Article

ಅನುಭವಗಳನ್ನು ಗಾಢವಾಗಿ ಕಟ್ಟಿಕೊಡುವ ಕಥೆ ಕಥಾನಕ ಪ್ರಸಂಗ

ಕನ್ನಡದ ಖ್ಯಾತ ಕತೆಗಾರ ಕೆ. ಸತ್ಯನಾರಾಯಣ ಅವರ ನೂತನ ಕತಾಸಂಕಲನ. 'ಕಥೆ ಕಥಾನಕ ಪ್ರಸಂಗ'ದ ಕುರಿತು ಲೇಖಕ ಉದಯ ಕುಮಾರ ಹಬ್ಬು ಅವರು ಬರೆದಿರುವ ಪ್ರೀತಿಯ ಮಾತುಗಳು ಇಲ್ಲಿವೆ

ಕೆ. ಸತ್ಯನಾರಾಯಣ ಅವರ ಈ ಕಥಾಸಂಕಲನವು ಅನುಭವಗಳನ್ನು ಗಾಢವಾಗಿಕಟ್ಟಿಕೊಡುವ ಗುಣ ಅವರ ನಿರೂಪಣೆಯ ಮಾಂತ್ರಿಕತೆಯಲ್ಲಿ, ಶಬ್ದಗಳ ಬಳಕೆಯಲ್ಲಿ ಇದೆ. ಸಹಜವಾಗಿ, ಓತಪ್ರೋತವಾಗಿ ಕತೆಯು ಓಡುತ್ತದೆ. ಜಾಗತೀಕರಣೋತ್ತರ ಪಲ್ಲಟಗಳು ಇಂದಿನ ಶತಮಾನದಲ್ಲಿ ಅವರ್ಭವಿಸಿದ Religious Workers ಯೋಗ ಮತ್ತು ತಂತ್ರವನ್ನು ಹರಿಕೀರ್ತನೆ, ವೆಂಕಟೇಶ ಮಹಾತ್ಜೆಯಂತಹ ಪೌರಾಣಿಕ ಕಥಾನಕಗಳು ಭಗವದ್ಗೀತೆ ಅಂತಹ‌ ಧಾರ್ಮಿಕ ಪುಸ್ತಕಗಳೂ, ಒಟ್ಟಾರೆಯಾಗಿ ಹಿಂದೂ ಧರ್ಮದ ನಂಬಿಕೆಗಳು ವಿಶ್ವಮಾರುಕಟ್ಟೆಗೆ ತಲುಪಿದ್ದು ರಾಮ್‌ ದೇವ್, ಶ್ರೀ ಶ್ರೀ ರವಿಶಂಕರ‌ ಇವರಂತಹ‌ ಕಾರ್ಪೊರೇಟ್ ಪ್ರತಿನಿಧಿಗಳಿಂದ. ಇದರ ಟೊಳ್ಳುಗಟ್ಟಿಯನ್ನು ಇಲ್ಲಿನ ಒಂದುಕತೆ "ವಿಷಣ್ಣ ಶೋಧ", ಯೋಗಶಾಸ್ತ್ರವೆಂದರೆ ಇವತ್ತು ಒಂದಿಷ್ಟು ಆಸನಗಳು, ಉಸಿರಾಟದ ನಿರ್ವಹಣೆ, ದೇಹ ತೆಳ್ಳಗಾಗಿಸುವಿಕೆ,ಸ್ವದ-ದ ವಿಪರೀತ ಜಾಗೃತಿಯೆಂದು ರೂಢಿಗೆ ಬಂದುಬಿಟ್ಟಿದೆ. 

