Story

ಶ್ರೀಮಂತರ ಮನೆ ಸೊಸೆ ಆಗ್ತೀನಿ...

ಇಂದುಧರ್ ಹಳೆಯಂಗಡಿ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಪ್ರಸ್ತುತ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (SDMC ಉಜಿರೆ) ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತಿದ್ದಾರೆ. ಬರವಣಿಗೆ ಅವರ ಹವ್ಯಾಸವಾಗಿದೆ. ಅವರು ಬರೆದ ‘ಶ್ರೀಮಂತರ ಮನೆ ಸೊಸೆ ಆಗ್ತೀನಿ...... ಡಿಪ್ಲೊಮಾ ಓದಿದ್ರೂ ನಂಗೆ ಹುಡುಗಿ ಸಿಗ್ತಾಳೆ’ ಕತೆ ನಿಮ್ಮ ಓದಿಗಾಗಿ...

ಅವಳು ಬಿಎ ಪದವೀಧರೆ. ಓದುವ ಆಸಕ್ತಿ ಇದ್ರೂ, ಗಣಿತ ವಿಷಯ ಕಬ್ಬಿಣದ ಕಡಲೆ ಆಗಿದ್ದರಿಂದ, ಯಾವ ತೊಂದ್ರೆಯೂ ಬೇಡ ಅಂತ ಬಿಎ ಓದಿದ್ದಳು. ಪದವಿ ಆದ್ಮೇಲೆ ಮನೆಯಲ್ಲಿದ್ದ ಅವ್ಳನ್ನು ಎಲ್ರೂ "ನಿಂಗ್ಯಾರೆ ಗಂಡ್ ಕೊಡ್ತಾರೆ" ಅಂತ ಹಂಗಿಸಲು ಶುರು ಮಾಡಿದ್ರು. "ನೋಡ್ತಿರಿ, ಶ್ರೀಮಂತ ಹುಡುಗನನ್ನೇ ಮದುವೆ ಆಗ್ತೇನೆ" ಅಂತ ಎಲ್ರ ಮುಂದೆ ಚಾಲೆಂಜ್ ಮಾಡ್ತಾ ಬಂದ್ಳು.

ಇನ್ನು ಅವನು ಡಿಪ್ಲೋಮಾ ಓದಿದ್ದ. ಒಂದು ಶೋರೂಂನಲ್ಲಿ ಸೇಲ್ಸ್ ಬಾಯ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದ. ಈತನ ಬಗ್ಗೆಯೂ ಜನ ಕುಹಕವಾಡ್ತಿದ್ರು. "ಹುಡ್ಗೀರು ಈಗ ಎಂ.ಎ ಎಂಎಸ್ಸಿ ಇಂಜಿನಿಯರಿಂಗ್ ಇನ್ನೂ ಏನೇನೋ ಓದಿರ್ತಾರೆ. ಅಂತೋರೆಲ್ಲ ಬಿಎ ಹುಡುಗನಿಗೆ ಮದುವೆ ಆಗ್ತಾರಾ" ಅಂತ ಮಾತನಾಡಲಾರಂಭಿಸಿದ್ರು. ನಂಗೂ ಹುಡುಗಿ ಸಿಗ್ತಾಳೆ ಅಂತ ಇವ್ನದ್ದು ಚಾಲೆಂಜ್.

ಇಂತಾ ಹುಡುಗ, ಆಕಸ್ಮಿಕವಾಗಿ ಆ ಹುಡುಗಿಗೆ ಎದುರಾದ. ಇಬ್ಬರೂ ಮಾತಾಡುತ್ತಾ, ಒಳ್ಳೆ ಸ್ನೇಹಿತರಾದ್ರು. ಒಂದು ದಿನ, ಅವನು ನೇರವಾಗಿ ಹೇಳಿದ, "ನಾನು ನಿನ್ನನ್ನು ಪ್ರೀತಿಸ್ತಿದ್ದೇನೆ. ನಿನ್ನನ್ನೇ ಮದುವೆ ಆಗ್ಬೇಕು ಅಂತಿದ್ದೇನೆ". ಅವಳೂ ಥಟ್ಟನೆ ಪ್ರಶ್ನಿಸಿದಳು, "ನಂದು ಒಂದೇ ಕಂಡೀಷನ್. ನಿಮಗೆ ತಿಂಗ್ಳಿಗೆ 5 digit salary ಉಂಟಾ? ಹಾಗಿದ್ರೆ ಮಾತ್ರ ಮದುವೆ ಬಗ್ಗೆ ಯೋಚಿಸ್ತೇನ". ಅವನೂ ಸ್ವಲ್ಪ ಯೋಚಿಸಿ, ಹೋ ಉಂಟು, ಉಂಟು ಅಂದ.

