Poem

ನನ್ನ ತಂದೆಗೊಂದು ಕವನ

ನನ್ನ ತಂದೆಯೇ ನನಗೆ ಅನಿಮಿತ್ತಪರಮ ಬಂಧು,
ನನ್ನ ಮೇಲೆ ಸದಾ ಪ್ರೇಮದ ಪ್ರವಾಹವನ್ನೇ ಹರಿಸುವ ಕರುಣಾಸಿಂಧು.
ಕಟುಸತ್ಯವೇ ನೆಂದರೆ, ನಾನು ಬಾಲ್ಯದಿಂದ ಹರೆಯದವರೆಗೆ ಅಜ್ಞಾನ, ಪ್ರತಿಷ್ಠೆಗಳಿಂದ ಆಗಾಗ ತರುತ್ತಿದ್ದೆ ಇವರಿಗೆ ಅಪಕೀರ್ತಿ,
ಹೀಗಿದ್ದರೂ ನಿಷ್ಠುರ ಪ್ರತಿಕ್ರಿಯಿಸದೆ ಕೇವಲ ತಿದ್ದಿ, ಬುದ್ದಿಹೇಳಿ ದುಃಖದ ಕಡಲನ್ನೇ ತನ್ನೊಳಗೆ ಮಡುವಾಗಿಟ್ಟುಕೊಂಡ
ಕರುಣಾಮೂರ್ತಿ.
ನಾ ಕಂಡಂತೆ ಎಲ್ಲರೂ ಹೇಳುವರು ನನ್ನ ತಂದೆ ದೇವರಂಥ ಮನುಷ್ಯ, ರಾಮನಂತೆ ಶಾಂತ,
ತಾವು ಮಾನಸಿಕವಾಗಿ, ದೈಹಿಕವಾಗಿ ಸವೆದರೂ ಮಗಳ ಮನಸ್ಸನ್ನು ಇಟ್ಟರು ಸದಾ ಪ್ರಶಾಂತ.
ಕೇವಲ ಉಪದೇಶಿಸದೆ ಸ್ವಯಂ ಸದ್ಗುಣಗಳ, ತತ್ವಗಳ, ಪರೋಪಕಾರಗಳ ಪಾಲಿಸಿದ ಆದರ್ಶ ಮೂರ್ತಿ ನನ್ನ ತಂದೆ,
ಕೆಲವೊಮ್ಮೆ ಇವರ ಮಾರ್ಗದರ್ಶನದ, ಆಸೆಗಳ ವಿರುದ್ಧನಡೆದು ಇವರ ನಿಷ್ಕಲ್ಮಶ ಅಂತರಾಳದ ಭಾವನಾ ಲೋಕವನ್ನೇ ಕೊಂದೆ.
ಇದ್ಯಾ ವುದನ್ನು ಲೆಕ್ಕಿಸದ ಇವರು ಕ್ಷಮಾಸಾಗರರಾದ ಕೋಮಲ ಹೃದಯವಂತ, ನನ್ನ ಪ್ರತಿ ಇವರು ತೋರಿದ ತಾಳ್ಮೆ, ಮಾಡಿದ
ತ್ಯಾಗ ಅನಂತ,
ಇಂದಿಗೂ, ಎಂದೆಂದಿಗೂ ನನ್ನ ಹೃದಯ ಮಂಟಪದಲ್ಲಿ ಮನೆಮಾಡಿರುವ, ನನಗೆ ಪೂಜ್ಯನೀ ಯರಾದ ಇವರು ದೇವರ ಸ್ವಂತ.

- ಶ್ರೇಯಾ ಕುಲಕರ್ಣಿ

ಶ್ರೇಯಾ ಕುಲಕರ್ಣಿ

ಶ್ರೇಯಾ ಕುಲಕರ್ಣಿ ಅವರು ಮೂಲತಃ ಉತ್ತರ ಕರ್ನಾಟಕದವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಪದವೀಧರಳಾಗಿ ಐಟಿ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಬರವಣಿಗೆ ಅವರ ಹವ್ಯಾಸವಾಗಿದೆ.

More About Author