ವಾರದ ಲೇಖಕ ವಿಶೇಷದಲ್ಲಿ ಖ್ಯಾತ ಬರಹಗಾರ ಶ್ರೀಕೃಷ್ಣ ಆಲನಹಳ್ಳಿ


ಬುಕ್ ಬ್ರಹ್ಮದ ವಾರದ ಲೇಖಕ ಸರಣಿಯಲ್ಲಿ ಕನ್ನಡದ ನವ್ಯ ಸಾಹಿತ್ಯ ಚಳವಳಿಯ ಖ್ಯಾತ ಬರಹಗಾರ ಶ್ರೀಕೃಷ್ಣ ಆಲನಹಳ್ಳಿ ಅವರ ಕುರಿತ ಒಂದು ನೀಳ ನೋಟ..

ಅಲ್ಪಾಯುಷ್ಯದಲ್ಲೇ ಅತ್ಯಂತ ಸ್ಮರಣೀಯ ಸಾಹಿತ್ಯ ಕೊಡುಗೆಯನ್ನ ನೀಡಿದ ಖ್ಯಾತ ಬರಹಗಾರ ಶ್ರೀಕೃಷ್ಣ ಆಲನಹಳ್ಳಿ. ಕನ್ನಡದ ನವ್ಯ ಸಾಹಿತ್ಯ ಚಳವಳಿಯ ಕಾಲದಲ್ಲಿ ತಮ್ಮದೇ ಆದ ಗುರುತನ್ನ ಕಂಡ ಬರಹಗಾರ ಇವರು.

‘ಕಾಡು’ ಕಾದಂಬರಿಯ ಕಿಟ್ಟಿ, ‘ಪರಸಂಗ’ದ ಗೆಂಡೆತಿಮ್ಮ, ‘ದಶಾವತಾರ’ದ ಭುಜಂಗಯ್ಯನಂತಹ ಮುಗ್ಧ ವ್ಯಕ್ತಿತ್ವವನ್ನು ಸೃಷ್ಟಿಸುದರಲ್ಲಿ ಇವರು ನಿಪುಣರು ಅಂತಲೇ ಹೇಳಬಹುದು. ಹಾಗೇ ಭಿನ್ನ ಕಾಲ್ಪನಿಕ ಗ್ರಾಮೀಣ ಪರಿಸರವನ್ನು ಕಟ್ಟಿಕೊಟ್ಟವರು. ಆದರೆ ಕಾಲ್ಪನಿಕ ಪರಿಸರವೂ ನೈಜ ಎನಿಸುವಂತೆ ಕಥೆ ಕಟ್ಟಿದವರು ಶ್ರೀಕೃಷ್ಣ ಆಲನಹಳ್ಳಿ.

ಮೈಸೂರು ಜಿಲ್ಲೆಯ ಹೆಗ್ಗಡ ದೇವನಕೋಟೆ ತಾಲ್ಲೂಕಿನ ಆಲನಹಳ್ಳಿಯಲ್ಲಿ 1947 ಏಪ್ರಿಲ್ 3ರಂದು ಜನಿಸಿದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿದ್ದವರು.

ಆಲನಹಳ್ಳಿಯವರು ವಿದ್ಯಾರ್ಥಿ ಜೀವನದಲ್ಲೇ ‘ಸಮೀಕ್ಷಕ’ ಎಂಬ ಸಾಹಿತ್ಯ ಪತ್ರಿಕೆಯನ್ನು ಆರಂಭಿಸಿದ್ದರು. ಸಾಹಿತ್ಯ ವಲಯದಲ್ಲಿ ಅದು ಎಲ್ಲೆಡೆ ಮೆಚ್ಚುಗೆ ಪಡೆದಿದ್ದರು. ಅಂದಿನ ಬಹುತೇಕ ಪ್ರಸಿದ್ಧ ಬರಹಗಾರರು ಇವರ ಪತ್ರಿಕೆ ಬರೆಯುತ್ತಿದ್ದರು. ಗೆಳೆಯರಲ್ಲಿ ಒತ್ತಾಯ ಮಾಡಿ ಹೇಗೆ ಬರೆಸುತ್ತಿದ್ದರು ಎಂದು ಪಿ ಲಂಕೇಶ್‌ ತಮ್ಮ ಕವಿತೆಯೊಂದರಲ್ಲಿ ಬರೆದಿದ್ದಾರೆ.

