Poem

ನನ್ನ ಅಮ್ಮನ ಜನ್ಮದಿನ 

ಅಮ್ಮಾ
ಒಡಲಾಳದ ಕನಸಿನ ಸೊತ್ತು
ಉದರ ಗರ್ಭದೊಳೆನ್ನ ಹೊತ್ತು
ತಿರುಗಿದೆ ನೀನು ತಿಂಗಳೊಂಬತ್ತು
ಮಡಿಲಿಗಿಳಿಸಿದೆ ನೀ ಜೀವವನಿತ್ತು

ನನ್ನ ಜೀವ ಧರೆಗಿಳಿವ ಹೊತ್ತು
ನಿನ್ನ ಜೀವನವೇ ಪಣವಾಗಿತ್ತು
ಅಮ್ಮಾ ಆ ಸ್ಪರ್ಶದೊಳಗೇನಿತ್ತು
ಎಲ್ಲವನು ಮರೆತೆ ನಾ ಅತ್ತು ಅತ್ತು

ನಾ ನಿನಗೆ ನೋವುಣಿಸಿದ ಕ್ಷಣ
ಈ ದಿನ ನಿನ್ನ ಪುನರ್ಜನ್ಮ ದಿನ
ಎನಗೆ ಜನ್ಮ ನೀಡಿದ ಶುಭ ದಿನ
ನನಗೊಂದು ವಿಳಾಸ ವಿತ್ತ ಮನ

ಕಣ್ಮರೆಯಾಗಿ ಹೋದರೇನೀಗ
ಬಂದುಬಿಡು ಮಗಳಾಗಿ ಬೇಗ
ಋಣವ ತೀರಿಸುವ ಮಹದಾಸೆ
ಅಳಿಸದಿರೆನ್ನೆಯ ಮೋಹ ಪಾಶ

ಮಾಯಾ ಮಾತೆಯೇ ನೀನು
ಕಾಯಕ ಮರೆಸಿದ ನೋವುಗಳೇನು
ನಿನ್ನ ಕಣ್ಣೀರ ಧಾರೆ ನೋವುಗಳನು
ದಾರಿ ತಪ್ಪಿಯೂ ಬರದಂತೆ ಕಾಯುವೆನು

(ತಮಿಳು ಮೂಲ:- ಪೆರುಮಾಳ್ ಲಕ್ಷ್ಮಣನ್)

ಕನ್ನಡ ಅನುವಾದ :- ವೈಲೇಶ್ ಪಿ ಎಸ್ ಕೊಡಗು.

ವೈಲೇಶ್ ಪಿ. ಎಸ್

ಲೇಖಕ ವೈಲೇಶ್ ಪಿ. ಎಸ್ ಅವರು ಮೂಲತಃ ಕೊಡಗಿನವರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕರಾಗಿದ್ದಾರೆ. 

 ಕೃತಿಗಳು: ಅಮ್ಮ ನಿನಗಾಗಿ (2018) , ಕಣ್ಮರೆಯಾದ ಹಳ್ಳಿ(2020), ಬೊಮ್ಮಲಿಂಗನ ಸಗ್ಗ(2021) (ಕವನಸಂಕಲನ)

More About Author