Poem

ನೆನಪುಗಳು

ಬಿಡುವಾದಗೆಲ್ಲ
ನಿನ್ನ ನೆನಪುಗಳು
ನನ್ನ ಎದೆಯೊಳಗೆ
ಹಬೆಯಾಡುತ್ತವೆ.

ಸುಮ್ಮನೆ ಕುಳಿತು
ಸಹಿಸಿಕೊಂಡಷ್ಟು
ಹಿತವು, ಅಹಿತವು
ಜಿದ್ದಿಗೆ ಬೀಳುತ್ತವೆ.

ಹೆಚ್ಚು ಗದರಿಸಿ
ಹೊರಗೆ ದೂಡುವಂತಿಲ್ಲ
ಅನಾಥ ಭಾವದಿ
ತಬ್ಬಲಿಗಳಂತೆ ನಿಲ್ಲುತ್ತವೆ.

ಅವು ನಿಂತಷ್ಟು ಹೊತ್ತು
ನನ್ನ ಪಾಲಿನ ಕಾಲ
ಚೂರು ಚಲಿಸದೆ
ಗುಟುಕು ಜೀವವನ್ನು ಇರಿಯುತ್ತವೆ.

ಈ ಸತ್ತು ಬದುಕುವ
ಆಟ ಎಂದೂ ಓಳಿತಲ್ಲ
ಅದೇ ಯಾತನೆ, ನೆರಳಿನಂತೆ
ಮತ್ತೆ ಬೆಳೆದು ಎದುರಿಸುತ್ತವೆ.

ಇದೆಲ್ಲ ಇಲ್ಲಿಗೆ ಸಾಕೆಂದು
ನಾನು ಎದ್ದು ಹೊರಟರು
ಈ ನೆನಪುಗಳು ಕುಳಿತಲ್ಲೆ ಕುಳಿತು
ಇನ್ಯಾರದೋ ದಾರಿ ಕಾಯುತ್ತವೆ.

-ಆರ್. ಪವನ್ ಕುಮಾರ್

ಆರ್. ಪವನ್ ಕುಮಾರ್

ಆರ್. ಪವನ್ ಕುಮಾರ್ ಮೂಲತಃ ಶ್ರೀರಂಗಪಟ್ಟಣದವರು. ಸ್ನಾತಕೋತ್ತರ ಪದವೀಧರರು. ಸಿನಿಮಾ ಮತ್ತು ಸಾಹಿತ್ಯ ಅವರ ಆಸಕ್ತಿ ಕ್ಷೇತ್ರಗಳು. ಓದುವುದು, ಬರೆಯುವುದು ಅವರ ಹವ್ಯಾಸ. ಅನೇಕ ಕತೆಗಳು, ಕವಿತೆಗಳು ನಾಡಿನ ದಿನಪತ್ರಿಕೆ, ಮಾಸಪತ್ರಿಕೆಗಳಲ್ಲಿ ಪ್ರಕಟವಾಗಿವೆ.  ಎರಡು ರೇಡಿಯೋ ನಾಟಕಗಳು ಮೈಸೂರು ಆಕಾಶವಾಣಿಯಲ್ಲಿ ಪ್ರಸಾರವಾಗಿವೆ. ರಾಜ್ಯಮಟ್ಟದ ಯುವ ಬರಹಗಾರರ ಮಕ್ಕಳ ನಾಟಕ ರಚನಾ ಕಮ್ಮಟದಲ್ಲಿ ಭಾಗವಹಿಸಿ ನಾಟಕ ರಚಿಸಿದ್ದಾರೆ.  ‘ಅರಿಷಡ್ಗರ್ಗ’ ಎಂಬ ಚಲನಚಿತ್ರಕ್ಕೆ ಗೀತೆಗಳನ್ನು ರಚಿಸಿದ್ದಾರೆ. 

ಕೃತಿಗಳು: 

More About Author