Article

ತ.ರಾ.ಸು. ಸೃಷ್ಟಿಸಿಯ ಅದ್ಭುತ ಕಾದಂಬರಿ ‘ನಾಗರಹಾವು’

ನಾಗರಹಾವಿನಲ್ಲಿ ಬರುವ ಮುಖ್ಯಪಾತ್ರ ರಾಮಾಚಾರಿ, ಚಾಮಯ್ಯ ಮೇಷ್ಟ್ರು, ಅಲುಮೇಲು, ಮಾರ್ಗರೇಟ್. ನಾಗರಹಾವಿನಲ್ಲಿ ಆರಂಭವಾದ ರಾಮಾಚಾರಿಯ ಜೀವನ ಚಿತ್ರಣದ ಎರಡನೆಯ ಘಟ್ಟ ಎರಡು ಹೆಣ್ಣು-ಒಂದು ಗಂಡು ಕಾದಂಬರಿಯಲ್ಲಿ ರಾಮಾಚಾರಿಯ ಜೀವನದ ಬೆಳವಣಿಗೆಯ ಬಗ್ಗೆ, ಸುತ್ತಲ ಸಮಾಜಕ್ಕೆ ಉಪಕಾರಿಯಾಗಬಹುದಾದ ಬಾಳು ಹೇಗೆ ಲೋಕೋದ್ವೇಷಿಯಾಗಿ ಮಾರ್ಪಾಡಬಹುದು ಎಂಬುದು ಎರಡು ಹೆಣ್ಣು-ಒಂದು ಗಂಡು ಕಾದಂಬರಿಯಲ್ಲಿ ಪ್ರಸ್ತಾಪವಾಗಿದೆ. ಈ ವ್ಯಕ್ತಿತ್ವದ ಪರಿಣಾಮ ಸುತ್ತಲಿನ ಸಮಾಜದ ಮೇಲೆ ಹೇಗೆ ಅಡ್ಡದಾರಿ ಹಿಡಿದ ಈ ಜೀವನದ ಮೇಲೆ ಹೇಗಾಗ ಬಹುದೆಂಬುದನ್ನು ಸರ್ಪಮತ್ಸರ ಕಾದಂಬರಿಯಲ್ಲಿ ಪ್ರಸ್ತಾಪವಾಗಿದೆ.

ನಾಗರಹಾವು -ಭಾಗ-೧

ರಾಮಾಚಾರಿಯ ಪಾತ್ರವನ್ನು ಸೃಷ್ಟಿಸಿದ ತಾರಾಸುರವರನ್ನು ಎಷ್ಟು ಹೊಗಳಿದರೂ ಸಾಲದು. ಈ ಕಾದಂಬರಿಯನ್ನು ಬರೆದದ್ದು ೧೯೫೬ರಲ್ಲಿ. ರಾಮಾಚಾರಿಯ ಜೀವನದ ಬೆಳವಣಿಗೆಯ ಬಗ್ಗೆ ಇಲ್ಲಿ ವಿಸ್ತಾರವಾಗಿ ಹೇಳಿದ್ದಾರೆ. ರಾಮಾಚಾರಿಗೆ ಚಾಮಯ್ಯನವರನ್ನು ಕಂಡರೆ ಎಲ್ಲಿಲ್ಲದ ಗೌರವ.  ಹಾಗು ಮಕ್ಕಳಿಲ್ಲದ ಚಾಮಯ್ಯನವರಿಗೆ ರಾಮಾಚಾರಿಯನ್ನು ಕಂಡರೆ ಎಲ್ಲಿಲ್ಲದ ಪ್ರೀತಿ ಇದೇನು ಋಣಾನುಬಂಧವೋ ಎಂದು ಹಲವಾರು ಬಾರಿ ತನ್ನ ಪತ್ನಿ ಸಿಂಗಮ್ಮನ ಹತ್ತಿರ ಹೇಳುತ್ತಿದ್ದರು. ಚಾಮಯ್ಯನವರ ಬಗ್ಗೆ‌ ರಾಮಾಚಾರಿಯ ಮಿತ್ರರು ಕೆಟ್ಟದಾಗಿ ಮಾತಾಡಿದರೆ ಅವರನ್ನು ಸುಮ್ಮನೆ ಬಿಡುತ್ತಿರಲಿಲ್ಲ. ಅವರಿಬ್ಬರಲ್ಲಿ ಅಷ್ಟು ಪ್ರೇಮವಿರಲು ಕಾರಣ, ರಾಮಾಚಾರಿ ಒಳ್ಳೆಯವನು ಆದರೆ ಬಲು ಜಿದ್ದಿನ ಮನುಷ್ಯ, ಎಲ್ಲಿಲ್ಲದ ಧೈರ್ಯ ಅವನಿಗೆ, ಎನೇ ಇದ್ದರೂ ಯಾರಿಗೂ ಸುಳ್ಳು ಹೇಳುತ್ತಿರಲಿಲ್ಲ, ಸತ್ಯವನ್ನೇ ನುಡಿಯುತ್ತಿದ್ದ. ಅವನು ಯಾರ ತಂಟೆಗೂ ಹೋಗುತ್ತಿರಲಿಲ್ಲ ಆದರೇ ಅವನನ್ನು ಯಾರಾದರು ಕೆಣಕಿದರೆ ಸೇಡು ತೀರಿಸಿಕೊಳ್ಳುವವರೆಗೂ ಬಿಡುತ್ತಿರಲಿಲ್ಲ, ಅವನನ್ನು ಕೆಣಕೋದು ಒಂದೆ ಹಾವಿನ ಜೊತೆ ಆಟಾಡುವುದು ಒಂದೇ ಎಂದು ಎಲ್ಲರ ಅಭಿಪ್ರಾಯ ತನ್ನ ಜನ್ಮಕೊಟ್ಟ ತಂದೆಗೂ ಸಹ, ಆದರೆ ಚಾಮಯ್ಯನವರೂ ಎಂದಿಗೂ ಅವನ ಮೇಲೆ ಪ್ರೀತಿಯಿಂದಲೇ ವರ್ತಿಸುತ್ತಿದ್ದರು. ಸಂಬಂಧಗಳಲ್ಲಿ ಪ್ರೀತಿಯಿದ್ದಲ್ಲಿ ಸಂಬಂಧ ಗಟ್ಟಿಯಿರುತ್ತದೆ ಹಾಗೆಯೇ ಅವರಿಬ್ಬರ ಸಂಬಂಧವೂ ಕೂಡ, ಏನೇ ತಪ್ಪು ಮಾಡಿದರು ಚಾಮಯ್ಯನವರ ತಿದ್ದುವ ವಿಧಾನ ರಾಮಾಚಾರಿಯ ಜೀವನವನ್ನೇ ಬದಲಾಯಿಸುತ್ತಿತ್ತು, ಆ ವಿಧಾನದಲ್ಲಿ  ಒಂದುತರ ಪ್ರೀತಿಯಿತ್ತು.

