Poem

ನೆಗಡಿ

ನೀ ಬಂದಾಗ
ನಾ ತಲೆ ತಗ್ಗಿಸಲೇಬೇಕು!
ಮೂಗಿಡದು ಬಾಗಲೇಬೇಕು!
ಮೂಗಿಗ ಕೆಂಪಾಗಿದೆ ಕೋಪದಿಂದಲ್ಲ

ಶ್ರೀಮಂತರು ಗೌರವಕೊಟ್ರು
ನಾವೇನು ಕೊಡೊದಿಲ್ಲ
ನಿನ್ನ ವಿಸರ್ಜನೆ ಬೀದಿಯಲ್ಲಿಯೇ
ಈ ಕಡೆ ಸಿಂಬಳ ಸೀನೊದಿಲ್ಲ ಅಂದವರೆ ಈಗೇನು?
ಪದ್ಯದ ಮೊದಲ ಸಾಲಗಳನ್ನು ಮತ್ತೆ ಓದಿ

ನೆಗಡಿ ಯುವರ್ ಗ್ರೇಟ್!!!
ಹಳ್ಳ, ಹೊಳೆ, ನಿಂತನೀರು ಕುಡಿದರು ಬಾರದಿದ್ದಾಕಿ ಈಗ
ಬಿಸ್ಲೇರಿಚೆಂಜ್ ಮಾಡಿದ್ರೆ ಮೂಗಿನಿಂದ ಓಡಿ ಬಂದಬಿಡ್ತಿಯಾ!
ನೀನು ಕಾರ್ಪೊರೇಟ್ ಆಗಿರಬೇಕು!

ಮೂಗೇರಿಸಿ ಪ್ರಾಣಾಯಾಮ ಮಾಡಿಸುವೆ!
ಆಗಾಗ ಬಂದು ಬಂಧುವಾಗಿದಿ ನಿನ್ನ ಮೇಲೆ ಕೋಪವಿಲ್ಲ ಸೀನುತ್ತಿನಿ!
ದೊಡ್ಡ ಮೂಗು ಸಣ್ಣ ಮೂಗು ಬಂಗಾರ ಬೆಳ್ಳಿ ಮೂಗು! ಬರೀ ಮೂಗು ಸೀನಿಸಿ ಸಮಮಾಡಿದಿ!!
ನಾವೇನು ಗೌರವ ಕೊಡಲ್ಲ ನೀ ಸುಮ್ಮನೆ ಬರಬ್ಯಾಡ ನಮ್ಮನ್ಯಾಗ ಬೆಲ್ಲ ಬೆಳ್ಳುಳ್ಳಿ ಕುಟ್ಟುತ್ತಿವಿ ನಾವು ಜಿಎಸ್ಟಿಯಿಂದ ಬಲುದೂರು

- ಸಿದ್ದಣ್ಣ ಪೂಜಾರಿ

ಸಿದ್ದಣ್ಣ ಪೂಜಾರಿ ಯಕ್ಷಿಂತಿ

ಸಿದ್ದಣ್ಣ ಪೂಜಾರಿ ಯಕ್ಷಿಂತಿ ಇವರು ಮೂಲತಃ ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ಯಕ್ಷಿಂತಿ ಗ್ರಾಮದವರು,ಬಿಕಾಂ ಪದವೀಧರರಾಗಿದ್ದಾರೆ, ಕಾಲೇಜು ದಿನಗಳಿಂದಲೂ ಸಮಾಜದಲ್ಲಿ ನಡೆಯುವ ಅನ್ಯಾಯ ದೌರ್ಜನ್ಯಕ್ಕೆ ಒಳಗಾದವರು ದನಿಯಾಗಿದ್ದಾರೆ. ಅದರ ಪ್ರತಿಬಿಂಬವಾಗಿ ಬರವಣಿಗೆ ಇವರಿಗೆ ನೆಚ್ಚಿನ ವಿಷಯವಾಗಿದೆ ಈಗಾಗಲೇ ಇವರ ಚೊಚ್ಚಲ ಕೃತಿ ನೆಲದ ನೋವು ಪ್ರಕಟಣೆಗೆ ಸಿದ್ಧವಾಗಿದೆ. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ಕೃತಿ: ನೆಲದ ನೋವು

 

More About Author