ಡಿಜಿಟಲ್ ಜಗತ್ತಿನಲ್ಲಿ ಒರಿಜಿನಲ್‌ನ ಹುಡುಕಾಟ – ಥಾಮಸ್ ರಫ್

Date: 08-06-2021

Location: ಬೆಂಗಳೂರು


ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ 'ಈಚೀಚೆ, ಇತ್ತೀಚೆ'. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಈ ಬಾರಿ ಜರ್ಮನಿ ಮೂಲದ ಫೊಟೋಗ್ರಫಿ ಕಲಾವಿದ ಥಾಮಸ್ ರಫ್ ಅವರ ಕಲಾಬದುಕಿನ ಕುರಿತು ಬರೆದಿದ್ದಾರೆ.

ಕಲಾವಿದ: ಥಾಮಸ್ ರಫ್  (Thomas Ruff) 
ಜನನ: 10 ಫೆಬ್ರವರಿ, 1958 
ಶಿಕ್ಷಣ: ಅಕಾಡೆಮಿ ಆಫ್ ಆರ್ಟ್, ಡಸೆಲ್‌ಡಾರ್ಫ್, ಜರ್ಮನಿ 
ವಾಸ: ಡಸೆಲ್‌ಡಾರ್ಫ್, ಜರ್ಮನಿ 
ಕವಲು: ಫೊಟೋಗ್ರಫಿ 
ವ್ಯವಸಾಯ:  ಫೊಟೋಗ್ರಫಿ

ಥಾಮಸ್ ರಫ್ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:  

ಫೊಟೋಗ್ರಫಿಯ ಮೂಲ ಸ್ವರೂಪ, ಸಂರಚನೆ, ಬಳಕೆ, ಅರ್ಥಗಳನ್ನೇ ಪ್ರಶ್ನಿಸುವ ಥಾಮಸ್ ರಫ್ ಅವರ ಫೊಟೊಗ್ರಾಫ್‌ಗಳು ಈಗಾಗಲೇ ಇರುವ ಫೊಟೋಗ್ರಾಫ್‌ಗಳ ತಿದ್ದಿದ ರೂಪಾಂತರಿತ ಹೊಸ “ಒರಿಜಿನಲ್””ಗಳು. ಅನಲೋಗ್ ವಿಧಾನದಿಂದ ಡಿಜಿಟಲ್ ವಿಧಾನಕ್ಕೆ ಫೊಟೋಗ್ರಫಿ ಬದಲಾದ ಬಳಿಕ, ಪೋಸ್ಟ್ ಡಿಜಿಟಲ್ ಜಗತ್ತಿನಲ್ಲಿ ಚಿತ್ರಗಳ ಮಹಾಪೂರದಲ್ಲಿ ಯಾವುದು ಒರಿಜಿನಲ್ ಎಂಬುದು ಅವರೆತ್ತಿರುವ ಮುಖ್ಯವಾದ ಪ್ರಶ್ನೆಗಳಲ್ಲಿ ಒಂದು. 

