ವೈಜ್ಞಾನಿಕ ಲೋಕಕ್ಕೆ ಸವಾಲಾಗಿರುವ ಕೃತಿ: ಎಸ್. ಎಸ್. ಹಳ್ಳೂರ


"ವೈಜ್ಞಾನಿಕ ಲೋಕಕ್ಕೆ ಸವಾಲಾಗಿರುವುದನ್ನು ಲೇಖಕರಾದ ಜಗದೀಶ ಹದ್ದಿಯವರು ಚೆನ್ನಾಗಿ ನಿರೂಪಿಸಿದ್ದಾರೆ. ತಿಮ್ಮಾಪೂರಿನ ಹನುಮಂತ ದೇವರ ಮಹತ್ವದ ಮಾಹಿತಿಗಳನ್ನು ಸಂಗ್ರಹಿಸುವುದು ಕಷ್ಟದ ಕೆಲಸ, ಅದನ್ನು ಪುಸ್ತಕ ರೂಪದಲ್ಲಿ ತರುವುದು ಇನ್ನೂ ಹೆಚ್ಚು ಕಷ್ಟದ ಕೆಲಸ, ಜಗದೀಶ ಹದ್ದಿಯವರು ಇಂಥ ಕ್ಲಿಷ್ಟಕರವಾದ ಕೆಲಸವನ್ನು ಬಹಳ ಶ್ರದ್ಧೆಯಿಂದ ಮಾಡಿದ್ದಾರೆ" ಎನ್ನುತ್ತಾರೆ ಸಾಹಿತಿ ಎಸ್. ಎಸ್. ಹಳ್ಳೂರ. ಅವರು ಲೇಖಕ ಜಗದೀಶ ಮಲ್ಲಪ್ಪ ಹದ್ಲಿ ಅವರ ಶ್ರೀಮಾರುತೇಶ್ವರ ಮಹಿಮೆ ಕೃತಿಗೆ ಬರೆದ ಮುನ್ನುಡಿ ನಿಮ್ಮ ಓದಿಗಾಗಿ...

ಭಾರತೀಯ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಹನುಮಂತ ದೇವರ ಮಹಿಮೆ ಬಹುತೇಕ ಶ್ರದ್ಧಾವಂತರನ್ನು ಆಕರ್ಷಿಸಿದೆ. ರಾಮಾಯಣದಲ್ಲಿ ರಾಮ, ಸೀತಾ, ಲಕ್ಷಣ, ಭರತ, ಶತೃಘ್ನ, ರಾವಣ, ಮಂಡೋದರಿ ಮುಂತಾದವರ ಪಾತ್ರ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದವನು ಹನುಮಂತನಾಗಿದ್ದಾನೆ.

ಮಾರುತಿಯ ಆತ್ಮಸ್ಥೆರ್ಯ, ಆತನ ಭಕ್ತಿ, ಶಕ್ತಿ, ಸಾಹಸ ಮೆಚ್ಚುವಂತಹದ್ದು. ಮಾರುತಿ ತನಗಾಗಿ ಏನನ್ನೂ ಕೇಳಲಿಲ್ಲ ಎಲ್ಲ ತನ್ನ ಸ್ವಾಮಿ ಶ್ರೀರಾಮಚಂದ್ರನಿಗಾಗಿ ಕೇಳುತ್ತಾನೆ. ಸ್ವಾಮಿ ಕಾರ್ಯಕ್ಕೆ ತನ್ನ ಪ್ರಾಣವನ್ನು ಕೊಡಲು ಸಿದ್ದನಾದವನು ಹನುಮಂತ, ತ್ಯಾಗವೇ ಅತನನ್ನು ದೇವರನ್ನಾಗಿಸಿತು. ಹೀಗಾಗಿ ಮಾರುತಿ ಭಾರತೀಯ ಆಧ್ಯಾತ್ಮ ಜೀವಿಗಳ ಹೃದಯ ಸಿಂಹಾಸನದಲ್ಲಿ ಅನವರತೂ ಚಿರಸ್ತಾಯಿಯಾಗಿದ್ದಾನೆ. ಈಗಲೂ ಮಾರುತಿ ದೇವಾಲಯ ಇರದ ಊರುಗಳೇ ಇಲ್ಲ ಎಂಬುದು ಜನಸಾಮಾನ್ಯರ ಮಾತು. ಈ ಎಲ್ಲ ವಿಷಯಗಳನ್ನು ಒಳಗೊಂಡಿರುವ ಕೃತಿಯೇ ತಿಮ್ಮಾಪೂರಿನ “ಶ್ರೀಮಾರುತೇಶ್ವರ ಮಹಿಮೆ” ಎಂದು ಹೇಳಬಹುದು. ಜಗದೀಶ ಹದ್ದಿಯವರು ಭಕ್ತಿ, ಶ್ರದ್ದೆಯಿಂದ ಈ ಕೃತಿಯನ್ನು ರಚಿಸಿದ್ದಾರೆ. ಇಲ್ಲಿಯ ಸಂಗ್ರಹಗಳು ಬಹಳ ವಿಶೇಷವಾದವುಗಳು, ಹೀಗಾಗಿ ಇದೊಂದು ಅಪರೂಪದ ಕೃತಿಯಾಗಿದೆ.

