ಗುಲಬರ್ಗಾ ವಿಶ್ವವಿದ್ಯಾಲಯದಿಂದ ಆರು ಜಿಲ್ಲೆಗಳ ಲೇಖಕರಿಂದ ಗೌರವಧನ ಪ್ರಶಸ್ತಿಗೆ ಪುಸ್ತಕ ಆಹ್ವಾನ

Date: 10-07-2020

Location: ಕಲಬುರಗಿ


ಹೈದ್ರಾಬಾದ ಕರ್ನಾಟಕ ಪ್ರದೇಶದ ವ್ಯಾಪ್ತಿಯ ಕಲಬುರಗಿ, ಯಾದಗಿರ, ಬೀದರ, ರಾಯಚೂರ ಹಾಗೂ ಕೊಪ್ಪಳ, ಬಳ್ಳಾರಿ ಜಿಲ್ಲೆಗಳ ಲೇಖಕರಿಗೆ ಪ್ರಶಸ್ತಿ ನೀಡುವ ಸಲುವಾಗಿ, ಗುಲಬರ್ಗಾ ವಿಶ್ವವಿದ್ಯಾಲಯವು ಪ್ರತಿ ವರ್ಷದಂತೆ, ಈ ವರ್ಷವೂ ಆರು ಜಿಲ್ಲೆಗಳ ಲೇಖಕರಿಂದ ಪುಸ್ತಕಗಳನ್ನು ಆಹ್ವಾನಿಸಿದೆ. ಕನ್ನಡದ ಐದು, ಕನ್ನಡ ಜಾನಪದ, ಹಿಂದಿ, ಮರಾಠಿ, ಉರ್ದು, ಇಂಗ್ಲಿಷ, ತೆಲಗು ಮತ್ತು ಅನುವಾದ ಸಾಹಿತ್ಯ ಹಾಗೂ ಸಮಾಜ ವಿಜ್ಞಾನದ ಒಂದು ಪುಸ್ತಕ ಸೇರಿದಂತೆ ಪ್ರತಿ ಪುಸ್ತಕದ ಲೇಖಕರಿಗೆ (ಒಟ್ಟು ಹದಿಮೂರು) ತಲಾ ಐದು ಸಾವಿರ ರೂಪಾಯಿಗಳ ಗೌರವಧನ ನೀಡಲಾಗುವುದು.

ನಿಯಮಗಳು : 

  • ಈ ಗೌರವಧನ ಪ್ರಶಸ್ತಿಗಾಗಿ ಪುಸ್ತಕ ಕಳಿಸುವ ಲೇಖಕರು ಕನಿಷ್ಠ 5 ವರ್ಷಗಳಿಂದ ಈ ಪ್ರದೇಶದಲ್ಲಿ ವಾಸ ಮಾಡಿರಬೇಕು. 

  • ಪುಸ್ತಕಗಳ ಪ್ರಕಾಶಕರು ಯಾವ ಭಾಗದವರೇ ಆಗಿರಬಹುದು.

  • ಪುಸ್ತಕಗಳ ಮೊದಲ ಮುದ್ರಣವನ್ನು ಮಾತ್ರ ಪರಿಗಣಿಸಲಾಗುವುದು

  • ಭಾರತೀಯ ಯಾವುದೇ ಭಾಷೆಯಿಂದ ಕನ್ನಡಕ್ಕೆ ಅನುವಾದವಾದ ಗೊಂಡ ಸ್ವತಂತ್ರ ಸಾಹಿತ್ಯ ಕೃತಿಯಾಗಿರಬೇಕು.

  • ಪುಸ್ತಕ ಕನಿಷ್ಠ 100 ಪುಟವಿರಬೇಕು. 

  • ಕವನ ಸಂಕಲನ ಕನಿಷ್ಠ 70 ಪುಟಗಳನ್ನೊಳಗೊಂಡಿರಬೇಕು. 

  • ಪಿಎಚ್.ಡಿ. ಪ್ರಬಂಧ, ಬೇರೆ ಬೇರೆ ಲೇಖಕರ ಲೇಖನಗಳ ಸಂಪಾದನೆ ಸಂಗ್ರಹ ಗ್ರಂಥಗಳನ್ನು ಪರಿಗಣಿಸಲಾಗುವುದಿಲ್ಲ.