“ತಿದ್ದಿದ ಮತ್ತು ಮರುಕಲ್ಪಿತ ಫೊಟೋಗ್ರಾಫ್‌ಗಳ ಮಾಸ್ಟರ್” ಎಂದೇ ಗುರುತಾಗಿರುವ ಥಾಮಸ್ ರಫ್ ಕಳೆದ ನಾಲ್ಕು ದಶಕಗಳಲ್ಲಿ ಇಂಟರ್ನೆಟ್ -ಸೋಷಿಯಲ್ ಮೀಡಿಯಾ ಯುಗದ ಪ್ರಮುಖ ಭಾಗವೆಂದೇ ಗುರುತಾಗಿರುವ ಫೊಟೊಗ್ರಫಿ ತಂತ್ರಜ್ಞಾನದಲ್ಲಿ ಆಗಿರುವ ಬದಲಾವಣೆಗಳನ್ನು ಗಮನಿಸುತ್ತಲೇ, ಅದರ ಕಲಾತ್ಮಕತೆಯ ಗುಣಮಟ್ಟವನ್ನು ಪ್ರಶ್ನಿಸುತ್ತಾರೆ ಮತ್ತು ಹೊಸ ಸಾಧ್ಯತೆಗಳತ್ತ ಹೊರಳುತ್ತಾರೆ. “ನನ್ನ ಸಹೋದ್ಯೋಗಿಗಳು ಮಾಡುವಂತೆ ಫೊಟೋಗ್ರಫಿಯ ಮೂಲಕ ವ್ಯಕ್ತಿಯ ಮಾನಸಿಕತೆಯ ಬಿಂಬವನ್ನು ಸೆರೆಹಿಡಿಯುವ ಪ್ರಯತ್ನ ಟೊಳ್ಳು ಎಂದು ನನಗನ್ನಿಸುತ್ತದೆ.  ಅವರು ವ್ಯಕ್ತಿಯ ಗುಣಲಕ್ಷಣಗಳನ್ನು ನೆರಳು-ಬೆಳಕಿನಲ್ಲಿ ಸೆರೆ ಹಿಡಿಯಲು ಪ್ರಯತ್ನಿಸುತ್ತಾರೆ. ನನಗೆ ಅದರಲ್ಲಿ ನಂಬಿಕೆ ಇಲ್ಲ. ನಾನು ಚಿತ್ರದಲ್ಲಿ ಕೇವಲ ಮೇಲ್ಮೈಯನ್ನು ಮಾತ್ರ ತೋರಿಸಬಲ್ಲೆ. ಅದನ್ನು ದಾಟಿ ಕಾಣಿಸುವುದೆಲ್ಲ ಫೊಟೊಗ್ರಾಫರ್‌ನ ಪ್ರಯತ್ನ ಅಲ್ಲ, ಬರಿಯ ಚಾನ್ಸ್” ಎನ್ನುತ್ತಾರವರು.  

ತನ್ನ ಗುರುದಂಪತಿ ಬರ್ನ್ಡ್ ಮತ್ತು ಹಿಲ್ಲಾ ಬೇಕರ್ ಅವರ ಸ್ಟ್ರೇಟ್ ಫೊಟೋಗ್ರಫಿ ತಂತ್ರದ ಮುಂದುವರಿಕೆಯಾಗಿ ಅಭಿವ್ಯಕ್ತಿ ರಹಿತ ಪಾಸ್‌ಪೋರ್ಟ್ ಫೊಟೋಗ್ರಾಫ್ ಸ್ವರೂಪದ ಚಿತ್ರಗಳ ಸರಣಿ Portraits (1981-85) ಅವರ ಮೊದಲ ಕಾನ್ಸೆಪ್ಚುವಲ್ ಫೊಟೋಗ್ರಫಿ ಸರಣಿ. ಅದಕ್ಕೆ ಪರ-ವಿರುದ್ಧ ಎರಡೂ ಸ್ವರೂಪದ ವಿಮರ್ಶೆಗಳು ಬಂದಿದ್ದವು. 70ರ ದಶಕದ ಜರ್ಮನಿಯಲ್ಲಿ ಪೊಲೀಸರು ತಮ್ಮ ನಿಗಾ ವ್ಯವಸ್ಥೆಯ ಭಾಗವಾಗಿ ತೆಗೆಯುತ್ತಿದ್ದ ಚಿತ್ರಗಳ ಪ್ರೇರಣೆಯಿಂದ ತೆಗೆದ ಚಿತ್ರಗಳವು.  ಬಾಲ್ಯದಲ್ಲಿ ನ್ಯಾಷನಲ್ ಜಿಯಾಗ್ರಫಿ ಮ್ಯಾಗಝೀನಿಗೆ ಚೆಂದದ ಚಿತ್ರಗಳನ್ನು ತೆಗೆದುಕೊಡಬೇಕು ಎಂಬ ಆಸಕ್ತಿಯೊಂದಿಗೆ ಫೊಟೋಗ್ರಫಿ ಜಗತ್ತಿಗೆ ಬಂದ ರಫ್, ತಾನು “ಅತ್ಯಂತ ಬೋರಿಂಗ್ ಕೈಗಾರಿಕಾ ಫೊಟೋಗ್ರಾಫ್”ಗಳು ಎಂದು ಅಂದುಕೊಂಡಿದ್ದ ಚಿತ್ರಗಲನ್ನು ತೆಗೆಯುತ್ತಿದ್ದ ತನ್ನ ಗುರುದಂಪತಿ ಜೊತೆ ಸೇರಿದ ಬಳಿಕ ತಾನೆಲ್ಲಿ ಹಾದಿ ತಪ್ಪಿದ್ದೆ ಎಂದು ಕಂಡುಕೊಂಡರು.

