Poem

ಪ್ರೀತಿಯ ಜಾಹಿರಾತು

ಅವಳು ಎನ್ನಾ ಪ್ರೀತಿಯು ಜೋಳಿಗೆಯ ಹೊಕ್ಕವಳು;
ನನ್ನ ಏಕಾಂಗಿಯ ಪಯಣಕ್ಕೆ ಮಂಗಳ ಹಾಡಿದವಳು;
ನನ್ನ ದುಃಖಕ್ಕೆ ನಗುವಾದವಳು;
ನನ್ನ ಭಾವ ಜೋಕಾಲಿಯಲ್ಲಿ ಆಡು ವವಳು;
ನನ್ನ ಕನಸುಗಳಿಗೆ ನಾಯಕಿ ಆದವಳು;
ಮೂಗುತಿಯ ಸುಂದರೀ;
ಮುಂಗುರುಳ ಬೆಡಗಿ;
ಗುಳಿಗೆನ್ನೆಯ ಒಡತಿ;
ಕೆಂದುಟಿಯ ಚಲುವೆ
ಕಾಡಿಗೆ ಕಣ್ಣಿನ ಅರಸಿ;
ಚಲುವೆ ಯಾಕೀ ಮೌನ ಚಳವಳಿ;
ಮಾತಾಡೇ ನನ್ನ ಬಳಿ;
ಆ ಮಾತುಗಳಿಂದ ಅಂದರದಿಂದ ಹೆಪ್ಪುಗಟ್ಟಿದ ನೆನಪುಗಳೆಲ್ಲವೂ...
ಮರುಚಲಿಸುವುದು ಎಂದು ನಾ ಕಾಯುತ್ತಿರುವೆ...
ನನಗರಿಯದೇ ನನ್ನ ನಾ ಮರೆತು
ನೀ ಆಲಿಸಿ ಸ್ವೀಕರಿಸು
ಈ ಪ್ರೀತಿಯು ಜಾಹೀರಾತು

- ಸಜಿ ಆರ್ ತುಮರಿ

ಸಜಿ ಆರ್ ತುಮರಿ

ಕವಿ ಸಜಿ ಆರ್ ತುಮರಿ ಅವರಿಗೆ ಬರವಣಿಗೆಯಲ್ಲಿ ವಿಶೇಷ ಆಸಕ್ತಿ. ಕಾವ್ಯ ರಚನೆ ಹಾಗೂ ಲೇಖನ ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

More About Author