ಶಾಲೆಯಲ್ಲಿ ರಾಮಾಚಾರಿಯ ಸ್ನೇಹಿತರು ವರದರಾಜು, ಚಲುವಾಚಾರಿ, ಪ್ರಭಣ್ಣ, ಫಕೀರ್ ಇನ್ನೂ ಹಲವರ ಒಂದು ಗ್ಯಾಂಗಿತ್ತು, ಆ ಗ್ಯಾಂಗಿಗೆ ರಾಮಾಚಾರಿಯೇ ಲೀಡರ್ ಇದ್ದಹಾಗೆ, ಯಾವುದೇ ಕೆಲಸ ಮಾಡಬೇಕಾದರು ಗುಂಪಿನಲ್ಲೇ ಮಾಡುತ್ತಿದ್ದರು. ಅದೆಷ್ಟು ಜನರ ತೋಟದ ಮಾವು,ಪೇರಳೆ,ಹುಣಸೆ ಕಳುವಾಗುತ್ತಿದ್ದವೋ. ಒಮ್ಮೆ ಪರೀಕ್ಷೆಯ ಸಮಯದಲ್ಲಿ ರಾಮಾಚಾರಿ ಕಾಪಿ ಹೊಡೆಯುತ್ತಿದ್ದಾಗ ಶಾಮಯಂಗಾರರು ಆತನನ್ನು ಹಿಡಿದು ರಾಮಾಚಾರಿ ಮಾಡಿದ ತಪ್ಪಿಗೆ‌ ತನ್ನ ಪ್ಯಾಂಟನ್ನು ಎಲ್ಲರ ಮುಂದೆ ಕಳಚಿ‌ ಅವಮಾನ ಮಾಡುತ್ತಾನೆ. ಇದರಿಂದ ರೊಚ್ಚಿಗೆದ್ದ ರಾಮಾಚಾರಿ ಹೇಗಾದರೂ ಸೇಡುತೀರಿಸಿಕೊಳ್ಳಬೇಕೆಂದು ಕಾಯುತ್ತಿರುತ್ತಾನೆ. ತನ್ನ ಮಿತ್ರರಿಗೆ ಪರೀಕ್ಷೆ ಮುಗಿದನಂತರ ಒಂದು ರಾತ್ರಿ ರಾಮಾಚಾರಿಯು ಶಾಮಯಂಗಾರರ ಮನೆಯ ಗಾಜಿನ ಕಿಟಕಿಗಳನ್ನು ಒಡೆದು ಅವರನ್ನು ಒಂದು ಕಂಬಕ್ಕೆ ಪಂಚೆ ಕಳಚಿ ಕಟ್ಟಿಹಾಕುತ್ತಾನೆ. ರಾಮಾಚಾರಿ ಬಹಳ ಜಿದ್ದಿನ ಮನುಷ್ಯ,ಆತನ ತಂಟೆಗೆ ಬಂದರೆ ಸೇಡು ತೀರಿಸಿಕೊಳ್ಳುವವರೆಗೂ ಅವನಿಗೆ ಸಮಾಧಾನವಿಲ್ಲ. ಶಮಯಂಗಾರರ ಸುದ್ಧಿಯನ್ನು ತಿಳಿದ ಚಾಮಯ್ಯನವರು ರಾಮಾಚಾರಿಯನ್ನು ಭೇಟಿಮಾಡಿ ವಿನಯದದಿಂದ ಆತನನ್ನು ತಿದ್ದಿ ಶಾಮಯಂಗಾರರನ್ನು ಕ್ಷಮೆ ಕೇಳುವಂತೆ ಹೇಳುತ್ತಾನೆ. ಇದರಿಂದ ರಾಮಾಚಾರಿಯು ತಾನು ಪರೀಕ್ಷೆ ಬರೆಯಲು ಶಾಮಯಂಗಾರರು ಕ್ಷಮಿಸಿ ಬುದ್ಧಿವಾದ ಹೇಳುತ್ತಾರೆ.* ರಾಮಾಚಾರಿಯನ್ನು ಕಂಡರೆ ತನ್ನ ತಂದೆ ಮಧ್ವಾಚಾರ್ಯರಿಗೆ ಅಷ್ಟಕಷ್ಟೆ, ಆದರೇ ರಾಮಾಚಾರಿಯ ತಾಯಿಯಾದ ಸೋನಾಭಾಯಿಗೆ ರಾಮಾಚಾರಿಯನ್ನು ಕಂಡರೆ ಎಲ್ಲಿಲ್ಲದ ಪ್ರೀತಿ,ಅವನಿಗೂ ಅಷ್ಟೇ. ಆಕೆಯು ರಾಮಾಚಾರಿಗೆ‌ ರಾಮಣ್ಣ ನೀನು ಚೆನ್ನಾಗಿ ಓದಿ ಕಲೆಕ್ಟರ್ ಆಗಿ‌ ನನಗೆ ಜರತಾರಿ ಸೀರೆ ತಂದರೆ ನನ್ನ ಜನ್ಮ ಸಾರ್ಥಕವೆಂದು ಸದಾ ಹೇಳುತ್ತಾಳೆ. ಆಕೆಯ ಆಸೆ ಪೂರೈಸಲು ಹಾಗು ಚಾಮಯ್ಯನವರ ಮೇಲಿರುವ ಅಭಿಮಾನದಿಂದಲೂ ತಾನು ಚೆನ್ನಾಗಿ ಓದಿ ಒಳ್ಳೆಯ ಸ್ಥಾನಕ್ಕೆ ಬರಬೇಕೆಂಬುವುದು ಅವನ ಆಸೆ.*

ಆಗಿನ ಕಾಲದಲ್ಲಿ ಸಿನಿಮಾ ಟೆಂಟಲ್ಲಿ ಆಡಿಸುತ್ತಿದ್ದರು, ರಾಮಾಚಾರಿ ಹತ್ತಿರ ದುಡ್ಡು ಇಲ್ಲದಿದ್ದರೂ ಸಿನಿಮಾ ನೋಡಬೇಕೆಂಬುದು ತುಂಬ ಕುತೂಹಲ. ಸಿನಿಮಾ‌ ನೋಡೋಕ್ಕೆ ದುಡ್ಡು ಬೇಕು ಅಥವಾ ಪಾಸ್ ಬೇಕು. ಆ ಸಿನಿಮಾ ಓನರಿಗೆ ತನಗೆ ಹಾಗು ತನ್ನ ಸ್ನೇಹಿತರಿಗೆ ಪಾಸು ಕೊಡಬೇಕೆಂದು ಹೆದರಿಸುತ್ತಾನೆ.ಆ ಸಂಗತಿಯಿಂದ ಪೋಲೀಸರನ್ನು ಎದುರುಹಾಕಿಕೊಂಡು ತಾನು ಓನರನ್ನ‌ ಪಾಸು ಕೇಳಿ ಬೆದರಿಸಿದ್ದು ನಿಜವೆಂದು ಒಪ್ಪುಕೊಳ್ಳುತ್ತಾನೆ. ಅವನ ಧೈರ್ಯವನ್ನು ಹಾಗು ಪ್ರಾಮಾಣಿಕತೆಯನ್ನು ನೋಡಿದ ಪೋಲೀಸರು ಹಾಗು ಚಾಮಯ್ಯನವರು ರಾಮಾಚಾರಿಯನ್ನು ಮೆಚ್ಚುತ್ತಾರೆ.ರಾಮಾಚಾರಿಯು ತಾನು ಎಂದು ಸುಳ್ಳನ್ನು ಆಡುವುದಿಲ್ಲವೆಂದು ಚಾಮಯ್ಯನವರಿಗೆ ಮಾತುಕೊಟ್ಟಿದ್ದೇನೆಂದು ಹೇಳಿದಾಗ ಚಾಮಯ್ಯನವರಿಗೆ ರಾಮಾಚಾರಿಯಂತ ಉತ್ತಮ ಶಿಷ್ಯನನ್ನು ಪಡೆದೆನೆಂದು ಸಂತೋಷ ಪಡುತ್ತಾರೆ.

ಹೀಗೆ ಅವನ ಜೀವನ ಸಾಗುತ್ತಿರಬೇಕಾದರೆ‌ ಅಲುಮೇಲುವಿನ ಪರಿಚಯವಾಗುತ್ತದೆ. ಜಲೀಲನ ಪಾತ್ರವನ್ನು ಅದ್ಭುತವಾಗಿ ಸೃಷ್ಟಿಸಿದ್ದಾರೆ. ಜಲೀಲನಿಗೆ ಹುಡುಗಿಯರನ್ನು ಚುಡಾಯಿಸುವುದು ಒಂದು ಚಟ, ಅಲುಮೇಲು ಶಾಲೆಗೆ ಹೋಗಬೇಕೆಂದರೆ ಇವನ ಅಂಗಡಿಯನ್ನು ದಾಟಿಯೇ ಹೋಗಬೇಕಿತ್ತು. ಅಲುಮೇಲುವನ್ನು ನೋಡಿದ ಜಲೀಲನು ಅವಳನ್ನು ಹೇಗಾದರು ವಷಪಡಿಸಿಕೊಳ್ಳಬೇಕೆಂದು ಸದಾ ಚುಡಾಯಿಸಿತ್ತಿರುತ್ತಾನೆ. ಅಲುಮೇಲು ತನ್ನ ಅಣ್ಣ ವರದನಿಗೆ‌ ಹೇಳಿದಾಗ ಅವನು ಜಲೀಲನನ್ನು ಹೆದರಿಸಲೂ ಹೋದಾಗ ಒದೆ ತಿಂದು ಬರುತ್ತಾನೆ, ಹೇಗೆ ಇವನನ್ನು ಎದುರಿಸುವುದೆಂದು ಯೋಚಿಸುವ ಸಮಯದಲ್ಲಿ ರಾಮಾಚಾರಿಯ ನೆನಪಾಗುತ್ತದೆ, ಇವನಿಗೆ ಆ ಬಡ್ಡಿಮಗನೆ ಸರಿ ಎಂದುಕೊಳ್ಳುತ್ತಾನೆ.