ಅಷ್ಟೆ. ಇಬ್ಬರ ವಿವಾಹ ನಿಶ್ಚಯವಾಯ್ತು. ಮದುವೆ ಬಳಿಕ ಹೀಗೇ ಒಬ್ಬ ಪರಿಚಯಸ್ಥರು ಬಂದು ಇವಳ ಬಳಿ ಕೇಳಿದ್ರು, ಲೇ, ನೆನಪುಂಟಾ? ನೀನೊಮ್ಮೆ ಚಾಲೆಂಜ್ ಮಾಡಿದ್ದಿ ಅಲ್ವಾ, ಶ್ರೀಮಂತರ ಮನೆ ಸೊಸೆಯಾಗಿ ಹೋಗ್ತೇನೆ ಅಂತ, ಇವ್ರು ಶ್ರೀಮಂತರಾ?

- ನಿಮಗೊತ್ತಿಲ್ವಾ? ತಿಂಗಳಿಗೆ 5 digit salary ಇದೆ, ನಮ್ಮೋರಿಗೆ

- ಹೌದಾ, ಎಷ್ಟು?

- ಅದೆಲ್ಲ ನಾನು ಕೇಳಿಲ್ಲ. 5 digit ಅಂದ್ರೆ ಏನಿಲ್ಲ ಅಂದ್ರೂ ತಿಂಗಳಿಗೆ ಲಕ್ಷ ಸಂಪಾದಿಸ್ತಾರೆ

- ಲೇ ದಡ್ಡಿ..... 10,000 ಸಂಬಳವೂ 5 ಡಿಜಿಟ್ ಅಲ್ವೇನೇ....!

- ಹಾಂ..? ಹೌದಾ?

- ಚಾಲೆಂಜ್ ಸೋತಿಯಲ್ವೇನೇ! ಲೆಕ್ಕ ಮಾಡು, 1,0,0,0,0 - 5 ಅಂಕಿ ಅಲ್ವೇ..!!

ಅತ್ತ ಹುಡುಗಿಯೇ ಸಿಗಲ್ಲ ಅಂತ ಮಾತಾಡ್ತಿದ್ದ ಜನರ ಮುಂದೆ, ಹೆಂಡ್ತಿ ಹೆಗಲ ಮೇಲೆ ಕೈ ಹಾಕಿ, ಬಿಎ ಹುಡುಗ,

- ಇಂಕಿಡಿ(ಇಂದುಧರ್ ಹಳೆಯಂಗಡಿ)

ಇಂದುಧರ್ ಹಳೆಯಂಗಡಿ

ಇಂದುಧರ್ ಹಳೆಯಂಗಡಿ ಅವರು ಮೂಲತಃ ದಕ್ಷಿಣಕನ್ನಡ ಜಿಲ್ಲೆಯವರು. ಪ್ರಸ್ತುತ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (SDMC ಉಜಿರೆ) ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತಿದ್ದಾರೆ. ಬರವಣಿಗೆ ಅವರ ಹವ್ಯಾಸವಾಗಿದೆ. ಸಮಾಜಿಕ ಜಾಲತಾಣ, ಪತ್ರಿಕೆಗಳಲ್ಲಿ ಅವರ ಲೇಖನ, ಕಥೆಗಳು ಪ್ರಕಟಗೊಂಡಿದೆ.

More About Author