ಆಸನಗಳನ್ನು ಮಾಡುವ ಮುಂಚೆಯೇ ದೇಹವೂ, ಮನಸ್ಸೂ ರೂಢಿಸಿಕೊಳ್ಳಬೇಕಾದ ಯಮ-ನಿಯಮಗಳಾಗಲೀ, ನಂತರದ ಧಾರಣ ಧ್ಯಾನ ಸಮಾಧಿ ಸಮರ್ಪಣೆ, ನಿಷ್ಕಾಮ ಪ್ರೀತಿಯಾಗಲೀ ಯಾರಿಗೂ ಬೇಕಿಲ್ಲ. ಚಲಿಸುತ್ತಿರುವ ಬಸ್ಸು ನಮ್ಮೆದುರಿಗೆ ಬಂದು ನಿಂತಾಗ ಬಸ್ ಹತ್ತಿದಂತೆ. ರಾತ್ರಿ ನಿದ್ದೆ ಬರಲು ಪುಸ್ತಕದ ಕೆಲವು ಹಾಳೆಗಳು ಓದಿನಂತೆ, ದೇಹದ ಚಪಲವನ್ನು ಶಮನಗೊಳಿಸುವುದೇ ಪ್ರೀತಿಯ ಉತ್ಕಟತೆ ಎಂದು ತಿಳಿದಂತೆ. ಇವತ್ತು ಯಾರು‌ ಬೇಕಾದರೂ, ಯಾವುದೇ ಮನಃಸ್ಥಿತಿಯಲ್ಲಾದರೂ ಯೋಗಾಸನ ಪ್ರಾರಂಭಿಸಿಬಿಡಬಹುದು, ಪರಿಣಿತರಾಗಿಬಿಡಬಹುದು. ಒಂದು ಗಂಟೆಗೋ, ಒಂದುವರೆ ಗಂಟೆಯೋ ಯೋಗಾಭ್ಯಾಸ ಮಾಡಿಬಿಟ್ಟರೆ ನಂತರ ಯಾವ ಜೀವನಕ್ರಮವನ್ನಾದರೂ ಪಾಲಿಸಬಹುದು ಎಂಬ ನಂಬಿಕೆ ಬೆಳೆದುಬಿಟ್ಟಿದೆ. ಯೋಗಾಭ್ಯಾಸ ದ ನಂತರ ಮನುಷ್ಯ ಲೋಭದ ಜೀವನ ನಡೆಸಬಹುದು. ಮದ ಮಾತ್ಸರ್ಯ ಮಾತ್ರದಿಂದಲೇ ಪ್ರೇರಣೆ ಪಡೆದು ಬದುಕಬಹುದು. ಯೋಗಾಭ್ಯಾಸದಿಂದ ಪಡೆದ ಏಕಾಗ್ರತೆಯನ್ನು ಶತ್ರು ರಾಷ್ಟ್ರಗಳನ್ನು ಸದೆ ಬಡಿಯಲು ಬೇಕಾದ ಉಪಕರಣವೊಂದರ ಶೋಧನೆಗೆ ಬಳಸಿಕೊಳ್ಳಬಹುದು. ಇಲ್ಲೆಲ್ಲ ನಮ್ಮ ಕಾಲದ ಬಿರುಕೂ ಇದೆ. ನಮ್ಮ ಆತ್ಮಗಳು ಛಿದ್ರವಾಗುತ್ತಿರುವ ರಲಿಂಗಾಯಿತರು.  ನಮ್ಮಂಥಹ ಯೋಗ ಕೇಂದ್ರ ಗಳು ಕೂಡ ಈ ಮನೋಧರ್ಮವನ್ನು ಬೆಳೆಸುತ್ತಿವೆ." ಪುಟ ಸಂಖ್ಯೆ 164, ಇದೊಂದು ವಂಚನೆ ಎಂದು ಕೇಂದ್ರದ ಸ್ವಾಮಿ ಪೋಲಿಸ್ ಸ್ಟೇಷನ್ ಗೆ ಹೋಗಿ ಸ್ವಯಂ ಕಾರಾಗ್ರಹವನ್ನು ಆಯ್ಕೆ‌ ಮಾಡುತ್ತಾರೆ.‌ ಇದು ಕಥೆಗಾರನ ಕಥೆಯ ಧ್ವನಿಯಾಗಿದೆ. ಇನ್ನೊಂದು ಕಾನ್ಸೆಪ್ಟ್ Secularism. ನಮ್ಮ ದೇಶದಲ್ಲಿ ಅತ್ಯಂತ ದುರುಪಯೋಗಕ್ಕೆ ತುತ್ತಾದ ಪದ. ಸಾವಿರಾರು, ಜಾತಿಗಳು, ನೂರಾರು ಕೋಮುಗಳು, ಚುನಾವಣೆ ಹೋರಾಡುವುದು ಜಾತಿ ಪ್ರಾಬಲ್ಯದ ಮೇಲೆ, ಏಕೆ, ಕರ್ನಾಟಕದ ರಾಜಕೀಯ ಇತಿಹಾಸ ನೋಡಿದರೆ ಒಂದೆ ಗೌಡರು ಮುಖ್ಯಮಂತ್ರಿ ಆಗುತ್ತಾರೆ ಇಲ್ಲವೆ ಲಿಂಗಾಯಿತರು. ಬ್ರಾಹ್ಮಣ ರಾಮಕೃಷ್ಣ ‌ಹೆಗಡೆಯವರ ರಾಜಕೀಯ ‌ಅಧಿಕಾರವನ್ನು ಮಣ್ಣುಪಾಲು ಮಾಡಿದವರೆ ದೇವೇಗೌಡರು ಅಲ್ಲವೆ? ಈ ಸ್ಯೂಡೊ ಸೆಕ್ಯುಲಾರಿಸಂನ ಗ್ರಹಿಕೆಯನ್ನು ಒಂದು ಕತೆಯಲ್ಲಿ ಪ್ರಸ್ತುತಪಡಿಸಲಾಗಿದೆ.

