ರಾಜಧರ್ಮ ಎನ್ನುವುದು ಪ್ರಜಾಧರ್ಮಕ್ಕಿಂತ ಭಿನ್ನವಾದುದು : ನಿತಿನ್ ಪೈ

Date: 02-12-2023

Location: ಬೆಂಗಳೂರು


ಬೆಂಗಳೂರು: 12ನೇ ಬೆಂಗಳೂರು ಸಾಹಿತ್ಯ ಉತ್ಸವವು ಲಲಿತ್ ಅಶೋಕ ಹೋಟೆಲ್ ನ ಆವರಣದಲ್ಲಿ ಭರದಿಂದ ನಡೆಯುತ್ತಿದ್ದು , ಮೊದಲ ದಿನದ ಗೋಷ್ಠಿಗಳು ಅನೇಕ ಸಾಹಿತ್ಯಾಸಕ್ತರ ಸಮ್ಮುಖದಲ್ಲಿ ನಡೆಯುತ್ತಿದೆ.

ಈ ಸಂದರ್ಭದಲ್ಲಿ ನಡೆದ ದಿ ನೀತೋಪದೇಶ (The Nitopadesha) ಗೋಷ್ಠಿಯ ಸಂಪನ್ಮೂಲ ವ್ಯಕ್ತಿಗಳಾಗಿ ಕತೆಗಾರ, ಸಾಹಿತಿ ವಿವೇಕ ಶಾನಭಾಗ ಮತ್ತು ನಿತಿನ್ ಪೈ ಪಾಲ್ಗೊಂಡರು.

ದಿ ನೀತೋಪದೇಶ (The Nitopadesha) ವಿಷಯದ ಕುರಿತು ಮಾತನಾಡಿದ ನಿತಿನ್ ಪೈ , ನೀತೋಪದೇಶ ಎನ್ನುವುದು ಪ್ರಜಾಧರ್ಮವನ್ನು ಪರಿಪಾಲಿಸಲು ಇರುವ ರಾಜಮಾರ್ಗ. ರಾಜಧರ್ಮ ಎನ್ನುವುದು ಪ್ರಜಾಧರ್ಮಕ್ಕಿಂತ ಭಿನ್ನವಾದುದು. ಇದರ ಬಗ್ಗೆ ಅರಿಯಲು ಕೃತಿಗಳನ್ನು ಓದುವುದು ಬಹಳ ಮುಖ್ಯ. ಇದಕ್ಕಾಗಿ ಎಲ್ಲಾ ಪರಂಪರೆ ಅಥವಾ ತಲೆಮಾರುಗಳ ಕುರಿತು ಅರಿವು ಮೂಡಿಸುವ ಕೃತಿಗಳು ಇನ್ನಷ್ಟು ಬರಬೇಕಿದೆ. ಪ್ರಜಾಧರ್ಮವೆನ್ನುವುದು ನಮ್ಮೆಲ್ಲರ ಹಕ್ಕು. ಒಂದು ರಾಜ್ಯವನ್ನು ಉಳಿಸಲು ಪ್ರಜಾಧರ್ಮ ಅತ್ಯಗತ್ಯ. ಇದಕ್ಕಾಗಿ ಇರುವುದೇ ನೀತೋಪದೇಶ. ಇದಕ್ಕೆ ಉತ್ತಮ ಉದಾಹರಣೆ ಚಂದ್ರಮಣಿ ಮತ್ತು ರಾಜ ದತ್ತನ ಕಥೆ. ಇದು ಪ್ರತಿಯೊಬ್ಬ ಪ್ರಜೆಯೂ ತಿಳಿಯಲೇಬೇಕಾದ ವಿಷಯ. ಇದಕ್ಕಾಗಿ ಕೃತಿಗಳನ್ನು ಓದುವ ಜೊತೆಗೆ ಅದರ ಹೂರಣವನ್ನು ಅರ್ಥ ಮಾಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ವಿವೇಕ ಶಾನಭಾಗ, ಸಾಹಿತ್ಯ ಉತ್ಸವದಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಇದರಿಂದ ಇತಿಹಾಸವನ್ನು ಅರಿಯುವ ಜೊತೆಗೆ ಭವಿಷ್ಯ ಹೇಗಿರಬೇಕೆಂಬ ತಿಳುವಳಿಕೆ ಕೂಡ ನಮ್ಮಲ್ಲಿ ಮೂಡುತ್ತದೆ. ನೀತೋಪದೇಶದ ಆಳ ಅಗಲಗಳನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ನಿತೋಪದೇಶದ ಕಥೆಗಳ ಕೆಲವೊಂದು ತುಣುಕುಗಳನ್ನು ಈ ಸಂದರ್ಭದಲ್ಲಿ ಪ್ರಸ್ತುತಪಡಿಸಲಾಯಿತು.

ಕಾರ್ಯಕ್ರಮದಲ್ಲಿ ಗಣ್ಯರ ಸಹಿತ ಅನೇಕ ಲೇಖಕರು, ವಿದ್ಯಾರ್ಥಿಗಳು ಮತ್ತು ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...