ಚಿಲಿಯ ಯುರೋಪಿಯನ್ ಸದರ್ನ್ ಆಬ್ಸರ್ವೇಟರಿ ಮತ್ತಿತರರು ಈಗಾಗಲೇ ತೆಗೆದ ಆಕಾಶದ ಚಿತ್ರಗಳನ್ನು, ಗಲ್ಫ್ ವಾರ್ ಕಾಲದ ಆಕಾಶದ ಚಿತ್ರಗಳನ್ನು ಬಳಸಿಕೊಂಡು ತನ್ನ ಒರಿಜಿನಲ್ ಚಿತ್ರಗಳನ್ನು ರಚಿಸುವ ಮೂಲಕ Sterne, Nacht ಸರಣಿಯನ್ನೂ, (1989-95) ಬಳಿಕ ಸುದ್ದಿಪತ್ರಿಕೆಗಳ ಕ್ಲಿಪ್ಪಿಂಗ್ ಗಳನ್ನು ಬಳಸಿಕೊಂಡು  Zeitungsfotos ಸರಣಿಯನ್ನೂ ಅವರು ರಚಿಸಿದರು. 

ಇಂಟರ್ನೆಟ್ ಯುಗದ ಆರಂಭಿಕ ಹಂತದ ಪಾರ್ನೊಗ್ರಫಿ ಚಿತ್ರಗಳನ್ನು ಬಳಸಿಕೊಂಡು “Nudes” (2003-2009) ಸರಣಿಯಂತಹ ಹಲವಾರು ಪ್ರಯೋಗಗಳನ್ನು ಮಾಡಿದರು. ಮ್ಯಾಗ್ನೆಟಿಕ್ ಗೆರೆಗಳನ್ನು 3Dಸಾಫ್ಟ್‌ವೇರ್ ಬಳಸಿ ರೂಪಿಸಿಕೊಂಡು ಅವನ್ನು ಮತ್ತೆ ತನ್ನ ಕಲಾತ್ಮಕ ಹಸ್ತಕ್ಷೇಪದಿಂದ “ಒರಿಜಿನಲ್” ಆಗಿ ರೂಪಿಸಿದ್ದನ್ನು “ಫೊಟೊಶಾಪ್‌ನ ಫೊಟೋಶಾಪ್” ಎಂದದ್ದಿದೆ. ಈ ರೀತಿಯ ಅವರ ಹುಡುಕಾಟಗಳು ಇಂದು ಸಮಕಾಲೀನ ಫೊಟೊಗ್ರಫಿಯಲ್ಲಿ ಮಹತ್ವದ ಹುಡುಕಾಟಗಳೆಂದು ಪರಿಗಣಿತವಾಗಿವೆ.  

ತನ್ನ ಗುರು ಬೇಕರ್ ಅವರು ಹೇಳಿದ “ನೀವು ಒಂದು ಮೀಡಿಯಂನಲ್ಲಿ ಕೆಲಸ ಮಾಡಿದಾಗ ಆ ಮೀಡೀಯಂ ನಿಮ್ಮ ಕಲಾಕೃತಿಯಲ್ಲಿಯೇ ಬಿಂಬಿತವಾಗಬೇಕು ಅದು ಪ್ರತ್ಯೇಕವಾಗಿ ನಿಲ್ಲಬಾರದು” ಎಂಬುದನ್ನು ಉಲ್ಲೇಖಿಸುವ ರಫ್, ನನಗೆ ಗೊತ್ತಿರದ ಹೊಸ ದೃಶ್ಯ ಮಾಧ್ಯಮ-ತಂತ್ರಜ್ಞಾನಗಳು ನನ್ನ ಕುತೂಹಲ ಕೆರಳಿಸುತ್ತವೆ. ಅವುಗಳ ಸಾಧ್ಯತೆಯ ಅನ್ವೇಷಣೆಯಲ್ಲಿ ತಾನು ತೊಡಗಿಕೊಳ್ಳುತ್ತೇನೆ ಎನ್ನುತ್ತಾರೆ. 

