ಇತ್ತೀಚೆಗೆ ಮನುಷ್ಯನು ಬಹಳಷ್ಟು ಸ್ವಾರ್ಥಿಯಾಗುತ್ತಿದ್ದಾನೆ: ಜಿ.ಎಸ್. ಗೋನಾಳ


'ಭೂಮಿ, ಆಕಾಶ, ಸೂರ್ಯ, ಚಂದ್ರ, ಗಾಳಿ, ಬೆಳಕು, ನೀರು, ಗಿಡಮರಗಳು, ಪ್ರಾಣಿ, ಪಕ್ಷಿಗಳ ನಿಸ್ವಾರ್ಥದ ಸೇವೆಯನ್ನು ಮರೆಯುತ್ತಿದ್ದಾನೆ ಎನ್ನುತ್ತಾರ’ ಜಿ.ಎಸ್. ಗೋನಾಳ ಪ್ರಕಾಶಕರು. ಅವರು ಶಿಲ್ಪಾ ಮ್ಯಾಗೇರಿ ಅವರ ‘ಚೈತ್ರದ ಚರಮಗೀತೆ’ ಕೃತಿಗೆ ಬರೆದ ಮುನ್ನುಡಿ ನಿಮ್ಮ ಓದಿಗಾಗಿ.

ಇತ್ತೀಚೆಗೆ ಮನುಷ್ಯನು ಬಹಳಷ್ಟು ಸ್ವಾರ್ಥಿಯಾಗುತ್ತಿದ್ದಾನೆ. ಬರೀ ನಾನು, ನನ್ನಿಂದ, ನನಗಾಗಿ, ಎಂಬ ಭ್ರಮೆಯಲ್ಲಿ ತೇಲುತ್ತಿದ್ದಾನೆ. ಭೂಮಿ, ಆಕಾಶ, ಸೂರ್ಯ, ಚಂದ್ರ, ಗಾಳಿ, ಬೆಳಕು, ನೀರು, ಗಿಡಮರಗಳು, ಪ್ರಾಣಿ, ಪಕ್ಷಿಗಳ ನಿಸ್ವಾರ್ಥದ ಸೇವೆಯನ್ನು ಮರೆಯುತ್ತಿದ್ದಾನೆ. ಅಲ್ಲದೇ ಸಮೃದ್ಧಿ, ಸಾಧನೆ, ಗುರಿ, ಯಶಸ್ಸು, ನೆಮ್ಮದಿಗಳಿಂದ ಬದುಕನ್ನು ಕಟ್ಟಿಕೊಳ್ಳಲು ಹೆಣಕಾಡುತ್ತಿದ್ದಾನೆ. ಯಾಕೆಂದರೆ ಮಾನವರಲ್ಲಿ ಇಂದು ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಜನಪದ, ವಚನ ಸಾಹಿತ್ಯ, ವೈಚಾರಿಕತೆ, ಓದು, ಬರಹ ಮೊದಲಾದ ಮಾನವೀಯ ಸಂಬಂಧ ಮತ್ತು ಮೌಲ್ಯಗಳನ್ನು ತೊರೆಯುತ್ತಿದ್ದಾನೆ ಅವುಗಳೂ ಸಹ ನಮ್ಮಿಂದ ಕಣ್ಮರೆಯಾಗುತ್ತಲಿವೆ.

ಇಂತದ ಹೊತ್ತಿನಲ್ಲಿ ಶ್ರೀಮತಿ ಶಿಲ್ಪ ಮ್ಯಾಗೇರಿ ಅವರು ತಮ್ಮ ಸ್ವರಚಿತ ನಾಲ್ಕನೇ ಸಂಕಲನ "ಚೈತ್ರದ ಚರಮಗೀತೆ" ಸಂಕಲನವನ್ನು ನಮ್ಮ ವಿಶಾಲ ಪ್ರಕಾಶನದ ಮೂಲಕ ಪ್ರಕಟಿಸಲು ಕೇಳಿದಾಗ ಈ ಕೃತಿಯನ್ನು ಪ್ರಕಟಣೆ ಮಾಡಲು ನಿರ್ಧರಿಸಿದ್ದೇವೆ.