ವರದನು ಶಾಲೆಯಲ್ಲಿ ರಾಮಚಾರಿಯನ್ನು ಭೇಟಿಯಾಗಿ ಜಲೀಲ್ ಅಲುಮೇಲುವಿನ ಕಥೆಯನ್ನು ವಿವರಿಸಿ ಹೇಗದರೂ ಮಾಡಿ ಜಲೀಲನನ್ನು ಎದುರಿಸು ಎಂದು ಬೇಡುತ್ತಾನೆ. ರಾಮಚಾರಿಯು ತಾನೇಕೆ ಕಾಪಾಡಬೇಕು‌ ನಿನ್ನ ತಂಗೀನ, ಅವಳೇನು ನನ್ನ ಹೆಂಡತಿಯೆ ಹಾಗು ವರದಾ ನೀನು ನಾಮರ್ದನೆ ಎಂದು ಕೇಳಿದಾಗ, ನನ್ನ ತಂಗಿ ನಿನ್ನ ಹೆಂಡತಿಯೇ ಎಂದು ಇವತ್ತಿನಿಂದ ನೀನು ನನ್ನ ಭಾವ, ಜಲೀಲನಿಂದ ಪಾರುಮಾಡಿದರೆ ಅಲುಮೇಲು ನಿನ್ನ ಹೆಂಡತಿಯೆ ಎಂದು ಎಲ್ಲರ ಮುಂದೆ ಪ್ರಮಾಣ ಮಾಡುತ್ತಾನೆ,ಅದಕ್ಕೆ ರಾಮಾಚಾರಿಯು ಬೇಡ ವರದ ನನ್ನ ಬಗ್ಗೆ‌ ತಿಳಿದೆ ಹೇಳ್ತಿದಿಯ ತಾನೆ,‌ನಾನೊಂದು ಸಲ ನಿರ್ಣಯಿಸಿದರೆ ನೀನಲ್ಲ ಆ ದೇವರು ಬಂದರೂ ತಪ್ಪಿಸಲಾರ, ಅದರಿಂದ ಯೋಚನೆಮಾಡಿ ಹೇಳು. ವರದನು ತಾನು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇನೆಂದು ಅಲುಮೇಲುವು ಇವತ್ತಿನಿಂದ ನಿನ್ನ ಹೆಂಡತಿಯೆಂದು ಮಾತು ಕೂಡುತ್ತಾನೆ ಇನ್ನು ನೀನುಂಟು ಅವಳುಂಟು ಎಂದು, ಇದೇ ವಿಷಯ ಅಲುಮೇಲುಗೂ ತಿಳಿಸಿದಾಗ ಅವಳಿಗೆ‌ ಗಾಬರಿಯಾಗುತ್ತದೆ.

ವರದನಿಗೆ ಕೊಟ್ಟ ಮಾತಿನಂತೆ ರಾಮಾಚಾರಿ ವರದನ ಮನೆಗೆ ಬಂದಾಗ ಅಲುಮೇಲುವನ್ನು ನೋಡಿ , ಆಕೆಯ‌ ಸೌಂದರ್ಯವನ್ನು ನೋಡಿ ನಿಬ್ಬೆರಗಾಗುತ್ತಾನೆ, ಅವಳನ್ನು ‌ನೋಡುತ್ತಲೆ ಮೊದಲಿಗೆ ಹೆಣ್ಣಿನ ಮೇಲೆ ಅದರಲ್ಲೂ ಅಲುಮೇಲುವಿನ ಮೇಲೆ ಪ್ರೀತಿಯುಂಟಾಗುತ್ತದೆ. ಅಲುಮೇಲು ಇಂದಿನಿಂದ ನೀನು ನನ್ನ ಹೆಂಡತಿ‌, ನಿನ್ನ ಜವಾಬ್ದಾರಿ ನನ್ನದು ಬಾ ನಂಜೊತೆ ಸ್ಕೂಲಿಗೆ ಹೋಗೋಣ, ಜಲೀಲನನಲ್ಲ ಅವರಪ್ಪ ಸೈತಾನ್ ಬರಲಿ ಇವತ್ತು ಕಾದಿದೆ ಆ ನನ್ಮಗಂಗೆ ಎಂದು ಧೈರ್ಯನೀಡಿ ಆಕೆಯನ್ನು ಕರೆದುಕೊಂಡು ಹೋಗುವಾಗ ಎಂದಿನಂತೆ‌ ಜಲೀಲ್ ಚುಡಾಯಿಸಲು ಶುರುಮಾಡಿದಾಗ ರಾಮಾಚಾರಿ ಜಲೀಲನನ್ನು ಎನೋ ಐವಾನ್ ಬದುಕುವ ಇಚ್ಚೆ ಇದಿಯೋ ಇಲ್ಲವೋ ಎಂದು ಭಯಪಡಿಸುತ್ತಾನೆ, ಅದಕ್ಕೆ ಜಲೀಲ್ ಹೋಗೋ ಆಚಾರಿ ಪುಳಿಚಾರು ತಿನ್ನವವನಿಗೆ‌ ನಿನಗೆ ಇಷ್ಟು ರೋಷವಿರಬೇಕಾದರೆ ಮುಸಲ್ಮಾನ ಆದ ನನಗೆಷ್ಟಿರಬೇಕೆಂದು, ಅವರ ಮಾತುಗಳು ಕಡೆಗೆ ಜಗಳಕ್ಕೆ ಪರಿವರ್ತನೆಗೊಂಡು ಜಗಳದಲ್ಲಿ ಜಲೀಲ್ ರಾಮಾಚಾರಿಂದ ಸರೀ ಪೆಟ್ಟು ತಿಂದು ಅಲುಮೇಲುಗೆ ಕ್ಷಮಾಪಣೆ ಕೇಳುತ್ತಾನೆ. ಅವನ ಧೈರ್ಯವನ್ನು ನೋಡಿದ ಅಲುಮೇಲುವಿಗೆ ಅವನ ಮೆಲೆ ಪ್ರೀತಿಯುಂಟಾಗುತ್ತದೆ. ಇಂದಿನಿಂದ ನೀನೇ ನನ್ನ ಹೆಂಡತಿ ಅಲುಮೇಲು ಎಂದು ಅವನು, ನಾನು ನಿಮ್ಮನ್ನು ಬಿಟ್ಟು ‌ಬೇರೆಯಾರನ್ನೂ ಮದುವೆಯಾಗುವುದಿಲ್ಲವೆಂದು ಅವಳು ಇಬ್ಬರೂ ಪ್ರತಿಜ್ಞೆ ಮಾಡುತ್ತಾರೆ. ಇಬ್ಬರು ಸಂತೋಷದಲ್ಲಿರುವಾಗ ಅವನ ಜೀವನದಲ್ಲಿ ಮತ್ತೊಂದು ತಿರುವು ಕಾಣುತ್ತದೆ ಅದುವೇ ಮಾರ್ಗರೇಟ್ ಪರಿಚಯ.