ಇಂದಿನ ಮೊಬೈಲ್ ಚಿತ್ರಗಳ ಬಗ್ಗೆ ಅವರು ಹೇಳುವುದು ಕುತೂಹಲಕರವಾಗಿದೆ.  
“I think people are trying to stay in the present. To avoid looking at the past. They have to make photographs all the time, and they are all stored on the iPhone but they don’t look at them. It’s just making the photograph, showing it to a friend on Instagram or whatever, and then it’s forgotten. And they have to do such a lot of photographs because they want to stay in the present, and of course, they just picked the wrong medium.”     

ಥಾಮಸ್ ರಫ್ ಅವರ ಕುರಿತ ಡಾಕ್ಯುಮೆಂಟರಿ :  

THOMAS RUFF / photographs 1979-2011 from Institut für Kunstdokumentation on Vimeo. 

ಥಾಮಸ್ ರಫ್ ಅವರ ಉಪನ್ಯಾಸ: 

ಚಿತ್ರ ಶೀರ್ಷಿಕೆಗಳು:
ಥಾಮಸ್ ರಫ್ ಅವರ 9-11 World Trade Center , (2004) 

ಥಾಮಸ್ ರಫ್ ಅವರ 17h 15m, -30°, (1990) 

ಥಾಮಸ್ ರಫ್ ಅವರ Interieur 6B, (1979) 

ಥಾಮಸ್ ರಫ್ ಅವರ ma.r.s. 01_III, (2011) 

ಥಾಮಸ್ ರಫ್ ಅವರ Nacht 11 II, (1992) 

ಥಾಮಸ್ ರಫ್ ಅವರ negonus_02(2014) 

ಥಾಮಸ್ ರಫ್ ಅವರ Nude ap14, 2001 

ಥಾಮಸ್ ರಫ್ ಅವರ nudes dr02, (2011) 

ಥಾಮಸ್ ರಫ್ ಅವರ Porträt (L Coelevy), (1988 ) 

ಥಾಮಸ್ ರಫ್ ಅವರ r.phg.11_III (2014) 

ಥಾಮಸ್ ರಫ್ ಅವರ Substrat 35I, C print (2007)

ಈ ಅಂಕಣದ ಹಿಂದಿನ ಬರೆಹಗಳು: 
ಕಲೆ ಜಗತ್ತನ್ನು ಬದಲಾಯಿಸಲೇ ಬೇಕೆಂದಿಲ್ಲ- ಫಿಯೊನಾ ಹಾಲ್

ಜಾಗತೀಕರಣದ ಆಟಗಳ ಬೆನ್ನಟ್ಟಿರುವ ಇಂಕಾ ಶೋನಿಬೇರ್

ಅರ್ಥವಂತಿಕೆಗಾಗಿ ಅರ್ಥ ಕಳೆದುಕೊಳ್ಳಬೇಕೆಂಬ- ಗು ವೆಂಡಾ

ಗದ್ದಲದ ಲೋಕದಲ್ಲಿ ಒಳಗಿನ ಪಿಸುಮಾತು- ನಿಯೊ ಆವ್

ಕಲೆ ಒಂದು ಉತ್ಪನ್ನವಲ್ಲ ಪ್ರಕ್ರಿಯೆ- ನಾಮನ್ ಬ್ರೂಸ್

‘ಇನ್ಫಾರ್ಮೇಷನ್ ಸೂಪರ್ ಹೈವೇ’ ಹೊಳಹು- ನಾಮ್ ಜುನ್ ಪಾಯಿಕ್

ಬದುಕಿನ ಮುಜುಗರಗಳಿಗೆ ಹೊರದಾರಿ- ಸ್ಟೀವ್ ಮೆಕ್ವೀನ್

ಅವ್ಯಕ್ತವನ್ನು ವ್ಯಕ್ತದಿಂದ ವಿವರಿಸುವ ರೀಚಲ್ ವೈಟ್‌ರೀಡ್

ಒಪ್ಪಿತ ನೈತಿಕತೆಯ ದ್ವಂದ್ವಗಳ ಶೋಧ - ಸಾರಾ ಲೂಕಸ್

ತನ್ನೊಳಗಿನ “ತೋಳ”ತನಕ್ಕೆ ಭಾವಕೊಟ್ಟ- ಕಿಕಿ ಸ್ಮಿತ್

“ನಾನು ಪ್ರೀ-ಪಿಕ್ಸೆಲ್”- ಚಕ್ ಕ್ಲೋಸ್

ಕಲೆ ಎಂಬುದು ಪ್ರಶ್ನಿಸುವ ಕಲೆ- ಸ್ಯು ಬಿಂಗ್

ವೀಡಿಯೊ ಆರ್ಟ್ ಕಾಲದ ’ರೆಂಬ್ರಾಂಟ್’