ಶ್ರೀಕೃಷ್ಣ ಆಲನಹಳ್ಳಿ ಅವರು 3 ಕವನ ಸಂಕಲನ, 3 ಕಾದಂಬರಿ, 3 ಕಥಾಸಂಕಲನ ಮತ್ತು 3 ಸಂಪಾದಿತ ಕೃತಿಗಳನ್ನ ರಚಿಸಿದ್ದಾರೆ. ಅದರಲ್ಲಿ ಇವರ ‘ಕಾಡು’, ‘ಪರಸಂಗದ ಗೆಂಡೆತಿಮ್ಮ’, ‘ಭುಜಂಗಯ್ಯನ ದಶಾವತಾರಗಳು’, ‘ಗೀಜಗನ ಗೂಡು’, ‘ಫೀನಿಕ್ಸ್’, ಕಥೆಗಳು ಸಿನಿಮಾ ಆಗಿವೆ.

‘ಕಾಡು’ ಕಾದಂಬರಿಗೆ ರಾಜ್ಯ ಪ್ರಶಸ್ತಿ’, ‘ಮಣ್ಣಿನ ಹಾಡು’ಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹೀಗೆ ಹಲವು ಪುರಸ್ಕಾರಗಳು ಸಂದಿವೆ.

ಇವರು ಜನವರಿ 4, 1989ರಲ್ಲಿ ನಿಧನರಾದರು. ಅವರು ಬದುಕಿದ್ದು ಕೇವಲ ನಲವತ್ತೆರಡು ವರ್ಷ ಆದರೆ ಕಡಿಮೆ ಬರಹದಲ್ಲೇ ತಮ್ಮ ಛಾಪನ್ನು ಸಾಹಿತ್ಯ ಲೋಕದಲ್ಲಿ ಬೀರಿದವರು ಶ್ರೀಕೃಷ್ಣ ಆಲನಹಳ್ಳಿ.

MORE FEATURES

'ಅಕ್ಕ'ನನ್ನು ಕುರಿತ ವಿಭಿನ್ನ ದೃಷ್ಟಿಕೋನದ ಕೃತಿ ‘ರೂಹಿಲ್ಲದ ಚೆಲುವ’

02-05-2024 ಬೆಂಗಳೂರು

ಈ ಕಾದಂಬರಿ ಅಕ್ಕಮಹಾದೇವಿಯ ಕಥನಕ್ಕೆ ಮಾತ್ರ ಸೀಮಿತಗೊಂಡಿಲ್ಲ. ಶರಣ ಧರ್ಮದ ಸಾಮಾಜಿಕ, ತಾತ್ವಿಕ, ವೈಚಾರಿಕ ಚಿಂತನೆಗಳನ್ನು...

ನಾವೇನನ್ನೊ ಕಳೆದುಕೊಂಡರೆ ಅದಕ್ಕಿಂತ ಮಹತ್ವದ್ದನ್ನು ಪಡೆದುಕೊಳುತ್ತೇವೆ

02-05-2024 ಬೆಂಗಳೂರು

‘ನನಗೀ ಪುಸ್ತಕದಲ್ಲಿ ಅರ್ಥವಾದ್ದದಾದರು ಏನು. ಪುನಃ ಪುಸ್ತಕದ ಹೆಸರು ಓದಿದೆ. " ನಿರ್ಗಮನ ". ಹೂ...! ...

ನಮ್ಮೊಳಗನ್ನು ಎಚ್ಚರಿಸುವ ಕೃತಿ ‘ದೇವನೂರ ಮಹಾದೇವ ಜೊತೆ ಮಾತುಕತೆ’

02-05-2024 ಬೆಂಗಳೂರು

'ಒಬ್ಬ ಜವಾಬ್ದಾರಿಯುತ ನಾಗರಿಕ, ಪ್ರಜ್ಞಾವಂತ ಬರಹಗಾರ- ತನ್ನ ಸಮಾಜದ ದುರಿತಗಳ ತುರ್ತಿಗೆ ಅನುಗಾಲವೂ ಹೇಗೆ ಸಂವೇದಿಸು...