  • ಕನ್ನಡ, ಜಾನಪದ, ವಿಮರ್ಶೆ ಮತ್ತು ಸಂಶೋಧನೆಗೆ ಸಂಬಂಧಿಸಿದ ಕೃತಿಗಳು ಸ್ವತಂತ್ರವಾಗಿರಬೇಕು, ಸಂಗ್ರಹಗಳಾಗಿರಬಾರದು.

  • ಪುಸ್ತಕಗಳ ಮೇಲೆ 2019ನೇ ಸಾಲಿನ ಗೌರವಧನ ಯೋಜನೆಗಾಗಿ ಎಂದು ಸ್ಪಷ್ಟವಾಗಿ ಬರೆದಿರಬೇಕು.

  • ಒಮ್ಮೆ ಪ್ರಶಸ್ತಿ ಪಡೆದವರು ಕನಿಷ್ಠ ಮೂರು ವರ್ಷಗಳವರೆಗೆ ಅರ್ಜಿ ಸಲ್ಲಿಸುವಂತಿಲ್ಲ.

  • ಗೌರವಧನ ಅಪೇಕ್ಷಿಸುವ ಲೇಖಕರು 2019 ಜನೆವರಿಯಿಂದ 31 ಡಿಸೆಂಬರ್ 2019ರ ಅವಧಿಯೊಳಗೆ ಪ್ರಕಟವಾದ ಪುಸ್ತಕದ 5 (ಐದು) ಪ್ರತಿಗಳನ್ನು 20/08/2020 ರೊಳಗಾಗಿ ನಿರ್ದೇಶಕರು, ಪ್ರಸಾರಾಂಗ ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ. ಈ ವಿಳಾಸಕ್ಕೆ ರಜಿಸ್ಟರ್ ಅಂಚೆಯ ಮೂಲಕ ಇಲ್ಲವೇ ಖುದ್ದಾಗಿ ಬಂದು ತಲುಪಿಸಬೇಕು. ಹೆಚ್ಚಿನ ಮಾಹಿತಿಗಾಗಿ ಪ್ರಸಾರಾಂಗದ ನಿರ್ದೇಶಕರ ಸಹಾಯಕರನ್ನು ಸಂಪರ್ಕಿಸಬಹುದು. ಮೊಬೈಲ್ ಸಂಖ್ಯೆ +91 9880088643.

ಚಿತ್ರಕಲಾವಿದರಿಗೆ ಗೌರವಧನ ಯೋಜನೆ

ಹೈದ್ರಾಬಾದ ಕರ್ನಾಟಕ ಪ್ರದೇಶಕ್ಕೆ ಒಳಪಟ್ಟ ಕಲಬುರಗಿ, ಯಾದಗಿರ, ಬೀದರ, ರಾಯಚೂರು ಹಾಗೂ ಕೊಪ್ಪಳ ಬಳ್ಳಾರಿ ಈ ಆರು ಜಿಲ್ಲೆಗಳಲ್ಲಿ ವಾಸವಾಗಿರುವ ಚಿತ್ರಕಲೆ ಹಾಗೂ ಶಿಲ್ಪ ಕಲಾವಿದರಿಗೆ ಪ್ರತಿ ವರ್ಷ ಗುಲಬರ್ಗಾ ವಿಶ್ವವಿದ್ಯಾಲಯವು ರಾಜ್ಯೋತ್ಸವ ಆಚರಣೆಯ ಅಂಗವಾಗಿ ಗೌರವಧನ ನೀಡುತ್ತ ಬಂದಿದೆ.

