Article

ಪಿಆರ್‌ಓ‌ ಎಂಬ ಓರ್ವ‌ ಆದರ್ಶ ವ್ಯಕ್ತಿಯ ಆತ್ಮಕಥನ ‘ಹಮಾರ ಪಿಆರ್‌ಓ’

ಉಡುಪಿ ಟೆಂಪಲ್ ಸಿಟಿ ಜೇಸೀಸ್ ಸಂಸ್ಥೆ Communication ಕುರಿತು ಒಂದು ದಿನದ ಕಾರ್ಯಾಗಾರವನ್ನೇರ್ಪಡಿಸಿತ್ತು. ಮುಖ್ಯ ತರಬೇತುದಾರರಾಗಿ ಮಾನ್ಯ ಜೇಸಿ ಜಯಪ್ರಕಾಶ್ ರಾವ್ ಬಂದಿದ್ದರು. ಅಂದು ನಾನು ಜೇಸಿಸ್ ಸೇರಿದ ಪ್ರಾರಂಭದ ದಿನಗಳು. ಜಯಪ್ರಕಾಶ್ ಅವರ ವಾಗ್ಝರಿ, ಆತ್ಮೀಯತೆ ಆಕರ್ಷಕ ನಿರೂಪಣೆ ನಮ್ಮೆಲ್ಲರ‌ ಮನ ಗೆದ್ದಿತ್ತು. ನಾನು ಅತ್ಯುತ್ಸಾಹದಿಂದ ಭಾಗವಹಿಸಿದೆ. ನನಗೆ The best participant award ಸಿಕ್ಕಿದ ಸಂಭ್ರಮ.