ಜಲೀಲನನ್ನು ಎದುರಿಸಿದ ಸುದ್ಧಿಯು ಇಡೀ ದುರ್ಗಕ್ಕೆ ಹರಡುತ್ತದೆ. ಇದನ್ನು ಕೇಳ್ಪಟ್ಟ ಚಾಮಯ್ಯನವರಿಗೆ ತನ್ನ ಶಿಷ್ಯನ ಬಗ್ಗೆ ಹೆಮ್ಮೆ ಪಡುತ್ತಾರೆ. ಒಂದು ಹೆಂಗಸಿನ ಮರ್ಯಾದೆಯನ್ನು ಉಳಿಸಿದ ಸಾಹಸಿಯೆಂದು ಮೆಚ್ಚುತ್ತಾರೆ, ರಾಮಾಚಾರಿಯ ತಾಯಿ‌ ಸೋನಾಭಾಯಿ, ಅವನ ಮಿತ್ರರು, ಅಲುಮೇಲು ಹಾಗು ಅವಳ ತಾಯಿ ಪದ್ಮಮ್ಮ ನವರು ಅವನ ಧೈರ್ಯ ಸಾಹಸವನ್ನು ‌ಮೆಚ್ಚುತ್ತಾರೆ, ಗರಡಿ ಯಜಮಾನನಾದ ಸಣ್ಣಬಸಪ್ಪ ಇವನ ಸಾಹಸವನ್ನು ನೋಡಿ ಎಲಾ ಇವನವ್ವನಾ ಈ ಆಚಾರಿ ಪುಳಿಚಾರು ತಿಂದೆ ಹೀಗೆ ಹೋಡಿತಾನಲ್ಲಾ ಎಂದು ಉಬ್ಬಿಹೋಗುತ್ತಾರೆ. ಮೆಚ್ಚದೆ ಇರುವವರೆಂದರೆ ಅವನ ತಂದೆ ಮಧ್ವಾಚಾರ್ಯರು. 

ಮಾರ್ಗರೇಟನ್ನು ನೋಡಿದ ಹುಡುಗರೆಲ್ಲರೂ ಆಕೆಯ‌ ಸೌಂದರ್ಯವನ್ನು ಕಂಡು ಚುಡಾಯಿಸ ಬೇಕೆಂದು ಪಂದ್ಯ ಒಡ್ಡುತ್ತಾರೆ, ಕೆಲವರು ಪ್ರಯತ್ನಪಟ್ಟಾಗ ಸರಿ ಮಂಗಳಾರತಿ ಮಾಡಿಸಿಕೊಂಡಿರುವವರೂ ಉಂಟು, ಮಾರ್ಗರೇಟ್ ಕೊಪಿಷ್ಟಳೆಂದು ಸಾಮಾನ್ಯ ಹುಡುಗಿಯಲ್ಲವೆಂದು ಆಕೆಯ ತಂಟೆಗೆ ಹೋದರೆ ಸುಮ್ಮನಿರುವವಳೆಂದು ಅರ್ಥ ಮಾಡಿಕೊಳ್ಳುತ್ತಾರೆ, ಇವಳ ಸೊಕ್ಕನ್ನು ಇಳಿಸಬೇಕೆಂದರೆ ಆ ಆಚಾರಿನೆ ಸರಿಯಂದು , ಅವನ ಹತ್ತಿರ ಮಾರ್ಗರೇಟ್ ತನ್ನ ಬಗ್ಗೆ ಕೆಟ್ಟದಾಗಿ ಹೇಳಿದಳೆಂದು ಇಲ್ಲದಿದ್ದಿದನ್ನು ಕಲ್ಪಿಸಿ ಹೇಳುತ್ತಾರೆ. ಹೀಗೆ ಶಾಲೆ ಆಚೆಯಲ್ಲಿ ರಾಮಾಚಾರಿ ಮಾರ್ಗರೇಟ್ ಭೇಟಿಯಾದಾಗ ಅವರಿಬ್ಬರ ನಡುವೆ ಜಗಳವೇ ಆಗುತ್ತದೆ,ಎಲ್ಲರ ಮುಂದೆ ಅವನನ್ನು ಅವಮಾನ ಮಾಡಿದಾಗ ಇವಳ ಮೇಲೆ ಸೇಡು ತೀರಿಸಿಕೊಳ್ಳಲೇ ಬೇಕೆಂದು ಚಲುವ ಹಾಗು ಇತರರೊಂದಿಗೆ ಏನು ಮಾಡಿದರ ಇವಳ‌ ಸೊಕ್ಕು ಇಳಿಸಬಹುದೆಂದು‌ ಯೋಚನೆ‌ಮಾಡಿ ಒಂದು ಪ್ಲಾನ್ ಮಾಡುತ್ತಾರೆ.

ರಾಮಾಚಾರಿ ಮಾರ್ಗರೇಟ್ ಮನೆಗೆ ನುಗ್ಗಿ ಕೆಲವು ಸಾಮಾನುಗಳನ್ನು ‌ಹಾಳುಮಾಡಿ ಅವಳು‌ ಸಾಕಿರುವ ಕೆಲವು ಹಕ್ಕಿಗಳ‌ ಮೇಲೆ ಸೇಡುತತೀರಿಸಿಕೊಂಡು‌ ಅವಳಿಗೂ ಅವರಮ್ಮ ಮೇರಿಯಮ್ಮನಿಗೂ ತನ್ನ ತಂಟೆಗೆ ಬಂದರೆ ಉಳಿಯುವುದಿಲ್ಲವೆಂದು ಎಚ್ಚರ ಹಾಕುತ್ತಾನೆ. ಇವನು ಒಳ್ಳೆಯವನೇ ಆದರೇ ತನ್ನನ್ನು ಕೆಣಕಿದರೆ ಮಾತ್ರ ಸುಮ್ಮನೇ ಇರುವುದಿಲ್ಲ. ಅವಮಾನಿತಗೊಂಡ ಮೇರಿಯಮ್ಮ ಇವನಿಗೆ ತಕ್ಕಶಾಶ್ತಿ ಮಾಡಬೇಕೆಂದು ಪ್ರಿನ್ಸಿಪಾಲ್ ಶಾಮಾರಾಯರಿಗೆ, ರಾಮಾಚಾರಿಯು ತನ್ನ ಮಗಳನ್ನು ಕೆಡಸಿದನೆಂದು ದೂರು ಕೊಡುತ್ತಾಳೆ.

ಈ ವಿಷಯವನ್ನು ತಿಳಿದ ರಾಮಾಚಾರಿ ಕ್ರುದ್ಧನಾಗಿ ಮಾರ್ಗರೇಟ್ ಮೇಲೆ ಸೇಡು ತೀರಿಸಿಕೊಳ್ಳಬೇಕೆಂದು ಅವಳ ಮನೆಗೆ ಅವಳನ್ನು ತಬ್ಬಿಡಿದು ಅವಳ ತುಟಿಗೆ ಮುತ್ತಿಟ್ಟು ತನ್ನ ತಾಯಿ ಕೊಟ್ಟಿರುವ ದೂರನ್ನು ವಾಪಸ್ಸು ತೆಗೆದುಕೊಂಡರೇ ಸರಿ ಇಲ್ಲ ಆಕೆಯು ಹೇಳಿದ್ದೇ ಮಾಡಬೇಕಾಗುತ್ತದೆಂದು ಎಚ್ಚರಿಸುತ್ತಾನೆ. ತಾಯಿ ಕೊಟ್ಟಿರುವ ದೂರೆನೆಂಬುದು ಮಾರ್ಗರೇಟ್ ತಿಳಿದಾಗ ತಪ್ಪು ದೂರು ಕೊಟ್ಟಿದ್ದಕ್ಕು ಹಾಗು ಅವನು ತನಗೆ ಮುತ್ತಿಟ್ಟಿದ್ದು ನೆನೆದು ದುಃಖವಾಗುತ್ತದೆ. ಒಔದು ಕಡೆಯಲ್ಲಿ ಅವನ ಮೇಲೆ ಪ್ರೀತಿಯೂ ಬೆಳೆಯುತ್ತದೆ, ರಾಮಚಾರಿಯ ತಪ್ಪು ಏನು ಇಲ್ಲವೆಂದು ದೂರು ವಾಪಸ್ಸು ತೆಗೆದುಕೊಳ್ಳುತ್ತಾಳೆ. ಅಂದಿನಿಂದ ಅವನ ಮೇಲೆ ಪ್ರೀತಿ‌ಬ ಬೆಳೆದು ಬಿಡುತ್ತದೆ. ತನ್ನ ದೇಹವನ್ನು ಸ್ಪರ್ಶಿದ ರಾಮಾಚಾರಿಯೇ ನನ್ನ ಗಂಡನೆಂದು ಹಾಗು ಅವನ ಧೈರ್ಯ ಸಾಹಸಗಳನ್ನು ಪ್ರಾಮಾಣಿಕತೆಯನ್ನು ಕಣ್ಣಾರೆ ಕಂಡಿದ್ದ ಮಾರ್ಗರೇಟಿನ ಮನಸ್ಸು ಅವನ ಮೇಲೆ ಬಿಸುತ್ತದೆ.

