ಯೋಗದ ವಿವಿಧ ‘ಆಸನಗಳು’

Date: 07-09-2023

Location: ಬೆಂಗಳೂರು


“ಯಾವಾಗ ಮನಸ್ಸು ಬುದ್ಧಿ ಮತ್ತು ಅಹಂಕಾರ ನಿಗ್ರಹಿಸಲ್ಪಡುತ್ತವೆಯೋ, ಚಂಚಲವಾದ ಕಾಮಗಳಿಂದ ಬಿಡುಗಡೆ ಹೊಂದಲ್ಪಟ್ಟು ಆತ್ಮನಲ್ಲಿ ನಿಲ್ಲುತ್ತದೋ, ಆಗ ಮಾನವನು ಭಗವಂತನೊಡನೆ ಸಂಸರ್ಗಹೊಂದಿದ 'ಯುಕ್ತ' ಎಂದಾಗುತ್ತಾನೆ,'' ಎನ್ನುತ್ತಾರೆ ಯೋಗಪಟು ಚೈತ್ರಾ ಹಂಪಿನಕಟ್ಟಿ. ಅವರು ತಮ್ಮ ''ಯೋಗ...ಯೋಗಾ'' ಅಂಕಣದಲ್ಲಿ ''ಯೋಗದ ವಿವಿಧ ‘ಆಸನಗಳು’ ವಿಚಾರದ ಕುರಿತು ಚರ್ಚಿಸಿದ್ದಾರೆ.

ಯೋಗದರ್ಶನಕ್ಕೆ ಬಹುಮುಖ್ಯವಾದ ಆಧಾರವನಿಸುವ ಭಗವದ್ಗೀತೆಯ ಆರನೆಯ ಅಧ್ಯಾಯದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಯೋಗದ ಅರ್ಥ 'ನೋವು ಮತ್ತು ದುಃಖಗಳ ಸ್ಪರ್ಶದಿಂದ ಬಿಡುಗಡೆ' ಎಂದು ಹೇಳಿದ್ದಾನೆ : “ಯಾವಾಗ ಮನಸ್ಸು ಬುದ್ಧಿ ಮತ್ತು ಅಹಂಕಾರ ನಿಗ್ರಹಿಸಲ್ಪಡುತ್ತವೆಯೋ, ಚಂಚಲವಾದ ಕಾಮಗಳಿಂದ ಬಿಡುಗಡೆ ಹೊಂದಲ್ಪಟ್ಟು ಆತ್ಮನಲ್ಲಿ ನಿಲ್ಲುತ್ತದೋ, ಆಗ ಮಾನವನು ಭಗವಂತನೊಡನೆ ಸಂಸರ್ಗಹೊಂದಿದ 'ಯುಕ್ತ' ಎಂದಾಗುತ್ತಾನೆ. ಎಲ್ಲಿ ಗಾಳಿಯು ಬೀಸುವುದಿಲ್ಲವೋ ಅಲ್ಲಿ ದೀಪವು ಅಲಗುವುದಿಲ್ಲ, ಹಾಗೆಯೇ ಮನಸ್ಸನ್ನೂ ಬುದ್ಧಿಯನ್ನೂ ಅಹಂಕಾರವನ್ನೂ ಅಧೀನವಾಗಿರಿಸಿಕೊಂಡ ಯೋಗಿಯ ವಿಚಾರವೂ ಕೂಡ. ಯೋಗಸಾಧನೆಯಿಂದ ಮನಸ್ಸಿನ, ಬುದ್ಧಿಯ, ಅಹಂಕಾರದ ಚಂಚಲತೆಯನ್ನು ಯಾವಾಗ ತಡೆಯಬಹುದೋ ಆಗ ಯೋಗಿಯು ಆತ್ಮದ ಪ್ರಸಾದದಿಂದ ಸಂತೃಪ್ತನಾಗುತ್ತಾನೆ. ಆಗ ಬುದ್ಧಿ- ತರ್ಕ ಹಿಡಿತಕ್ಕೆ ಸಿಗದ, ಇಂದ್ರಿಯಗಳ ಶಕ್ತಿಗೆ ಅತೀತವಾದ, ನಿತ್ಯಾನಂದವನ್ನು ಅರಿಯುತ್ತಾನೆ. ಅಂಥವನು ಈ ಸದ್ವಸ್ತುವಿನಲ್ಲೇ ನೆಲೆಸಿ ಅದರಿಂದ ಹೊರಗೆ ಬರುವುದೇ ಇಲ್ಲ. ಎಲ್ಲದಕ್ಕಿಂತ ಉತ್ಕೃಷ್ಟವಾದ ನಿಧಿಯನ್ನು ಹುಡುಕಿರುತ್ತಾನೆ. ಇದಕ್ಕಿಂತ ಉತ್ತಮತರ ನಿಧಿ ಬೇರೊಂದಿಲ್ಲ. ಇದನ್ನು ಸಾಧಿಸಿದವನು ಇಂಥ ತೀಕ್ಷ್ಯವಾದ ದುಃಖದಿಂದಲೂ ಚಲಿಸುವುದಿಲ್ಲ. ಇದು ಯೋಗದ ನಿಜವಾದ ಅರ್ಥ-ನೋವು ಮತ್ತು ದುಃಖದ ಸ್ಪರ್ಶದಿಂದ ಬಿಡುಗಡೆ.”