ಸ್ವರ್ಗದ ಸ್ವಭಾವ ಆ ಕತೆಯ ಶೀರ್ಷಿಕೆ. ಅದರಲ್ಲಿ ಈ ಮಾತುಗಳು ಬರುತ್ತವೆ‌"  ಸತ್ತು ಮೇಲೆ‌ ಹೋದ ರಾಯರನ್ನು ನರಕಕ್ಕೆ ಕಳಿಸಬೇಕೆ ಇಲ್ಲ ಸ್ವರ್ಗಕ್ಕೆ ಈ ವಿಚಾರಣೆ  ಚಿತ್ರಗುಪ್ತನ ನೇತೃತ್ವದಲ್ಲಿ ನಡೆಯುತ್ತಿದೆ. ರಾಯರ ಮೇಲಿರುವ ಒಂದೆ ಆಪಾದನೆಯೆಂದರೆ ಜಾತೀಯತೆಯದು. ಏನು ಈ ಜಾತೀಯತೆ,ಜಾತಿವಾದವೆಂದರೆ? ಅಂತಹದೊಂದು ಇಲ್ಲವಲ್ಲ ಸ್ವರ್ಗಲೋಕದ ವಿಶ್ವಕೋಶದಲ್ಲಿ?

" ಓ ಅದು, ಮನುಷ್ಯರಿಗೇ ಮಾನವ ಲೋಕಕ್ಕೆ ವಿಶಿಷ್ಠವಾದ ಒಂದು ನಿರಂತರ ಮನೋರೋಗ. ಎಲ್ಲರೂ‌ ತನ್ನಂತೆ ಇರಬೇಕೆಂದು. ತನ್ನಂತೆ ಇರುವವರು ಮಾತ್ರ ಶ್ರೇಷ್ಠರೆಂದು,  ತನ್ನಂತೇ ಇರುವವರ ಜೊತೆ ಮಾತ್ರವೇ ಬದುಕುತ್ತೇನೆಂದು ಸದಾ ಬಯಸುವ, ಧಾವಂತಪಡುವ ಸನಾತನ ದುರುಳ ಮನೋಸ್ಥಿತಿ. ಆದರೆ ರಾಯ್ ಕುಮಾರ್ ‌ನಿಜಕ್ಕೂ ಜಾತಿವಾದಿಯಲ್ಲ ಎಂಬ ಅಭಿಪ್ರಾಯವೂ ಇದೆಯಲ್ಲ.

ಒಬ್ಬನು ಜಾತಿವಾದಿ ಹೌದೋ ಅಲ್ಲವೋ ಎಂದು ನಿರ್ಧರಿಸೋಕೆ, ಅವನು, ಅವನ ಮಕ್ಕಳು ಮರಿ ಜಾತಿ ಒಳಗೆ ಮದುವೆಯಾಗಿದಾರೋ ಇಲ್ಲವೋ, ಬಾಡಿಗೆಗೆ ಮನೆಯನ್ನು, ಪದಾರ್ಥಗಳ, ಕೆಲಸದ ಕಂಟ್ರಾಕ್ಟನ್ನು ಯಾರಿಗೆ, ಯಾವ ಜಾತಿಯವರಿಗೆ ಕೊಟ್ಟಿದ್ದಾನೆ. ಯಾವ ಜಾತಿಯವರಿಗೆ ವೋಟು ಹಾಕಿದ - ಹಾಕಲಿಲ್ಲ -ಇದನ್ನೆಲ್ಲಾ ಸುತರಾಂ ಗಣನೆಗೆ ತೆಗೆದುಕೊಳ್ಳಬಾರದು ಮತ್ತೆ ಸ್ಪಷ್ಟವಾಗಿ ಹೇಳಬೇಕೆಂದರೆ ಕಾಮವು ಒಂದು ದೇಹದಲ್ಲಿ ಉದಯರಾಗ ಹಾಡುತ್ತದಲ್ಲ. ಅದು ಶ್ರೀ ದೇಹಕ್ಕೆ ಗೊತ್ತಾಗುತ್ತಲ್ಲ. ಆಗ ಆ‌ ಶ್ರೀದೇಹ ಯಾರನ್ನು ಬಯಸುತ್ತೆ. ಯಾರನ್ನು ಮನಸ್ಸಿನಲ್ಲಿ ಕೂಡಿಯೇ ಬಿಡುತ್ತೆ ಅಂತಹ ಜಾತಿಗಳನ್ನು ನೋಡಿ, ಒಬ್ಬ ಮನುಷ್ಯನ ಜಾತಿವಾದದ ಬಗ್ಗೆ ಹೇಳಬೇಕು. ಹಾಗೆ ‌ಕೂಡುವುದಿದೆಯಲ್ಲ ಅದು ಪ್ರತಿಯೊಂದು ಶ್ರೀ ದೇಹಕ್ಕೂ ಸಹಜವಾಗಿ ಭೂಷಣವಾದದ್ದು,ಧರ್ಮಪ್ರಾಯವಾದದ್ದು." ಚಿತ್ರಗುಪ್ತರ ಈ ವಿಚಾರಣೆಗೆ ರಾಯ್‌ ಕುಮಾರ ಕೊಡುವ‌ ಉತ್ತರ ಹೀಗಿದೆ

