Poem

ಕತ್ತಲ ರಾತ್ರಿ.. 

ಕೆಳಗೇರಿಯ ತುದಿಯ ತಿರುವಿನಲ್ಲಿ
ಕಾಣುವ ಕೊನೆಯ ಗುಡಿಸಿಲಿನ
ಮಾಲೀಕ ನಾನು...
ಆಚೆಗೂ ಕತ್ತಲು
ಈಚೆಗೂ ಕತ್ತಲು
ಮಧ್ಯದಲ್ಲಿ ಮಾತ್ರ ನಾನು ಬೆತ್ತಲು..
ಚಿಮಣಿಯ ಬೆಳಕಲ್ಲಿ
ಒಂದಗಲ ಜಾಗದಲ್ಲಿ
ಕೂಳು ಕಾಣದೆ ಬಿದ್ದುಕೊಂಡಿದ್ದೆ..
ವರ್ಷದಿಂದ್,
ಕಾಡುತಿದ್ದ ಕಪ್ಪು ಸುಂದರಿಯೊಬ್ಬಳು
ಕಾಡ ಕಣಿವೆಯ ದಾರಿಗೆ ಕರೆದೊಯ್ದಿದು ಕೈ ಬಿಟ್ಟಿದ್ದಳು..
ದಾರಿಯ ಕಾಣದ ನಾನು
ಬೆಳಕನ್ನ ಅರಸಿ ಮುನ್ನೆಡೆದೆ..
ಮುಂದಡಿ ಹೆಜ್ಜೆ ಇಡುತ್ತಲೇ,
ಪ್ರಪಾತಕ್ಕೆ ಬಿದ್ದುಬಿಟ್ಟೆ..
ಕಣ್ತೆರೆದು ನೋಡಿದಾಗ ಎದೆಯ ಮೇಲೆ
ಕರಿಯ ಬೆಕ್ಕೊಂದು ಹಾರಿ ಹೋಯಿತು..
ಸೂರ್ಯಯ ಕಿರಣ ರಾಶಿಗಳು
ಕಪಾಳಕ್ಕೆ ಮುತ್ತಿಟ್ಟು ನನ್ನ
ಮಂತ್ರಮುಗ್ದನ್ನನಾಗಿಸಿತ್ತು..

-ಬಸಂತ್.ಡಿ.ಉಮಾಪತಿ

ಬಸಂತ್ ಡಿ. ಉಮಾಪತಿ

ಬಸಂತ್ ಡಿ. ಉಮಾಪತಿ ಅವರು ಮೂಲತಃ ಕೊಟ್ಟೂರೇಶ್ವರದವರು. ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿರುವ ಅವರು ಕೊಟ್ಟೂರೇಶ್ವರ ಪಿ. ಯು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕತೆ ಕವಿತೆ ಬರೆಯುವುದು ಅವರ ಹವ್ಯಾಸವಾಗಿದೆ.

More About Author