2019-2020ನೇ ಸಾಲಿನಲ್ಲಿ ಚಿತ್ರಕಲಾ ಪ್ರದರ್ಶನ ಏರ್ಪಡಿಸಿ ಆಯ್ಕೆಯಾದ ಮೂರು ಚಿತ್ರ ಎರಡು ಶಿಲ್ಪ ಕಲಾಕೃತಿಗಳಿಗೆ ತಲಾ ಐದು ಸಾವಿರ ರೂಪಾಯಿಗಳ ಗೌರವಧನ ಹಾಗೂ ಪ್ರಶಸ್ತಿ ಫಲಕ ನೀಡಲಾಗುವುದು. ಅದಕ್ಕಾಗಿ ಶಿಲ್ಪ ಹಾಗೂ ಚಿತ್ರ ಕಲಾವಿದರಿಂದ ಕಲಾ ಕೃತಿಗಳನ್ನು ಆಹ್ವಾನಿಸಲಾಗಿದೆ. ಅಪೇಕ್ಷಿಸುವ ಕಲಾವಿದರು ತಮ್ಮ ಕಲಾಕೃತಿಗಳನ್ನು ದಿನಾಂಕ. 20/08/2020ರೊಳಗಾಗಿ ನಿರ್ದೇಶಕರು ಪ್ರಸಾರಾಂಗ, ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ. ಈ ವಿಳಾಸಕ್ಕೆ ಕಳುಹಿಸಬೇಕು. ಹೆಚ್ಚಿನ ವಿವರಗಳಿಗಾಗಿ ಪ್ರಸಾರಾಂಗದ ನಿರ್ದೇಶಕರ ಸಹಾಯಕರನ್ನು ಸಂಪರ್ಕಿಸಲು ಕೋರಲಾಗಿದೆ. 

ನಿಯಮಗಳು:

1. ಹೈದ್ರಾಬಾದ ಕರ್ನಾಟಕ ವ್ಯಾಪ್ತಿಯಲ್ಲಿಯೇ ಕನಿಷ್ಠ 5 ವರ್ಷಗಳಿಂದ ವಾಸ ಮಾಡಿದ ಕಲಾವಿದರಿರಬೇಕು.

2. ಒಬ್ಬ ಕಲಾವಿದರು ಒಂದು ಕಲಾಕೃತಿಯನ್ನು ಮಾತ್ರ ಕಳುಹಿಸಬೇಕು.

3. ಕಲಾಕೃತಿ 3*2 ಕ್ಕಿಂತ ದೊಡ್ಡದಾಗಿ ಇರಬಾರದು.

4. ಕಲಾಕೃತಿ ಸೂಕ್ತವೂ ಸುಂದರವೂ ಆದ ಫ್ರೇಮ್ ಹೊಂದಿರಬೇಕು. ಕಲಾಕೃತಿಯನ್ನು ಪ್ರಸಾರಾಂಗ ಕಛೇರಿಗೆ ಮುಟ್ಟಿಸುವ ಮತ್ತು ತೆಗೆದುಕೊಂಡು ಹೋಗುವ ಜವಾಬ್ದಾರಿ ಕಲಾಕಾರರದ್ದಾಗಿರುತ್ತದೆ.

5. ಕಲಾಕೃತಿಯೂ ತೈಲವರ್ಣ, ಜಲವರ್ಣ, ಡ್ರಾಯಿಂಗ್, ಗ್ರಾಫಿಕ್ ಯಾವುದೇ ಇರಬಹುದು.

6. ಕಲಾಕೃತಿ ಸ್ವಂತದ್ದಾಗಿರಬೇಕು. ಕಾಪಿ ಮಾಡಿದ್ದನ್ನು ಮಾನ್ಯ ಮಾಡಲಾಗುವುದಿಲ್ಲ.

7. ಬಹುಮಾನ ಪಡೆದ ಕಲಾಕೃತಿಗಳನ್ನು ವಿಶ್ವವಿದ್ಯಾಲಯದಲ್ಲಿಯೇ ಶಾಶ್ವತ ಪ್ರದರ್ಶನಕ್ಕಾಗಿ ಇಟ್ಟುಕೊಳ್ಳಲಾಗುವುದು. ಅವುಗಳನ್ನು ಹಿಂದಿರುಗಿಸಲಾಗುವುದಿಲ್ಲ.

8. ಒಮ್ಮೆ ಪ್ರಶಸ್ತಿ ಪಡೆದವರು ಕನಿಷ್ಠ ಮೂರು ವರ್ಷಗಳವರೆಗೆ ಅರ್ಜಿ ಸಲ್ಲಿಸುವಂತಿಲ್ಲ.
 