ಇಂದು ಅದೆ Communication Master ದೇಶದ ಅತ್ಯುನ್ನತ ವೈಮಾನಿಕ ಸಂಸ್ಥೆಯಾದ LCA ಲಘು ಯುದ್ಧ ವಿಮಾನ ವಿನ್ಯಾಸ ಕೇಂದ್ರದ ಪ್ರಧಾನ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ 20 ವರ್ಷಗಳ ಸೇವೆ, D R D O ದಲ್ಲಿಯೂ ಅದೆ ಉನ್ನತ ಸ್ಥಾನದಲ್ಲಿ ಸೇವೆ ಎಲ್ಲಕ್ಕಿಂತ ಮಿಗಿಲಾಗಿ ನಮ್ಮ ದೇಶದ ವಿಶಿಷ್ಟ ಪ್ರತಿಭೆಯ ರಾಷ್ಟ್ರಪತಿ ಮಾನ್ಯ ಎ ಪಿ ಜೆ ಅಬ್ದುಲ್ ಕಲಾಮರ ಪಿಆರ್‌ಓ ಆಗಿ ಸೇವೆ ಸಲ್ಲಿಸಿ ಕಲಾಮ್‌ರಿಂದ "ಪಿ ಅರ್ ಎ ಕ್ಯಾನ್ ಡು ಇಟ್" ಎಂಬ ಪ್ರಶಂಸೆಗೆ ಭಾಜನರಾದ, ಕಲಾಮ್ ರ ಒಡನಾಟ,ಅವರ ಸಾನಿಧ್ಯ, ಜಯಪ್ರಕಾಶರ ಸೇವಾತತ್ಪರತೆ, ಶ್ರದ್ಧೆ, ಪರಿಶ್ರಮ, ಮಾನವೀಯತೆ ಮನುಷ್ಯರ ಕಷ್ಟಕ್ಕೆ ಸ್ಪಂದಿಸುವ ಹೆಂಗರುಳು ತಾಳ್ಮೆ ಇವೆಲ್ಲ ಮುಪ್ಪರಿಗೊಂಡು ಇಂದು ಜಯಪ್ರಕಾಶ್ ಅವರ ಇಂತಹ ಪ್ರಸಿದ್ಧ ಪುಸ್ತಕ ಸೃಷ್ಟಿಯಲ್ಲಿ ಅಭಿವ್ಯಕ್ತಗೊಂಡಿದೆ. ಪಿಆರ್‌ಓ ಹೇಗಿರಬೇಕು, ಅವನು ಎದುರಿಸುವ ಸವಾಲುಗಳು ಯಾವುವು, ಅವುಗಳನ್ನು ಹೇಗೆ ಎದುರಿಸಬೇಕು, ಎಂತಹ ಕ್ಲಿಷ್ಟ ಸಮಸ್ಯೆಗಳನ್ನು( "ಜೆ ಪಿ" ಜಯಪ್ರಕಾಶ್ ಅವರನ್ನು ಎಲ್ಲರೂ, even ರಾಷ್ಟ್ರಪತಿ ಅಬ್ದುಲ್ ಕಲಾಂ ಕೂಡ ಅವರನ್ನು ಜೆಪಿ ಅಂತಲೆ ಕರೆಯುತ್ತಿದ್ದರಂತೆ) ಚಾಕಚಕ್ಯತೆಯಿಂದ ಸಾವಧಾನದಿಂದ ಸಮಯ ಪ್ರಜ್ಞೆಯಿಂದ ಎದುರಿಸಿ ಯಶಸ್ಸನ್ನು ಗಳಿಸಿದರು ಈ ಎಲ್ಲ ಸಂಕಥನಗಳು ಈ ಪುಸ್ತಕದಲ್ಲಿ ಅತ್ಯಂತ ಸರಳವಾಗಿ ಆಕರ್ಷಕವಾಗಿ ನಿರೂಪಿಸಲ್ಪಟ್ಟಿದೆ. ಮೊದಲು ಪತ್ರಕರ್ತರಾಗಿ ತಮ್ಮ ವೃತ್ತಿಯನ್ನು ಪ್ರಾರಂಭಿಸಿದ ಜೆಪಿ ಅವರು ಮತ್ತೆ ಸಿಂಡಿಕೇಟ್ ಬ್ಯಾಂಕ್ ನ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ, ಬ್ಯಾಂಕ್ ನ ಪತ್ರಿಕೆಯಾದ Giant ಇದರ ಸಂಪಾದಕರಾಗಿ ಖ್ಯಾತಿ ಗಳಿಸಿದರು. ಜಯಂಟ್ ಪತ್ರಿಕೆಯ ಸಂಪಾದಕರಾಗಿ ಕೆಲಸ ಮಾಡುವಾಗ ಅವರ ಹಿರಿಯ ಅಧಿಕಾರಿ ಪತ್ರಿಕೆಯಲ್ಲಿ ಇವರ ಹೆಸರನ್ನೆ ಬಿಟ್ಟಾಗ ಜೆ ಪಿ ಈ ಅನ್ಯಾಯವನ್ನು ಕಂಡು ನೊಂದರು. ಮೇಲಧಿಕಾರಿಯಾದ ಅಂಬಲಪಾಡಿ ಕೃಷ್ಣ ರಾವ್ ಅವರ ಬಳಿ ನಿವೇದಿಸಿಕೊಂಡರು.‌ ಕೃಷ್ಣರಾವ್ ಅದನ್ನು ವಿಚಾರಿಸಿ ಜಯಪ್ರಕಾಶ್ ಅವರಿಗೆ ಆದ ಅನ್ಯಾಯವನ್ನು ಸರಿಪಡಿಸಿದ ಕಥಾನಕ ಇಲ್ಲಿದೆ.

