ಭಾರತದಲ್ಲಿ ವಿಜ್ಞಾನ ಪ್ರಗತಿ, ಬದಲಾಗದ ಜಾತಿ: ವಿಷಾದ

Date: 20-01-2020

Location: ಬೆಂಗಳೂರು


ವೈಜ್ಞಾನಿಕವಾಗಿ ಈ ದೇಶ ಎಷ್ಟೇ ಪ್ರಮಾಣದಲ್ಲಿ ಮುಂದುವರಿದಿದ್ದರೂ ಮೇಲ್ವರ್ಗದವರ  ಜಾತಿಹೀನ ಮನಸ್ಥಿತಿ ಇನ್ನೂ ಬದಲಾಗಿಲ್ಲ. ಈ ಭಾವನೆ ತೊಡೆದು ಹಾಕುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿದ್ದರೂ ಫಲಿತಾಂಶ ಶೂನ್ಯ ಎಂದು ಚಿಂತಕ ಮೂಡ್ನಾಕೂಡು ಚಿನ್ನಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಬೆಂಗಳೂರಿನ ರವೀಂದ್ರಕಲಾಕ್ಷೇತ್ರದಲ್ಲಿ ಸಾಹಿತಿ ಮಂಜು ಕೋಡಿಉಗನೆ ಅವರ 'ಚಪ್ಪೋಡು' ಕಾದಂಬರಿ ಬಿಡುಗಡೆ ಮಾಡಿ ಮಾತನಾಡಿದರು. ಕ್ಷೌರ, ನೀರು, ದೇವಸ್ಥಾನ ಈ ಮೂರು ವಿಷಯಗಳ ಹಿನ್ನೆಲೆಯಲ್ಲಿ ಪ್ರಶ್ನೆ ಉದ್ಭವಿಸಿದಾಗ ಸಂಘರ್ಷಗಳು ಉಂಟಾಗುತ್ತದೆ. ಈ ಸಮಸ್ಯೆಗೆ ಸಾವಿರಾರು ವರ್ಷಗಳಿಂದಲೂ ಪರಿಹಾರ ಹುಡುಕಿದರೂ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಮಂಜು ಕೋಉಗನೆರವರ ಕಾದಂಬರಿ ಕಾನೂನಾತ್ಮಕ ಪರಿಹಾರ ಹುಡುಕಬಹುದಾದ ಹೊಸ ತಾತ್ವಿಕ ಆಯಾಮವನ್ನು ನೀಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾದಂಬರಿ ಕುರಿತು ಚಿಂತಕ ಎಲ್ ಎನ್ ಮುಕುಂದರಾಜು ಮಾತನಾಡಿದರು. ಡಾ. ಹೆಚ್ ಎಲ್ ಪುಷ್ಪ,  ಹೆಚ್ ಆರ್ ಸ್ವಾಮಿ, ನಾಗಮಲ್ಲಪ್ಪ ಭಾಗವಹಿಸಿದ್ದರು.

 

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...