" ಇಲ್ಲ ಸಾರ್, ಇಲ್ಲ ಸಾರ್, ನಾನು ಕಾಣುತ್ತಿದ್ದ ,ಬಯಸುತ್ತಿದ್ದ, ಮನಸ್ಸಿನಲ್ಲಿಯೇ ಕೂಡಿಬಿಟ್ಟ ಯಾವ‌ ಹೆಣ್ಣು‌ ದೇಹಗಳು ನಮ್ಮ ಜಾತಿಯವಲ್ಲ ಸ್ವಾಮಿ. ಇನ್ನು ಕೆಲವು‌‌ ದೇಹಗಳಂತು ಯಾರ ದೇಹದ್ದು, ಯಾರ ಮುಖದ್ದು ಅಂತ‌ ಆವತ್ತು‌ ಮತ್ತು ಈವತ್ತು‌ ಕೂಡ ಗೊತ್ತಿಲ್ಲ, ಗೊತ್ತಾಗುತ್ತಿಲ್ಲ‌ ಸ್ವಾಮಿ"

ರಾಯ್ ಕುಮಾರರ ವಾದವನ್ನು ಆಲಿಸಿ ವಿಚಾರಣಾ ಸಮೀತಿಯವರು ತೀರ್ಪು ಕೊಡುತ್ತಾರೆ

"ಸರಿ ಸರಿ,ನೀವು ನಿಮ್ಮ ಮೂಲನೋಧರ್ಮದಲ್ಲಿ,ಮನೋಧರ್ಮದ ಬಯಕೆಯಲ್ಲಿ ಖಂಡಿತ ಜಾತಿವಾದಿಗಳಲ್ಲ. ಯಾವಾಗಲೂ ಸುಖ, ಸಮೃದ್ಧಿಯೆಲ್ಲ ತನ್ನವರಿಂದಲೇ ಸಿಗುತ್ತದೆ, ತನ್ನವರಿಗೆ ಮಾತ್ರ ಸಿಗಬೇಕು ಎಂದು ನಂಬುವ ಒಂದು ಹುಲು ಮಾನವ ಕ್ರಿಮಿ ಅಷ್ಟೇ. ನೀವು ಏನು ಹೇಳುತ್ತೀರಿ ಚಿತ್ರಗುಪ್ತರೆ. " -ನೀತಿ ಮಂಡಳಿಯ‌ ಅಧ್ಯಕ್ಷರು ಕೇಳಿದಮುಗಿಸುತ್ತಾನೆ ಸಸುತ್ತಾಸುತ್ತಾರರುಮಂಡಳಿ ತೀರ್ಪು‌ ಘೋಷಿಸಿತು "ನಿಮ್ಮ ಅಭಿಪ್ರಾಯಗಳಿಂದ, ಅದನ್ನು ಮಂಡಿಸಿದ‌ ರೀತಿಯಿಂದ ನಮಗೆ ಖುಷಿ ಆಗಿದೆ. ನಿಮ್ಮ ಜೀವನ ವಿವರವೂ ಚೆನ್ನಾಗಿದೆ. ನೀವು ಜಾತಿವಾದಿಯಾಗಬೇಕೆಂದು ಹೊರಟವರಲ್ಲ.‌ಎಲ್ಲರೂ ಆಗುವಂತೆ ನೀವೂ‌ ಅಪ್ರಯತ್ನಪೂರ್ವಕವಾಗಿ ಆದಿರಿ, ಆಗಿದ್ದೀರಿ. ಜೀವನ ಕಳೆದಿದ್ದೀರಿ. ಸ್ವರ್ಗದ ನಿಯಮಾವಳಿಗಳಿಗಳಿಗೂ ಕೂಡ ನಿಮ್ಮ ನಿಮ್ಮಂತವಮ ಮಾನವ ಕೋಟಿಯ ಸ್ವಭಾವಕ್ಕೆ ಹತ್ತಿರವಾಗಿದೆ. ‌ನಿಮಗೆ ‌ಒಳ್ಳೆಯದಾಗಲಿ.

