ಅನುಭಾವ ಸಾಹಿತ್ಯ ಕುರಿತು ವಿಚಾರ ಸಂಕಿರಣ

Date: 03-11-2019

Location: ಬೀದರ್‌


ಕನ್ನಡ ರಾಜ್ಯೋತ್ಸವದ ನಿಮಿತ್ತ ’ಅನುಭಾವ ಸಾಹಿತ್ಯ ಕುರಿತು ವಿಚಾರ ಸಂಕಿರಣ’ ಕಾರ್ಯಕ್ರಮ ಬೀದರ್‌ನಲ್ಲಿ ನಡೆಯಿತು. ನಾಡಿನ ಖ್ಯಾತ ಸಾಹಿತಿ ಬಸವರಾಜ ಸಬರದ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು "ಅರ್ಹ, ಅನರ್ಹ  ಟಿಪ್ಪು, ಸಾವರಕರ್ ಬಗ್ಗೆ ಚರ್ಚೆ ಪ್ರಸ್ತುತ ಅಲ್ಲ. ಅದರೂ ಈ ವಿಷಯಗಳ ಬಗ್ಗೆ ಸಮಾಜದಲ್ಲಿ ಗುಲ್ಲು ಎದ್ದಿದೆ. ಮಳೆ ಹಾವಳಿಗೆ ಜೀವ ಸಂಕಲು ನಶಿಸುತ್ತಿದೆ, ಅದರ ಬಗ್ಗೆ  ಯಾರೂ ಮಾತನಾಡುತ್ತಿಲ್ಲ, ಅನುಭಾವದ ಬಗ್ಗೆ ಗಮನ ಹರಿಸುತ್ತಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.. 

ಸಮಾರಂಭದ ಅಧ್ಯಕ್ಷತೆಯನ್ನು ಡಾ. ವಾಸುದೇವ ಅಗ್ನಿ ಹೊತ್ರಿ ವಹಿಸಿದ್ದರು. ಡಾ. ರಾಮಚಂದ್ರ ಗಣಾಪೂರ ಜಾನಪದದ ಕುರಿತು, ಸಾಹಿತಿ ರಮೇಶ ಬಿರಾದಾರ ತತ್ವಪದಗಳ ಕುರಿತು, ನಾಗಶೆಟ್ಟಿ ಪಾಟೀಲ ಗಾದಗಿ ವಚನ ಸಾಹಿತ್ಯ ಮತ್ತು ಪ್ರಿಯ ಲಂಜವಾಡಕರ್ ದಾಸ ಸಾಹಿತ್ಯ ಕುರಿತು ಮಾತನಾಡಿದರು. ವೇದಿಕೆಯಲ್ಲಿ ಸರಕಾರಿ ನೌಕರರ ಸಂಘದ ಅದ್ಯಕ್ಷರಾದ ರಾಜೇಂದ್ರ ಗಂದಗೆ, ಜಯರಾಜ ಖಂಡ್ರೆ ಶ್ರೀಮತಿ ವಿಸಜಿ ಸಂಜುಕುಮಾರ ಅತಿವಾಳೆ ಉಪಸ್ಥಿತರಿದ್ದರು ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಹಲವು ಸಾಧಕರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...