ಹೀಗೆ ಅಲುಮೇಲು ಒಂದು ಕಡೆ ರಾಮಾಚಾರಿಯೆ ತನ್ನ ಗಂಡನೆಂದು, ಮತ್ತೊಂದು ಕಡೆ ಮಾರ್ಗರೇಟ್, ರಾಮಾಚಾರಿಯೇ ತನ್ನ ಪ್ರಿಯನೆಂದು ಹಾಗು ಅಲುಮೇಲುವಿನ ಸೌಂದರ್ಯಕ್ಕೆ ಶರಣಾದ  ರಾಮಾಚಾರಿಯು ಅಲುಮೇಲುವನ್ನು ಮದುವೆಯಾಗಬೇಕೆಂದು ಅವರವರ ಮನಸ್ಸುಗಳು ಯೋಚಿಸುವುದಕ್ಕೆ ಶುರುಮಾಡಿದವು. ನಂತರ ಈ ೩ ಜನರ ಕಥೆಯು ಎರಡು-ಹೆಣ್ಣು ಒಂದು ಗಂಡು ಕಾದಂಬರಿಯಲ್ಲಿ ವಿವರಿಸಿದ್ದಾರೆ.

ನಾಗರಹಾವು -ಭಾಗ-೨

ಹೀಗೆ ಅಲುಮೇಲು ಒಂದು ಕಡೆ ರಾಮಾಚಾರಿಯೆ ತನ್ನ ಗಂಡನೆಂದು, ಮತ್ತೊಂದು ಕಡೆ ಮಾರ್ಗರೇಟ್, ರಾಮಾಚಾರಿಯೇ ತನ್ನ ಪ್ರಿಯನೆಂದು ಹಾಗು ಅಲುಮೇಲುವಿನ ಸೌಂದರ್ಯಕ್ಕೆ ಶರಣಾದ  ರಾಮಾಚಾರಿಯು ಅಲುಮೇಲುವನ್ನು ಮದುವೆಯಾಗಬೇಕೆಂದು ಅವರವರ ಮನಸ್ಸುಗಳು ಯೋಚಿಸುವುದಕ್ಕೆ ಶುರುಮಾಡಿದವು. ರಾಮಾಚಾರಿಯು ಮಾರ್ಗರೇಟ್ ಗೆ ಮುತ್ತಿಟ್ಟಾಗಿನಿಂದ ರಾಮಾಚಾರಿಯ ಮೇಲೆ ಪ್ರೀತಿ ಬೆಳೆಯಿತು. ಸುಳ್ಳು ದೂರು ಕೊಟ್ಟ ಮೇರಿಯಮ್ಮನೆ ಮೇಲಂತು ಕಿಡಿಕಾರುತ್ತಿದ್ದನು, ಆದರೆ ಆ ತಪ್ಪನ್ನು ಎಲ್ಲರ ಮುಂದೆ ಒಪ್ಪಿಕೊಂಡ ಮಾರ್ಗರೇಟ್ ಬಗ್ಗೆ ಅಭಿಮಾನ ಬೆಳೆಯಿತು. ರಾಮಾಚಾರಿ ಒಂಟಿಯಾಗಿ ಸಿಕ್ಕಾಗ ತನ್ನ ತಪ್ಪಿನ ಅರಿವಾಗಿ ಕ್ಷಮೆ ಬೇಡುತ್ತಿದ್ದಳು, ಇವಳು ಸೇಡು ತೀರಿಸಿಕೊಳ್ಳಲು ನಾಟಾಕವಾಡುತ್ತಿಲ್ಲವೆಂದು, ತನ್ನನ್ನು ಪ್ರೀತಿಸುತ್ತಿದ್ದಾಳೆಂದು ಅರಿವಾಯಿತು ಅವನಿಗೂ ಮಾರ್ಗರೇಟ್ ಅಂದರೆ ಇಷ್ಟವೇ ಆದರೆ ಅಲುಮೇಲುಗೆ ತನ್ನನ್ನೇ ಮದುವೆಯಾಗುತ್ತೇನೆಂದು ಮಾತು ಕೊಟ್ಟಿರುವುದು ನೆನಪಾಗಿ ಅವಳ ಪ್ರೀತಿಯನ್ನು ಒಪ್ಪುವುದಿಲ್ಲ.

 

ಹೀಗಿರುವಾಗ ರಾಮಾಚಾರಿಯ ಜೀವನದಲ್ಲಿ ಒಂದು ಘಟನೆ ನಡೆಯುತ್ತದೆ ಅದರಿಂದ ಅವನ ಜೀವನವೇ ಬದಲಾಗುತ್ತದೆ. ಊರಿನಲ್ಲಿ ಪ್ಲೇಗ್ ಹರಡಿ ತನ್ನ ತಂದೆಯಾದ ಮಧ್ವಾಚಾರ್ಯರಿಗೂ ಸೋಕಿದಾಗ ತಾನು ಸಾಯುವನೆಂದು ಖಚಿತವಾಗುತ್ತದೆ. ಸಾಯುವ ಮುಂಚೆ ರಾಮಾಚಾರಿಯ ಮೇಲೆ ಪ್ರೀತಿ ಹುಕ್ಕುತ್ತದೆ. ರಾಮಣ್ಣ ನನ್ನ ಆಯಸ್ಸು ಇನ್ನ ಮುಗಿಯಿತು ಇನ್ನ ನೀನೆ ಈ ಮನೆಗೆ ದೊಡ್ಡಮಗನು ಹಾಗು ಯಜಮಾನ , ಅಮ್ಮನನ್ನು ಇನ್ನಿತರ ೨ ತಮ್ಮಂದಿರ ಒಂದು ತಂಗಿಯ ಜವಾಬ್ದಾರಿ ನಿನ್ನದೆಂದು ಹೇಳಿ ಕೊನೆಯುಸಿರೆಳೆದರು. ತಂದೆಗೆ ತನ್ನ ಮೇಲೆ ಎಷ್ಟು ಪ್ರೀತಿಯಿದೆಯಂದು ಆಗ ಅವನಿಗರ್ಥವಾಗುತ್ತದೆ. ತಾಯಿ ಸೋನಾಭಾಯಿ ತಂದೆಯ ಅಂತ್ಯಸಂಸ್ಕಾರವನ್ನು ಗೌರವ ರೂಪದಲ್ಲಿ ಮಾಡಬೇಕೆಂದು ಅದಕ್ಕೆ ೩೦೦ ರೂಪಾಯಿಯಾದರೂ ಬೇಕೆಂದು ಹೇಳುತ್ತಾಳೆ. ಆಗಿನ‌ ಕಾಲದಲ್ಲಿ ೩೦೦ರೂಪಾಯಿಯಂದರೇ ಎಷ್ಟೋ ಬೆಲೆ, ಒದಗಿಸಿಕೊಳ್ಳುವುದಕ್ಕೆ ಒಂದೇ ಮಾರ್ಗ ಸಾಲ ಅಥವಾ ಮನೆ ಮಾರುವುದು. ಸಾಲ ಕೊಡುವವರು ಯಾರು ಇಲ್ಲ. ಮನೆ ಮಾರುವುದೆಂದು ತೀರ್ಮಾನ ಮಾಡಿದಾಗ ಚಾಮಯ್ಯ ನವರು ಒಪ್ಪುವುದಿಲ್ಲ. ವಾಸಕ್ಕೆ ಸ್ವಂತಕ್ಕೆ ಅಂತ ಇರುವುದು ಮನೆ ಅದನ್ನೇ ಮಾರಿದರೆ ಹೇಗೆ ರಾಮಣ್ಣ ಎಂದು ತನಗೆ ಕೈಲಾಗದಷ್ಟು ಸಹಾಯ ಮಾಡುವನೆಂದು ಚಾಮಯ್ಯ ಹೇಳುತ್ತಾರೆ. ಆದರೇ ಮಾರ್ಗರೇಟ್ ೩೦೦ ರೂಪಾಯಿಯನ್ನು ವರದರಾಜುವಿನಿಂದ ಪಡೆದು ರಾಮಾಚಾರಿಗೆ ಸಹಾಯ ಮಾಡುತ್ತಾಳೆ.