ಶ್ರೀಮತಿ ಶಿಲ್ಪ ಮ್ಯಾಗೇರಿ ಅವರು ಮೂಲ ಕೊಪ್ಪಳದವರು. ಕಾಳಿದಾಸ ಹೈಸ್ಕೂಲ್‌ನಲ್ಲಿ ಪ್ರೌಢ ಶಿಕ್ಷಣವನ್ನು ಮುಗಿಸಿ ಪಿ.ಯು.ಸಿ. ಅಭ್ಯಾಸ ಶ್ರೀ ಗವಿಸಿದ್ದೇಶ್ವರ ಕಾಲೇಜಿನಲ್ಲಿ ಓದುತ್ತಿರುವಾಗಲೇ ಕವಿತೆ, ಚುಟುಕುಗಳನ್ನು, ಬರೆಯುವ ಹವ್ಯಾಸ ರೂಢಿಸಿಕೊಂಡು ಇಂದು ಒಬ್ಬ ಉತ್ತಮ ಕವಯತ್ರಿಯಾಗಿ ಹೊರಹೊಮ್ಮಿದ್ದಾರೆ. ಶ್ರೀಮತಿ ಶಿಲ್ಪಾರವರು 2005ರಲ್ಲಿ ಕೊಪ್ಪಳದ ಅಮೀನಪುರದಲ್ಲಿದ್ದ ನಮ್ಮ ತಿಂಗಳ ವಾರ್ತ ಪತ್ರಿಕೆ ಮತ್ತು ವಿಶಾಲ ಪ್ರಕಾಶನದ ಕಾರ್ಯಾಲಯಕ್ಕೆ ತಾವು ಬರೆದ ಕವಿತೆಗಳನ್ನು ಪ್ರಕಟಣೆಗೆ ಕೊಡಲು ಮೊದಲನೇ ಸಲ ಬಂದಿದ್ದರು. ಆಗ ಅವರಲ್ಲಿನ ನಯ, ವಿನಯ, ಪ್ರೀತಿ, ವಿಶ್ವಾಸ, ಸೌಜನ್ಯ, ಹಿರಿಯರಿಗೆ ತೋರುವ ಗೌರವಯುತವಾದ ಸಂಸ್ಕಾರವನ್ನು ನೋಡಿದಾಗಲೇ ಶಿಲ್ಪರವರು ಮುಂದೊಂದು ದಿನ ಉತ್ತಮ ಕವಿಗಳ ಸಾಲಿನಲ್ಲಿ ಸೇರ್ಪಡೆಯಾಗುತ್ತಾರೆ ಏನನ್ನಾದರೂ ಸಾಧಿಸುತ್ತಾರೆ ಎಂದು ನನಗನಿಸಿತ್ತು.

