೈವನೇಮದ ಸಮಯ ಸೂಟೆ(ಬೆಂಕಿ-ಬೆಳಕು)ಯ ಕಾಪಾಡರಿಂದ, ಕೊಡಿಯಡಿ(ನೇಮ ನಡೆಯುವ ಸ್ಥಳ, ದೈವಗಳ ಆಯುಧ ಇರಿಸುವ ಜಾಗ)ಯ ಮುಂದಿನ ತಂತ್ರಿಗಳವರೆಗಿನ ಮಾಹಿತಿ ಈ ಪುಸ್ತಕದಲ್ಲಿದೆ. ದೈವಾರಾಧನೆಯ ಕಟ್ಟು ಕಟ್ಟಾಳೆಗಳು, ನೀತಿ ನಿಯಮಗಳ ವಿವರಣೆ, ವೇಷಭೂಷಣಗಳ ಮಾಹಿತಿ, ಹುಟ್ಟುಕಟ್ಟುಗಳನ್ನು ಈ ಗ್ರಂಥದಲ್ಲಿ ನಮಗೆ ಮನಮುಟ್ಟುವಂತೆ ಕಟ್ಟಿಕೊಡಲಾಗಿದೆ. ಅಷ್ಟೆ ಅಲ್ಲದೆ ರಾಜ್ಯ ಜಾನಪದ ಅಕಾಡೆಮಿಯ ಪ್ರಶಸ್ತಿ ಪಡೆದ ಈ ಪುಸ್ತಕ ನನಗೆ ತುಂಬಾನೆ ಮಾಹಿತಿ ನೀಡಿದೆ.

ಹರೀಶ್ ಮಂಜೊಟ್ಟಿ
ಪೆರಾಜೆ-ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ

MORE FEATURES

ವಿಮರ್ಶೆ ಎನ್ನುವುದು ಕೇವಲ ಪರಿಶ್ರಮದಿಂದ ಸಿದ್ಧಿಸುವ ಕಲೆಯಲ್ಲ

05-05-2024 ಬೆಂಗಳೂರು

'ಕನ್ನಡ ಸಾಹಿತ್ಯದಲ್ಲಿ ವಿರಳಾತಿ ವಿರಳರಾಗಿರುವ ವಸ್ತು ನಿಷ್ಠ ವಿಮರ್ಶಕರ ನಡುವೆ ಪ್ರಮುಖರಾದ ನರೇಂದ್ರ ಪೈ ಅವರ ಹೊಸ ...

ಕೌಟುಂಬಿಕ, ಸಾಮಾಜಿಕ ಪರಿಸರವೇ ದುಷ್ಕೃತ್ಯಕ್ಕೆ ಕಾರಣ

05-05-2024 ಬೆಂಗಳೂರು

'ಎಲ್ಲಾ ಕಾಲಘಟ್ಟದಲ್ಲೂ ಅತ್ಯಾಚಾರ, ಕೊಲೆ ಪ್ರಕರಣಗಳು ನಡೆದಿದೆ. ಆದರೆ ಅದರ ಪ್ರಮಾಣ ದಿನೇ, ದಿನೆ ಹೆಚ್ಚಾಗುತ್ತಿದೆ....

ಮನ ತಟ್ಟಿದ ಕೃತಿ ‘ಹಿಮಾಲಯನ್ ಬ್ಲಂಡರ್’ 

05-05-2024 ಬೆಂಗಳೂರು

"ಪುಸ್ತಕ ಓದುವುದು ನನ್ನ ನೆಚ್ಚಿನ ಹವ್ಯಾಸಗಳಲ್ಲೊಂದು. ಇದುವರೆಗೂ ಕುವೆಂಪು, ತೇಜಸ್ವಿ, ಭೈರಪ್ಪ ಸೇರಿದಂತೆ ಹಲವರ ಕ...