Article

ನಗರದ ಚರಿತ್ರೆ ಕಟ್ಟಿಕೊಡುವ: ಬೆಂಗಳೂರು ಪರಂಪರೆ

ಎಸ್. ಕೆ. ಅರುಣಿಯವರು ಹೊಸ ಪೀಳಿಗೆಯ ಈ ನಾಡು ಕಾಣುತ್ತಿರುವ ಒಬ್ಬ ತರುಣ ಇತಿಹಾಸ ತಜ್ಞ ಲೇಖಕ. ವೃತ್ತಿಯಿಂದ ಐ ಸಿ ಎಚ್ ಆರ್ ನಲ್ಲಿ ಉಪನಿರ್ದೇಶಕರಾಗಿ ಕಳೆದ 20 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು ಖ್ಯಾತ ಇತಿಹಾಸ ತಜ್ಞರಾದ ಪ್ರೊ. ಷ. ಶೆಟ್ಟರಂಥವರ ಗರಡಿಯಲ್ಲಿ ಪಳಗಿದವರು. ಈಗಾಗಲೇ ಸಾಕಷ್ಟು ಸಾಧನೆ ಮಾಡಿದ ಇವರು ನಮ್ಮವರು ಅಂದ್ರೆ ಶಹಾಪುರಿನವರೆಂಬುದು ನಮಗೊಂದು ಹೆಮ್ಮೆ ನಮ್ಮ ಸಗರ ನಾಡಿನವರದು.

ತುಂಬಿದ ಕೊಡ ತುಳುಕುವುದಿಲ್ಲ, ಖಾಲಿ ಕೊಡಗಳು ಶಬ್ದ ಮಾಡುವುದು ನಿಲ್ಲಿಸುವುದಿಲ್ಲವೆಂಬಂತೆ ಅಪಾರ ಓದು, ಅಪಾರ ತಿಳುವಳಿಕೆ, ಶಾಸ್ತ್ರಬದ್ದ ವೈಜ್ಞಾನಿಕ ಇತಿಹಾಸ ರಚನೆ ಇವರದು. ಗತ ಅರಿಯದವನು ಇತಿಹಾಸ ರೂಪಿಸಲಾರ ಎಂಬಂತೆ  ಇವರ ಅನೇಕ ಕೃತಿಗಳು ಇವರ ಸಾಧನೆಯ ಸಾಕ್ಷಿಗಳು.

ದಖನಿ ಚಿತ್ರಕಲೆ 2001, ಯಲಹಂಕ ನಾಡಪ್ರಭುಗಳ  ವಾಸ್ತುಶಿಲ್ಪ ಮತ್ತು ಕಲೆ 2007, ಸುರಪುರ ಸಂಸ್ಥಾನ (ಇತಿಹಾಸ ಹಾಗೂ ಆರ್ಕೋಲಾಜಿಕಲ್ ಆಫ್ ಪೋಲಿಗರ್ ಸ್ಟೇಜ್ ಇನ್ ಸೌತ್ ಇಂಡಿಯಾ-2004 ಇವು ಇವರ ಸಂಶೋಧನಾ ಕೃತಿಗಳು. ನಮ್ಮ ಬೆಂಗಳೂರು, ಕರ್ನಾಟಕದ ಲ್ಲಿ ಪುರಾತತ್ವ ಅಧ್ಯಯನಗಳು-೨೦೧೨ ಇವರು ಸಂಪಾದನಾ ಕೃತಿಗಳು.ಇವೆಲ್ಲ ಇತಿಹಾಸದ ಮೇಲೆ ಅಪಾರ ಬೆಳಕು ಚೆಲ್ಲಿದ ಮಹತ್ವದ ಕೃತಿಗಳು.

ಪ್ರಸ್ತುತ ಕೃತಿ ’ಬೆಂಗಳೂರು ಪರಂಪರೆ  ಇತಿಹಾಸ ಸಂಶೋಧನೆಯ ಹೊಸ ನೋಟಗಳು’ ಇತಿಹಾಸ ದರ್ಪಣ ಪ್ರಕಾಶನ ಬೆಂಗಳೂರು ಅವರಿಂದ ಈ 2009 ರಲ್ಲಿ ಈಗಷ್ಟೇ ಪ್ರಕಟಗೊಂಡಿದೆ.ಈ ಕೃತಿಯಲ್ಲಿ ಇಡೀ ಬೆಂಗಳೂರಿನ ಚರಿತ್ರೆಯನ್ನು ಅದರ ವಿಕಾಸದ ಹಂತಗಳನ್ನು ಅದರ ಒಡಲಲ್ಲಿಯ ಅನೇಕ ಕಥೆಗಳನ್ನು ಕಟ್ಟಿಕೊಟ್ಟಿದೆ.

ಯಾರ್ಯಾರೋ ಸಂಶೋಧಕರೆಂಬ ಅಪಖ್ಯಾತಿಗೆ ಕಾರಣವಾಗಿರುವ ಈ ದಿನಮಾನಗಳಲ್ಲಿ ಈ ನಾಡು ಮುಂದೊಂದು ದಿನ ಮಹತ್ವದ ಇತಿಹಾಸ ತಜ್ಞ ಹಾಗೂ ಖ್ಯಾತ ಸಂಶೋಧಕ ಎಂದು ಗುರುತಿಸಬಹುದಾದ ಅಪ್ಪಟ ಪ್ರತಿಭೆ ಈ ನಮ್ಮ ಡಾ.ಎಸ್.ಕೆ.ಅರುಣಿ.ಈತ ಬಹುದೊಡ್ಡ ವಿದ್ವಾಂಸ ಹಾಗೂ ಅತ್ಯಂತ ಸರಳ ಜೀವಿ.  ಅವರಿಗೆ ಕೋರುವೆ.

ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಸಿದ್ಧರಾಮ ಹೊನ್ಕಲ್‌