ಹೈದ್ರಾಬಾದ ಕರ್ನಾಟಕ ಭಾಗದ ಪ್ರಕಾಶಕರಿಗೆ ಗೌರವಧನ ಪ್ರಶಸ್ತಿ

ಹೈದ್ರಾಬಾದ ಕರ್ನಾಟಕ ವ್ಯಾಪ್ತಿಯ ಕಲಬುರಗಿ, ಯಾದಗಿರಿ, ಬೀದರ, ರಾಯಚೂರು ಹಾಗೂ ಕೊಪ್ಪಳ ಬಳ್ಳಾರಿ ಈ ಆರು ಜಿಲ್ಲೆಗಳ ಕನ್ನಡ ಪುಸ್ತಕ ಪ್ರಕಾಶಕರ ಕೊರತೆಯನ್ನು ಗಮನಿಸಿ ಗುಲಬರ್ಗಾ ವಿಶ್ವವಿದ್ಯಾಲಯವು ರಾಜ್ಯೋತ್ಸವ ಆಚರಣೆಯ ಅಂಗವಾಗಿ ಈ ಭಾಗದ ಕನ್ನಡ ಪುಸ್ತಕ ಪ್ರಕಾಶಕರಿಗೆ ಗೌರವಧನ ಪ್ರಶಸ್ತಿ ನೀಡಲು ಅರ್ಜಿಗಳನ್ನು ಅಹ್ವಾನಿಸಲಾಗಿದೆ. ಅಧಿಕೃತವಾಗಿ ನೊಂದಾಯಿಸಿಕೊಂಡಿರುವ ಪ್ರಕಾಶಕರು ಅರ್ಜಿಯನ್ನು ದಿನಾಂಕ. 20/08/2020ರ ಒಳಗಾಗಿ ನಿರ್ದೇಶಕರು ಪ್ರಸಾರಾಂಗ, ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ. ಈ ವಿಳಾಸಕ್ಕೆ ಕಳುಹಿಸಬೇಕು. ಹೆಚ್ಚಿನ ವಿವರಗಳಿಗಾಗಿ ಪ್ರಸಾರಾಂಗದ ನಿರ್ದೇಶಕರ ಸಹಾಯಕರನ್ನು ಸಂಪರ್ಕಿಸಲು ಕೋರಲಾಗಿದೆ.

ನಿಯಮಗಳು :

1. ಈ ಪ್ರಶಸ್ತಿಗೆ ಹೈದ್ರಾಬಾದ ಕರ್ನಾಟಕ ಪ್ರದೇಶಕ್ಕೆ ಒಳಪಟ್ಟ ಕನ್ನಡ ಪುಸ್ತಕ ಪ್ರಕಾಶಕರು ಮಾತ್ರ ಅರ್ಹರಾಗಿರುತ್ತಾರೆ.

2. ಪ್ರಕಟಿತ ಪುಸ್ತಕಗಳು ಯಾವುದೇ ಭಾಗದ ಲೇಖಕರವು ಆಗಿರಬಹುದು.

3. ಪ್ರಕಾಶನ ಅಧಿಕೃತವಾಗಿ ನೊಂದಾಯಿಸಿಕೊಂಡಿರಬೇಕು. ಅದರ ಪ್ರತಿ ಲಗತ್ತಿಸಿರಬೇಕು.

4. ಈ ಪ್ರಶಸ್ತಿಯನ್ನು ಪ್ರಕಾಶನ ಸಂಸ್ಥೆಯು ಕಳೆದ ಮೂರು ವರ್ಷಗಳ ಅವಧಿಯಲ್ಲಿ ಪ್ರಕಟಿಸಿರುವ ಪುಸ್ತಕಗಳನ್ನು ಹಾಗೂ   ಸಂಸ್ಥೆಯ ಒಟ್ಟು ಸಾಧನೆಯನ್ನು ಗಮನಿಸಿ ನೀಡಲಾಗುವುದು.

5. ಪ್ರಕಾಶನವು ತನ್ನ ಒಟ್ಟು ಸಾಧನೆ ಹಾಗೂ ಮೂರು ವರ್ಷದ ಪ್ರಕಟಣೆಗೆ ಸಂಬಂಧಿಸಿದ ಅಧಿಕೃತ ಮಾಹಿತಿಗಳನ್ನು ಅರ್ಜಿಯೊಂದಿಗೆ ಸಾದರಪಡಿಸಬೇಕು.

