ಭೂಮಿ ಜ್ವರದಿಂದ ಬಳಲುತ್ತಿದೆ: ನಾಗೇಶ್ ಹೆಗಡೆ

Date: 01-12-2019

Location: ಬೆಂಗಳೂರು


’ಅಭಿವೃದ್ಧಿ ಹೆಸರಿನಲ್ಲಿ ಕಾಡು ನಾಶವಾಗುತ್ತಿದೆ. ಭೂಮಿಯನ್ನು ಅಗಿಯುತ್ತಿದ್ದೇವೆ. ಅಭಿವೃದ್ಧಿ ಹೆಸರಿನಲ್ಲಿ ಮರ ಕಡಿಯಲು ಪರಿಸರ ಇಲಾಖೆಯೇ ಅನುಮತಿ ಕೊಟ್ಟಂತಿದೆ’ ಎಂದು ರೂಪ ಹಾಸನ ಬೇಸರ ವ್ಯಕ್ತಪಡಿಸಿದರು. 

ಭಾನುವಾರ ನಗರದಲ್ಲಿ ನಡೆದ ಹಿರಿಯ ಪತ್ರಕರ್ತ ನಾಗೇಶ ಹೆಗಡೆಯವರ ಮೂಕ ಪೃಥ್ವಿಗೆ ಮಾತು ಕೊಟ್ಟ ಕಿಶೋರಿ, 'ಗ್ರೇತಾ ಥನ್ ಬರ್ಗ್' ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ರೂಪ ಅವರು ಮಾತನಾಡಿದರು. ವಿದ್ಯಾರ್ಥಿನಿ ಪ್ರಿಯಾಂಕ ಪುಸ್ತಕ ಬಿಡುಗಡೆ ಮಾಡಿದರು. 

ನಾಗೇಶ್ ಹೆಗಡೆ ಅವರು ಮಾತನಾಡಿ, ಸಾವಿರಾರು ವರ್ಷಗಳಿಂದ ಭೂಮಿ ಸಮತೋಲನ ಕಾಯ್ದುಕೊಂಡಿತ್ತು. ಪರಿಸರ ವಿರೋಧಿ ಚಟುವಟಿಕೆಗಳಿಂದ  ಭೂಮಿ ಜ್ವರದಿಂದ ಬಳಲುತ್ತಿದೆ. ಕಳೆದ 10 ವರ್ಷಗಳಿಂದ ಗರಿಷ್ಠ ತಾಪಮಾನ ವರದಿಯಾಗುತ್ತಿದೆ’ ಎಂದರು. 

ಕಾರ್ಯಕ್ರಮದಲ್ಲಿ ಸಂತೋಷ್ ಗುಡ್ಡಿಯಂಗಡಿ, ಸಂಜೀವ ಕುಲಕರ್ಣಿ, ಉಪಸ್ಥಿತರಿದ್ದರು. 

MORE NEWS

ಕರ್ನಾಟಕದಲ್ಲೂ ಪುಸ್ತಕೋದ್ಯಾನ: ಸಿದ...

05-12-2019 ಬೆಂಗಳೂರು

ವಿದೇಶಗಳಲ್ಲಿ ಜನಪ್ರಿಯವಾಗಿರುವ ಪುಸ್ತಕೋದ್ಯಾನ ಪರಿಕಲ್ಪನೆyu ಕರ್ನಾಟಕದಲ್ಲಿಯೂ ಜಾರಿಯಾಗಬೇಕು ಎಂದು ಸಾಹಿತಿ...

ಸಾರಾ ಅಬೂಬಕರ್‌ ದತ್ತಿ ಪ್ರಶಸ್ತಿಗೆ...

05-12-2019 ಮಂಗಳೂರು

ಕರಾವಳಿ ಲೇಖಕಿಯರ-ವಾಚಕಿಯರ ಸಂಘ ಕೊಡಮಾಡುವ ಸಾರಾ ಅಬೂಬಕರ್‌ ದತ್ತಿ ಪ್ರಶಸ್ತಿಗೆ ಉದಯೋನ್ಮುಖ ಲೇಖಕಿಯರಿಂದ ಕೃತಿಯನ್...

ವಿವಿಧ ಕ್ಷೇತ್ರ ಸಾಧಕರ ಪ್ರಶಸ್ತಿಗೆ...

05-12-2019 ಬೆಂಗಳೂರು

ವಿಶ್ವ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆಯು ಕನ್ನಡ ಸಾಹಿತ್ಯ ಸೇವಾ ಪ್ರಶಸ್ತಿ, ವಚನ ಸಾಹಿತ್ಯ ಸೇವಾ ಪ್ರ...

Top News
Top Events