ಹಿರಿಯ ಕಾದಂಬರಿಕಾರ ಬಿಳುಮನೆ ರಾಮದಾಸ್ ಇನ್ನಿಲ್ಲ

Date: 26-03-2020

Location: ಬೆಂಗಳೂರು


ಹಿರಿಯ ಕಾದಂಬರಿಕಾರ ಬಿಳುಮನೆ ರಾಮದಾಸ್ ಅವರು ಹೃದಯಾಘಾತದಿಂದ 2020ರ 25 ಮಾರ್ಚ್ ರಂದು ನಿಧನರಾದರು.

ಅವರಿಗೆ 79 ವರ್ಷ (ಜನನ: 1941 ಮಾರ್ಚ್ 09) ವಯಸ್ಸಾಗಿತ್ತು. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಬಿಳುಮನೆಯವರು. ತಂದೆಯವರ ಓದಿನ ಬಳುವಳಿ ಪಡೆದಿದ್ದ ಅವರು ಕಥೆ, ಕಾದಂಬರಿಗಳನ್ನು ಬರೆದರು. ‘ಮರಳಿನ ಮನೆ’, ‘ಕುಂಜ’, ‘ನಂಬಿ ಕೆಟ್ಟವರಿಲ್ಲವೋ’, ‘ಕರಾವಳಿಯ ಹುಡುಗಿ’, ‘ವ್ಯಾಮೋಹ’ ಪ್ರಮುಖ ಕಾದಂಬರಿಗಳು.

ಕಾದಂಬರಿ ‘ತಲೆಮಾರು’ ಸಿದ್ದಲಿಂಗಯ್ಯನವರ ನಿರ್ದೇಶನದಲ್ಲಿ ‘ಪ್ರೇಮ ಪ್ರೇಮ ಪ್ರೇಮ’ ಚಲನಚಿತ್ರವಾಗಿತ್ತು. ‘ಹುಲಿ ಮಾಡಿಸಿದ ಮದುವೆ ಮತ್ತು ಇತರ ಪ್ರಬಂಧಗಳು’ -ಪ್ರಬಂಧ ಸಂಕಲನ. ಅವರ ಸಾಹಿತ್ಯ ಸೇವೆಗೆ ‘ಹಾವನೂರ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಕುವೆಂಪು ಶ್ರೀ ಪ್ರಶಸ್ತಿ, ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕನ್ನಡ ಕ್ರಿಯಾ ಸಮಿತಿಯಿಂದ ರಾಜ್ಯೋತ್ಸವ ಸನ್ಮಾನಗಳು ಲಭಿಸಿದ್ದವು.

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...