6. ಒಮ್ಮೆ ಪ್ರಶಸ್ತಿ ಪಡೆದವರು ಕನಿಷ್ಠ ಮೂರು ವರ್ಷಗಳವರೆಗೆ ಅರ್ಜಿ ಸಲ್ಲಿಸುವಂತಿಲ್ಲ.

 

ಗಡಿನಾಡಿನ ಲೇಖಕರ ಕೃತಿಗೆ ಗೌರವಧನ ಪ್ರಶಸ್ತಿ

ಹೈದ್ರಾಬಾದ ಕರ್ನಾಟಕ ಪ್ರದೇಶದ ವ್ಯಾಪ್ತಿಗೆ ಹೊಂದಿಕೊಂಡಂತೆ ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯ ಗಳ ಕನ್ನಡ ಲೇಖಕರ ಕೃತಿಗೆ ಗೌರವಧನ ನೀಡುವುದಕ್ಕಾಗಿ ಗುಲಬರ್ಗಾ ವಿಶ್ವವಿದ್ಯಾಲಯವು ಕೃತಿಗಳನ್ನು ಆಹ್ವಾನಿಸಿದೆ. ಒಬ್ಬ ಲೇಖಕರ ಕೃತಿಗೆ ರೂ.5,000/- (ಐದು ಸಾವಿರ) ಗೌರವಧನ ಪ್ರಶಸ್ತಿ ನೀಡಲಾಗುವುದು. ಪುಸ್ತಕದ 5 (ಐದು) ಪ್ರತಿಗಳನ್ನು ದಿನಾಂಕ.20/08/2020 ರೊಳಗಾಗಿ ನಿರ್ದೇಶಕರು, ಪ್ರಸಾರಾಂಗ, ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ ಈ ವಿಳಾಸಕ್ಕೆ ತಲುಪಿಸಬೇಕು.

ನಿಯಮಗಳು:

1. ಪುಸ್ತಕಗಳ ಮೊದಲ ಮುದ್ರಣವನ್ನು ಮಾತ್ರ ಪರಿಗಣಿಸಲಾಗುವುದು.

2. ಪುಸ್ತಕಗಳ ಪ್ರಕಾಶಕರು ಯಾವ ಭಾಗದವರೇ ಆಗಿರಬಹುದು.

3. ಪುಸ್ತಕ (1) 100 ಪುಟಗಳಾಗಿರಬೇಕು. (2) ಕವನ ಸಂಕಲನ ಕನಿಷ್ಠ 70 ಪುಟಗಳಿರಬೇಕು.

4. ಸ್ವತಂತ್ರ ಕೃತಿ ಇರಬೇಕು. ಅನುವಾದ ಪರಿಗಣಿಸಲಾಗುವುದಿಲ್ಲ.

5. ಪಿಎಚ್.ಡಿ. ಮಹಾಪ್ರಬಂಧ ಮತ್ತು ಬೇರೆ ಬೇರೆ ಲೇಖಕರ ಸಂಕಲನಗಳನ್ನು ಪರಿಗಣಿಸಲಾಗುವುದಿಲ್ಲ.

6. ಪುಸ್ತಕಗಳ ಮೇಲೆ ಗೌರವಧನ ಯೋಜನೆಗಾಗಿ ಎಂದು ಸ್ಪಷ್ಟವಾಗಿ ಬರೆದಿರಬೇಕು.

7. ಪ್ರಶಸ್ತಿಗೆ ಸಲ್ಲಿಸುವ ಕೃತಿಯು ಜನೆವರಿ 2019 ರಿಂದ ಡಿಸಂಬರ್ 2019 ರೊಳಗಾಗಿ ಪ್ರಕಟವಾಗಿರಬೇಕು.

8. ಒಮ್ಮೆ ಪ್ರಶಸ್ತಿ ಪಡೆದವರು ಕನಿಷ್ಠ ಮೂರು ವರ್ಷಗಳವರೆಗೆ ಅರ್ಜಿ ಸಲ್ಲಿಸುವಂತಿಲ್ಲ.

