ಅಸಂಖ್ಯ ಸ್ತ್ರೀಯರ ನೈಜ ಚಿತ್ರಣ ‘ನೋವು ತುಂಬಿದ ಬದುಕು’

Date: 04-07-2020

Location: ಬೆಂಗಳೂರು


‘ಲೇಖಿಕಾ ಸಾಹಿತ್ಯ ವೇದಿಕೆ’ ಆಯೋಜಿಸಿದ್ದ ಪುಸ್ತಕಾವಲೋಕನದಲ್ಲಿ ಈ ಬಾರಿ ಲೇಖಕಿ ಡಿ. ಯಶೋದಾ ಅವರು ಬೇಬಿ ಹಾಲ್ದಾರ್‌ರ ಕನ್ನಡಾನುವಾದ ‘ನೋವು ತುಂಬಿದ ಬದುಕು’ ಕೃತಿ ಕುರಿತು ವಿಶ್ಲೇಷಿಸಿದರು. 

 “ತಮ್ಮ ಎದೆಯಗೂಡಿನಲ್ಲಿ ಬಚ್ಚಿಟ್ಟಿಕೊಂಡಿದ್ದ ನೂರಾರು ಹೆಣ್ಣಿನ ನೋವಿನ ಕತೆಗಳನ್ನು ಬೇಬಿ ಹಾಲ್ದಾರ್‌ ಅವರು ತಮ್ಮ ಪುಸ್ತಕದಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಪುಸ್ತಕ ಓದುತ್ತಿದ್ದರೆ, ಕಣ್ಣು ಒದ್ದೆಯಾಗದೇ ಇರುವುದಿಲ್ಲ. ನಮ್ಮ ಸುತ್ತಮುತ್ತಲಿನ ಇಂತಹ ಶೋಷಿತ ಮಹಿಳೆಯರು ಕಣ್ಣುಮುಂದೆ ಬರುತ್ತಾರೆ” ಎಂದರು.

“ತಾತೂಷ್ ಅಂತಹ ತಂದೆಯ ವಾತ್ಸಲ್ಯದ ವ್ಯಕ್ತಿ ನಮ್ಮ ಶೋಷಿತ ಮಹಿಳೆಯರಿಗೆ ಸಿಗಬೇಕು. ಈ ಪ್ರಮುಖ ವಿಷಯವನ್ನು ಬೇಬಿ ಹಾಲ್ದಾರ್ ಅವರು ನಮಗೆ ಪರೋಕ್ಷವಾಗಿ ತಿಳಿಸಿದ್ದು ಪುಸ್ತಕ ಪ್ರೀತಿ. ಇದೇ ಅವರ ಬದುಕು ಸುಧಾರಣೆಯಾಗಲು ಕಾರಣವಾಯಿತು. ಹಾಗಾಗಿ ಸಣ್ಣ ಸಣ್ಣ ವಿಷಯಕ್ಕೆ ಹತಾಶರಾಗುವ ಪ್ರತಿ ಮಹಿಳೆಯರು ಈ ಪುಸ್ತಕ  ಓದಲೇಬೇಕಾದುದು ” ಎಂದು ಕೃತಿಯ ಮಹತ್ವವನ್ನು ತಿಳಿಸಿದರು. 

 

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...