ಅದೇ ಭರವಸೆಯಿಂದಲೇ ಅವರನ್ನು ನಮ್ಮ ಹಲವಾರು ಕಾರ್ಯಕ್ರಮಗಳಲ್ಲಿ ಸಂಘಟನೆಗಳಲ್ಲಿ ಸದಸ್ಯರಾಗಿ, ಪದಾಧಿಕಾರಿಗಳಾಗಿ ನೇಮಕ ಮಾಡಿಕೊಂಡಿದ್ದೆವು. ಅವರು ನಮ್ಮ ಸಂಘಟನೆಯಲ್ಲಿ ಅತ್ಯುತ್ತಮ ಸಂಘಟನಾ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತ ವಿವಿಧ ಕಾರ್ಯಕ್ರಮಗಳಲ್ಲಿ ಶಿಸ್ತಿನಿಂದ ಪಾಲ್ಗೊಳ್ಳುತ್ತಿದ್ದರು. ಆದ್ದರಿಂದ ಅವರು ಕೊಪ್ಪಳ ಜಿಲ್ಲೆಯಲ್ಲಿ ಒಳ್ಳೆಯ ಕವಯತ್ರಿಯಾಗಿ ಎಲ್ಲರ ಮನ ಗೆದ್ದಿದ್ದಾರೆ. ಇಂದು ಗದಗದಲ್ಲಿ ಶ್ರೀಯುತ ರಮೇಶ್ ಮತ್ತು ಮಕ್ಕಳ ಜೊತೆ ವಾಸವಿದ್ದು ಓದಬೇಕು ಏನಾದರೂ ಸಾಧನೆ ಮಾಡಬೇಕೆಂಬ ಹಂಬಲದಿಂದ ಬಿ.ಈಡಿ. ಹಾಗೂ ಎಂ.ಎ. ಸ್ನಾತಕೋತ್ತರ ಪದವಿಯನ್ನು ಮುಗಿಸಿಕೊಂಡು ಈಗ ಗದುಗಿನ ಶ್ರೀ ತೋಂಟದಾರ್ಯ ಮಠದ ಶ್ರೀ ಬಸವೇಶ್ವರ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಉಪನ್ಯಾಸಕಿರಾಗಿ ಸೇವೆಸಲ್ಲಿಸುತ್ತಿದ್ದು ಜೊತೆಗೆ ಗದಗ ಜಿಲ್ಲೆ ಮತ್ತು ಕೊಪ್ಪಳ ಜಿಲ್ಲೆಯ ಭರವಸೆಯ ಕವಿ ಮತ್ತು ಲೇಖಕಿಯಾಗಿ ಗುರುತಿಸಿಕೊಂಡಿದ್ದು ಹೆಮ್ಮೆ ಪಡುವ ಸಂಗತಿಯಾಗಿದೆ.

ಶ್ರೀಮತಿ ಶಿಲ್ಪಾರವರ ಕಾವ್ಯವು ನಾಡಿನೆಲ್ಲೆಡೆ ಪಸರಿಸಲಿ ಅವರ ಸಾಹಿತ್ಯವು ಮಹಿಳಾ ಲೋಕದಲ್ಲಿ ಗಟ್ಟಿಯಾದ ಧ್ವನಿಯಾಗಿನಿಲ್ಲಲಿ ಎಂಬ ಮಹದಾಸೆಯಿಂದ ಅವರ ಈ ಕೃತಿಯನ್ನು ವಿಶಾಲ ಪ್ರಕಾಶನದಿಂದ ಪ್ರಕಟಿಸಿ ನಿಮ್ಮ ಮುಂದೆ ಇಟ್ಟಿದ್ದೇವೆ. ವಿಶಾಲ ಪ್ರಕಾಶನದ 43ನೇ ಕೃತಿಯಾದ 'ಚೈತ್ರದ ಚರಮಗೀತೆ' ಕರುನಾಡಿನಲ್ಲಡೆ ಓದುಗರ ಗಮನ ಸೆಳೆದು ಪ್ರಶಂಸೆಗೆ ಪಾತ್ರವಾದರೆ ನಮ್ಮ ವಿಶಾಲ ಪ್ರಕಾಶನದ ಶ್ರಮ ಸಾರ್ಥಕವಾದಂತೆ.