 

ಜನಪದ ಕಲಾವಿದರಿಗೆ ಗೌರವ ಧನ ಪ್ರಶಸ್ತಿ

ಹೈದ್ರಾಬಾದ ಕರ್ನಾಟಕ ಪ್ರದೇಶವು ಜನಪದ ಸಾಹಿತ್ಯ, ಸಂಸ್ಕೃತಿಯ ತವರಾಗಿದೆ. ಪ್ರತಿಭಾವಂತ ಕಲಾವಿದರು ಈ ಪ್ರದೇಶದಲ್ಲಿದ್ದು ಕಲೆಗಾಗಿ ಶ್ರಮಿಸುತ್ತಿದ್ದಾರೆ. ಪ್ರತಿಭಾವಂತರನ್ನು ಗುರುತಿಸಿ ಗುಲಬರ್ಗಾ ವಿಶ್ವ ವಿದ್ಯಾಲಯವು ರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ಕಲಾವಿದರೊಬ್ಬರಿಗೆ ಗೌರವಧನ ಪ್ರಶಸ್ತಿ ನೀಡಲು ಅರ್ಜಿ ಗಳನ್ನು ಅಹ್ವಾನಿಸಲಾಗಿದೆ. ಅರ್ಹ ಜನಪದ ಕಲಾವಿದರಿಗೆ ರೂ. 5,000/- (ಐದು ಸಾವಿರ), ಗೌರವಧನದ ಜೊತೆಗೆ ಪ್ರಶಸ್ತಿ ಫಲಕ ನೀಡಲಾಗುವುದು. ದಾಖಲಾತಿಯ 5 (ಐದು) ಪ್ರತಿಗಳನ್ನು ದಿನಾಂಕ.20/08/2020 ರೊಳಗಾಗಿ ನಿರ್ದೇಶಕರು ಪ್ರಸಾರಾಂಗ, ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ ಈ ವಿಳಾಸಕ್ಕೆ ಅರ್ಜಿ ಕಳಿಸಬಹುದಾಗಿದೆ. ಹೆಚ್ಚಿನ ವಿವರಗಳಿಗಾಗಿ ಪ್ರಸಾರಾಂಗದ ನಿರ್ದೇಶಕರÀನ್ನು ಸಂಪರ್ಕಿಸಲು ಕೋರಲಾಗಿದೆ.

ನಿಯಮಗಳು:

1. ಈ ಪ್ರಶಸ್ತಿಗೆ ಹೈದ್ರಾಬಾದ ಕರ್ನಾಟಕ ಪ್ರದೇಶದ ಜನಪದ ಕಲಾವಿದರು ಮಾತ್ರ ಅರ್ಹರಾಗಿರುತ್ತಾರೆ.

2. ಜನಪದ ಕಲಾವಿದರು 50 ವರ್ಷ ವಯಸ್ಸಿನ ಮೇಲ್ಪಟ್ಟವರಾಗಿರಬೇಕು.

3. ಅರ್ಜಿಯ ಜೊತೆಗೆ ತಮ್ಮ ಸಾಧನೆಯ ದಾಖಲೆಗಳನ್ನು ಲಗತ್ತಿಸಿರಬೇಕು.

4. ಕಲಾವಿದರ ಒಟ್ಟು ಸಾಧನೆಯನ್ನು ಗಮನಿಸಿ, ಪರಿಣಿತರ ಅಭಿಪ್ರಾಯದ ಮೇರೆಗೆ  ಗೌರವಧನ ನೀಡಲಾಗುವುದು.

5. ಒಮ್ಮೆ ಪ್ರಶಸ್ತಿ ಪಡೆದವರು ಕನಿಷ್ಠ ಮೂರು ವರ್ಷಗಳವರೆಗೆ ಅರ್ಜಿ ಸಲ್ಲಿಸುವಂತಿಲ್ಲ.

 

ದಿ. ಜಯತೀರ್ಥ ರಾಜಪುರೋಹಿತ ಸ್ಮಾರಕ ದತ್ತಿ ರಾಜ್ಯ ಮಟ್ಟದ ಕಥಾ ಸ್ಪರ್ಧೆ

ದಿ. ಜಯತೀರ್ಥ ರಾಜಪುರೋಹಿತ ಸ್ಮಾರಕ ರಾಜ್ಯ ಮಟ್ಟದ ಕನ್ನಡ ಕಥಾ ಸ್ಪರ್ಧೆಗೆ ಗುಲಬರ್ಗಾ ವಿಶ್ವ ವಿದ್ಯಾಲಯವು ಸಣ್ಣ ಕಥೆಗಳನ್ನು ಆಹ್ವಾನಿಸಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವ ಕಥೆಗಾರರು ತಾವು ಬರೆದ ಕಥೆಯ 5 (ಐದು) ಪ್ರತಿಗಳನ್ನು 20/08/2020ರ ಒಳಗಾಗಿ ನಿರ್ದೇಶಕರು ಪ್ರಸಾರಾಂಗ, ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ, ಈ ವಿಳಾಸಕ್ಕೆ ಕಳುಹಿಸಿಕೊಡಬೇಕು. 

