Poem

ವಿನಮ್ರ ಕೋರಿಕೆ

ತಿಳಿ ನೀಲಿ ಬಾನಲ್ಲಿ ಮೋಡ ಕುಣಿದಿತ್ತು
ಹನಿ ಹನಿ ಕೂಡಿ ಮಳೆಯಾಗಿ ಬಂದಿತ್ತು
ಅವನಿ ಸಂಕುಲಕ್ಕೆ ನೀರನ್ನು ಉಣಿಸಿತ್ತು
ಬತ್ತಿ ಹೋಗಿದ್ದ ಕೆರೆ-ಕಟ್ಟೆ ನದಿಗಳಿಗೆ
ಜೀವ ಜಲ ತುಂಬಿಸಿತ್ತು
ಜೀವಿಗಳಿಗೆ ಹೊಸ ಆಸರೆಯ ನೀಡಿತ್ತು
ಸುರಿಯಿತು ಮಳೆ ಉಳಿಯಿತು ಈ ಧರೆ ||

ಧಗ-ಧಗನೆ ಉರಿಯುವ ಸೂರ್ಯ
ನೆತ್ತಿಯ ಮೇಲೆ ನಿಲ್ಲಲು
ಜೀವಸಂಕುಲಕ್ಕೆ ದಾಹ
ಹೆಚ್ಚಾಗುತ್ತಾ ಹೋಗಲು
ಬೆಳೆದ ಬೆಳೆಗೆ ಇಲ್ಲದಿರಲು ಜಲ
ಸುರಿದಿತ್ತು ಮಳೆ ಉಳಿಯಿತು ಈ ಧರೆ ||

ಬೇಸಿಗೆಯಲ್ಲಿ ಬಿಸಿಲು ಏರುತ್ತಿದೆ
ಬೆವರ ಹನಿಗಳು ಸುರಿಯುತ್ತಿವೆ
ಚಣ ಚಣಕೆ ದಾಹ ಹೆಚ್ಚಾಗುತ್ತಿದೆ
ಅಂತರ್ಜಲ ಬತ್ತಿ ಹೋಗಿದೆ
ಉಸಿರು ಕಟ್ಟಲು ಶುರುವಾಗಿದೆ
ಧರೆಯಮ್ಮನಜೀವಕ್ಕೆ ಜೀವ ಜಲ ಇಲ್ಲದಿರಲು
ಸುರಿಯದಿತ್ತು ಮಳೆ ಉಳಿಯಿತು ಈ ಧರೆ ||

ಕಡಿಯುತ್ತಾ ಹೋದರೆ ಮರಗಳ
ಬತ್ತಿ ಹೋಗುವುದು ಅಂತರ್ಜಲ
ಆವರಿಸುವುದು ವಿಶ್ವಕ್ಕೆ ಬರಗಾಲ
ಈಗಲಾದರೂ ಎಚ್ಚೆತ್ತು
ಕೊಳ್ಳೋಣ
ಧರೆಯ ಧಗೆ ಅಳಿಸೋಣ|

ಬೆಳಸಿ ಎಲ್ಲಾ ಕಡೆ ಗಿಡ-ಮರ
ಹೊರೋಣ ನೀರನ್ನು ಉಳಿಸುವ ಭಾರ
ಹಬ್ಬಿಸಲಿ ಮರಗಳು ನಮ್ಮ ಬೇರ
ಮಾಡಬಹುದು ನೀರಿನ ಕೊರತೆಯ ದೂರ
ಪಣ ತೊಡೋಣ ಬರಿಸಲು ಮಳೆ ಉಳಿಸೋಣ ಧರೆ ||

-ಮೊಹಮ್ಮದ್ ಅಜರುದ್ದೀನ್

ಮೊಹಮ್ಮದ್ ಅಜರುದ್ದೀನ್

ಲೇಖಕ ಮೊಹಮ್ಮದ್ ಅಜರುದ್ದೀನ್ ಅವರು ಮೂಲತಃ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದವರು. ಪ್ರಸ್ತುತ ಹಾಸನದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯ  ಎಂಜನಿಯರಿಂಗ್ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿದ್ದಾರೆ. ಜೊತೆಗೆ,  ಪ್ರಾದೇಶಿಕ ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯುತ್ತಿದ್ದಾರೆ.

ಕೃತಿಗಳು : ಅಕ್ಕಿ-ಚುಕ್ಕಿ, ನಿಸರ್ಗ ನಾದ, ಹೆಬ್ಬೊಳಲು.

ಪ್ರಶಸ್ತಿ-ಪುರಸ್ಕಾರಗಳು:  ಕಾವ್ಯಶ್ರೀ ಪ್ರಶಸ್ತಿ

More About Author