ಓದು ಜನಮೇಜಯ

Date: 01-11-2019

Location: ಬೆಂಗಳೂರು


ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಪ್ನ ಬುಕ್ ಹೌಸ್‌ ಆಯೋಜಿಸಿದ್ದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಸುಧಾಮೂರ್ತಿಯವರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ ಚಂದ್ರಶೇಖರ್ ಕಂಬಾರರು ವಹಿಸಿದ್ದು, ತಮ್ಮ ಭಾಷಣದಿಂದ ಅಲ್ಲಿ ನೆರೆದಿದ್ದ ಜನರ ಮನಸ್ಸನ್ನು ಗೆದ್ದರು. ತದನಂತರದಲ್ಲಿ ನಾಡಿನ ಬಹು ಮುಖ್ಯ ಪತ್ರಿಕೆಗಳ ಸಂಪಾದಕರಾದ ರವೀಂದ್ರ ಭಟ್ಟ, ವಿಶ್ವೇಶ್ವರ ಭಟ್ಟ, ರವಿ ಹೆಗ್ಡೆ, ಶ್ರೀವತ್ಸ ನಾಡಿಗರು, ಹುಣಸವಾಡಿ ರಾಜನ್ನರು, ಚನ್ನೇಗೌಡರು ಮತ್ತು ವಿನಾಯಕ ಮೂರೂರರು ’ಪ್ರಸ್ತುತ ಪತ್ರಿಕೆ ಮತ್ತೆ ಪುಸ್ತಕೋದ್ಯಮದ ಸವಾಲುಗಳು ಮತ್ತು ತಮ್ಮ ಅನುಭವದ ಟಿಪ್ಪಣಿಗಳನ್ನು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. 

“ಓದುಗರಿದ್ದಾರೆ ಮರೆಯದಿರಿ” ಪುಸ್ತಕವನ್ನು ಕುರಿತು ಬರೆದ ಅಂಕಣಕಾರರೆಲ್ಲ ಪುಸ್ತಕದ ಕುರಿತು ಮಾತನಾಡಿದರು. ಜೋಗಿಯವರು ಪುಸ್ತಗಳಿವೆ ಎಚ್ಚರಿಕೆ, ವಸುಧೇಂದ್ರರು ಅನುವಾದಕ್ಕೊಂದು ವಾದ, ಕರಣಂ ಪವನ್ ಪ್ರಸಾದರು ಹೊಸ ಓದುಗನ ಜಗತ್ತು, ಜಿ ಏನ್ ಮೋಹನರು ಒಂದು ಸಾವಿರದ ಪ್ರಶ್ನೆ, ವಿಶ್ವೇಶ್ವರ ಭಟ್ಟರು ಕನ್ನಡ ಪುಸ್ತಕೋದ್ಯಮ, ಕೆ ವಿ ಅಕ್ಷರ ಅವರು ಕನ್ನಡ-ಪುಸ್ತಕ-ಪುರುಷ ಹಿಡಿಯದ ಹಾದಿಗಳು ವಿಚಾರಗಳು ಬಗ್ಗೆ ಮಾತನಾಡಿದರು. ಸಿದ್ಧಲಿಂಗಯ್ಯನವರು ಕನ್ನಡ ಪುಸ್ತಕೋದ್ಯಮದ ಪೋಷಣೆಯ ಬಗ್ಗೆ, ರಾ. ನಂ  ಚಂದ್ರಶೇಖರರು ಕನ್ನಡ ಪುಸ್ತಕಗ ಓದು ಹೇಗಿವೆ ಅನ್ನುವ ವಿಷಯದ ಕುರಿತು ಮಾತನಾಡಿದರು. ನಾಡಿನ ಅನೇಕ ಪ್ರಸಿದ್ಧ ಲೇಖಕರೊಟ್ಟಿಗೆ ಚಂಪಾ, ಹಂಪನಾ ಮತ್ತೆ ಹಂಪನಾ, ಡುಂಡಿರಾಜ್, ಎಚ್ ಎಸ ವಿ, ದೊಡ್ಡರಂಗೇಗೌಡ ಹಲವಾರು ಗಣ್ಯಾತಿರಣ್ಯರು ಹಾಜರಿದ್ದರು.

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...