ಚೆನ್ನಾಗಿ ಕೊರೆದ ವಜ್ರವು ಅನೇಕ ಮುಖಗಳನ್ನು ಹೊಂದಿದ್ದು ಪ್ರತಿಯೊಂದೂ ಒಂದೊಂದು ವರ್ಣವನ್ನು ಪ್ರತಿಬಿಂಬಿಸುವಂತೆ ಯೋಗವೆನ್ನುವ ಪದವೂ ತನ್ನ ವಿವಿಧ ಅಂಶ ಗಳಿಂದ ವಿವಿಧ ಅರ್ಥಗಳನ್ನು ಸೂಚಿಸಿ ಶಾಂತಿ ಮತ್ತು ಸುಖವನ್ನು ಹುಡುಕುವ ಮಾನವನ ಸಾಧನೆಯವಿವಿಧ ಮುಖಗಳನ್ನು ತೋರಿಸುತ್ತದೆ.

ಇವತ್ತು ಯೋಗಾಸನ ಮಾಡಲು ತುಂಬಾ ಉಪಯುಕ್ತವಾದ ಎರಡು ಆಸನಗಳ ಪರಿಚಯ ನಿಮ್ಮೊಂದಿಗೆ ಹಂಚಿಕೊಳ್ಳುವೆ.

--------------------

ಪದ್ಮಸನ ( ಕಮಲದ ಭಂಗಿ)

ಪದ್ಮ ಎಂದರೆ : ಕಮಲ
ಆಸನ : ಸ್ಥಿತಿ

ಮಾಡುವ ವಿಧಾನ:

