Book Watchers

ಉದಯ್ ಕುಮಾರ್ ಹಬ್ಬು

ಉದಯ್ ಕುಮಾರ್ ಹಬ್ಬು ಅವರು ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರು. 1951 ಏಪ್ರಿಲ್ 21ರಂದು ಮಂಗಳೂರಿನ ಕಿನ್ನಿಗೋಳಿಯಲ್ಲಿ ಜನಿಸಿದರು. ಅವರ ಕವನ ಸಂಕಲನ, ಕಾದಂಬರಿ, ಮಕ್ಕಳ ಸಾಹಿತ್ಯ ರಚನೆ, ಧಾರ್ಮಿಕ ಕೃತಿ, ವ್ಯಕ್ತಿತ್ವ ವಿಕಸನ ಕೃತಿ ರಚನೆ, ತತ್ವಶಾಸ್ತ್ರಕ್ಕೆ ಸಂಬಂಧಿಸಿದ ಅಧ್ಯಯನ, ಕೃತಿ ರಚನೆ, ವಿಮರ್ಶಾ ಪುಸ್ತಕಗಳ ಪ್ರಕಟಣೆ, ಕಥಾ ಸಂಕಲನಗಳನ್ನು ರಚಿಸಿ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದಾರೆ. ಆಹಾರ ಸಂಸ್ಕೃತಿಗೆ ಸಂಬಂಧಿಸಿದಂತೆ ’ಲುಂಡೀರಿಯ’ ಎಂಬ ಮಕ್ಕಳ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ’ಪ್ರಾಚೀನ ಭಾರತೀಯ ತತ್ವ’ ಎಂಬ ಕೃತಿಯನ್ನು ಹೊರತಂದಿದ್ದಾರೆ.

Articles

ಪಿಆರ್‌ಓ‌ ಎಂಬ ಓರ್ವ‌ ಆದರ್ಶ ವ್ಯಕ್ತಿಯ ಆತ್ಮಕಥನ ‘ಹಮಾರ ಪಿಆರ್‌ಓ’

ಪಿಆರ್‌ಓ ಹುದ್ದೆ ಅನೇಕ ಅವಕಾಶಗಳನ್ನು ಒದಗಿಸುತ್ತದೆ. ಕೆಲವರು ಬಾಸ್‌ರ ವೈಯಕ್ತಿಕ ಕೆಲಸ‌ ಮಾಡುವುದರಲ್ಲಿ ಮಾತ್ರ ನಿರತರಾಗಿ ಸಂಸ್ಥೆಗೆ‌‌ ಕೆಟ್ಟ ಹೆಸರು ತರುವ‌‌ ಪಿಆರ್‌ಓಗಳೂ‌‌ ಇರುತ್ತಾರೆ.

Read More...

ಅನುಭವಗಳನ್ನು ಗಾಢವಾಗಿ ಕಟ್ಟಿಕೊಡುವ ಕಥೆ ಕಥಾನಕ ಪ್ರಸಂಗ

ರಾತ್ರಿ ನಿದ್ದೆ ಬರಲು ಪುಸ್ತಕದ ಕೆಲವು ಹಾಳೆಗಳು ಓದಿನಂತೆ, ದೇಹದ ಚಪಲವನ್ನು ಶಮನಗೊಳಿಸುವುದೇ ಪ್ರೀತಿಯ ಉತ್ಕಟತೆ ಎಂದು ತಿಳಿದಂತೆ. ಇವತ್ತು ಯಾರು‌ ಬೇಕಾದರೂ, ಯಾವುದೇ ಮನಃಸ್ಥಿತಿಯಲ್ಲಾದರೂ ಯೋಗಾಸನ ಪ್ರಾರಂಭಿಸಿಬಿಡಬಹುದು, ಪರಿಣಿತರಾಗಿಬಿಡಬಹುದು. ಒಂದು ಗಂಟೆಗೋ, ಒಂದುವರೆ ಗಂಟೆಯೋ ಯೋಗಾಭ್ಯಾಸ ಮಾಡಿಬಿಟ್ಟರೆ ನಂತರ ಯಾವ ಜೀವನಕ್ರಮವನ್ನಾದರೂ ಪಾಲಿಸಬಹುದು ಎಂಬ ನಂಬಿಕೆ ಬೆಳೆದುಬಿಟ್ಟಿದೆ.

