ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

Date: 17-12-2023

Location: ಬೆಂಗಳೂರು


ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳನ್ನು ಯುವ ಸಂಶೋದಕರಿಂದ ಆಹ್ವಾನಿಸಿದೆ.

ಯುವ ಸಂಶೋಧಕರನ್ನು ಗುರುತಿಸುವ ಮತ್ತು ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಗುಣಾತ್ಮಕ ಸಂಶೋದನೆಯನ್ನು ಪ್ರೋತ್ಸಾಹಿಸುವ ಆಶಯದಿಂದ ಮಹತ್ವದ 'ಕನ್ನಡ ಆರಯ್ಪು’ ಪುಸ್ತಕ ಸರಣಿಯನ್ನು ಬಂಡಾರ ಪ್ರಕಾಶನವು ತರುತ್ತಿದೆ.

ಈ ನಿಟ್ಟಿನಲ್ಲಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಯಾವುದೆ ವಿಶಯದ, ಕನ್ನಡದಲ್ಲಿ ಇರುವ 2023ರಲ್ಲಿ ಪಿಎಚ್.ಡಿ. ಪದವಿಯನ್ನು ಪಡೆದ ಸಂಶೋದನಾ ಪ್ರಬಂಧಗಳನ್ನು ಆಹ್ವಾನಿಸಿದೆ.

ಆಸಕ್ತರು ಸಂಶೋದನೆಯ ವಿಶಯ, ಉದ್ದೇಶ, ವಿದಾನ, ಮಹತ್ವ, ಪರಿವಿಡಿ ಮತ್ತು ಪಲಿತ ಇವುಗಳನ್ನು ಒಳಗೊಂಡ 500 ಪದಮಿತಿಯ ಸಾರಾಲೇಕವನ್ನು ಪದವಿ ಪ್ರಮಾಣಪತ್ರದ ಪ್ರತಿಯ ಜೊತೆಗೆ ಕಳಿಸಿಕೊಡಬೇಕು. ಆಯ್ದ ಸಾರಾಲೇಕಗಳ ಪೂರ್‍ಣಮಹಾಪ್ರಬಂದವನ್ನು ಮೇಲ್ ಮೂಲಕ ಕಳಿಸಲು ಕೇಳಲಾಗುವುದು ಎಂದು ಬಂಡಾರ ಪ್ರಕಶಾನದ ಪರಶುರಾಮ ಕೋಡಗುಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾರಾಲೇಕ ಸಲ್ಲಿಸಲು 2024 ಜನವರಿ 31 ಕೊನೆಯ ದಿನಾಂಕವಾಗಿದೆ. ಸಾರಾಲೇಕದ ಆಯ್ಕೆಗೋಶಣೆ 2023 ಪೆಬ್ರವರಿ 15ರಂದು ಮಾಡಲಾಗುತ್ತದೆ. ಪೂರ್‍ಣಮಹಾಪ್ರಬಂದ ಕಳಿಸಲು ಕೊನೆಯ ದಿನ 2024 ಪೆಬ್ರವರಿ 28 ಆಗಿದೆ. ಅಂತಿಮ ಆಯ್ಕೆಗೋಶಣೆಯ ದಿನಾಂಕ 2024 ಮಾರ್ಚ್ 31 ಆಗಿರುತ್ತದೆ.

ಜಾಲತಾಣದ ಲಿಂಕ್ : https://bandaraprakashana.com/kannadaaraypu/

ಇಮೇಲ್ ಮೂಲಕ ಮಾತನಾಡಲು: bandarakannadaaraypu@gmail.com

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...

ರಾಜಧರ್ಮ ಎನ್ನುವುದು ಪ್ರಜಾಧರ್ಮಕ್ಕಿಂತ ಭಿನ್ನವಾದುದು : ನಿತಿನ್ ಪೈ

02-12-2023 ಬೆಂಗಳೂರು

ಬೆಂಗಳೂರು: 12ನೇ ಬೆಂಗಳೂರು ಸಾಹಿತ್ಯ ಉತ್ಸವವು ಲಲಿತ್ ಅಶೋಕ ಹೋಟೆಲ್ ನ ಆವರಣದಲ್ಲಿ ಭರದಿಂದ ನಡೆಯುತ್ತಿದ್ದು , ಮೊದಲ ದಿ...