ಕರ್ನಾಟಕ ಕೇಂದ್ರೀಯ ವಿ.ವಿ.ಯಿಂದ ಐವರಿಗೆ ಗೌರವ ಡಾಕ್ಟರೇಟ್ 

Date: 19-03-2020

Location: ಕರ್ನಾಟಕ


ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು (ಸಿಯುಕೆ) ಸಾಧಕರಿಗೆ ನೀಡುವ ಗೌರವ ಡಾಕ್ಟರೇಟ್ ಗಾಗಿ ಸಲ್ಲಿಸಿದ ಪ್ರಸ್ತಾವನೆಯನ್ನು ರಾಷ್ಟ್ರಪತಿ ಅನುಮೋದಿಸಿದ್ದಾರೆ ಎಂದು ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಚ್.ಎಂ.ಮಹೇಶ್ವರಯ್ಯ ತಿಳಿಸಿದ್ದಾರೆ.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ತನ್ನ ಕಾರ್ಯಕಾರಿ ಮಂಡಳಿ ಹಾಗೂ ಶೈಕ್ಷಣಿಕ ಮಂಡಳಿಯ ಸಭೆಯಲ್ಲಿ ತೀರ್ಮಾನಿಸಿ, ತನ್ನ ಮುಂಬರುವ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ನೀಡಲು ಪ್ರಸ್ತಾವನೆ ಸಲ್ಲಿಸಿತ್ತು. ವಿಶ್ವವಿದ್ಯಾಲಯವು ಶಿಫಾರಸ್ಸು ಮಾಡಿದ ಹೆಸರುಗಳಲ್ಲಿ ಸಾಧಕರಾದ ಡಾ.ಎಂ.ಜಿ.ಬಿರಾದಾರ, ಡಾ.ಎಸ್.ಎಲ್.ಭೈರಪ್ಪ, ಡಾ. ಚೆನ್ನವೀರ ಕಣವಿ, ಸಾಲುಮರದ ತಿಮ್ಮಕ್ಕ ಹಾಗೂ ಬಾಹ್ಯಾಕಾಶ ವಿಜ್ಞಾನಿ ಕೆ.ಶಿವನ್ ಅವರಿಗೆ ಗೌರವ ಡಾಕ್ಟರೇಟ್ ನೀಡಲು ಭಾರತದ ರಾಷ್ಟ್ರಪತಿಗಳು ಅನುಮೋದಿಸಿದ್ದಾಗಿ ತಿಳಿಸಿದ್ದಾರೆ.

 

MORE NEWS

ಅರಿವಿನ ಕೃಷಿ ನಡೆಸುತ್ತಿರುವ ‘ಸಾಹಿ...

09-04-2020 ಬೆಂಗಳೂರು

ಕಾಂಕ್ರೀಟ್‌ ಕಾಡಿನಲ್ಲೊಂದು ಗುಬ್ಬಿ ಗಾತ್ರದ ಕಾಡು ಜ್ಞಾನಭಾರತಿ ಆವರಣದಲ್ಲಿರುವ ಬೆಂಗಳೂರು ವಿಶ್ವವಿದ್ಯಾಲಯ. ಹಲವಾ...

ಯಯಾತಿಯ ಮನವೇ ನುಡಿದ ಮುಕುಲಿಕೆ ಮತ್...

08-04-2020 ಬೆಂಗಳೂರು

‘ಹೌದು ಮಹಾರಾಜರೇ, ನೀವೇನೋ ನಾಳೆ ಬರುತ್ತೀರೆಂದಿರಿ. ಆದರೆ, ನಿಮ್ಮ ಕಣ್ಣುಗಳು ಹೇಳುತ್ತಿದ್ದವು;ಇದೀಗ ಬರುತ್ತೇನೆ ...

ಜರ್ಮನಿಯ `ಕನ್ನಡ ಪಂಡಿತ' ಫರ್ಡಿನಾಂ...

07-04-2020 ಬೆಂಗಳೂರು

ಧರ್ಮ ಪ್ರಚಾರ ಮಾಡುವ ಉದ್ದೇಶದಿಂದ ಬಂದ ಕ್ರಿಶ್ಚಿಯನ್ ಪಾದ್ರಿಯೊಬ್ಬ ಕನ್ನಡ ಕಲಿತು ಮಾಡಿದ ಸಾಧನೆ ಅನನ್ಯ ಮತ್ತು ಅಪೂರ್ವ....

Comments

Magazine
With us

Top News
Exclusive
Top Events