ಪಿಆರ್‌ಓ ಒಂದು ಸಂಸ್ಥೆಯ ಮುಖಕನ್ನಡಿ ಇದ್ದ ಹಾಗೆ. ಸಂಸ್ಥೆಯ image building ಕೆಲಸ ಪಿಆರ್‌ಓ ಅವರದು. ಸಂಸ್ಥೆಗೆ ಕೆಟ್ಟ ಹೆಸರು ಬಂದಾಗ ಅದನ್ನು ಸರಿಪಡಿಸಿ ಮತ್ತೆ ಸಂಸ್ಥೆಯ ಇಮೇಜ್ ಅನ್ನು ಕಟ್ಟಿಕೊಡುವ ಜವಾಬ್ದಾರಿ ಪಿಆರ್‌ಓ ಅವನದು. ಅವನು ಹಗಲು ರಾತ್ರಿ ಪಿಆರ್‌ಓದು ಎಡೆಬಿಡದ ಕೆಲಸ. ಈ ವೃತ್ತಿ ಹೇಗೆ ಅನೇಕ ಸವಾಲುಗಳನ್ನು ಒಡ್ಡುತ್ತದೆಯೋ ಅಷ್ಟೇ ಸಾರ್ವಜನಿಕ ಸೇವೆ ಮಾಡಲು ವಿಪುಲ ಅವಕಾಶಗಳನ್ನು ಒದಗಿಸುತ್ತದೆ. ಪಿಆರ್‌ಓಗೆ ಮಾನವ ಸಂಬಂಧಗಳ ಸ್ಪಂದನ,ಮನುಷ್ಯರ ಕಷ್ಟಗಳ ಕುರಿತು ಕಾಳಜಿ ಇವೆಲ್ಲ ಇರಬೇಕಾಗುತ್ತದೆ. ಜೆಪಿ ಅವರು ಡಿ ಆರ್ ಡಿ ಓದ ಸಾರ್ವಜನಿಕ ಸಂಪರ್ಕಾಧಿಕಾರಿಯಾದಾಗ ಎಷ್ಟೋ ವಿಜ್ಞಾನಿಗಳು ಅನೇಕ ಕೌಟುಂಬಿಕ ಸಂಕಷ್ಟಗಳನ್ನು ಎದುರಿಸಿದರು. ಓರ್ವ ವಿಜ್ಞಾನಿಗಳು ‌ಹೊರಗೆ ರಾತ್ರಿಯ ವೇಳೆ ಹೊರಗೆ ಕೇವಲ ಲುಂಗಿ ಮತ್ತು ಬನಿಯನ್ ಧರಿಸಿ ಹೊರಟವರು ವಾಹನಕ್ಕಡಿಯಾಗಿ ಮೃತಪಡುತ್ತಾರೆ. ಸತ್ತವರು ಯಾರು ಎಂದು ಗುರುತಿಸಲು ಆ ಮೃತಪಟ್ಟ ವಿಜ್ಞಾನಿಯ ದಾಖಲಿಸಲ್ಪಟ್ಟದ್ದು ತಿಳಿಯಲು ಅದು ಗುರುತು‌ ಹಿಡಯಲಾಗದ ಶವ ಎಂದು ನಿಮಾನ್ಸಿನ ಶವಾಗಾರದಲ್ಲಿ‌ ಲಭಿಸಿದ್ದು ತೀರಾ ವಿಷಾದಕರ ಪ್ರಸಂಗ ಎಂದು ಜೆಪಿ ಬರೆಯುತ್ತಾರೆ. ಮನೆಯಲ್ಲಿ ಇವರ ಪತ್ನಿ ಓರ್ವಳೇ ಇದ್ದರು. ಈ ವಿಷಯ ತಿಳಿದು ಗಾಬರಿಯಾಗಿ‌ ಮಗಳ‌ ಸಂಪರ್ಕ ಬೆಳೆಸುವಾಗ ಬಹು‌ ರಾತ್ರಿ ಕಳೆದಿತ್ತು. "ಏನೊಂದು ವಿಧಿಲೀಲೆಯೆಂದರೆ ಆ ಡಾಕ್ಟರ್ ಮಗಳು ಇದೇ ‌‌ನಿಮಾನ್ಸಿನಲ್ಲಿ ಹೌಸ್ ಸರ್ಜನ್ ಸೇವೆಯ ರಾತ್ರಿಪಾಳಿಯಲ್ಲಿ ಇನ್ನೊಂದು ವಿಭಾಗದಲ್ಲಿ ದುಡಿಯುತ್ತಿದ್ದು, ತನ್ನದೇ ತಂದೆ ಅದೇ ಅಸ್ಪತ್ರೆಗೆ‌ ಜರ್ಜರಿತರಾಗಿ ಗಾಯಗೊಂಡು‌ ತೀವ್ರನಿಗಾ ವಿಭಾಗದಲ್ಲಿ ಯಾರೂ ವಾರಸುದಾರರು ಇಲ್ಲದ ರೀತಿ ದಾಖಲಿಸಲ್ಪಟ್ಟದ್ದು ತಿಳಿಯಲೇ ಇಲ್ಲ. ಸಾಧಾರಣ ಮಧ್ಯರಾತ್ರಿ ವೇಳೆಗೆ ಕಾಲ್ ಬಂದ ಕೂಡಲೇ ದೌಡಾಯಿಸಿ ಈ ಅಪಘಾತದ ಹಿಂದೆ ಅನ್ವೇಷಣೆ ಮಾಡುತ್ತ ಸಾಗಿದ ನನಗೆ ಹಲವಾರು ಅಡೆತಡೆಗಳು ಮೊದಲು ಸ್ಥಳೀಯ ಪೋಲಿಸ್ ಸ್ಟೇಷನ್ ಕಂಟ್ರೋಲ್‌ ರೂಮ್, ಕ್ರೈಮ್‌ ಬ್ರ್ಯಾಂಚ್, ಸರಕಾರಿ ಆಸ್ಪತ್ರೆಗಳ‌ ಭೇಟಿ...ಒಂದೇ‌ ಎರಡೆ, ಕೊನೆಗೂ‌, ಬೆಳಗಿನ ಜಾವದಲ್ಲಿ ‌ನಮ್ಮ ವಿಜ್ಞಾನಿಯ ಶವವನ್ನು ‌ಪತ್ತೆ ಹಚ್ಚಿಸಿದ‌ ಬಳಿಕ ಬಿಳಿಬಟ್ಟೆ ಖರೀದಿಸಿ ತಂದು, ಉಳಿದ‌ ಕೆಲಸಗಳಿಗೆ ಸಾಗುವ ವೇಳೆ, ಅವರ ಪತ್ನಿ ಹಾಗೂ ಮಗಳ ಶೋಕದ ಕ್ಷಣಗಳನ್ನು ಊಹಿಸಿ, ಹೇಗೆ ಆ ವೇಳೆ‌ ಇಂಥಹ ಕ್ಲಿಷ್ಟಕರವಾದ ಕಾರ್ಯ ನಿಭಾಯಿಸಿದೆ ಎಂದು ಯೋಚಿಸಿದರೆ ಈಗಲೂ ‌ದುಃಖ ಉಮ್ಮಳಿಸಿ‌ ಬರುತ್ತದೆ." ಪುಟ ಸಂಖ್ಯೆ 120