ಬಾಗಲಕೋಟೆ ಜಿಲ್ಲೆಯ, ಹುನಗುಂದ ತಾಲೂಕಿನ, ತಿಮ್ಮಾಪೂರಿನ ಹನುಮಂತ ದೇವರಿಗೆ ವಿಶಿಷ್ಠ ಪ್ರಾಚೀನ ಪರಂಪರೆ ಇದೆ. ಈ ಪರಂಪರೆಯ ವಿಷಯಗಳನ್ನು ಒಳಗೊಂಡುದಲ್ಲದೆ ಮಾರುತಿ ಮಹಿಮೆಯನ್ನು ಶ್ರದ್ಧಾಪೂರ್ವಕವಾಗಿ ದಾಖಲಿಸಿದ್ದುದು ಕೃತಿಯ ಮೌಲ್ಯತೆಯನ್ನು ಹೆಚ್ಚಿಸಿದೆ. ಈ ದಿವ್ಯ ಪರಂಪರೆ ಬಹಳ ಹಿಂದಿನಿಂದ ನಡೆದುಕೊಂಡು ಬಂದಿದೆ. ಈ ವಿಸ್ಮಯ ಪರಂಪರೆ ಈಗಲೂ ನಡೆಯುತ್ತಿರುವುದು ಆಶ್ಚರ್ಯವಾಗಿದೆ.

ಇದು ವೈಜ್ಞಾನಿಕ ಲೋಕಕ್ಕೆ ಸವಾಲಾಗಿರುವುದನ್ನು ಲೇಖಕರಾದ ಜಗದೀಶ ಹದ್ದಿಯವರು ಚೆನ್ನಾಗಿ ನಿರೂಪಿಸಿದ್ದಾರೆ. ತಿಮ್ಮಾಪೂರಿನ ಹನುಮಂತ ದೇವರ ಮಹತ್ವದ ಮಾಹಿತಿಗಳನ್ನು ಸಂಗ್ರಹಿಸುವುದು ಕಷ್ಟದ ಕೆಲಸ, ಅದನ್ನು ಪುಸ್ತಕ ರೂಪದಲ್ಲಿ ತರುವುದು ಇನ್ನೂ ಹೆಚ್ಚು ಕಷ್ಟದ ಕೆಲಸ, ಜಗದೀಶ ಹದ್ದಿಯವರು ಇಂಥ ಕ್ಲಿಷ್ಟಕರವಾದ ಕೆಲಸವನ್ನು ಬಹಳ ಶ್ರದ್ಧೆಯಿಂದ ಮಾಡಿದ್ದಾರೆ. ಇದರ ಫಲವಾಗಿ ಅಪರೂಪದ ಕೃತಿಯನ್ನು ಓದುಗರ ಕೈಗಿಟ್ಟಿರುವುದು ಶ್ಲಾಘನೀಯ ಕಾರ್ಯವಾಗಿದೆ.

ಈ ಕೃತಿಯನ್ನು ಹನುಮಂತ ದೇವರೇ ನನ್ನಿಂದ ಬರೆಯಿಸಿದ್ದಾನೆ ಎಂದು ಜಗದೀಶ ಹಡ್ಲಿ ಹೇಳಿದ್ದು ಭಕ್ತಿಯ ಪ್ರತೀಕವಾಗಿದೆ. ಈ ಕೃತಿಯಲ್ಲಿ ಮಾರುತೇಶ್ವರನ ಭಕ್ತಿ, ಸಾಹಸ ಹಾಗೂ ಆಧ್ಯಾತ್ಮಿಕ ವಿಷಯಗಳು ಚೆನ್ನಾಗಿ ಮೂಡಿ ಬಂದಿವೆ. ಆದ್ದರಿಂದ ಇದೊಂದು ಮೌಲ್ಯಯುಕ್ತ ಕೃತಿಯಾಗಿ ಹೊರಹೊಮ್ಮಿದೆ. ಈ ಅಪರೂಪದ ಪುಸ್ತಕ ಹೊರ ತಂದ ಅವರ ಶ್ರಮ ಸಾರ್ಥಕವಾಗಿದೆ.