ಅಲುಮೇಲುವಿನ ತಂದೆ ತಾಯಿ ಅವಳಿಗೆ ವರನನ್ನು ಹುಡುಕುತ್ತಿರುತ್ತಾರೆ. ಈ ಸಂಗತಿಯನ್ನು ತಿಳದ ರಾಮಾಚಾರಿಯು ವರದನನ್ನು ಭೇಟಿಮಾಡಿದಾಗ ಏನೋ ಜಲೀಲನ ವಿಷಯಕ್ಕಾಗಿ ತಮಾಷೆಯಾಗಿ ಮಾತಿಕೊಟ್ಟಿದ್ದನೆಂದು ಹೇಳುತ್ತಾನೆ, ಆದರೆ ಅಲುಮೇಲುವನ್ನು ಕಂಡರೆ ರಾಮಾಚಾರಿಗೆ ನಿಜವಾದ ಪ್ರೀತಿ. ಈ ಸಂಗತಿಯನ್ನು ತಿಳಿದ ಅಲುಮೇಲುವಿನ ತಂದೆ ತಾಯಿ ಚಾಮಯ್ಯನವರನ್ನು ಕಂಡು ಹೇಗಾದರೂ ಮಿಡಿ ರಾಮಾಚಾರಿಗೆ ಬುದ್ದಿ ಹೇಳಿ ತಮ್ಮ ಮಗಳ ಜೀವನ ಕಾಪಾಡಬೇಕೆಂದು ಬೇಡಿಕೊಳ್ಳುತ್ತಾರೆ, ರಾಮಾಚಾರಿ ಶುದ್ಧ ಫೋಲಿ ಅಂಥವನಿಗೆ ಅಲುಮೇಲುವನ್ನು ಕೊಟ್ಟು ಮದುವೆ ಮಾಡುವುದು ಒಂದೆ, ವಿಷ ಸೇವಿಸಿ ಸಾಯುವುದು ಒಂದೆ ಎಂದು ಸಂಕಟ ಪಡುತ್ತಾರೆ.

ಚಾಮಯ್ಯನವರಿಗೆ ಇಕ್ಕಟ್ಟಿನಲ್ಲಿ ಸಿಕ್ಕಿಹಾಕಿಕೊಂಡಂತಾಗುತ್ತದೆ,ಒಬ್ಬರಿಗೊಬ್ಬರು ಇಷ್ಟಪಟ್ಟಿರುವವರನ್ನ ಬೇರೆ ಮಾಡುವುದು ಪಾಪದ ಕೆಲಸವೆಂದು, ಅದು ಯಾವ ಜನ್ಮದಲ್ಲಿ ಏನು ಮಾಡಿದ್ದನೋ ದೇವರು ಈ ಜವಾಬ್ದಾರಿಯನ್ನು ವಹಿಸಿದನೆಂದು ಹಾಗು ತನಗೆ ಮಕ್ಕಳನ್ನು ಕೊಟ್ಟಿಲ್ಲವೆಂದು ದುಃಖ್ಖಪಡುತ್ತಾರೆ. ಅಲುಮೇಲು ತಂದೆಗೆ ಮಾತುಕೊಟ್ಟಿರುವುದರಿಂದ ಚಾಮಯ್ಯನವರು ರಾಮಾಚಾರಿಯನ್ನು ಭೇಟಿಯಾಗಿ ತನ್ನಿಂದ ಒಂದು ಮಹತ್ವವಾದ ಕಾರ್ಯವೊಂದು ಆಗಬೇಕೆಂದು ಅದನ್ನು ಪೂರೈಸುವುದಾಗಿ ಮಾತುಕೊಡಬೇಕೆಂದು ಕೇಳಿದಾಗ, ಚಾಮಯ್ಯನವರ ಮೇಲೆ ಪ್ರೀತಿ ಗೌರವ ಇರುವುದರಿಂದ ಏನು ಯೋಚನೆ ಮಾಡದೆ ಮಾತುಕೊಡುತ್ತಾನೆ. ಚಾಮಯ್ಯನವರು ರಾಮಾಚಾರಿಗೆ ಅಲುಮೇಲುವನ್ನು ಮರೆತುಬಿಡಬೇಕೆಂದು ಹೇಳುತ್ತಾರೆ, ಇಲ್ಲಿ ಅವರಿಬ್ಬರ ನಡುವೆ ನಡೆಯುವ ಸಂಭಾಷಣೆಯನ್ನು ತ.ರಾ.ಸು ರವರು ಮನಸ್ಸಿಗೆ ನಾಟುವಂತೆ ಚಿತ್ರಿಸಿದ್ದಾರೆ.

ಚಾಮಯ್ಯನವರಿಗೆ ಕೊಟ್ಟ ಮಾತಿನಂತೆ ಅಲುಮೇಲುವಿಗೆ ತನನ್ನು ಮರೆತುಬಿಡು ಘಂದು ಕಾಗದ ಬರೆಯುತ್ತಾನೆ, ಹೀಗೆ ಒಂದು ಕಡೆ ತನ್ನ ತಂದೆಯನ್ನು ಕಳೆದುಕೊಂಡು, ಮತ್ತೊಂದು ಕಡೆ ಅಲುಮೇಲುವನ್ನು ಕಳೆದುಕೊಂಡು ಹಾಗು ಮಾರ್ಗರೇಟ್ ನ ಪ್ರೀತಿಯನ್ನು ತಿರಸ್ಕರಿಸಿ ಒಬ್ಬಂಟಿಗನಾಗುತ್ತಾನೆ

ರಾಮಾಚಾರಿ ತಂದೆಯನ್ನು ಕಳೆದುಕೊಂಡು ತನ್ನ ತಂದೆಯ ಬೆಲೆಯನ್ನು ತಿಳಿದುಕೊಳ್ಳುತ್ತಾನೆ. ತಾನ ಇಷ್ಟ ಪಟ್ಪಿರುವ ಅಲುಮೇಲುವನ್ನು ಕಳೆದುಕೊಂಡಾಗ ಅತಿ ಆಸೆ ಪಟ್ಟರೆ ಅದು ನಿರಾಸೆಗೆ ಕಾರಣವೆಂಬುದು ಅರಿತುಕೊಳ್ಳುತ್ತಾನೆ. ಮಾರ್ಗರೇಟ್ ನ ಪ್ರೀತಿಯನ್ನು ನಿರಾಕರಿಸಿದಾಗ ಪ್ರೀತಿಯ ಮಹತ್ವವನ್ನು ತಿಳಿಯುತ್ತಾನೆ.