ದೇಹಕ್ಕೆ ವಿಸ್ತರಣೆ; ಯಂತ್ರಗಳಿಗೆ ಆತ್ಮ- ರೆಬೆಕಾ ಹಾರ್ನ್

ಪಾಪ್ ಆರ್ಟಿಗೊಬ್ಬ ಗಾಡ್‌ಫಾದರ್ – ಪೀಟರ್ ಬ್ಲೇಕ್

ಬಾರ್ಬರಾ ಕ್ರುಗರ್‌ - ಘೋಷಣೆಯೊಂದು ಆರ್ಟಾಗುವ ಮ್ಯಾಜಿಕ್

ಭಾವನೆಯಿಂದ ವರ್ತನೆಯೆಡೆಗೆ -ಒಲಫರ್ ಎಲಿಯಾಸನ್

ಚರಿತ್ರೆಯ ನೆರಳಿನ ಬಂಡಾಯಗಾರ್ತಿ - ಕಾರಾ ವಾಕರ್

“ರಪ್ಪೆಂದು… ಮುಖಕ್ಕೆ ತಣ್ಣೀರು ರಾಚುವ ಸಾಂಟಿಯಾಗೊ ಸಿಯೆರಾ”

“ಪಾತ್ರಾನುಸಂಧಾನ ಮತ್ತು ಅದರಿಂದಾಚೆ: ಸಿಂಡಿ ಶೆರ್ಮನ್”

ಬ್ರಿಟಿಷ್ ಕಲಾಜಗತ್ತಿನ ’ಬ್ಯಾಡ್ ಗರ್ಲ್’ –ತ್ರೇಸಿ ಎಮಿನ್

ಕಲೆಯ ಬೀದಿಯಲ್ಲೊಬ್ಬ 'ಬೆಳದಿಂಗಳ ಬಾಲೆ' - ಬಾಂಕ್ಸಿ

“ಕಾನ್ಸೆಪ್ಚುವಲ್ ಆರ್ಟ್‌ನ ಪಿತಾಮಹ ಮಾರ್ಸೆಲ್ ದುಷಾಮ್ ”

“ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದನೇ; ಸಮಾಜವೇ ಶಿಲ್ಪ”

“ಅಮೂರ್ತದಿಂದ ನವಮೂರ್ತದತ್ತ – ಭಾರತವೇ ಸ್ಪೂರ್ತಿ”

“ಕಲಾಲೋಕದ ಡೊನಾಲ್ಡ್ ಟ್ರಂಪ್ – ಜೆಫ್ ಕೂನ್ಸ್”

“ಸಿಗ್ಮಾರ್ ಪೋಲ್ಕ್ ಎಂಬ ರಸಶಾಸ್ತ್ರಿಗೆ ಕಲೆಯೂ ವಿಮರ್ಶೆಯೇ”

“ಒಳಗಣ ಅನಂತ ಮತ್ತು ಹೊರಗಣ ಅನಂತ”

“ಪ್ಯಾಕ್ ಅಪ್“ – ಕ್ರಿಸ್ತೊ ಮತ್ತು ಜೇನ್ ಕ್ಲೋದ್ ದಂಪತಿ ಶೈಲಿ

ಜಗತ್ತಿಗೊಬ್ಬಳು ಸೂಜಿಮಲ್ಲಿ – ಕಿಮ್ ಸೂ ಜಾ

ವ್ಯಗ್ರತೆಯ ಒಳಹರಿವುಗಳ ಶೋಧ – ಮೋನಾ ಹಾಟಮ್

ಪರ್ಫಾರ್ಮಿಂಗ್ ಆರ್ಟ್ ನ ಹಿರಿಯಜ್ಜಿ – ಮಾರಿನಾ ಅಬ್ರಾಮೊವಿಚ್

ಸೈ ಗು-ಚಾಂಗ್ ಎಂಬ ’ಬೆಂಕಿಚೂರ್ಣ’

ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ

ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್

ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ

ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ

ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ

 

 

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...