ಈ ಕಥಾ ಸ್ಪರ್ಧೆಯಲ್ಲಿ ದಿ. ಜಯತೀರ್ಥ ರಾಜಪುರೋಹಿತ ಸ್ಮರಣಾರ್ಥ ಪ್ರಥಮ ಸ್ಥಾನಗಳಿಸಿದ ಕಥೆಗೆ ಚಿನ್ನದ ಪದಕ 5,000/- (ಐದು ಸಾವಿರ), ದ್ವಿತೀಯ ಸ್ಥಾನಗಳಿಸಿದ ಕಥೆಗೆ ಬೆಳ್ಳೆ ಪದಕ 3,000/- (ಮೂರು ಸಾವಿರ), ತೃತೀಯ ಸ್ಥಾನಗಳಿಸಿದ ಕಥೆಗೆ ಕಂಚಿನ ಪದಕ 2,000/- (ಎರಡು ಸಾವಿರ) ನಗದು ಹಣ, ಪ್ರಮಾಣ ಪತ್ರ ಫಲಕ ನೀಡಲಾಗುವುದು. ಕಥೆಯು ಕನ್ನಡದಲ್ಲಿದ್ದು, ಸ್ವತಂತ್ರವಾಗಿರಬೇಕು, ಅನುವಾದವಾಗಿರಬಾರದು. ಈ ಮೊದಲು ಎಲ್ಲಿಯೂ ಪ್ರಕಟವಾಗಿರಕೂಡದು. ಈ ಪ್ರಕಟಣೆ ಹೊರಡಿಸಿದ ದಿನಾಂಕದಂದು ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಐವತ್ತು ವರ್ಷ ವಯಸ್ಸು (50) ಮೀರಿರಬಾರದು. ಇದಕ್ಕೆ ಸಂಬಂಧಿಸಿದಂತೆ ತಮ್ಮ ಕಥೆಯ ಜೊತೆಗೆ ಜನ್ಮ ದಿನಾಂಕ ಖಚಿತ ಪಡಿಸುವ ಪ್ರಮಾಣ ಪತ್ರದ ಒಂದು ದೃಢೀಕೃತ ನಕಲನ್ನು ಲಗತ್ತಿಸಬೇಕು. ಸ್ಪರ್ಧೆಯಲ್ಲಿ ಭಾಗವಹಿಸುವವರು ಪ್ರತ್ಯೇಕ ಕಾಗದದಲ್ಲಿ ತಮ್ಮ ಕಿರುಪರಿಚಯ ಹಾಗೂ ‘ನಾನು ಬರೆದು ಕಳಿಸುವ ಕಥೆಯು ಸ್ವತಂತ್ರವಾಗಿದ್ದು ಎಲ್ಲಿಯೂ ಪ್ರಕಟವಾಗಿಲ್ಲ’ ಎಂದು ದೃಢೀಕರಿಸುವುದು ಕಡ್ಡಾಯವಾಗಿರುತ್ತದೆ.

ನಿಯಮಗಳು:

1. ಕಥೆಯು ಕನಿಷ್ಠ ಒಂದು ಸಾವಿರ ಹಾಗೂ ಗರಿಷ್ಠ ಎರಡು ಸಾವಿರ ಶಬ್ದಗಳಲ್ಲಿರಬೇಕು.

ಫುಲ್ ಸ್ಕೇಪ್ ಕಾಗದದ ಒಂದೇ ಬದಿಗೆ ಬೆರಳಚ್ಚಿಸಿದ (ಕಂಪ್ಯೂಟರಿಕರಿಸಿದ) ಐದು ಪ್ರತಿಗಳನ್ನು ರಜಿಸ್ಟರ್ಡ್ ಅಂಚೆಯ ಮೂಲಕ ಅಥವಾ ಖುದ್ದಾಗಿ ಬಂದು ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಿಗೆ ಸಲ್ಲಿಸಬೇಕು.