ತಾಯಿ ಸೋನಾಭಾಯಿ ರಾಮಾಚಾರಿಗೆ ಇನ್ನು ಓದುವುದನ್ನು ಬಿಟ್ಟು ಕೆಲಸ ಹುಡುಕಿಕೊಂಡು ತನ್ನ ಹಾಗು ತಮ್ಮ ತಂಗಿಯರನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ವಹಿಸುತ್ತಾಳೆ. ಪೈಲ್ವಾನ್ ಸಿಂಗಪ್ಪ ಪ್ರಭಾವದಿಂದ ಶೆಟ್ಟರ ಮಂಡಿಯಲ್ಲಿ ಕೆಲಸ ದೊರಕುತ್ತದೆ. ಕೆಲಸಕ್ಕೆ ಸೇರಿಕೊಂಡ ರಾಮಾಚಾರಿ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಾನೆ. ತಾನು ಕಷ್ಟ ಕಾಲದಲ್ಲಿದ್ದಾಗ ತನ್ನ ತಂದೆಯ ಅಂತ್ಯಕ್ರಿಯಕ್ಕೆ ದುಡ್ಡು ಕೊಟ್ಟ ಮಾರ್ಗರೇಟ್ ನ ರುಣವನ್ನು ಎಂದೆಂದಿಗೂ ತೀರಿಸಲಾರನೆಂದು ಮತ್ತು ಮಾರ್ಗರೇಟ್ ನ ಗುಣವನ್ನು ಮತ್ತು ತನ್ನ ಮೇಲಿರುವ ಪ್ರೀತಿಯನ್ನು ಕಂಡು ಆಕೆಯ ಪ್ರೀತಿಯನ್ನು ತಿರಸ್ಕರಿಸಿದ್ದಕ್ಕೆ ವ್ಯಥೆ ಪಡುತ್ತಾನೆ. ಮಾರ್ಗರೇಟ್ ನ ಭೇಟಿಯಾಗಿ ಕ್ಷಮಾಪಣೆ ಕೇಳಿದಾಗ ತಮ್ಮಿಬ್ಬರ ನಡುವೆ  ಕ್ಷಮಾಪಣೆಗಳು ಇರಕೂಡದೆಂದು ಅವನನ್ನು ತಬ್ಬಿಕೊಂಡು ತುಟಿಗೆ ಮುತ್ತಿಕ್ಕಿ ಇನ್ನು ಅವನ ಮೇಲೆ ಪ್ರೀತಿಯಿರುವುದನ್ನು ವ್ಯಕ್ತಪಡಿಸುತ್ತಾಳೆ. ಅವರಿಬ್ಬರಲ್ಲಿ ಮತ್ತೆ ಪ್ರೀತಿ ಬೆಳೆಯುತ್ತದೆ.

ಶೆಟ್ಟರ ಆದೇಶದಂತೆ ಕೆಲಸದ ಸಲುವಾಗಿ ರಾಮಾಚಾರಿ ಶೆಟ್ಟರು ಇನ್ನಿತರರು ಹೊಸದುರ್ಗಕ್ಕೆ ಹೋದಾಗ ಒಂದು ಘಟನೆ ನಡೆಯುತ್ತದೆ. ಆ ಘಟನೆಯಿಂದ ರಾಮಾಚಾರಿಯ ಜೀವನವೇ ಅಲ್ಲೋಲಕಲ್ಲೋಲ ವಾಗುತ್ತದೆ. ಶೆಟ್ಟರು ತಮ್ಮ ಕಾಮದ ಚಟವನ್ನು ತೀರಿಸಿಕೊಳ್ಳಲು ಒಂದು ಹೆಣ್ಣನ್ನು ಗೊತ್ತುಮಾಡಿ, ಶೆಟ್ಟರು ರಾಮಾಚಾರಿಯ ಬಳಿ ರಾಮಾಚಾರಿ ಈ ಗೊತ್ತುಮಾಡಿರುವ ಮಾಲು ನಮ್ಮ ದುರ್ಗದ್ದೆಯ ನೀನು ರುಚಿನೋಡು ಎಂದಾಗ , ರಾಮಾಚಾರಿ ಸಿಡಿಮಿಡಿ ಗುಟ್ಟುಕೂಂಡು ಶೆಟ್ಟರ ಈ ಅಸಹ್ಯ ವರ್ತನೆಯನ್ನು ನೋಡಿ ಹೊರಟುಹೋಗುತ್ತಾನೆ.

ಹೊರಟಾಗ ಆ ಮಾಲು ಯಾರೆಂಬದು ಕಂಡಾಗ ಅವನು ಜೀವವಿದ್ದರು ತಾನು ಇಂದು ಸತ್ತನೆಂದು ಭಾಸವಾಗುತ್ತದೆ, ಆ ಮಾಲು ಬೇರೆ ಯಾರು ಅಲ್ಲ ಅವನು ಮನಸ್ಸಾರೆ ಇಷ್ಟಪಟ್ಟ ಅಲುಮೇಲು. ನಂತರ ಅಲುಮೇಲುನಿಂದ ಆಕೆಯು ಸೂಳೆ ಯಾದುದು ತನ್ನ ಗಂಡನಿಂದಲೇ ಎಂದು ತಿಳಿಯುತ್ತಾನೆ. ಅತೀ ದುಡ್ಡುವಿನ ಆಸೆಗೆ‌ ತನ್ನ ಗಂಡನೇ ಆಕೆಯನ್ನು ಮಾರಿದ ಸಂಗತಿ ತಿಳಿದು ಕಣ್ಣೀರಿಡುತ್ತಾನೆ.

ಅಲುಮೇಲವನ್ನು ತಾನೆ ಮದುವೆಯಾಗಿದ್ದರೆ ಅವಳಿಗೆ ಈ ಸ್ಥಿತಿ ಬರುತ್ತಿರಲಿಲ್ಲವೆಂದು, ಅಲುಮೇಲು ಸೂಳೆಯಾಗುವುದಕ್ಕೆ ತಾನೆ ಕಾರಣನೆಂದು, ತನ್ನನ್ನು ಒಪ್ಪಿಸಿದ ಚಾಮಯ್ಯನವರೂ ಕಾರಣರೆಂದು ಹಾಗು ವರದನಿಂದಲೇ ಅಲುಮೇಲು ಸೂಳೆಯಾದಳೆಂದು ಮಾರ್ಗರೇಟ್ ಬಳಿ ಬಿಕ್ಕಿ ಬಿಕ್ಕಿ ಅಳುತ್ತಾನೆ.

ಈ ದುಃಖದಿಂದ ಅವನು ಮಂಡಿಗೆ ಹೋಗುವುದೂ ನಿಲ್ಲಿಸಿ ಮಾರ್ಗರೇಟ್ ಮನೆಯಲ್ಲೇ ಇರುತ್ತಿದ್ದನು.ಇದನ್ನರಿತ‌ ಊರಿನ ಜನರು ರಾಮಾಚಾರಿ ಮಾರ್ಗರೇಟ್ ಳನ್ನು ತನ್ನ ಸೂಳೆಯಾಗಿ ಇಟ್ಟುಕೊಂಡಿರುವನೆಂದು ಅಪಪ್ರಚಾರ ಮಾಡುತ್ತಾರೆ. ಇದನ್ನರಿತ ರಾಮಾಚಾರಿ ಕಳ್ಳಸೂಳೆ ಮಕ್ಕಳಿಗೆ ಈತರ ಅಪಪ್ರಚಾರ ಮಾಡುವುದು ಬಿಟ್ಟು ಬೇರೆ ಏನು ಮಾಡಿಯಾರು ಎಂದು ಹಾವಿನಂತೆ ಬುಸುಗುಟ್ಟುತ್ತಾನೆ. ಆದರೇ ತಾಯಿ ಸೋನಾಭಾಯಿಗೆ ಈ ವಿಷಯ ತಿಳಿದು ತನ್ನನ್ನು ಗೊಳು ಹಾಕಿಕೊಳ್ಳಲೆಂದೆ ಈ ಪಾಪತ್ಮನು ಹುಟ್ಟಿದನೆಂದು ಆ ಜಾತಿಕೆಟ್ಟವಳನ್ನು ಇಟ್ಟುಕೊಂಡಿದ್ದಾನೆಂದು ಸಂಕಟಪಡುತ್ತಾಳೆ. ಆ ಜಾತಿಗೆಟ್ಟ ಸೂಳೆ ಅದೇನು ಮಾಯ ಮಾಡಿದಾಳೋ ರಾಮಣ್ಣನನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದ್ದಾಳೆಂದು ಅವನ ಮುಂದೆಯೇ ಬೈಯ್ಯುತ್ತಾಳೆ. ಬೇಸರವಾದ ರಾಮಾಚಾರಿ ಥೂತ್ ಎಲ್ಲರೂ ನನ್ನನ್ನು ಗೋಳಿಹಾಕಿಕೊಳ್ಳುವವರೆ ಎಂದು ಮಾರ್ಗರೇಟ್ ಜೊತೆ ದುರ್ಗದ ಬೆಟ್ಟಕ್ಕೆ ಹೋಗುತ್ತಾನೆ.

