Book Watchers

ಸಿದ್ಧರಾಮ ಹೊನ್ಕಲ್‌

ಪ್ರಬಂಧಕಾರರಾಗಿ, ಕಥೆಗಾರರಾಗಿ, ಕವಿಯಾಗಿ ಸೃಜನಶಿಲತೆಯ ಬಹುಮುಖಿ ಆಯಾಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಸಿದ್ಧರಾಮ ಹೊನ್ಕಲ್ ಅವರು ಪ್ರಸ್ತುತ ಸಮಾಜಶಾಸ್ತ್ರ ಭೋಧಕರಾಗಿ ಕಾರ್ಯನಿರ್ವಹಿಸುತಿದ್ದಾರೆ. ಜೊತೆಗೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ 40 ಕೃತಿಗಳನ್ನು ರಚಿಸಿದ್ದಾರೆ. ಹೊನ್ಕಲ್ ಅವರು ಬರೆದ ಕಥೆ ಮತ್ತು ಪ್ರಬಂಧಗಳು ಗುಲಬರ್ಗಾ ವಿಶ್ವವಿದ್ಯಾಲಯದ ಪದವಿ ವಿದ್ಯಾರ್ಥಿಗಳಿಗೆ ಮತ್ತು ಪ್ರವಾಸ ಕಥನ ಕೊಲ್ಲಾಪುರ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪಠ್ಯವಾಗಿವೆ. ಇವರ ಪ್ರಕಟಿತ ಕೃತಿಗಳು: ಕಥೆ ಕೇಳು ಗೆಳಯ, ಬಯಲು ಬಿತ್ತನೆ, ನೆಲದ ಮರೆಯ ನಿನಾದ, ಅಂತರಂಗದ ಹನಿಗಳು, ಹೊಸ ಹಾಡು, ಬೆವರು, ನೆಲದ ನುಡಿ, ಗಾಂಧಿಯ ನಾಡಿನಲ್ಲಿ, ಪಂಚನಾದಿಗಳ ನಾಡಿನಲ್ಲಿ ಮುಂತಾದವು.

Articles

ಕನ್ನಡ ಗಜಲ್ಗಳ 

’ನಿನಾದ’ ಕೃತಿಯ ಮೂಲಕ ಪ್ರಭಾವತಿ ದೇಸಾಯಿಯವರು ಅಂತಹ ಒಂದು ಮೂಲ ಪರಂಪರೆಯ ಮುಂದುವರಿಕೆಯ ಭಾಗವಾಗಿ ಈ ಸಂಕಲನದ ಬಹುತೇಕ ಗಜಲ್ ಗಳು ಯಶಸ್ವಿಯಾಗಿ ಓದುಗರ ಹೃದಯ ತಟ್ಟುತ್ತವೆ ಮತ್ತು ಮನ ಮುಟ್ಟುತ್ತವೆ.

Read More...

’ಮೂರನೇ ಕಣ್ಣು’ ಲಲಿತ ಪ್ರಬಂಧ-ಲಘು ಹಾಸ್ಯದ ಫಿಲಾಸಫಿಕಲ್ ಬರಹಗಳು

ಓದುತ್ತಾ ನಕ್ಕು ಸುಸ್ತಾದೆ. ನಾನು ಶಿರ್ಷಿಕೆ ನೋಡಿ ಅಂದುಕೊಂಡಿದ್ದೆ ಬೇರೆ, ಅದು ಇರುವುದೇ ಬೇರೆ. ಈ ಕೃತಿಯಲ್ಲಿ ನನಗೆ ಅತಿ ಇಷ್ಟವಾದ ಬರಹಗಳಲ್ಲಿ ಇದು ಮುಖ್ಯ, ಇದರ ಜೊತೆಗೆ ನಿದ್ದಿ ಮಾಡಲಿಬೇಕು ಜಗದೊಳಗ, ನಿದ್ದೆಯ ಅವಾಂತರಗಳು, ಭೂಕಂಪವಾದರು ಎಚ್ಚರ ವಾಗದ ಆ ಸ್ಥಿತಿ, ತ್ಯಾಗಮಯಿ ತಂದೆಯ ನಿದ್ದೆ, ನಿದ್ಧೆಯಲ್ಲಿಯೇ ಸುಖದ ಸಾವು ಕಂಡ ಅವರು ಈಗಲೂ ಇರುವರೆಂಬ ಭಾವ ಮನಕ್ಕೆ ತಟ್ಟುತ್ತದೆ, ಬಹುಕಾಲ ಕಾಡುತ್ತದೆ.

Read More...

ನಗರದ ಚರಿತ್ರೆ ಕಟ್ಟಿಕೊಡುವ: ಬೆಂಗಳೂರು ಪರಂಪರೆ

’ಬೆಂಗಳೂರು ಪರಂಪರೆ  ಇತಿಹಾಸ ಸಂಶೋಧನೆಯ ಹೊಸ ನೋಟಗಳು’ ಇತಿಹಾಸ ದರ್ಪಣ ಪ್ರಕಾಶನ ಬೆಂಗಳೂರು ಅವರಿಂದ ಈ 2009 ರಲ್ಲಿ ಈಗಷ್ಟೇ ಪ್ರಕಟಗೊಂಡಿದೆ.ಈ ಕೃತಿಯಲ್ಲಿ ಇಡೀ ಬೆಂಗಳೂರಿನ ಚರಿತ್ರೆಯನ್ನು ಅದರ ವಿಕಾಸದ ಹಂತಗಳನ್ನು ಅದರ ಒಡಲಲ್ಲಿಯ ಅನೇಕ ಕಥೆಗಳನ್ನು ಕಟ್ಟಿಕೊಟ್ಟಿದೆ.

Read More...