ಅಂತೆಯೆ ವಿಜ್ಞಾನಿಯೊಬ್ಬರ ಪತ್ನಿ ಆತ್ಮಹತ್ಯೆ ಮಾಡಿಕೊಂಡಾಗ ಅದು ವರದಕ್ಷಿಣೆ ಕೇಸ್ ಆಗಿ ದಾಖಲಿಸಬಹುದಾದ ಪ್ರಸಂಗ ಎದುರಾದಾಗ ಹೇಗೆ ‌‌ಜೆಪಿ ಅವರು ಪ್ರಸಂಗಾವಧಾನ ತೋರಿಸಿ ವಿಜ್ಞಾನಿಯನ್ನು ಬಚಾವ್ ಮಾಡಿದರು. ಇವಿಷ್ಟೇ ಅಲ್ಲ.‌‌ಇನ್ನೂ ಅನೇಕ ಸಿಬ್ಬಂದಿಗಳ ಕಣ್ಣೀರು ಒರೆಸುವ ಕೆಲಸ ಜೆಪಿ ಮಾಡಿದ್ದಾರೆ.

ಈ ಪುಸ್ತಕವು ಇಂತಹ ಅನೇಕ ಕಥಾನಕಗಳಿಂದ ತುಂಬಿದೆ. ಅನೇಕ ವೇಳೆ ಅವರ ತಪ್ಪಿಲ್ಲದೆ ಅವಮಾನಕ್ಕೊಳಗಾಗಿದ್ದಾರೆ. ಮತ್ಸರಕ್ಕೆ ಬಲಿಯಾಗಿದ್ದಾರೆ. ಕಲಾಂರ ಸೇವೆಯನ್ನು ಶ್ರದ್ಧೆಯಿಂದ ಮಾಡಿ ಅವರಿಂದ ಪ್ರಶಂಸೆಗೊಳಗಾಗಿದ್ದಾರೆ. ರಾಷ್ಟ್ರ ಮಟ್ಟದ ಮಂತ್ರಿಗಳು ರಕ್ಷಣಾ ಮಂತ್ರಿಗಳ‌ ಸೇವೆ ಮಾಡುವಾಗ ಜಾರ್ಜ್ ಫರ್ನಾಂಡೀಸ್ ರಂತಹ‌ ಸರಳ‌ ವ್ಯಕ್ತಿಯೊಡನೆ ಒಡನಾಟ ಮಾಡಿದ್ದಾರೆ. ಪಿಆರ್‌ಓ ಮಂತ್ರಿಗಳು ಬರುವಾಗ ಎಲ್ಲ ಸಿದ್ಧತೆಗಳಿಗೆ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ. ಮಾಧ್ಯಮದವರು ಪೋಲಿಸ್ ವ್ಯವಸ್ಥೆ ಅವರ ಊಟ ಉಪಚಾರದ ವ್ಯವಸ್ಥೆ, ಮಾಧ್ಯಮದವರೊಡನೆ ಸಂಪರ್ಕ ಇಷ್ಟೆಲ್ಲಾ ಜವಾಬ್ದಾರಿಗಳು.

ಪಿಆರ್‌ಓ ಹುದ್ದೆ ಅನೇಕ ಅವಕಾಶಗಳನ್ನು ಒದಗಿಸುತ್ತದೆ. ಕೆಲವರು ಬಾಸ್‌ರ ವೈಯಕ್ತಿಕ ಕೆಲಸ‌ ಮಾಡುವುದರಲ್ಲಿ ಮಾತ್ರ ನಿರತರಾಗಿ ಸಂಸ್ಥೆಗೆ‌‌ ಕೆಟ್ಟ ಹೆಸರು ತರುವ‌‌ ಪಿಆರ್‌ಓಗಳೂ‌‌ ಇರುತ್ತಾರೆ.

ಜೆಪಿಯವರು ಸಾರ್ವಜನಿಕ ಸಂಪರ್ಕ ರಾಷ್ಟ್ರೀಯ ಅಂತರಾಷ್ಟ್ರೀಯ ಸಂಸ್ಥೆಗಳಲ್ಲಿ ‌ಹಲವು ಹುದ್ದೆಗಳಲ್ಲಿ ‌ಸೇವೆ ಸಲ್ಲಿಸಿದ್ದಾರೆ.

ಡಿ ಆರ್ ಡಿ ಓ ಕಾಲನಿಯಲ್ಲಿ‌ ಆಪದ್ಭಾಂಧವ‌ ಜೆಪಿ ಅವರಾಗಿದ್ದರು. ಅಲ್ಲಿನ ನಿವಾಸಿ ವಿಜ್ಞಾನಿಗಳಿಗೆ ಅನೇಕ ಸಂದರ್ಭಗಳಲ್ಲಿ ಶಕ್ತಿಮೀರಿ ಸಹಾಯ ಮಾಡಿದ್ದಾರೆ. ಕಲಾಂರ ವಿಮಾನ ರನ್ ವೇನಲ್ಲಿದ್ದ ಏಣಿಯನ್ನು ತುರ್ತಾಗಿ ಇಟ್ಟವರು ಜೆಪಿ ಅವರು.

ಜೇಸಿ ಸಂಸ್ಥೆಯ‌ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ತರಬೇತುದಾತರಾಗಿ ಖ್ಯಾತರು.

2018ರಲ್ಲಿ ಅಮೇರಿಕಾದ ಡಲ್ಲಾಸ್ ನಲ್ಲಿ ಆಯೋಜನೆಗೊಂಡ "ನಾವಿಕಾ" ವಿಶ್ವ ಕನ್ನಡ ಸಮ್ಮೇಳನದಲ್ಲಿ ಯುವ‌ ವೇದಿಕೆಯಲ್ಲಿ ಯುವಜನತೆಗೆ‌ ಭಾರತದಲ್ಲಿರುವ ಉದ್ಯೋಗವಕಾಶಗಳ ಕುರಿತು ಮುಖ್ಯ ಭಾಷಣಕಾರರಾಗಿ ಹೆಸರು ಗಳಿಸಿದ್ದಾರೆ.