ತಾಯಿ ಸೋನಾಭಾಯಿ ಎಷ್ಟು ಕಾದರೂ ಮಗ ಮನೆಗೆ ಬರೆದಿದ್ದಾಗ ಚಾಮಯ್ಯನವರನ್ನು ಹುಡುಕಿಕೊಂಡು ಹೋಗುತ್ತಾಳೆ. ರಾಮಾಚಾರಿ ಚಾಮಯ್ಯನವರ ಮಾತನ್ನು ಕೇಳುತ್ತಾನೆಂದು ಭರವಸೆಯಿಂದ. ಚಾಮಯ್ಯನವರಿಗೆ ನಡೆದ ಘಟನೆಗಳನ್ನು ವಿವರಿಸಿ ಹೇಗಾದರೂ ಮಾಡಿ ಆ ಮುಂಡೆಯ ಸಹವಾಸ ಬಿಟ್ಟು ನಾನು ಹುಡುಕುವ ಹೆಣ್ಣೆನ್ನೇ ಅವನು ಮದುವೆಯಾಗವ ಹಾಗೆ ಮಾಡಬೇಕೆಂದು ಕಾಲಿಗೆ ಬೀಳುತ್ತಾಳೆ, ತಮ್ಮ ಮಾತನ್ನು ಮೀರುವುದಿಲ್ಲವೆಂಬ ಬರವಸೆಯಿಂದ ನನ್ನ ಮಗನನ್ನು ಉಳಿಸಿ ಎಂದು ಕೇಳಿಕೊಳ್ಳುತ್ತಾಳೆ. ಇದೆಂತಹ ಸಂಕಟಕ್ಕೆ ಮತ್ತೊಮ್ಮೆ ಒಳಗಾದನೆಂದು ಚಾಮಯ್ಯನವರು ಕುಸಿಯುತ್ತಾರೆ. ತನ್ನ ಮಾತಿನಂತೆ ಅಲುಮೇಲುವನ್ನು ತ್ಯಜಿಸಿದ ಮನುಷ್ಯ, ತನ್ನ ಶಿಷ್ಯನ ಬಗ್ಗೆ ಗರ್ವ ಪಡುತ್ತಾರೆ. ಈಗಲು ಅದೇ ಸನ್ನಿವೇಶ ಎದುರಾಗುತ್ತದೆಂದು ಅವರು ಊಹೆ ಮಾಡಿರಲಿಲ್ಲ.

ಸೋನಾಭಾಯಿಗೆ ಕೊಟ್ಟ ಮಾತಿನಂತೆ ಚಾಮಯ್ಯನವರು ರಾಮಾಚಾರಿಯನ್ನು ಹುಡುಕಲು ಬೆಟ್ಟಕ್ಕೆ ಹೋಗುತ್ತಾರೆ. ಅಲ್ಲಿ ರಾಮಾಚಾರಿ ಮಾರ್ಗರೇಟ್ ಜೊತೆ ಇರುವುದು ಕಣ್ಣಿಗೆ ಬೀಳುತ್ತದೆ.ರಾಮಾಚಾರಿ ನಿನ್ನ ಹತ್ತಿರ ಮಾತಾಡಬೇಕು ಬಾ ಎಂದು ಕರೆಯುತ್ತಾರೆ, ಮತ್ತೇನು ವಿಪ್ಪತ್ತು ಕಾದಿದಿಯೋ ಎಂದು ಮಾರ್ಗರೇಟ್ ತಡೆದಾಗ ರಾಮಾಚಾರಿ ಚಾಮಯ್ಯನವರ ಮೇಲಿರುವ ಪ್ರೀತಿಯಿಂದ ಮಾತಾನಾಡಲು ಬರುತ್ತಾನೆ. ತಾಯಿ‌ಸೋನಾಭಾಯಿ ಹೇಳಿದ್ದನೆಲ್ಲ ವಿವರಿಸಿ ಮಾರ್ಗರೇಟ್ ನ ಮರೆತುಬಿಡು ಎಂದು ಕೇಳಿಕೊಂಡಾಗ, ರಾಮಾಚಾರಿ ಕ್ರುದ್ಧನಾಗಿ ಚಾಮಯ್ಯನವರನ್ನು ನಿಂದಿಸುತ್ತಾನೆ, ಮೇಷ್ಟ್ರೇ ನಿಮ್ಮ ಮಾತಿಗೆ ಬೆಲೆ ಕೊಟ್ಟು ಅಲುಮೇಲುವನ್ನು ತ್ಯಾಗ ಮಾಡಿದೆ ಈಗ ಅವಳ ಸ್ಥಿತಿ ಏನಾಗಿದೆ ಗೊತ್ತಾ, ಅವಳೊಬ್ಬ ಸೂಳೆ ಈಗ, ಅಲುಮೇಲು ಸೂಳೆಯಾಗುವುದಕ್ಕೆ ನೀವೆ ಕಾರಣ, ಈ ಮಾರ್ಗರೇಟ್ ನ ಮರೆತು ಬಿಡು ಎಂತ ಹೇಳಿ ಅವಳನ್ನೂ ಸೂಳೆ ಮಾಡಲು ಹೊರಟಿದ್ದೀರಾ, ಈ ಮಾತನ್ನು ಕೇಳಿದಾಗ ಚಾಮಯ್ಯನವರಿಗೆ‌ಹೃದಯಕ್ಕೆ ಚೂರೀ ಇರಿದಂತಾಗುತ್ತದೆ.

ಅಲುಮೇಲು ಸೂಳೆಯಾಗುವುದಕ್ಕೆ ನೀವೆ ಕಾರಣ ಎಂದು ಅವನಿಗೆ ಅರಿವಿಲ್ಲದೆ ಚಾಮಯ್ಯನವರನ್ನು ತಳ್ಳುತ್ತಾನೆ, ಅದರ ಪರಿಣಾಮ ಚಾಮಯ್ಯನವರು ಬೆಟ್ಟದಿಂದ ಉರುಳಿ ಸಾಯುತ್ತಾರೆ ಇದನ್ನು ಕಂಡ ರಾಮಾಚಾರಿ ಚಾಮಯ್ಯನವರನ್ನು ತಾನೆ ಕೊಂದನೆಂದು ತನ್ನ ಸಹವಾಸ ಮಾಡಿದವರು ಯಾರು ಉಳುಯುವುದಿಲ್ಲವೆಂದು, ತಾನೂಬ್ಬ ವಿಷ ಜಂತುವೆಂದು , ತನ್ನ ಸಹವಾಸ ಮಾಡಿದ ಅಲುಮೇಲು ಚಾಮಯ್ಯನವರು ತನ್ನಿಂದ ದೂರವಾದರು. ಚಾಮಯ್ಯನವರನ್ನು ಕೊಂದ ಪಾಪಿ ನಾನು ಅವರು ಇಲ್ಲದ ಮೇಲೆ ಇಲ್ಲಿರುವ ಅರ್ಹತೆ ತನಗಿಲ್ಲ, ತಾನು ಸಾಯಲು ಸಿದ್ದನೆಂದು ನೀನು ಬರುವೆಯಾದರೆ ಬಾ ಎಂದು ಮಾರ್ಗರೇಟ್ ಗೆ ಕೇಳಿದಾಗ ನೀವಿಲ್ಲದ ಜೀವನ ಶೂನ್ಯಯಂದು ಇಬ್ಬರು ಬೆಟ್ಟದಿಂದ ಬಿದ್ದು ಸಾಯುತ್ತಾರೆ. ಒಟ್ಟಾರೆ ತ.ರಾ.ಸು ರವರು ಸೃಷ್ಟಿಸಿದ ರಾಮಾಚಾರಿ ಹಾಗು ಚಾಮಯ್ಯನವರ ಪಾತ್ರ ನಮ್ಮ ಮನಸ್ಸಿನಲ್ಲಿ ಸದಾಕಾಲ ಉಳಿದಿರುತ್ತದೆ ,ಇದೂಂದು ಅದ್ಭುತ ಕಾದಂಬರಿ.

ಕಾರ್ತಿಕೇಯ ಭಟ್‌