2. ಲಕೋಟೆಯ ಮೇಲ್ಬದಿಗೆ ದಿ. ಜಯತೀರ್ಥ ರಾಜಪುರೋಹಿತ ಸ್ಮಾರಕ ರಾಜ್ಯ ಮಟ್ಟದ ಕನ್ನಡ ಕಥಾ ಸ್ಪರ್ಧೆಗಾಗಿ ಎಂದು ಬರೆದಿರಬೇಕು.

3. ತೀರ್ಪುಗಾರರ ನಿರ್ಣಯವೆ ಅಂತಿಮವಾಗಿರುತ್ತದೆ.

4. ಒಮ್ಮೆ ಪ್ರಶಸ್ತಿ ಪಡೆದವರು ಕನಿಷ್ಠ ಮೂರು ವರ್ಷಗಳವರೆಗೆ ಅರ್ಜಿ ಸಲ್ಲಿಸುವಂತಿಲ್ಲ.

ವಿಜ್ಞಾನ ಪುಸ್ತಕ ಲೇಖಕರಿಗೆ ರಾಜ್ಯ ಮಟ್ಟದ ಪ್ರಶಸ್ತಿಗಾಗಿ

ಗುಲಬರ್ಗಾ ವಿಶ್ವವಿದ್ಯಾಲಯವು ಪ್ರತಿ ವರ್ಷ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಸುಮಾರು ನಲವತ್ತು ವರ್ಷಗಳಿಂದ ಆಚರಿಸುತ್ತ ಬರುತ್ತಿದೆ. ಅದರಂಗವಾಗಿ ವಿಜ್ಞಾನ ಲೇಖಕರಿಗೆ ಪುಸ್ತಕ ಬಹುಮಾನ ಕೊಡುತ್ತ ಬರಲಾಗುತ್ತಿದೆ. 2017ನೇ ಸಾಲಿನಿಂದ ಕನ್ನಡದಲ್ಲಿ ಬರೆದು ಪ್ರಕಟಿಸಿದ ವಿಜ್ಞಾನ ಪುಸ್ತಕಕ್ಕೆ ರಾಜ್ಯ ಪ್ರಶಸ್ತಿ ನೀಡಲಾಗುತ್ತಿದೆ. ಲೇಖಕರಿಗೆ ಐದು ಸಾವಿರ ರೂಪಾಯಿ ಗೌರವದನ ನೀಡಲಾಗುವುದು ವಿಜ್ಞಾನ ವಿಭಾಗದ ಗೌರವಧನ ಪ್ರಶಸ್ತಿಗಾಗಿ ಕಳಿಸುವ ಪುಸ್ತಕ ಪುಸ್ತಕ ಕನಿಷ್ಠ 100 ಪುಟವಿರಬೇಕು.

ಗೌರವಧನ ಅಪೇಕ್ಷಿಸುವ ಲೇಖಕರು 2019 ಜನೆವರಿ ಯಿಂದ 31 ಡಿಸಂಬರ್ 2019ರ ಅವಧಿಯೊಳಗೆ ಪ್ರಕಟವಾದ ಪುಸ್ತಕದ 5 (ಐದು) ಪ್ರತಿಗಳನ್ನು ದಿನಾಂಕ.20/08/2020 ರೊಳಗಾಗಿ ನಿರ್ದೇಶಕರು, ಪ್ರಸಾರಾಂಗ ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ ಈ ವಿಳಾಸಕ್ಕೆ ರಜಿಸ್ಟರ್ ಅಂಚೆಯ ಮೂಲಕ ಇಲ್ಲವೇ ಖುದ್ದಾಗಿ ಬಂದು ತಲುಪಿಸ ಬೇಕು. ಹೆಚ್ಚಿನ ಮಾಹಿತಿಗಾಗಿ ಪ್ರಸಾರಾಂಗದ ನಿರ್ದೇಶಕರ ಸಹಾಯಕರನ್ನು ಸಂಪರ್ಕಿಸಬಹುದು. ಮೊಬೈಲ್ ನಂ.+91 9880088643.

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...