Read More...

ಮಹಾಭಾರತ ಹೇಳುವ ವ್ಯಾಸ: ‘ಇನಾಸ ಮಾಮನ ಟಪಾಲು ಚೀಲ’

ಕತೆಗಳ ಮೊದಲ ವಾಕ್ಯವೆ ನಮ್ಮನ್ನು ಕತಾಲೋಕಕ್ಕೆ ಸೆಳೆದು ಕೊಂಡು ಅಂತ್ಯದವರೆಗೂ ನಮ್ಮನ್ನು ಹಿಡಿದಿಡುವ ಕಲಾವಂತಿಕೆ ‌ಈ ಕತೆಗಳಿಗೆ ಇವೆ. ಪ್ರತಿ ಕತೆಯನ್ನು ಕೆಲವು ಕವಿಗಳ ಕತೆಗೆ ಸೂಟ್ ಆಗುವ ಕವಿತೆಯ ಸಾಲುಗಳಿಂದ ಪ್ರಾರಂಭಿಸುವುದು ಮತ್ತೊಂದು ವಿಶೇಷ.

Read More...

ಡಾ.ಎಚ್.ಎಸ್.ವಿ ಯವರ `ಕುಮಾರ ವ್ಯಾಸ ಕಥಾಂತರ'

ಕುಮಾರ ವ್ಯಾಸನ ಕಾವ್ಯ ಸ್ವಾರಸ್ಯವನ್ನು ಬಿಡಿಸಿಡುವಾಗ ಆಧುನಿಕ ಕವಿಗಳಾದ ಅಡಿಗರು, ಪುತಿನ, ಮಾಸ್ತಿ ಮುಂತಾದ ಸಾಹಿತಿಗಳ, ಕವಿಗಳ ಉದಾಹರಣೆಗಳನ್ನೂ ಎಚ್ ಎಸ್ ವಿ ಕೊಡುತ್ತಾರೆ. ಎಚ್ ಎಸ್ ವಿಯವರ ಕುಮಾರ ವ್ಯಾಸನ ಕುರಿತಾದ ವಿಮರ್ಶೆ ಹೀಗಿದೆ`ಆಧುನಿಕರಾದ ನಮಗೆ ಸಂತೋಷ ಉಂಟು ಮಾಡುವಂತೆ ಕುಮಾರ ವ್ಯಾಸನು ವರ್ಣಗಳನ್ನು ಲಕ್ಷಿಸದೆ ಪೃವೃತ್ತಿಗಳನ್ನು ಲಕ್ಷಿಸಿ ಮಾತಾಡತೊಡಗುತ್ತಾನೆ. ಭಿನ್ನ ಸಂಸ್ಕೃತಿಗಳ ನಡುವೆ ನಡೆಯುವ ಹೊಕ್ಕಾಟ ತಿಕ್ಕಾಟಗಳು ವರ್ಣಾಶ್ರಮ ವ್ಯವಸ್ಥೆಯನ್ನು ಕಂಪನಕ್ಕೊಳಗಾಗಿಸಿದ ಕಾಲದಲ್ಲಿ ಕುಮಾರ ವ್ಯಾಸ ಬದುಕಿದ್ದದ್ದು ಎನ್ನುವುದನ್ನು ನಾವು ಮರೆಯುವಂತಿಲ್ಲ. ಹೀಗಾಗಿ ಹಳೆಯ ಕಾವ್ಯವನ್ನು ಓದುವಾಗ ಎಲ್ಲ ಕಾಲಗಳೂ ಕಲಸಿಕೊಂಡುಬಿಡುತ್ತವೆ.

Read More...