ನೀತಿ ಮಂಡಳಿ‌ ತನ್ನ ತೀರ್ಪನ್ನು ಘೋಷಿಸಿತು.",ಅನಿರೀ

ಈ ಕತೆ ಒಂದು ವಿಡಂಬನೆ ಎಂದು ಮೇಲ್ನೋಟಕ್ಕೆ ಕಂಡರೂ ಹಲವಾರು ಗಂಭೀರ ವಿಷಯಗಳ ಚರ್ಚೆಯನ್ನು ಹುಟ್ಟು ಹಾಕುವ ಗುಣವನ್ನೂ ಹೊಂದಿದೆ ಎಂದು ಮರೆಯಲಾಗದು. ಓ ಹೆನ್ರಿ ಬಗೆಯ ಒಂದೆರಡು ಕತೆಗಳಿವೆ. ಸಾವಿನ ಬಣ್ಣ ಈ ಕತೆ ಸಾವಿನ ಅನಿರೀಕ್ಷತೆ, ನಿಗೂಢತೆ, ಮನುಷ್ಯನ ಸಾವಿನ ಮುಖದಲ್ಲಿದ್ದರೂ ಅದಮ್ಯವಾದ ಜೀವನಾಸಕ್ತಿ  ಇವೆಲ್ಲ ಒಂದು ಪುಟ್ಟ ಕತೆಯಲ್ಲಿ ಮೂಡಿದೆ. ಹಣ್ಣು ಹಣ್ಣು ಮುದುಕನೊಬ್ಬ ಅಸ್ತಿಪಂಜರ ಆಗಿದ್ದವನು ಸಲೂನಿಗೆ ವಿರಳವಾಗಿದ್ದ ತನ್ನ ತಲೆಯ ಕೂದಲಿಗೆ‌‌ ಬಣ್ಣ‌ ಹಚ್ಚಿಸಿಕೊಳ್ಳಲು ಬಂದಿದ್ದಾನೆ. ಕ್ಷೌರಿಕ ಒಂದು ಬದಿಗೆ‌‌ ಡೈ‌ಮಾಡುತ್ತಿದ್ದಂತೆ ಮುದುಕ‌‌ ಕುರ್ಚಿಯಲ್ಲಿಯೆ ಪ್ರಾಣಬಿಎಲಡುತ್ತಾನೆ. ನಾಪಿತ ಬೊಬ್ಬೆ ಹೊಡೆಯುತ್ತಾನೆ. ನೋಡುತ್ತಿದ್ದವರು‌ ಸತ್ತವನ ಕೂದಲಿಗೆ‌ ಪೂರ್ಣ ಬಣ್ಣ ಹಾಕು ಎಂದು‌ ಒತ್ತಾಯಿಸುತ್ತಾರೆ. ಕೆಳಗೆ ಬೀಳುತ್ತಿದ್ದ ಬಾಡಿಯನ್ನು ಇತರರು‌ ಎತ್ತಿ ಹಿಡಿಯುತ್ತಾರೆ. ನಾಪಿತ ತನ್ನ ಕೆಲಸ‌ ಮುಗಿಸುತ್ತಾನೆ. ಈ ಕಥಾ ಸಂಕಲನ‌ ಚರ್ಚೆಗೊಳಗಾಗಬೇಕು. ಓದಲೇಬೇಕಾದ ಕೃತಿ. ಅಪೂರ್ವ ಕೃತಿ. ಸತ್ಯನಾರಾಯಣರಿಗೆ ಅಭಿನಂದನೆಗಳು.

ಉದಯ್ ಕುಮಾರ್ ಹಬ್ಬು