Poem

ಅಮ್ಮನಿಗೊಂದು ಪತ್ರ

ಅಮ್ಮ ಹೇಗಿದ್ದೀಯಾ?
ಇಲ್ಲಿ ನಾವೆಲ್ಲಾ ಸೌಖ್ಯವಾಗಿದ್ದೇವೆ
ನೀನು ಸೌಖ್ಯವಾಗಿರುವೆ ಎಂದು ಭಾವಿಸಿರುವೆ

ಹೀಗಷ್ಟೇ ಯುಗಾದಿ ಹಬ್ಬ ಮುಗಿದಿದೆ
ಎಂದಿನಂತೆ ನವಮಾಸ ಚಿಗುರಿಸುದಿದೆ
ಕೋಗಿಲೆ ಹಾಡಿದೆ
ಅಂಗಳದ ಮೊಗ್ಗು ಅರಳಿದೆ
ನಿನ್ನ ನೆನಪಿನಂಗಳದ ಮಾತು ದೀಪದ ಸಾಲುಗಳಾಗಿವೆ
ಸೂರ್ಯನ ಬಣ್ಣ ಒಂಬಣ್ಣಗಳು ಜಗವ ಚೆಲ್ಲಾಡಿವೆ

ಇಲ್ಲಿ ಧಾರೆ ಹುರುಳಾಗಿಲ್ಲ, ಟಿಸಿಲೊಡೆದಿದೆ
ರೆಂಬೆ ಕೊಂಬೆಗಳೆಲ್ಲವೂ ಸ್ವಾತಂತ್ಯ್ರದ ಹಕ್ಕಿಯಂತೆ
ನೆಲದ ಬೇರುಗಳೆಷ್ಟೂ ಗಟ್ಟಿ ಎಂದು ನನಗೆ ತಿಳಿದುಬಂದಿಲ್ಲ
ವೀಣೆ ತಂತುಗಳು ನನ್ನ ಸ್ವೇಚ್ಛೆಯಲ್ಲ
ತಂಬೂರಿಯಂತು ನನ್ನದಲ್ಲ
ಲೋಕ ನಾದಮಯವಾಗಿರುವುದಂತೂ ನಾ ಬಲ್ಲೆ

ಚಿಗುರು ಮೊಗ್ಗೆಲ್ಲವೂ ನಾಳೆಯ ಹೂವು
ನೀ ಮಿಡಿದ ಶೃತಿ, ರಾಗ, ಲಯ
ನಾನಿಲ್ಲಿ ಹೊಮ್ಮಿಸುತ್ತಿದ್ದೇನೆ
ನಿನ್ನ ಅಂತಃಕರಣದ ಪ್ರೀತಿ ಮಾಸಿಲ್ಲ

ಆಗಸದ ನಕ್ಷತ್ರಗಳೊಂದಿಗೆ ಬೆಳದಿಂಗಳ ಬೆಳಕನ್ನು ಚೆಲ್ಲುತ್ತಾ
ಕಣ್ಣ ಕಂಬ್ಬನಿಗೊಂದುಂದು ಕವನವನ್ನು ಹೊಸೆಯುತ್ತಾ
ದನಿವರಿಯದೇ ಬಾಳನ್ನು
ಚಂದ್ರನ್ನ ತೊಟ್ಟಿಳಲ್ಲಿಯಿಟ್ಟು ತೋಗಿಸುತ್ತಿದ್ದೇನೆ
ಇಂತೀ ನಿನ್ನ ಮಗಳು

- ಲಕ್ಷ್ಮೀ ಮುದೇನೂರು

ಲಕ್ಷ್ಮಿ ಮುದೇನೂರು

ವರಮಹಾಲಕ್ಷ್ಮಿ ಬಿ.ಎಂ ಇವರ ಕಾವ್ಯನಾಮ 'ಲಕ್ಷ್ಮಿ ಮುದೇನೂರು'. ಇವರು ಮೂಲತಃ ದಾವಣಗೆರೆಯವರು.ವಿಜ್ಞಾನ ವಿದ್ಯಾರ್ಥಿನಿಯಾದ ಇವರು ಸಾಹಿತ್ಯದ ಓದು,ಬರಹದಲ್ಲಿ ಆಸಕ್ತಿ.'ಇಂತಿ ನಿನ್ನ ಹಕ್ಕಿ' ಇದು ಇವರ ಚೊಚ್ಚಲ ಕವನ ಸಂಕಲನ.ಇವರು ಗೃಹಿಣಿಯಾಗಿದ್ದು ಇವರ ಮನೆಯವರಾದ ಡಾ.ನಿಂಗಪ್ಪ ಮುದೇನೂರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರು. ಹಾಗಾಗಿ ಇವರು ಧಾರವಾಡದಲ್ಲಿ ವಾಸವಾಗಿದ್ದಾರೆ.

More About Author