ಈ ಪುಸ್ತಕವು ಪಿಆರ್‌ಓ‌ ವೃತ್ತಿಯಲ್ಲಿ ಸಿಗುವ ಅನೇಕ ಸೇವಾ ಅವಕಾಶಗಳ‌‌ ಕುರಿತು‌, ಪಿಆರ್‌ಓ ಆಗಬಯಸುವವರು‌ ಏನೆಲ್ಲ ಅರ್ಹತೆಗಳನ್ನು ಹೊಂದಿರಬೇಕು ಎಂಬುದರ ತನ್ನ ವೈಯಕ್ತಿಕ ಉದಾಹರಣೆಗಳ ಮೂಲಕ ವಿಷದಪಡಿಸಿರುತ್ತಾರೆ.

ಇವರು‌ ಕಲಾಂರ‌ ವಿಜಿನ್‌ 2020ರ ಆದರ್ಶಗಳ ಉಪನ್ಯಾಸ ಮಾಲಿಕೆಯನ್ನು ರಾಜ್ಯಾದ್ಯಂತ ಸಂಚರಿಸಿದ‌ ಮಾಹಿತಿಗೆಳು ಈ ಪುಸ್ತಕದಲ್ಲಿ ಲಭ್ಯ.

ಇದು ಪಿಆರ್‌ಓಆಗಿ‌ ಸಾರ್ಥಕ ಸೇವೆ ಮಾಡಿದ ಓರ್ವ‌ ಆದರ್ಶ ವ್ಯಕ್ತಿಯ ಆತ್ಮಕಥನವೂ‌ ಹೌದು. ಪಿಆರ್‌ಓ ಆಗಲು ಬಯಸುವವರಿಗೆ ಈ ಪುಸ್ತಕ ಒಂದು‌ ಅತ್ಯುತ್ತಮ ಪಠ್ಯ.

ಯುವಕರು ಈ ಪುಸ್ತಕವನ್ನು ಖಂಡಿತ ಓದಲೇಬೇಕು.

ಜೆಪಿಯವರ ಆದರ್ಶಗಳು ಕಲಾಂ ಅವರ‌ ಆದರ್ಶಗಳೇ ಆಗಿದ್ದವು.

ಅಬ್ದುಲ್‌ ಕಲಾಂ ಅವರ‌ ‘Wings of Fire’ ಕೃತಿಯನ್ನು ಜೆಪಿ‌ ಅವರು ‌ಕನ್ನಡಕ್ಕೆ‌ ಅನುವಾದಿಸಿ‌ದ ಈ ಕೃತಿಯನ್ನು ‌ಸಪ್ನಾ‌ ಬುಕ್‌‌ ಅವರು ಪ್ರಕಟಿಸಿದ್ದಾರೆ. ಆ ಪುಸ್ತಕವು‌ 15 ಬಾರಿ‌‌ ಮುದ್ರಣಗೊಂಡಿದೆ. ಒಂದು ಪುಸ್ತಕ ‌ಕಾಲೇಜ್‌‌ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ

ಈ ಪುಸ್ತಕ ಪಿಆರ್‌ಓ‌‌ ಕ್ಷೇತ್ರದಲ್ಲಿ ‌ಒಂದು‌ ಅನನ್ಯ ‌ಗ್ರಂಥವಾಗಿದ್ದು ಇದಕ್ಕೆ ಖ್ಯಾತ ಸಾಹಿತಿ ವಿಮರ್ಶಕರಾದ ‌ಎಸ್‌‌. ಆರ್. ವಿಜಯಶಂಕರ್‌ ಅವರು ಮುನ್ನುಡಿ ಬರೆದಿದ್ದಾರೆ.

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಉದಯ್ ಕುಮಾರ್ ಹಬ್ಬು