ಈ ಆಸನವನ್ನು ಅಭ್ಯಾಸ ಮಾಡಲು, ನೀವು ಮೊದಲು ಕುಳಿತುಕೊಳ್ಳಬೇಕು.
* ಕುಳಿತಾಗ,ನಿಮ್ಮ ಬೆನ್ನನ್ನು ನೆಟ್ಟಗೆ ಇರಿಸಿ.
* ಮುಂದಿನ ಹಂತದಲ್ಲಿ ನಿಮ್ಮ ಕೈಗಳ ಸಹಾಯದಿಂದ ನಿಮ್ಮ ಬಲ ಪಾದವನ್ನು ನಿಮ್ಮ ಎಡ ತೊಡೆಯ ಹತ್ತಿರ ತಂದು ಇರಿಸಿ.
* ಪಾದವು ನಿಮ್ಮ ಕಡೆಗೆ ಮುಖ ಮಾಡಿರಬೇಕು. ಇದೇ ರೀತಿ ನಿಮ್ಮ ಎಡ ಪಾದವನ್ನು ಬಲ ತೊಡೆಯ ಮೇಲೆ ಇರಿಸಿ.
* ಈ ಭಂಗಿ ಮಾಡಿದ ನಂತರ, ನಿಮ್ಮ ಕೈಗಳನ್ನು ನಿಮ್ಮ ಮೊಣಕಾಲುಗಳ ಮೇಲೆ ನಿಧಾನವಾಗಿ ಇರಿಸಿ, ನಿಮ್ಮ ಬೆರಳುಗಳಿಂದ ಮುದ್ರೆಯನ್ನು ರೂಪಿಸಿ. ಈ ಭಂಗಿಯಲ್ಲಿ ಕುಳಿತಿರುವಾಗ, ಬೆನ್ನುಮೂಳೆಯನ್ನು ಮತ್ತು ತಲೆಯನ್ನು ನೇರವಾಗಿ ಇಡುವುದು ಅವಶ್ಯಕ. ಪದ್ಮಾಸನದಲ್ಲಿ ಕುಳಿತ ನಂತರ, ಉಸಿರಾಟದ ವ್ಯಾಯಾಮ ಬರುತ್ತದೆ. ಆಳವಾಗಿ ಉಸಿರಾಡಿ ಮತ್ತು ಉಸಿರು ಬಿಡುವ ಮೊದಲು ಕೆಲವು ನಿಮಿಷಗಳ ಕಾಲ ನಿಮ್ಮ ಉಸಿರನ್ನು ಹಿಡಿದುಕೊಳ್ಳಿ. ನಿಮ್ಮ ಉಸಿರಾಟದ ಮೇಲೆ ಕೇಂದ್ರೀಕರಿಸುವುದರ ಜೊತೆಗೆ, ನಿಮ್ಮ ಸಂಪೂರ್ಣ ದೇಹದ ಮೇಲೆ ಕೇಂದ್ರೀಕರಿಸಿ.

ಪದ್ಮಸನದ ಪ್ರಯೋಜನಗಳು:

೧) ಜೀರ್ಣಶಕ್ತಿ ಹೆಚ್ಚುತ್ತದೆ.
೨) ಸ್ನಾಯುಗಳ ಮೇಲಿನ ಒತ್ತಡವು ಕಡಿಮೆಯಾಗಿ ರಕ್ತದೊತ್ತಡವನ್ನು ಸಹಜಸ್ಥಿತಿಯಲ್ಲಿಡುವುದು.
೩) ಮನಸ್ಸು ಪ್ರಶಾಂತವಾಗುವುದು.
೪) ಗರ್ಭಿಣಿ ಸ್ತ್ರೀಯರಿಗೆ ಪ್ರಸವದ ಸಮಯದಲ್ಲಿ ಸಹಕಾರಿ.
೫) ಋತುಸ್ರಾವದ ತೊಂದರೆಗಳಿಂದ ಉಪಶಮನ.

--------------------

ವಜ್ರಾಸನ

ವಜ್ರ: ವಜ್ರಾ
ಆಸನ: ಭಂಗಿ

ಮಾಡುವ ವಿಧಾನ:

1) ಮೊದಲು ನೆಲದಮೇಲೆ ಎರಡು ಕಾಲುಗಳನ್ನು ಮುಂದೆ ಚಾಚಿ ಕುಳಿತುಕೊಳ್ಳಿ.
2) ಈಗ ನಿಮ್ಮ ಮಂಡಿಗಳನ್ನು ಒಂದೊಂದಾಗಿ ಮಡಚಿ ಪಾದಗಳನ್ನು ಪ್ರಷ್ಠದ ಹತ್ತಿರ ತನ್ನಿ.
3) ಮಂಡಿ ಒಂದಕ್ಕೊಂದು ಪರಸ್ಪರ ಕೂಡಿರಲಿ. ದೇಹದ ಸಂಪೂರ್ಣ ಭಾರ ಎರಡು ಹಿಮ್ಮಡಿಯ ಮೇಲಿರಿಸಿ.
4) ಬೆನ್ನು ಮತ್ತು ಕತ್ತು ನೇರವಾಗಿರಲಿ. ಕೈಗಳನ್ನು ನೇರ ಮಾಡಿ ಹಸ್ತಗಳನ್ನು ಮಂಡಿಯ ಮೇಲಿರಿಸಿ.
5) ವಜ್ರಾಸನ ಹೆಚ್ಚುಹೊತ್ತು ಅಭ್ಯಾಸ ಮಾಡುವುದರಿಂದ ದೇಹ ವಜ್ರದಷ್ಟು ಗಟ್ಟಿಯಾಗುತ್ತದೆ.