ಈ ಪುಸ್ತಕದಲ್ಲಿ ತಿಮ್ಮಾಪೂರಿನ ಹನುಮಂತ ದೇವರ ಮಹಿಮೆಯನ್ನು ಚೆನ್ನಾಗಿ ನಿರೂಪಿಸುವಲ್ಲಿ ಜಗದೀಶ ಹದ್ದಿಯವರು ಯಶಸ್ವಿಯಾಗಿದ್ದಾರೆ. ಮಾರುತಿಯ ಪವಾಡಗಳು, ಹೇಳಿಕೆ, ಕಾಯಿ ಒಡೆಯುವ ಸಂಭ್ರಮ, ಹತಾರ ಸೇವೆ, ಮುಂತಾದವು ಇಂದಿಗೂ ನಡೆದುಕೊಂಡು ಬಂದುದು ಭಕ್ತಿಯ ಸಂಕೇತವಾಗಿದೆ. ಇವುಗಳನ್ನು ಬಹಳ ಚೆನ್ನಾಗಿ ತಿಮ್ಮಾಪೂರಿನ 'ಶ್ರೀಮಾರುತೇಶ್ವರ ಮಹಿಮೆ' ಕೃತಿಯಲ್ಲಿ ವಿಶ್ಲೇಷಿಸಿದ್ದಾರೆ. ಈ ಎಲ್ಲ ಮಹತ್ವದ ವಿಷಯಗಳ ಸಂಗ್ರಹದಿಂದ “ಶ್ರೀ ಮಾರುತೇಶ್ವರ ಮಹಿಮೆ” ಕೃತಿಯು ಭಕ್ತರ ಹೃದಯ ತಟ್ಟುವಂತಹ ಮಹತ್ವದ ಕೃತಿಯಾದೆ.

ತಿಮ್ಮಾಪೂರಿನ ಶ್ರೀ ಈ ಕೃತಿ ಕೇವಲ ತಿಮ್ಮಾಪೂರಿನ ಹನುಮಂತ ದೇವರಿಗೆ ಅಷ್ಟೇ ಸಿಮೀತವಾಗಿರದೆ ರಾಮಾಯಣದ ಹನುಮಂತ ಜನಸಾಮಾನ್ಯರ ಮನಸ್ಸಿನಲ್ಲಿ ಇರುವುದು ಏಕೆ? ಸೀತಾಮಾತೆಯನ್ನು ಹುಡುಕುವಲ್ಲಿ ಅವನು ತೋರಿಸಿದ ಸಾಹಸ, ಶ್ರದ್ಧೆಗಳನ್ನು ದಾಖಲಿಸಿದ್ದಾರೆ. ಇವು ಎಲ್ಲರ ಮನಸ್ಸಿನ ಮೇಲೆ ಗಾಢವಾದ ಭಕ್ತಿ ಆವರಿಸುವಂತೆ ಮಾಡುತ್ತದೆ.

- ಎಸ್. ಎಸ್. ಹಳ್ಳೂರ

MORE FEATURES

ದಂಗೆಯ ಬೀಜಗಳನ್ನು ಅರಸುತ್ತಾ..

24-12-2025 ಬೆಂಗಳೂರು

"ಅನಕ್ಷರಸ್ತರು, ಅಮಾಯಕರು ಮತ್ತು ಬಡವರಾಗಿದ್ದಆದಿವಾಸಿಗಳು ಅರಣ್ಯಗಳಲ್ಲಿ ಬದುಕುತ್ತಾ, ಅರಣ್ಯದ ಕಿರುಉತ್ಪನ್ನಗಳನ್ನ...

ಯಕ್ಷಗಾನ ಹಾಗೂ ನಾಟ್ಯಶಾಸ್ತ್ರವನ್ನು ತುಲನಾತ್ಮಕವಾಗಿ ನೋಡಲು ಇದೊಂದು ಪ್ರಾಥಮಿಕ ಪಠ್ಯ!

23-12-2025 ಬೆಂಗಳೂರು

ಯಕ್ಷಗಾನ ಹಾಗೂ ನಾಟ್ಯಶಾಸ್ತ್ರ ವನ್ನು ತುಲನಾತ್ಮಕವಾಗಿ ನೋಡಲು ಇದೊಂದು ಪ್ರಾಥಮಿಕ ಪಠ್ಯ ಎಂಬ ಬಿನ್ನಹವೊಂದನ್ನು ಹಾಸ್ಯಗಾರ...

ಪುರಾವೆಗಳಿಗಾಗಿ ಈ ಪುಸ್ತಕಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು ಒಳ್ಳೆಯದೇ..

23-12-2025 ಬೆಂಗಳೂರು

"ವೈಯಕ್ತಿಕವಾಗಿ ನನಗೆ ಸೃಜನಶೀಲ ಕೃತಿಗಳ ಬಗ್ಗೆ ಬರುವ ಅಧ್ಯಯನಪೂರ್ಣ ಗ್ರಂಥಗಳ ಬಗ್ಗೆ ಅಪಾರ ಗೌರವವಿದೆ. ಆದರೆ ನಾನು...