ಈ ಕವನ ಸಂಕಲನಕ್ಕೆ ಮುನ್ನುಡಿ ಬರೆದು ಕೊಟ್ಟ ಶ್ರೀ ಡಾ ವೈ.ಎಂ. ಯಾಕೊಳ್ಳಿ ಪ್ರಾಚಾರ್ಯರು ಪದವಿ ಪೂರ್ವ ಕಾಲೇಜು ಸವದತ್ತಿ ಇವರಿಗೂ ಹಾಗೂ ಬೆನ್ನುಡಿ ಬರೆದ ಪತ್ರಕರ್ತರು ಅದ್ಭುತ ಅನುವಾದರೂ ಆದ ಶ್ರೀಮತಿ ಮಂಜುಳಾ ಕಿರುಗಾವಲು ಅವರಿಗೂ ಮುಖಪುಟ ವಿನ್ಯಾಸ ಮಾಡಿದ ಶ್ರೀಮತಿ ರೂಪಶ್ರೀ ಕಲ್ಲಿಗನೂರ ಇವರಿಗೂ ಅಕ್ಷರ ಜೋಡಣೆ ಮಾಡಿದ ಶ್ರೀ ರಾಜು ನೆಗಳೂರು ಹಾಗೂ ವಿಶಾಲ ಪ್ರಕಾಶನಕ್ಕೆ ಸದಾ ಬೆನ್ನೆಲುಬಾಗಿ ನಿಂತಿರುವ ಶ್ರೀಮತಿ ರತ್ನ ಜಿ. ಗೋನಾಳ್ ಹಾಗೂ ನಮ್ಮ ಚಿರಂಜೀವಿಗಳಾದ ಸೋಮರಾಜ್ ರೆಡ್ಡಿ ಜಿ. ಗೋನಾಳ್, ಮೇಘರಾಜ್ ರೆಡ್ಡಿ ಜಿ. ಗೋನಾಳ್, ಬಸವರಾಜ ರೆಡ್ಡಿ ಎಂ. ಗೋನಾಳ್‌, ನವೀನ್ ರಾಜ್ ರೆಡ್ಡಿ ಮತ್ತು ಶ್ರೇಯಸ್ ತಂದೆ ಅಯ್ಯಪ್ಪ ಗೋನಾಳ್ ಹಾಗೂ ನಮ್ಮ ಪೂಜ್ಯ ತಂದೆಯವರಾದ ಶ್ರೀಯುತ ಶೇಖರಪ್ಪ ದೊಡ್ಡಪಂಪಣ್ಣ ಗೋನಾಳ್‌ ಶ್ರೀಮತಿ ಗೌರಮ್ಮ ಶೇಖರಪ್ಪ ಗೋನಾಳ್ ಇವರಿಗೆ ಕೃತಜ್ಞತೆಗಳು.

-ಜಿ.ಎಸ್. ಗೋನಾಳ ಪ್ರಕಾಶಕರು,

ವಿಶಾಲ ಪ್ರಕಾಶನ, ಕೊಪ್ಪಳ

MORE FEATURES

'ಲೈಫ್‌ನ ಸಕ್ಸೆಸ್ ಮಂತ್ರ' ನಮ್ಮ ಬಳಿಯೇ ಇದೆ

30-04-2024 ಬೆಂಗಳೂರು

'ಮಂತ್ರದಿಂದ ಮಾವಿನ ಕಾಯಿ ಉದುರುವುದಿಲ್ಲ' ಎನ್ನುವ ಗಾದೆ ಮಾತು ಎಷ್ಟು ಸತ್ಯವೋ ಅದೇ ರೀತಿ ಬದುಕಿನಲ್ಲಿ ಯಶಸ್ಸ ...

ಅಪರಿಚಿತ ದೇವಾಲಯಗಳ ಬಗ್ಗೆ ಅಪೂರ್ವ ಮಾಹಿತಿ

30-04-2024 ಬೆಂಗಳೂರು

‘ಇದು ಪುರಾತನ ದೇವಾಲಯಗಳ ಅಸಂಖ್ಯ ಸಾಗರದ ನಡುವಿನ ಚಿಕ್ಕ ಬಿಂದು ಮಾತ್ರ. ಜನಮಾನಸದಿಂದ ದೂರವಾದ ದೇವಾಲಯಗಳನ್ನು ಜನರ...

ಹವ್ಯಕ ಸಮಾಜದ ಸಮಾಜೊ-ಸಾಂಸ್ಕೃತಿಕ ಪಠ್ಯವಾಗಿ ಮಹತ್ವ ಪಡೆದಿರುವ ಕೃತಿ 'ಬಯಲ ಬೆಟ್ಟ'

30-04-2024 ಬೆಂಗಳೂರು

‘ಕನಸುಗಳನ್ನು ಕಂಡರಷ್ಟೆ ಸಾಲದು; ಅವುಗಳನ್ನು ನನಸುಗಳನ್ನಾಗಿ ಮಾಡಿಕೊಳ್ಳುವ ಛಲ, ಹಠ, ಮತ್ತು ನಿರಂತರ ಪರಿಶ್ರಮ , ...