ಇದೇ ಸ್ಥಿತಿಯಲ್ಲಿ ನಿಮಗೆ ಸಾಧ್ಯವಾದಷ್ಟು ಹೊತ್ತು ಇದ್ದು ನಂತರ ಕಾಲುಗಳನ್ನು ಒಂದೊಂದಾಗಿ ಮುಂದೆ ಚಾಚಿ ಶಿಥಿಲ ದಂಡಾಸನದಲ್ಲಿ ವಿಶ್ರಾಂತಿ ತೆಗೆದುಕೊಳ್ಳಿ.

ವಜ್ರಾಸನದ ಪ್ರಯೋಜನಗಳು:

1) ಕೀಲು ಮತ್ತು ಕಾಲುನೋವು ಗುಣವಾಗುತ್ತದೆ.
2) ಆಹಾರ ಸುಲಭವಾಗಿ ಜೀರ್ಣವಾಗುತ್ತದೆ.
3) ಬೆನ್ನು ಮೂಳೆಗೆ ಉತ್ತಮ ವ್ಯಾಯಾಮ ಸಿಗುತ್ತದೆ.
4) ಕಿಬ್ಬೊಟ್ಟೆಯ ಸ್ನಾಯುಗಳು ಬಲಗೊಳ್ಳುತ್ತವೆ.
5) ಮಂಡಿಯ ಆರೋಗ್ಯಕ್ಕೆ ಒಳ್ಳೆಯದು.

ದಿನನಿತ್ಯ ಅರ್ಧ ತಾಸಾದರು ವಜ್ರಾಸನ ರೂಢಿಸಿಕೊಳ್ಳಿ. ಊಟದ ನಂತರ ವೇಗವಾಗಿ ನಡೆದಾಡುವ ಬದಲಿಗೆ ಈ ವಜ್ರಾಸನ ಮಾಡುವುದರಿಂದ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ. ಹಾಗೂ ಮುಂದಿನ ದಿನಗಳಲ್ಲಿ ಮಾಡಬಹುದಾದ ಆಸನಗಳಿಗೆ ಈ ಎರಡೂ ಆಸನಗಳು ಪೂರಕವಾಗಿವೆ.

ಚೈತ್ರಾ ಹಂಪಿನಕಟ್ಟಿ
chaitrah8989@gmail.com

ಈ ಅಂಕಣದ ಹಿಂದಿನ ಬರಹಗಳು:
ಯೋಗವೆಂದರೆ ಆತ್ಮವನ್ನು ಪರಮಾತ್ಮನಲ್ಲಿ ಲೀನಗೊಳಿಸುವ ಕಲೆ

MORE NEWS

ಅಂಬಿಗರ ಚೌಡಯ್ಯನ ವಚನಗಳಲ್ಲಿ ಸಂಸ್ಕೃತಿಯ ನಿರ್ವಚನ

08-05-2024 ಬೆಂಗಳೂರು

"ಪ್ರತಿಯೊಬ್ಬರು ಹುಟ್ಟಿನಿಂದ ಮನ್ನಣೆಯನ್ನು ಪಡೆಯದೆ ನಡೆ ನುಡಿಯಿಂದ ಮನ್ನಣೆ ಪಡೆಯಬೇಕೆಂಬ ನವ ನೈತಿಕತೆಯನ್ನು ಹುಟ್...

ಕನ್ನಡಮುಂ ಪಾಗದಮುಂ

04-05-2024 ಬೆಂಗಳೂರು

"ಅಸೋಕನ ಶಾಸನಗಳನ್ನು ಓದುವ ವಿದ್ವಾಂಸರು ಇದನ್ನು ಗುರುತಿಸುವ ಪ್ರಯತ್ನ ಮಾಡುತ್ತಾರೆ. ಅದರೊಟ್ಟಿಗೆ ಆ ಕಾಲರ‍್ಯ...

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...